ಎಲ್ಲೆಡೆ ನರೇಂದ್ರ ಮೋದಿ ಅಲೆ: ನಳಿನ್
ವಿಟ್ಲದಲ್ಲಿ ಬಿಜೆಪಿ ರೋಡ್ ಶೋ, ಪ್ರಚಾರ ಸಭೆ
Team Udayavani, Apr 17, 2019, 6:00 AM IST
ವಿಟ್ಲ ಪೇಟೆಯಲ್ಲಿ ನಳಿನ್ ಕುಮಾರ್ ಕಟೀಲು ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.
ವಿಟ್ಲ: ದ.ಕ. ಜಿಲ್ಲೆ ಕಾಂಗ್ರೆಸ್ ಮುಕ್ತ ಜಿಲ್ಲೆ ಯಾಗುತ್ತಿದ್ದು, ಎಲ್ಲೆಡೆ ನರೇಂದ್ರ ಮೋದಿ ಅಲೆ ಇದೆ. ಮೋದಿ ಅಲೆ ಸುನಾಮಿಯಾಗಿ ಪರಿವರ್ತನೆಯಾಗಿದೆ. ಕಾಂಗ್ರೆಸ್ ಕೈಯಲ್ಲಿ ದೇಶವನ್ನು ಕೊಟ್ಟರೆ ದೇಶ ಉಳಿಯುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಅಮೆರಿಕ ಬಿಟ್ಟರೆ ಜಗತ್ತಿನಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿದ ಮತ್ತೂಂದು ದೇಶವಿದ್ದರೆ ಅದು ಭಾರತ. ನರೇಂದ್ರ ಮೋದಿ ಅವರಿಂದ ಮಾತ್ರ ಭಾರತದ ರಕ್ಷಣೆಯಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಮಂಗಳವಾರ ವಿಟ್ಲದ ಎಂ.ಆರ್. ನಾಯಕ್ ಪೆಟ್ರೋಲ್ ಪಂಪ್ ಸಮೀಪ ಬಿಜೆಪಿ ವತಿ ಯಿಂದ ವಿಟ್ಲದಲ್ಲಿ ನಡೆದ ಲೋಕಸಭಾ ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಿ, ರಾಹುಲ್ ಗಾಂಧಿ ತಮ್ಮ ಕಾಲದಲ್ಲಿ ಆಗಿದೆ ಹೇಳುವ ಸರ್ಜಿಕಲ್ ಸ್ಟೈಕ್ ಸೈನಿಕರಿಗೂ ತಿಳಿದಿಲ್ಲ. ಯುದ್ಧದಲ್ಲಿ ಕೈದಿಯನ್ನು 48 ಗಂಟೆಯಲ್ಲಿ ಒಪ್ಪಿಸಿದ ಉದಾಹರಣೆ ಜಗತ್ತಿನಲ್ಲಿ ಇಲ್ಲ. ಪಾಕಿಸ್ಥಾನ ಅಭಿನಂದನ್ ಅವರನ್ನು ಭಾರತಕ್ಕೆ ಒಪ್ಪಿಸುವ ಮೂಲಕ ಶರಣಾಗತಿಯಾಗಿದ್ದು ಮೋದಿ ಆಡಳಿತದ ಪರಿಣಾಮವನ್ನು ತೋರಿಸುತ್ತದೆ ಎಂದರು.
ಹತ್ತು ವರ್ಷಗಳ ಕಾಲ ಸಂಸದನಾಗಿ ಪ್ರಾಮಾ ಣಿಕವಾಗಿ, ಭ್ರಷ್ಟಾಚಾರರಹಿತವಾಗಿ ಕರ್ತವ್ಯ ನಿರ್ವಹಿ ಸಿದ್ದೇನೆ. ಯುಪಿಎ ಸರಕಾರದ ಅವಧಿಯಲ್ಲಿಯೂ ಕ್ಷೇತ್ರಕ್ಕೆ ಅತ್ಯಧಿಕ ಅನುದಾನ ತಂದಿದ್ದೇನೆ. ಮೋದಿ ನೇತೃತ್ವದ ಸರಕಾರದ ಅವಧಿಯಲ್ಲಿ 16,620 ಕೋಟಿ ರೂ. ಅನುದಾನ ತಂದಿದ್ದೇನೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ, ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳ ಆಡಳಿತವಿದೆ. ಅಧಿಕೃತವಾಗಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರೂ ಅನಧಿಕೃತವಾಗಿ ಸಿದ್ದರಾಮಯ್ಯನವರು ಆಡಳಿತ ನಡೆಸುತ್ತಿದ್ದಾರೆ ಎಂದರು.
ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಮಾತನಾಡಿ, ರಾಹುಲ್ ಗಾಂಧಿ ಅವರು ಅಂಗಿ ಮೇಲೆ ಜನಿವಾರ ಪ್ರದರ್ಶನ ಮಾಡುವ ಬದಲಾಗಿ ಇಟಲಿಗೆ ತೆರಳುವುದು ಉತ್ತಮ. ಕುಟುಂಬದವರೇ ಎಲ್ಲ ಕಡೆ ಚುನಾವಣೆಗೆ ಸ್ಪರ್ಧಿಸಿರುವುದು ಜೆಡಿಎಸ್ ಅಪ್ಪ ಮಕ್ಕಳ ಪಕ್ಷ ಎಂಬುದನ್ನು ಸಾಬೀತುಪಡಿಸಿದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ್ ಮಿಜಾರು, ಪುತ್ತೂರು ಮಂಡಲ ಚುನಾವಣ ಉಸ್ತುವಾರಿ ರಾಧಾಕೃಷ್ಣ ಬೋರ್ಕರ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಾಜೀವ ಭಂಡಾರಿ, ವಿಟ್ಲ ನಗರ ಅಧ್ಯಕ್ಷ ಮೋಹನದಾಸ ಉಕ್ಕುಡ ಮತ್ತಿತರರು ಉಪಸ್ಥಿತರಿದ್ದರು.
ವಿಟ್ಲ ಪ.ಪಂ. ನಿಕಟಪೂರ್ವ ಅಧ್ಯಕ್ಷ ಅರುಣ ಎಂ. ವಿಟ್ಲ ಸ್ವಾಗತಿಸಿ, ನಿರೂಪಿಸಿದರು. ಸದಸ್ಯೆ ಉಷಾ ಕೃಷ್ಣಪ್ಪ ವಂದಿಸಿದರು. ಆರಂಭದಲ್ಲಿ ನಳಿನ್ ಕುಮಾರ್ ಕಟೀಲು ಅವರ ನೇತೃತ್ವದಲ್ಲಿ ವಿಟ್ಲ ಜೈನ ಬಸದಿ ಸಮೀಪದಿಂದ ಮುಖ್ಯ ರಸ್ತೆಗಳಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.