ಕೈ ಬೀಸಿ ಕರೆಯುತ್ತಿದೆ ಕಲರ್‌ಫುಲ್‌ ಸಖಿ ಮತಗಟ್ಟೆ !

ಆಕರ್ಷಕ ಪ್ರವೇಶದ್ವಾರ, ಬಣ್ಣಬಣ್ಣದ ಬಲೂನ್‌, ಬಟ್ಟೆಗಳಿಂದ ಅಲಂಕಾರ

Team Udayavani, Apr 18, 2019, 6:11 AM IST

1704MLR57

ಮಹಾನಗರ: ಮತದಾನ ಮಾಡಲು ಬರುವ ಮತದಾರರನ್ನು ಮಹಿಳೆಯರೇ ಸ್ವಾಗತ ಕೋರುವ ಚಿತ್ರಣ ವಿರುವ ಕಲರ್‌ಫುಲ್‌ ಪ್ರವೇಶದ್ವಾರ.. ಓಳಹೋದಂತೆ ಬಣ್ಣ ಬಣ್ಣದ ಬಲೂನ್‌, ಬಟ್ಟೆಗಳಿಂದ ಮಾಡಿದ ಅಲಂಕಾರ….

ಗುರುವಾರ ನಡೆಯುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಹಿಳಾ ಸ್ನೇಹಿ ಸಖಿ ಮತದಾನ ಕೇಂದ್ರಗಳಿಗೆ “ಉದಯವಾಣಿ ಸುದಿನ’ವು ಚುನಾವಣೆಯ ಮುನ್ನಾ ದಿನವಾದ ಬುಧವಾರ ಭೇಟಿ ನೀಡಿದಾಗ ಕಂಡು ಬಂದ ಚಿತ್ರಣವಿದು.

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಆಯ್ದ ಕೆಲವು ಮತಗಟ್ಟೆಗಳನ್ನು ಸಂಪೂರ್ಣ ಮಹಿಳಾ ಸ್ನೇಹಿ ಮತಗಟ್ಟೆ ಯನ್ನಾಗಿ ರೂಪಿಸುವಂತೆ ಚುನಾವಣೆ ಆಯೋಗ ಸಲಹೆ ನೀಡಿತ್ತು. ಆಯೋಗದ ಸಲಹೆ ಯಂತೆ ಜಿಲ್ಲಾಡಳಿತವೂ ಸಿದ್ಧತೆ ನಡೆಸಿದ್ದು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ದಲ್ಲಿ ಐದು ಮತಗಟ್ಟೆಗಳನ್ನು ಮಹಿಳಾಸ್ನೇಹಿ ಸಖಿ ಮತಟಗಟ್ಟೆಗಳಾಗಿ ರೂಪಿಸಲಾಗಿದೆ.

ಕಲರ್‌ಫುಲ್‌ ಸ್ವಾಗತ
ಸಖಿ ಮತಗಟ್ಟೆಗಳೆಂದು ಆಯ್ಕೆ ಮಾಡಿರುವ ಮತಗಟ್ಟೆ ಹೊರಭಾಗದಲ್ಲಿ ಇಬ್ಬರು ಮಹಿಳೆಯರು ಬಣ್ಣದ ಸೀರೆ ಯುಟ್ಟು ಮತದಾರರನ್ನು ಸ್ವಾಗತಿಸುವ ದೊಡ್ಡ ಪ್ರವೇಶದ್ವಾರ ರಚಿಸಲಾಗಿದೆ. ಮತದಾನದ ಹಕ್ಕಿನ ಬಗ್ಗೆ ಮಹಿಳೆಯರು ಅರಿವು ಮೂಡಿಸುತ್ತಿರುವ ಚಿತ್ರಣವನ್ನು ಈ ದ್ವಾರದಲ್ಲಿ ಬಿಂಬಿಸಲಾಗಿದೆ. ರಸ್ತೆ ಬದಿಯಲ್ಲಿ ದೊಡ್ಡದಾಗಿ ಪ್ರವೇಶದ್ವಾರವನ್ನು ಅಲಂಕರಿಸಲಾಗಿದ್ದು, ನೋಡುಗರನ್ನು ಆಕರ್ಷಿಸುತ್ತಿವೆ.

ಬಲೂನು ಅಲಂಕಾರ
ಮಹಿಳಾಸ್ನೇಹಿ ಮತಗಟ್ಟೆಯ ಒಳಗಡೆ ಸುತ್ತಲೂ ವಿವಿಧ ಬಣ್ಣದ ಅಲಂಕಾರಿಕ ಬಟ್ಟೆ ಮತ್ತು ಹಲವು ಬಣ್ಣದ ಬಲೂನಿನಿಂದ ಅಲಂಕರಿಸಲಾಗಿದೆ. ಇವಿಎಂ ಮೆಶಿನ್‌ ಇಟ್ಟಿರುವ ಟೇಬಲ್‌, ಅಧಿಕಾರಿಗಳು ಕುಳಿತುಕೊಳ್ಳುವ ಚಯರ್‌ ಮತ್ತು ಟೇಬಲ್‌ಗ‌ಳನ್ನೂ ನೀಲಿ ಸೇರಿದಂತೆ ಹಲವು ಬಣ್ಣದಿಂದ ಅಲಂಕರಿಸಲಾಗಿದೆ.

ಪಿಂಕ್‌ ಮತಗಟ್ಟೆ ಬದಲಾಗಿ ಸಖಿ
ಮಹಿಳಾ ಮತದಾರರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಪಿಂಕ್‌ ಮತಗಟ್ಟೆಗಳನ್ನು ಮಾಡಲಾಗಿತ್ತು. ಆದರೆ ಈ ಬಾರಿ ಪಿಂಕ್‌ ಬಣ್ಣ ವನ್ನು ಎಲ್ಲಿಯೂ ಬಳಸದಂತೆ ಚುನಾವಣೆ ಆಯೋಗ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಪಿಂಕ್‌ ಮತಗಟ್ಟೆಗಳನ್ನು ಸಖೀ ಮತಗಟ್ಟೆಗಳಾಗಿ ಬದಲಾಯಿಸಲಾಗಿದೆ. ಈ ಮತಗಟ್ಟೆಯಲ್ಲಿ ಭದ್ರತಾ ಸಿಬಂದಿ, ಪೊಲೀಸರು ಸಹಿತ ಎಲ್ಲ ಸಿಬಂದಿ ಮಹಿಳೆಯರೇ ಆಗಿರುತ್ತಾರೆ. ಈ ನೆಲೆಯಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲಿ ಎಂಬುದು ಆಯೋಗದ ಇರಾದೆ.

ಸೆಲ್ಫಿ ಕಾರ್ನರ್‌
ಪ್ರಸ್ತುತ ಎಲ್ಲರೂ ಸಾಮಾಜಿಕ ಜಾಲತಾ ಣಗಳಲ್ಲಿ ಹೆಚ್ಚು ಕ್ರೀಯಾಶೀಲರಾಗಿದ್ದು, ತಮ್ಮ ದೈನಂದಿನ ಚಟುವಟಿಕೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಪ್‌ಡೇಟ್‌ ಮಾಡುತ್ತಿರುತ್ತಾರೆ. ಅದರಲ್ಲೂ ಸೆಲ್ಫಿ ತೆಗೆದು ಅಪ್‌ಲೋಡ್‌ ಮಾಡುವುದು ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಸಖೀ ಮತಗಟ್ಟೆಗಳ ಹೊರಭಾಗದಲ್ಲಿ ಸೆಲ್ಫಿ ಕಾರ್ನರ್‌ ಮಾಡಲಾಗಿದೆ. ಮತದಾನ ಮಾಡಿದ ಬಳಿಕ ಅಲ್ಲಿ ಸೆಲೀ ತೆಗೆದು ಸಂಭ್ರಮಿಸಬಹುದು.

ಬಣ್ಣ ಬಣ್ಣದ ಬಟ್ಟೆ ಧರಿಸಲಿದ್ದಾರೆ
ಮಹಿಳಾ ಅಧಿಕಾರಿಗಳು
ಸಖಿ ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿ ಸಹಿತ ಅಧಿಕಾರಿಗಳೂ ಮಹಿಳೆಯರೇ ಆಗಿರುತ್ತಾರೆ. ಈ ಎಲ್ಲ ಅಧಿಕಾರಿಗಳು ಮತದಾನದ ದಿನದಂದು ಬಣ್ಣ ಬಣ್ಣದ ಬಟ್ಟೆ ಧರಿಸಿ ಮತದಾನ ಕೇಂದ್ರಕ್ಕೆ ಬಂದು ಚುನಾವಣೆ ಕರ್ತವ್ಯ ನಿರ್ವಹಿಸಲಿದ್ದಾರೆ. ಸಖೀ ಮತಗಟ್ಟೆಗಳನ್ನು ಕಲರ್‌ಫುಲ್‌ ಮಾಡ ಲಾಗಿದೆ. ಮಹಿಳಾ ಸಬಲೀಕರಣ ಮತ್ತು ಮಹಿಳೆಯರನ್ನು ಹೆಚ್ಚಿನ ಸಂಖ್ಯೆ ಯಲ್ಲಿ ಮತದಾನ ಕೇಂದ್ರಗಳತ್ತ ಸೆಳೆಯಲು ಇದೊಂದು ಅತ್ಯುತ್ತಮ ವಿಧಾನ. ಇಲ್ಲಿ ಕರ್ತವ್ಯ ನಿರ್ವಹಿಸಲು ನಮಗೂ ಖುಷಿ ಯಾಗುತ್ತದೆ. ಇಲ್ಲಿ ಮತದಾನಕ್ಕೆ ಪುರುಷರೂ ಬರುತ್ತಾರಾದರೂ, ಮಹಿಳೆಯರಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತದೆ ಎಂದು ಹೇಳುತ್ತಾರೆ ಲೇಡಿಹಿಲ್‌ ಸಖಿ ಮತಗಟ್ಟೆ ಅಧಿಕಾರಿ ಡಾ.ರಾಜಲಕ್ಷ್ಮೀ ಎನ್‌ಕೆ.

ಟಾಪ್ ನ್ಯೂಸ್

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

9

Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗ‌ಳಲ್ಲೇ ಬಸ್‌ ನಿಲುಗಡೆ; ಅನಾಹುತಕ್ಕೆ ಎಡೆ

8(1)

Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು

7(1)

Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.