ತಪ್ಪದೇ ಮಾಡಿ ಮತದಾನ: ಇಂದು ಮತದಾನ ಹಬ್ಬ
"ಉದಯವಾಣಿ' ಮತ ಜಾಗೃತಿ ಪ್ರಯತ್ನಕ್ಕೀಗ ಸಾರ್ಥಕತೆ ಕಾಲ
Team Udayavani, Apr 18, 2019, 3:00 AM IST
ಬೆಂಗಳೂರು: ಪ್ರಜಾತಂತ್ರ ಹಬ್ಬಕ್ಕೆ ಈಗ ಕ್ಷಣಗಣನೆ. ಈ ಹಬ್ಬದಲ್ಲಿ ನಗರದ ಎಲ್ಲ ವರ್ಗದ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗೂಡಿಸುವ ಕೆಲಸ “ಉದಯವಾಣಿ’ಯಿಂದ ಕಳೆದ ಒಂದು ತಿಂಗಳು ನಡೆಯಿತು. ಗುರುವಾರ ಆ ಪ್ರಯತ್ನದ ಸಾರ್ಥಕತೆಗೆ ಸಕಾಲ.
ಈ ಹಬ್ಬದಿಂದ ದೂರ ಉಳಿಯಲು ನಿರ್ಧರಿಸಿದ್ದ ಮತದಾರರನ್ನು ಹತ್ತಿರಕ್ಕೆ ಕರೆತರುವ ವೇದಿಕೆಯಾಗಿ, ಮತದಾರ ಎದುರಿಸುತ್ತಿರುವ ಸಮಸ್ಯೆಗಳಿಗೆ ದನಿಯಾಗಿ, ಈ ಕ್ರಿಯೆಯಲ್ಲಿ ಸಕ್ರಿಯವಾಗಿರುವ ಸಂಘ-ಸಂಸ್ಥೆಗಳು, ವ್ಯಕ್ತಿಗಳ ಪರವಾಗಿ ತಿಂಗಳಿಂದ ನಿರಂತರವಾಗಿ ಪತ್ರಿಕೆ ಕೆಲಸ ಮಾಡಿದೆ.
ಇದಕ್ಕಾಗಿಯೇ ಪುಟ ಮೀಸಲಿಟ್ಟು, ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿತು. ಕಾರ್ಮಿಕರು, ಯುವಕರು, ಪ್ರತಿಷ್ಠಿತರು, ಮಹಿಳೆಯರು, ಅಂಗವಿಕಲರು ಸೇರಿದಂತೆ ವಿವಿಧ ವರ್ಗಗಳ ಮತದಾರರನ್ನು ಸೇರಿಸುವ ಪ್ರಯತ್ನ ಈ ಮೂಲಕ ನಡೆಯಿತು.
ನಗರದಲ್ಲಿ ಸಾಕ್ಷರರ ಸಂಖ್ಯೆ ಗಣ್ಯವಾಗಿದ್ದರೂ, ಮತದಾನ ಮಾತ್ರ ನಗಣ್ಯವಾಗಿದೆ. ಇದರಲ್ಲಿ ಅಪಾರ್ಟ್‌ಮೆಂಟ್ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಬಗ್ಗೆ ಬೆಳಕು ಚೆಲ್ಲಲಾಯಿತು. “ಕಡ್ಡಾಯ ಮತದಾನ ನಾವೆಲ್ಲ ಕೈಜೋಡಿಸೋಣ’ ಅಭಿಯಾನದಡಿ ವಾಸ್ತವವಾಗಿ ಒಂದು ಮತದ ಮೌಲ್ಯ,
ಮಕ್ಕಳಿಗೂ ಒಂದು ಪ್ರಣಾಳಿಕೆ ಆಗಲಿ ಎಂಬ ಬೇಡಿಕೆ, ಮತದಾನ ಜಾಗೃತಿಗೆ ಆಯೋಗ ರಚಿಸಿದ ಒಂದು ನಿಮಿಷದ ಸಿನಿಮಾ, ವೋಟಿಂಗ್‌ಗೆ ಚಕ್ಕರ್ ಹಾಕಿ ಔಟಿಂಗ್‌ಗೆ ಹೊರಟವರಿಗೆ ವಸತಿ ಸೌಲಭ್ಯ ನೀಡವುದಿಲ್ಲ ಎಂಬ ದಿಟ್ಟ ನಿರ್ಧಾರ ಕೈಗೊಂಡ ಅಧಿಕಾರಿಗಳು, ಮದ್ಯ ನಿಷೇಧ ಮಾಡದಿರುವ ಜನಪ್ರತಿನಿಧಿಗಳ ವಿರುದ್ಧ “ನೋಟಾ’ ಅಸ್ತ್ರಕ್ಕೆ ಮುಂದಾದ ಮಹಿಳೆಯರ ಬಗ್ಗೆ,
ಯುವಜನ ಆಯೋಗದ ಒತ್ತಾಯ ಮುಂದಿಟ್ಟ ಯುವಪಡೆ, ರೈತ ಮಹಿಳೆಯರಿಗೆ ಮತದಾನದ ಪಾಠ ಹೀಗೆ ಹತ್ತುಹಲವು ರೀತಿಯಲ್ಲಿ ಮತದಾರರ ಜಾಗೃತಿ ಮೂಡಿಸಲಾಯಿತು. ಮತದಾರರನ್ನು ಪ್ರೋತ್ಸಾಯಿಸಲು ಹಲವು ರೀತಿಯ ಆಫರ್‌ಗಳು, ರಿಯಾಯ್ತಿಗಳ ಬಗ್ಗೆಯೂ ಗಮನಸೆಳೆಯಲಾಯಿತು.
ಅಲ್ಲದೆ, ಶಾಂತಿಯುತ ಮತದಾನದಲ್ಲಿ ಪ್ರಮುಖ ಪಾತ್ರ ವಹಿಸುವ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯೊಂದಿಗೆ ಕೈಜೋಡಿಸಿ, ನಗರದ ಪ್ರಮುಖ ಭಾಗಗಳಲ್ಲಿ ಸೈಕಲ್ ಜಾಥಾ ಮೂಲಕ ಅರಿವು ಕಾರ್ಯಕ್ರಮ ನಡೆಸಲಾಯಿತು. 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಇದರಲ್ಲಿ ಭಾಗವಹಿಸಿದ್ದರು. ಅಲ್ಲದೆ, ಸ್ವತಃ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ವಿಶೇಷ ಅತಿಥಿಯಾಗಿ ಉದಯವಾಣಿ ಪತ್ರಿಕೆ ಕಚೇರಿಗೆ ಆಹ್ವಾನಿಸಲಾಗಿತ್ತು.
ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಒಂದೊಂದು ರನ್ ಕೂಡ ನಿರ್ಣಾಯಕ. ಅದೇ ರೀತಿ, ಚುನಾವಣೆಯಲ್ಲಿ ಕೂಡ ಒಂದೊಂದು ಮತವೂ ನಿರ್ಣಾಯಕವಾದುದು. ಆದ್ದರಿಂದ ತಪ್ಪದೇ ಮತ ಚಲಾಯಿಸಿ.
-ಸಂಜೀವ್ ಕುಮಾರ್, ರಾಜ್ಯ ಮುಖ್ಯ ಚುನಾವಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.