ಮಂಜೇಶ್ವರ ವಿಧಾನಸಭಾ ಕ್ಷೇತ್ರ: ನಕಲಿ ಮತ ಚಲಾವಣೆ ಭಯ !
Team Udayavani, Apr 17, 2019, 6:30 AM IST
ಕುಂಬಳೆ: ಕೇರಳ ಕರ್ನಾಟಕ ಗಡಿ ಪ್ರದೇಶವಾದ ಕಾಸರಗೋಡು ಲೋಕಸಭಾ ಕ್ಷೇತ್ರದ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ನಕಲಿ ಮತ ಚಲಾವಣೆಯ ಭಯ ಕೆಲವು ರಾಜಕೀಯ ಪಕ್ಷಗಳ ನಾಯಕರಲ್ಲಿ ಕಾಡುತ್ತಿದೆ.ಇಲ್ಲಿ ಪ್ರತಿಬಾರಿಯ ಎಲ್ಲ ಚುನಾವಣೆಯಲ್ಲೂ ಕೆಲವಷ್ಟು ನಕಲಿ ಮತಗಳು ಚಲಾವಣೆ ಆಗಿಯೇ ಆಗುವುದೆಂಬ ನಿಲುವು ರಾಜಕೀಯ ನಾಯಕರದು.
ಇದಕ್ಕೆ ಪೂರಕವೆಂಬಂತೆ ಕಳೆದ 2016ರ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 200ಕ್ಕೂ ಮಿಕ್ಕಿ ನಕಲಿ ಮತ ಚಲಾವಣೆ ಯಾಗಿರುವುದಾಗಿ ಪರಾಜಿತ ಬಿ.ಜೆ.ಪಿ. ಅಭ್ಯರ್ಥಿ ಕೆ. ಸುರೇಂದ್ರನ್ ರಾಜ್ಯ ಉತ್ಛ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದ್ದಾರೆ. ಇದರಲ್ಲಿ ಕೆಲವು ನಿಧನ ಹೊಂದಿದ ಮತ್ತು ವಿದೇಶದಲ್ಲಿ ನೆಲೆಸಿರುವವರ ಮತ ಚಲಾವಣೆಯಾಗಿರುವುದಾಗಿ ದೃಢಪಟ್ಟಿದೆ. ಅಂದಿನ ಐಕ್ಯರಂಗದ ಮುಸ್ಲಿಂಲೀಗ್ ಅಭ್ಯರ್ಥಿಯಾಗಿದ್ದ ಅಬ್ದುಲ್ ರಝಾಕ್ ಅವರು ಕೇವಲ 87 ಮತಗಳ ಅಂತರದಿಂದ ಅಂದು ಗೆದ್ದಿದ್ದರು. ದುರದೃಷ್ಟವಶಾತ್ ಗೆದ್ದ ಶಾಸಕರು ನಿಧನ ಹೊಂದಿರುವರು. ಆ ಬಳಿಕ ಪರಾಜಿತ ಕೆ. ಸುರೇಂದ್ರನ್ ಅವರು ನ್ಯಾಯಾಲಯದ ದಾವೆಯನ್ನು ಹಿಂಪಡೆಯಲು ಅರ್ಜಿ ಸಲ್ಲಿಸಲಿರುವರು. ಆದುದರಿಂದ ಲೋಕಸಭಾ ಚುನಾವಣೆ ಕಳೆದ ಕೆಲವೇ ತಿಂಗಳಲ್ಲಿ ಮತ್ತೆ ಮಂಜೇಶ್ವರ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
ಚುನಾವಣಾಧಿಕಾರಿಗಳ ನಿಬಂಧನೆಯ ಸಡಿಲ ನಿಲುವು ನಕಲಿ ಮತದಾನಕ್ಕೆ ವರದಾನವಾಗಿದೆ. ಗುರುತು ಚೀಟಿ ಸಹಿತ 10 ಕ್ಕೂ ಮಿಕ್ಕ ಭಾವಚಿತ್ರವಿರುವ ದಾಖಲೆಗಳನ್ನು ಮತದಾನ ಸಂದರ್ಭದಲ್ಲಿ ಹಾಜರಿಪಡಿಸಬೇಕೆಂದಿದೆ. ಆದರೆ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಬಿ.ಎಲ್.ಒ. ನೀಡಿದ ಸ್ಲಿಪ್ ಸಾಕೆಂಬ ಮೃದು ನಿಲುವು ತಾಳಿದ ಕಾರಣ ನಕಲಿ ಮತದಾನ ಚಲಾವಣೆಗೆ ಅವಕಾಶಯಿತೆಂಬ ಆರೋಪ ಪರಾಜಿತ ಪಕ್ಷಗಳದು. ಕೆಲವು ಪಕ್ಷಗಳ ಕಚೇರಿಯಲ್ಲಿ ಮತದಾನಗೈಯ್ಯಲಿರುವ ಸ್ಲಿಪ್‌ಗ್ಳನ್ನು ಬಿ.ಎಲ್.ಒ. ಗಳಿಂದ ಶೇಖರಿಸಿ ಯಾರದೋ ಮತವನ್ನು ಯರೋ ಚಲಾಯಿಸಿರುವರೆಂಬ ಆರೋಪ ಬಲವಾಗಿದೆ. ಆದರೆ ಈ ಬಾರಿ ಕಡ್ಡಾಯವಾಗಿ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಮತದಾನದ ವೇಳೆ ತರಬೇಕು. ಮುಖದ ಪರದೆಯನ್ನು ಸರಿಸಬೇಕೆಂಬ ಆದೇಶದಿಂದ ನಕಲಿ ಮತದಾನಕ್ಕೆ ಕಡಿವಾಣವಿರುವ ವಿಶ್ವಾಸ ಈ ಬಾರಿ ಕೇಳಿಬರುತ್ತಿದೆ.ಆದರೆ ಚುನಾವಣಾ ಧಿಕಾರಿಗಳ ಆಜ್ಞೆ ಎಷ್ಟು ಪಾಲನೆಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ನಕಲಿ ಮತದಾರರ ಆತಂಕ
ಮರಣ ಹೊಂದಿದವರ ಮತ್ತು ವಿದೇಶದಲ್ಲಿ ನೆಲೆಸಿರುವವರ ಮತ ಚಲಾವಣೆಯಾಗುವ ಆತಂಕದ ಮಧ್ಯೆ ಈ ಬಾರಿ ನೆರೆಯ ಕರ್ನಾಟಕದಿಂದ ಕೆಲವರು ಆಗಮಿಸಿ ನಕಲಿ ಮತದಾನಗೈಯುವ ಭಯ ಕೆಲವು ಪಕ್ಷಗಳಿವೆ.
ಕರ್ನಾಟಕದ ಪ್ರಥಮ ಹಂತದ ಚುನಾವಣೆ ಪಕ್ಕದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ಎ. 18ರಂದು ನಡೆಯಲಿದೆ. ಇದರ ಬಳಿಕ ಕೇರಳದಲ್ಲಿ ಏಕದಿನದಲ್ಲಿ ಚುನಾವಣೆ ನಡೆಯಲಿದ್ದು ಕಾಸರಗೋಡು ಕ್ಷೇತ್ರದಲ್ಲಿ ಎ. 23ರಂದು ನಡೆಯಲಿದೆ.ಈ ಚುನಾವಣೆ ಯಲ್ಲಿ ಅನ್ಯಕ್ಷೇತ್ರದ ಕೆಲವರು ಕಳ್ಳ ಮತದಾನ ಮಾಡಲಿರುವ ಭಯ ಪ್ರಧಾನ ಪಕ್ಷವೊಂದರ ನಾಯಕರದು. ಈ ತನಕ ಕೈ ಬೆರಳ ಶಾಯಿ ಅಳಿಸಲು ಅದ್ಯಾವುದೋ ದ್ರಾವಣ ಬಳಸುತ್ತಿದ್ದು ಈ ಬಾರಿ ಕೈ ಬೆರಳಿಗೆ ತಾಗದಂತೆ ಕವರ್ ಸಿದ್ಧವಾಗಿರುವ ಸುದ್ದಿ ಜಾಲತಾಣದಲ್ಲಿ ಹರಿದಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.