ಭಾಷೆ ಉಳಿವಿಗೆ ಮಿಡಿಯುವ ಜಯ ನಗರದ ಹುಡುಗಿ
Team Udayavani, Apr 17, 2019, 6:00 AM IST
ಪ್ರತಿಯೊಂದು ಊರಿಗೂ ಆತ್ಮವಿರುತ್ತದೆ. ಹಾಗೆಯೇ ನಮಗೂ ಕೂಡ ನಮ್ಮ ಊರು, ಭಾಷೆಯ ಬಗ್ಗೆ ಹೆಮ್ಮೆ ಇರುತ್ತದೆ. ಅದನ್ನು ನಾವು ಎಂದಿಗೂ ಬಿಟ್ಟು ಕೊಡದೆ ನಮ್ಮ ಕೇರಿಯ ನೆನಪುಗಳನ್ನು ಮರೆಯಬಾರದು ಎಂಬುದು ಲೇಖಕಿ ಮೇಘನಾ ಸುಧೀಂದ್ರ ಅವರು ಜಯ ನಗರದ ಹುಡುಗಿ ಎಂಬ ಕಥಾ ಸಂಕಲನದ ಮೂಲಕ ಓದುಗರಿಗೆ ತಿಳಿಸುತ್ತಾ ಹೋಗುತ್ತಾರೆ.
ಘಟನೆ 1
ಚಿಕ್ಕವರಿದ್ದಾಗ ಮನೆಯ ಚಿಕ್ಕ-ಚಿಕ್ಕ ಕೆಲಸಗಳಲ್ಲಿಯೂ ಭಾಷೆಯ ಸ್ಪಷ್ಟತೆ ಅರಿವಾಗುತ್ತಿತ್ತು. ದಿನಸಿ ಸಾಮಾನು ಮನೆಗೆ ಬರುವ ಕನ್ನಡ ದಿನ ಪತ್ರಿಕೆ ಇವೆಲ್ಲವೂ ಹೊಸ ಹೊಸ ಅಕ್ಷರಗಳನ್ನು ಕಲಿಸಿ ಕೊಡುತ್ತಿತ್ತು. ಆದರೆ ಇಂದು ಎಲ್ಲ ನಗರದಲ್ಲೂ ಬೇಳೆಗಳು ದಾಲ್ ಆಗಿವೆ. ಹಾಲು, ಮಿಲ್ಕ್ ಆಗಿದೆ ಹೀಗೆ ಕನ್ನಡ ಪದಗಳು ಬದಲಾಗುತ್ತಾ ಇಂಗ್ಲಿಷ್‌ಗೆ ಮಣಿಯುತ್ತಿರುವುದು ಸೋಜಿಗದ ಸಂಗತಿ ಎಂದು ಲೇಖಕರು ವಿಷಾದಿಸುತ್ತಾರೆ.
ಘಟನೆ 2
ಮನೆಯಲ್ಲಿ ಹಿರಿಯರು ನಮಗೆ ಇದು ತಿಳಿಯುವುದಿಲ್ಲ , ಸ್ವಲ್ಪ ತಂದು ಕೊಡಿ ಎಂದರೆ ಮಕ್ಕಳು ನಗುತ್ತಾರೆ. ಆದರೆ ಅದೇ ತಮ್ಮ ಮಕ್ಕಳಿಗೆ ನಮ್ಮ ಭಾಷೆ ನಾವು ಉಳಿಸಬೇಕು ಎಂಬ ಪಾಠವನ್ನು ಮಾಡದೇ ಇಂಗ್ಲಿಷ್ ನಲ್ಲೇ ವ್ಯವಹರಿಸುತ್ತಾರೆ. ಆಗ ಮಕ್ಕಳಿಗೆ ತಮ್ಮ ಮಾತೃ ಭಾಷೆಯ ಮೇಲೆ ಅಭಿಮಾನ ಇರುವುದಿಲ್ಲ. ಹೀಗೆ ಮುಂದುವರಿದರೆ ಕನ್ನಡ ಎಂಬ ಭಾಷೆ ಇತ್ತು ಎಂಬುದೇ ನಮ್ಮ ಮುಂದಿನ ಪೀಳಿಗೆ ಅಚ್ಚರಿಯಿಂದ ನೋಡುವ ಪರಿ ಸ್ಥಿತಿ ಬರಬಹುದು ಎಂಬುದನ್ನು ಉದಾಹರಣೆಗಳ ಮೂಲಕ ಸ್ಪಷ್ಟಪಡಿಸುತ್ತಾ ಹೋಗುತ್ತಾರೆ.
ಘಟನೆ 3
ನಾವು ಬೇರೆ ದೇಶಗಳಿಗೆ ಹೋದರೆ ನಮ್ಮವರು ಸಿಕ್ಕರೆ ಕನ್ನಡದಲ್ಲಿ ಮಾತನಾಡಲು ಹಿಂಜರಿಯುತ್ತೇವೆ. ನಮ್ಮ ಮಾತೃ ಭಾಷೆಗಳಿಗೆ ನಾವು ಮೊದಲು ಗೌರವ ನೀಡಬೇಕು. ಅಲ್ಲದೆ ನಮ್ಮ ಊರು-ಕೇರಿ ಆ ಬಾಲ್ಯದ ದಿನಗಳು ಎಲ್ಲ ವನ್ನೂ ಕಲಿಸಿಕೊಡುತ್ತಿತ್ತು. ಎಲ್ಲ ಮನೆಯವರು ಸೇರಿ ರಸ್ತೆಗಳಲ್ಲಿ ಒಟ್ಟು ಸೇರಿ ಆಟವಾಡುವುದು. ಎಲ್ಲವನ್ನೂ ಲೇಖಕಿ ಮೇಲುಕು ಹಾಕುತ್ತಾ ಹೋಗುವ ಸನ್ನೀವೇಶ ಬಾಲ್ಯದ ನೆನಪನ್ನು ಮರುಕಳಿಸುತ್ತದೆ. ಅಲ್ಲದೆ ನಾವು ಬೆಳೆದ ಪ್ರದೇಶ ನಮ್ಮ ಭಾಷೆಯ ಮೇಲೆ ನಮಗಿರುವ ಪ್ರೀತಿಯನ್ನು ವಿವರಿಸುವ ಪರಿ ಓದುಗನಿಗೆ ಹಳೆಯ ನೆಪುಗಳನ್ನು ನೆನಪಿಸುತ್ತದೆ.
ಪ್ರೀತಿ ಭಟ್, ಗುಣವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.