“ಅಂಬೇಡ್ಕರ್ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ’
Team Udayavani, Apr 17, 2019, 6:00 AM IST
ಡಾ| ಬಿ.ಆರ್. ಅಂಬೇಡ್ಕರ್ 128ನೇ ಜಯಂತಿ ಕಾರ್ಯಕ್ರಮದ ಉದ್ಘಾಟನೆ ಜರಗಿತು.
ಸುರತ್ಕಲ್: ಭಾರತದ ಸಂವಿಧಾನವು ಸಮಾಜದ ಬಡವರ್ಗಕ್ಕೆ, ತುಳಿತಕ್ಕೊಳಗಾದವರಿಗೆ ಸಮಾನ ಅಭಿ ವೃದ್ಧಿಯ ಅವಕಾಶವನ್ನು ನೀಡುವ ಮೂಲಕ ಪ್ರಜಾಪ್ರಭುತ್ವಕ್ಕೆ ಈ ಕೊಡುಗೆ ನೀಡಿದ ಡಾ| ಬಿ.ಆರ್. ಅಂಬೇಡ್ಕರ್ ಅವ ರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅನಿಲ್ ಕುಮಾರ್ ಹೇಳಿದರು.
ಅವರು ಎಂಆರ್‌ಪಿಎಲ್ ವತಿಯಿಂದ ಆಯೋಜಿಸಲಾದ ಡಾ| ಬಿ.ಆರ್. ಅಂಬೇಡ್ಕರ್ ಅವರ 128ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪೂನಾ ಒಪ್ಪಂದ ಪರಿಶಿಷ್ಟ ಜಾತಿ, ಪಂಗಡಿಗಳಿಗೆ ಹೆಚ್ಚಿನ ಅವಕಾಶ ದೊರಕಿ ಸಮಾಜ ಮುಂಚೂಣಿಗೆ ಬರಲು ಸಹಕಾರಿಯಾಯಿತು ಎಂದರು. ಡಾ| ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಿದ ಸಂವಿಧಾನ ಇಂದು ಮಹಿಳೆ ಯರಿಗೆ, ಮಕ್ಕಳಿಗೆ ಹೀಗೆ ಎಲ್ಲ ಸ್ತರದವರಿಗೆ ಸ್ವಾತಂತ್ರ್ಯದ ಹಕ್ಕು ನೀಡಿದೆ. ಮಕ್ಕಳಿಗೆ ಹೆಚ್ಚಿನ ಶಿಕ್ಷಣ ನೀಡುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತವರಾಗಬೇಕು ಎಂದರು.
ನಮಗೆ ಸ್ಫೂರ್ತಿ
ಎಂಆರ್‌ಪಿಎಲ್ ನಿರ್ದೇಶಕ ಎಂ. ವೆಂಕಟೇಶ್ ಮಾತನಾಡಿ, ಸಂವಿಧಾನದ ಆಶಯದಂತೆ ನಾವೆಲ್ಲರೂ ನಡೆದು ಕೊಂಡಾಗ ಸಮಾಜದಲ್ಲಿ ಎಲ್ಲರೂ ಶಾಂತಿ ನೆಮ್ಮದಿಯಿಂದ ನೆಲೆಸಲು ಸಾಧ್ಯವಿದೆ. ಡಾ| ಬಿ.ಆರ್. ಅಂಬೇಡ್ಕರ್ ಅವರು ನಾಲ್ಕು ಡಾಕ್ಟರೇಟ್, ಬರೋಡ ಮಹಾರಾಜರಿಂದ ಸಮ್ಮಾನ, ಮೊದಲ ಕಾನೂನು ಸಚಿವರಾಗಿ ಮಾಡಿದ ಕೆಲಸ ಎಲ್ಲವೂ ನಮಗಿಂದು ಸ್ಫೂರ್ತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಜಿಎಂ ಬಿಎಚ್‌ವಿ ಪ್ರಸಾದ್, ಹಿರಿಯ ಅ ಧಿಕಾರಿಗಳು,ಪರಿಶಿಷ್ಟ ಜಾತಿ, ಪಂಗಡ ಸಂಘದ ಪದಾ ಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.