ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್: ಜಿಐಟಿ ಪ್ರಥಮ
Team Udayavani, Apr 17, 2019, 12:16 PM IST
ಬೆಳಗಾವಿ: ಇಲ್ಲಿಯ ಕೆಎಲ್‌ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ aishnavi, ರಾಹುಲ್ ಮಹೇಂದ್ರಕರ್, ತನ್ವಿಶ್ ಮಿನಾಚೆ ಮತ್ತು ವೈಭವ್ ಕುಲಕರ್ಣಿ ಒಳಗೊಂಡ ಟೆಕ್ ಫನಾಟಿಕ್ ತಂಡವು ವಿಶ್ವದ ಅತ್ಯಂತ ದೊಡ್ಡ ಹ್ಯಾಕಥಾನ್ ಸ್ಪರ್ಧೆ ಸ್ಮಾರ್ಟ್ ಇಂಡಿಯಾ ಹ್ಯಾಕಥನ್ -19 ಪ್ರಥಮ ಸ್ಥಾನದ ಜೊತೆಗೆ ಒಂದು ಲಕ್ಷ ರೂ. ನಗದು ಬಹುಮಾನ ಪಡೆದುಕೊಂಡಿದೆ.
ಹೆಸರಾಂತ ಸ್ಯಾಮ್ ಸಂಗ್ ಕಂಪನಿಯ ಆರ್‌ಡಿ ತಂಡ ನೀಡಿದ್ದ ತಾಂತ್ರಿಕ ಯೋಜನೆ “ಈಕೋ ಡ್ರೈವ್ ಗೋಲ್ -ರೆಡ್ನೂಸ್ ಕಾರ್ಬನ್ ಫುಟ್ ಪ್ರಿಂಟ್ ಆಫ್ ದಿ ಟ್ರಾವೆಲ್ ಪ್ರಪೋಸಲ್ ಬೆ„ ಬಿಲ್ಡಿಂಗ್ ಎ ಸ್ಮಾರ್ಟ್ ಫೋನ್ ಆಪ್ ದ್ಯಾಟ್ ಹೆಲ್ಪ ಯು ಟು ಕಾರ್-ಬೈಕ್ ಪೂಲ್ ಅಡಿ ಕೆಲಸ ಮಾಡಿದೆ. ಜಿಐಟಿ ಕಾಲೇಜಿಗೆ ಇದು ಸತತ ಎರಡನೇ ಬಾರಿ ದೊರೆತ ಪ್ರಶಸ್ತಿ.
ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ -19 ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿ ಪ್ರತಿ ವರ್ಷ ಭಾರತ ಸರ್ಕಾರ ಆಯೋಜಿಸುವ ಒಂದು ದಿನದ ನಿರಂತರ ಸ್ಪರ್ಧೆಯಾಗಿದ್ದು ಇದರಲ್ಲಿ ತಂತ್ರಜ್ಞಾನ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನವೀನ ಸ್ಮಾರ್ಟ್ ಪರಿಹಾರಗಳಿಗಾಗಿ ಸಮಸ್ಯೆಗಳನ್ನು ನೀಡಲಾಗುತ್ತದೆ.
2019 ರಲ್ಲಿ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2 ಉಪ ಆವೃತ್ತಿಗಳನ್ನು ಹೊಂದಿತ್ತು – ಸಾಫ್ಟ್ ವೇರ್ ಮತ್ತು ಯಂತ್ರಾಂಶ (ಹಾರ್ಡ್‌ವೇರ್). ಸಾಫ್ಟ್ ವೇರ್ ಇಂಡಿಯಾ ಆವೃತ್ತಿಯು 36 ಗಂಟೆಗಳ ಸಾಫ್ಟ್ ವೇರ್ ಅಭಿವೃದ್ಧಿ ಸ್ಪರ್ಧೆಯಾಗಿದ್ದು, ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-2017 ಮತ್ತು 18 ರ ಪರಿಕಲ್ಪನೆಯಂತೆಯೇ ಆಯೋಜಿಸಲಾಗಿತ್ತು. ಇದರಲ್ಲಿ ಹಿಂದಿನ ಆವೃತ್ತಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ತಾಂತ್ರಿಕ ಸಂಸ್ಥೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಬಾರಿ ಒಟ್ಟು 550ಕ್ಕಿಂತ ಹೆಚ್ಚು ತಾಂತ್ರಿಕ ಸವಾಲು, ಸಮಸ್ಯೆ ಹಾಗೂ ಯೋಜನೆಗಳನ್ನು ವ್ಯಾಖ್ಯಾನ ಮಾಡಲಾಗಿತ್ತು, ಪ್ರತಿಷ್ಠಿತ ತಾಂತ್ರಿಕ ಸಂಸ್ಥೆಗಳಿಂದ 34,000 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳ ತಂಡಗಳು ಭಾಗವಹಿಸಿ ತಾಂತ್ರಿಕ ಪರಿಹಾರಗಳನ್ನೂ ಸಾಫ್ಟ್ ವೇರ್ ರೂಪದಲ್ಲಿ 57,000 ಕ್ಕಿಂತ ಹೆಚ್ಚು ಪರಿಹಾರಗಳನ್ನು ಆಯ್ಕೆ ಸುತ್ತಿನಲ್ಲಿ ನೀಡಿದ್ದರು. ಕಠಿಣ ಮೌಲ್ಯಮಾಪನದ ನಂತರ ರಾಷ್ಟ್ರದಾದ್ಯಂತ 1500 ತಂಡಗಳನ್ನು ರಾಷ್ಟ್ರ ಮಟ್ಟದ ಪ್ರಶಸ್ತಿ ಸುತ್ತಿಗೆ ಆಯ್ಕೆ ಮಾಡಲಾಯಿತು.
ಸೃಷ್ಟಿ ಪಾಟೀಲ್, ಸಿಂಚನ ಶಾನಭಾಗ, ನಿಶಾಪುರಿ, ಮೇಘಾನಾ ಜಿ, ನಿತಿನ್ ಭೂಯ್ಯರ್, ಎಂ ಶೋಹೆಬ್ ಮೇಟಿ , ಸ್ಪೂರ್ತಿ ಕಾಳೆ, ಶಿವಾನಿ ಹಂದಿಗೋಲ್, ಶಾಹೀನ್ ಹವಾಲ್ದಾರ್, ಸಂಜೀದ ಗುಂಡಕಲ್ಲಿ, ಚೈತ್ರಾಲಿ ಕುಲಕರ್ಣಿ, ಸುಧಾರಾಣಿ ಪಾಟೀಲ್, ಸುಧಾಂಶು ಶೇಖರ್, ಶುಭಮ ದೇಶಪಾಂಡೆ, ಶ್ರೀಲಕ್ಷಿ$¾ ದೇಸಾಯಿ, ಸಿಂಚನ ಶೆಟ್ಟಿ, ಶಿವಾನಿ ಪಾಟೀಲ್, ಸ್ನೇಹ ಔದುಗೌಡರ್, ವೈಷ್ಣವಿ ಹರಿಕಾಂತ, ಅಪರ್ಣಾ ಮನೋಹರ್, ಅಮಿತ್ ಹಣ್ಣಿಕೇರಿ, ರಾಹುಲ್ ಮಹೇಂದ್ರಕರ್, ತನ್ವಿಶ್ ಮಿನಾಚೆ ಮತ್ತು ವೈಭವ್ ಕುಲಕರ್ಣಿ ಸೇರಿದಂತೆ 25 ವಿದ್ಯಾರ್ಥಿಗಳನ್ನು ಒಳಗೊಂಡ ನಾಲ್ಕು ತಂಡಗಳು ಫೈನಲ್ ಸುತ್ತಿಗೆ ಅರ್ಹತೆ ಪಡೆದು ಆಯ್ಕೆಯಾಗಿದ್ದವು. ಇದರಲ್ಲಿ ಒಂದು ತಂಡ ಪ್ರಥಮ ಸ್ಥಾನದ ಜೊತೆಗೆ ಒಂದು ಲಕ್ಷ ರೂ. ನಗದು ಬಹುಮಾನ ಪಡೆದುಕೊಂಡಿದೆ.
ಈ ತಂಡಗಳಿಗೆ ಡಾ. ಸಂತೋಷ್ ಸರಾಫ್, ಪ್ರೊ. ಗಜೇಂದ್ರ ದೇಶಪಾಂಡೆ, ಪ್ರೊ. ರಾಹುಲ ಕುಲಕರ್ಣಿ, ಆನಂದ್ ದೇಶಪಾಂಡೆ, ಡಾ.ವಿನೀತ್ ಕುಲಕರ್ಣಿ, ಪ್ರೊ. ಅಜಯ್ ಆಚಾರ್ಯ, ಆರ್. ತ್ಯಾಗಿ, ವೀಣಾ ಮಾವರ್ಕರ್, ಪ್ರೊ. ಮಂಜುಳ ರಾಮಣ್ಣವರ್ ಮತ್ತು ಪ್ರೊ.ವೈದೇಹಿ ದೇಶಪಾಂಡೆ ಮಾರ್ಗದರ್ಶನ ನೀಡಿದ್ದರು. ವಿದ್ಯಾರ್ಥಿಗಳ ಸಾಧನೆಗೆ ಕೆಎಲ್‌ಎಸ್ ಸಂಸ್ಥೆಯ ಕಾರ್ಯಾಧ್ಯಕ್ಷ ಎಂ. ಆರ್. ಕುಲಕರ್ಣಿ, ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಯು. ಎನ್. ಕಾಲಕುಂದ್ರಿಕರ್, ಪ್ರಾಂಶುಪಾಲ ಡಾ.ಎ. ಎಸ್. ದೇಶಪಾಂಡೆ ಅಭಿನಂದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.