ಶಾಯಿ ತೋರಿಸಿ ಅಭಿಯಾನ
Team Udayavani, Apr 18, 2019, 3:00 AM IST
ಬೆಂಗಳೂರು: ಈ ಬಾರಿ ಶೇ. 80ರಷ್ಟು ಮತದಾನಕ್ಕೆ ಪಣತೊಟ್ಟಿರುವ ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್ (ಬಿಎಎಫ್), ಇದಕ್ಕಾಗಿ ಮತದಾರರನ್ನು ಪ್ರೋತ್ಸಾಹಿಸಲು ಹಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಮತದಾನದಂದು ಅಂದರೆ ಗುರುವಾರ ಅಪಾರ್ಟ್‌ಮೆಂಟ್‌ಗಳಲ್ಲಿರುವ ಹಿರಿಯ ನಾಗರಿಕರು ಮತ್ತು ಅಂಗವಿಕಲ ಮತದಾರರಿಗಾಗಿಯೇ ಉಚಿತ ಕಾರ್‌ಪೂಲಿಂಗ್, ಟ್ಯಾಕ್ಸಿ ಸೇವೆ ಕಲ್ಪಿಸಲಾಗಿದೆ. ಪ್ರತಿ ಅಪಾರ್ಟ್‌ಮೆಂಟ್‌ಗಳಲ್ಲಿ ಸರಾಸರಿ 80ರಿಂದ 100 ಹಿರಿಯ ನಾಗರಿಕರು ಹಾಗೂ ಅಂಗವಿಕಲರಿದ್ದಾರೆ.
ಅವರ ಅನುಕೂಲಕ್ಕಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಯಾವುದೋ ಒಂದು ರಾಜಕೀಯ ಪಕ್ಷ ವ್ಯವಸ್ಥೆ ಮಾಡಿದ್ದಲ್ಲ. ಸ್ವತಃ ನಿವಾಸಿಗಳು ಈ ಕ್ರಮ ಕೈಗೊಂಡಿದ್ದೇವೆ ಎಂದು ಫೆಡರೇಷನ್ ಸದಸ್ಯೆ ಸಂಧ್ಯಾ ಭಟ್ ತಿಳಿಸಿದರು. ಅಗತ್ಯ ಇರುವ ಕಡೆಗಳಲ್ಲಿ ಆಟೋ, ಟ್ಯಾಕ್ಸಿಗಳನ್ನು ಬುಕಿಂಗ್ ಮಾಡಲಾಗುತ್ತಿದೆ.
“ಶೋ ದಿ ಇಂಕ್’ (ಶಾಯಿ ತೋರಿಸಿ) ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರಡಿ ಮತದಾರರು ಟ್ವಿಟರ್‌ನಲ್ಲಿ ಶಾಯಿ ಹಾಕಿದ ಬೆರಳಿನ ಚಿತ್ರ ತೋರಿಸಿ, ನಿತ್ಯ ಬಳಕೆ ವಸ್ತುಗಳ ಖರೀದಿಯಲ್ಲಿ ರಿಯಾಯ್ತಿ ಪಡೆಯಬಹುದು. ಈ ಸಂಬಂಧ ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ)ದ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅದು ಹಲವು ಕಂಪೆನಿಗಳೊಂದಿಗೆ ಕೈಜೋಡಿಸಿದೆ ಎಂದೂ ಸಂಧ್ಯಾ ಭಟ್ ಹೇಳಿದರು.
ಇನ್ನು ಕಳೆದ ಒಂದು ವಾರದಿಂದ ಅಪಾರ್ಟ್‌ಮೆಂಟ್‌ಗಳಲ್ಲಿರುವ ಮಕ್ಕಳಿಂದ ಮನೆ-ಮನೆ ಮತದಾರರ ಜಾಗೃತಿ ಅಭಿಯಾನ ಮಾಡಲಾಗಿದೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ಮಕ್ಕಳು ಗುರುವಾರದಂದು ಮತ ಚಲಾಯಿಸುವಂತೆ ಮನವಿ ಮಾಡುತ್ತಿದ್ದಾರೆ. ಅಪಾರ್ಟ್‌ಮೆಂಟ್‌ಗಳಲ್ಲಿ ಮತ ಜಾಗೃತಿ ಬಗ್ಗೆ ಪೋಸ್ಟರ್ ಅಳವಡಿಸಲಾಗಿದ್ದು, ಮತ ಚಲಾಯಿಸಿ ಬಂದವರು ಅದರ ಮೇಲೆ ಸಹಿ ಮಾಡುತ್ತಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ದುಪ್ಪಟ್ಟಾಗಿದೆ. ಈ ಸಲ ವಸತಿ ಸಮುತ್ಛಯಗಳಲ್ಲಿನ ಮತದಾರರ ಸಂಖ್ಯೆ ಕೂಡ ಶೇ. 10ರಿಂದ 15ರಷ್ಟು ಏರಿಕೆ ಆಗಿದೆ. ಹಲವು ಜಾಗೃತಿ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು. ಇದೆಲ್ಲದರ ಪರಿಣಾಮ ಶೇ. 80ರಷ್ಟು ಮತದಾನ ಆಗುವ ಸಾಧ್ಯತೆ ಇದೆ ಎಂದು ಬಿಎಎಫ್ ಕಾರ್ಯದರ್ಶಿ ಶ್ರೀಕಾಂತ್ ನರಸಿಂಹನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.