ಡೈಮಂಡ್ ಲೀಗ್: ನೀರಜ್ ಸ್ಪರ್ಧೆ ಇಲ್ಲ
Team Udayavani, Apr 17, 2019, 6:30 AM IST
ಹೊಸದಿಲ್ಲಿ: ಖ್ಯಾತ ಜಾವೆಲಿನ್ ತಾರೆ ನೀರಜ್ ಚೋಪ್ರಾ ಗಾಯದ ಕಾರಣದಿಂದ ಮುಂಬರುವ ಪ್ರತಿಷ್ಠಿತ ಡೈಮಂಡ್ ಲೀಗ್ ಆ್ಯತ್ಲೆಟಿಕ್ಸ್ ಕೂಟದಿಂದ ಹಿಂದಕ್ಕೆ ಸರಿಯಲಿದ್ದಾರೆ. ಜತೆಗೆ ಎ. 21ರಿಂದ ಆರಂಭವಾಗಲಿರುವ ದೋಹಾ ಏಶ್ಯನ್ ಕೂಟದಲ್ಲೂ ಪಾಲ್ಗೊಳ್ಳುತ್ತಿಲ್ಲ.
2019ರ ಮೊದಲ ಅಂತಾರಾಷ್ಟ್ರೀಯ ಕೂಟದಲ್ಲಿ ನೀರಜ್ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದರು. ಆದರೆ ಮೊಣಕೈ ನೋವಿನಿಂದ ಬಳಲುತ್ತಿರುವ ಕಾರಣ ನೀರಜ್ ಮುಂದಿನ ಕೂಟದಲ್ಲಿ ಭಾಗವಹಿಸುವುದು ಅನುಮಾನ ಎಂದು ಆ್ಯತ್ಲೆಟಿಕ್ಸ್ ಕೋಚ್ ಉವೆ ಹೊನ್ ತಿಳಿಸಿದ್ದಾರೆ.
“ಕಳೆದ ವಾರ ಪಟಿಯಾಲದಲ್ಲಿ ತರಬೇತಿ ಪಡೆಯುತ್ತಿರುವ ವೇಳೆ ನೀರಜ್ ಮೊಣಕೈ ಗಾಯಕ್ಕೆ ತುತ್ತಾದರು. ಮುಂದೆ ಶಸ್ತ್ರಚಿಕಿತ್ಸೆ ನಡೆಸುವುದೋ ಅಥವಾ ವಿಶ್ರಾಂತಿಯಿಂದಲೇ ಗಾಯ ವಾಸಿ ಮಾಡುವುದೋ ಎನ್ನುವ ಬಗ್ಗೆ ವೈದ್ಯರ ಸಲಹೆ ಮೇರೆಗೆ ಮುಂದುವರಿಯಲಾಗುವುದು. ಈ ಹಿನ್ನೆಲೆಯಲ್ಲಿ ನೀರಜ್ಗೆ ಮುಂದಿನ ಕೆಲವು ಕೂಟಗಳಲ್ಲಿ ಭಾಗವಹಿಸುವುದು ಅಸಾಧ್ಯ’ ಎಂದು ಕೋಚ್ ಹೇಳಿಸಿದರು.
ಡೈಮಂಡ್ ಲೀಗ್ ಮೇ-ಜೂನ್ನಲ್ಲಿ ನಡೆಯಲಿದೆ. ನೀರಜ್ ಕಳೆದ ವರ್ಷ ರಾಷ್ಟ್ರೀಯ ದಾಖಲೆಯೊಂದಿಗೆ ಜಕಾರ್ತಾ ಏಶ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.