ಸೂರಿ ನಿರ್ದೇಶನದಲ್ಲಿ ಸುದೀಪ್ ಸಿನಿಮಾ
ಕೆ.ಪಿ.ಶ್ರೀಕಾಂತ್ ನಿರ್ಮಾಣ
Team Udayavani, Apr 17, 2019, 3:00 AM IST
ನಟ ಸುದೀಪ್ ಕನ್ನಡದ “ಕೋಟಿಗೊಬ್ಬ-3′ ಹಾಗೂ ಹಿಂದಿ ಚಿತ್ರ “ದಭಾಂಗ್-3’ನಲ್ಲಿ ಬಿಝಿ. ಇತ್ತ ಕಡೆ ನಿರ್ದೇಶಕ ಸೂರಿ “ಪಾಪ್‌ಕಾರ್ನ್ ಮಂಕಿ ಟೈಗರ್’ ಚಿತ್ರೀಕರಣದಲ್ಲಿದ್ದಾರೆ. ಈಗ ಈ ಇಬ್ಬರ ಕುರಿತಾದ ಸುದ್ದಿಯೊಂದು ಗಾಂಧಿನಗರದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ಅದು ಈ ಇಬ್ಬರು ಒಟ್ಟಾಗಿ ಸಿನಿಮಾ ಮಾಡುತ್ತಿರೋದು.
ಹೌದು, ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಸೂರಿ ಜೊತೆಯಾಗಿ ಸಿನಿಮಾ ಮಾಡಲಿದ್ದಾರಂತೆ. ಈ ಮೂಲಕ ಮತ್ತೂಂದು ದೊಡ್ಡ ನಿರೀಕ್ಷೆಗೆ ಕಾರಣರಾಗುತ್ತಿದ್ದಾರೆ. ಸುದೀಪ್ ಹಾಗೂ ಸೂರಿ ಈ ಇಬ್ಬರೂ ತಮ್ಮದೇ ಶೈಲಿ ಹಾಗೂ ಕೆಲಸದ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡವರು ಹಾಗೂ ದೊಡ್ಡ ಅಭಿಮಾನಿ ವರ್ಗವನ್ನು ಹೊಂದಿದವರು.
ಈಗ ಸಿನಿಮಾವೊಂದಕ್ಕಾಗಿ ಇಬ್ಬರು ಒಟ್ಟಾಗುತ್ತಿದ್ದು, ಸೂರಿ ನಿರ್ದೇಶನದ ಚಿತ್ರದಲ್ಲಿ ಸುದೀಪ್ ನಟಿಸಲಿದ್ದಾರೆ. ಸುದೀಪ್ ಅವರ ಮ್ಯಾನರೀಸಂ ಹಾಗೂ ಸೂರಿ ಶೈಲಿಗೆ ಹೊಂದುವಂತಹ ಸಿನಿಮಾ ಇದಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.
ಎಲ್ಲಾ ಓಕೆ, ಹಾಗಾದರೆ ಈ ಸಿನಿಮಾವನ್ನು ನಿರ್ಮಿಸುತ್ತಿರುವವರು ಯಾರು ಎಂಬ ಪ್ರಶ್ನೆಗೆ ಉತ್ತರ, ಕೆ.ಪಿ.ಶ್ರೀಕಾಂತ್. ಈಗಾಗಲೇ ಸೂರಿ ಜೊತೆ “ಟಗರು’ ಚಿತ್ರ ಮಾಡಿದ ಶ್ರೀಕಾಂತ್, ಈಗ ಮತ್ತೂಂದು ಸಿನಿಮಾ ಮಾಡಲು ಮುಂದಾಗಿದ್ದಾರೆ.
ಸುದೀಪ್ ಹಾಗೂ ಸೂರಿ ಕಾಂಬಿನೇಶನ್‌ನ ಬಿಗ್ ಬಜೆಟ್ ಚಿತ್ರವನ್ನು ಕೆ.ಪಿ.ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ. ಆರಂಭದಲ್ಲಿ “ಪಾಪ್‌ಕಾರ್ನ್ ಮಂಕಿ ಟೈಗರ್’ ಚಿತ್ರಕ್ಕೆ ನಿರ್ಮಾಪಕರಾಗಿದ್ದ ಶ್ರೀಕಾಂತ್, “ನಾವಿಬ್ಬರು ದೊಡ್ಡ ಪ್ರಾಜೆಕ್ಟ್ವೊಂದನ್ನು ಮಾಡಲಿದ್ದೇವೆ’ ಎಂದಿದ್ದರು.
ಈಗ ಆ ದೊಡ್ಡ ಪ್ರಾಜೆಕ್ಟ್ ಸುದ್ದಿ ಹೊರಬಿದ್ದಿದೆ. ಹಾಗಾದರೆ ಸಿನಿಮಾ ಯಾವಾಗ ಎಂದು ನೀವು ಕೇಳಬಹುದು. ಸದ್ಯಕ್ಕೆ ಅದಕ್ಕೆ ಉತ್ತರವಿಲ್ಲ. ಸುದೀಪ್ ಹಾಗೂ ಸೂರಿ ತಮ್ಮ ಕಮಿಟ್‌ಮೆಂಟ್‌ಗಳನ್ನು ಮುಗಿಸಿಕೊಂಡ ನಂತರ ಈ ಸಿನಿಮಾ ಆರಂಭವಾಗಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಹೊಸ ಸೇರ್ಪಡೆ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.