ನಕ್ಸಲರಿಂದ ಮಹಿಳಾ ಚುನಾವಣಾಧಿಕಾರಿಯ ಹತ್ಯೆ
Team Udayavani, Apr 18, 2019, 6:00 AM IST
ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ಬುಧವಾರ ಮಹಿಳಾ ಚುನಾವಣಾ ಅಧಿಕಾರಿಯೊಬ್ಬರನ್ನು ಮಾವೋವಾದಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಗುರುವಾರ 2ನೇ ಹಂತದ ಮತದಾನ ನಡೆಯಲಿರುವ ಕಾರಣ ವಲಯಾಧಿಕಾರಿ ಸಂಜುಕ್ತಾ ದಿಗಾಲ್ ಅವರು ಚುನಾವಣಾ ಸಿಬ್ಬಂದಿಯ ತಂಡವೊಂದನ್ನು ಮತಗಟ್ಟೆಯೊಂದಕ್ಕೆ ಕರೆದೊಯ್ಯುತ್ತಿದ್ದರು. ಅರಣ್ಯದ ಹಾದಿಯಲ್ಲಿ ಸಾಗುವಾಗ ರಸ್ತೆ ಮಧ್ಯೆ ಅನುಮಾನಾಸ್ಪದ ವಸ್ತುವೊಂದು ಬಿದ್ದಿದ್ದನ್ನು ಕಂಡು, ವಾಹನ ನಿಲ್ಲಿಸುವಂತೆ ಸೂಚಿಸಿದರು. ವಾಹನದಿಂದ ಕೆಳಗಿಳಿಯುತ್ತಿದ್ದಂತೆ ಅವರನ್ನು ನಕ್ಸಲರು ಗುಂಡಿಕ್ಕಿ ಕೊಲೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಈಗ ಮೋದಿ ವಿರುದ್ಧ ಪ್ರಚಾರ ಮಾಡುತ್ತಿರುವ ಕಾರಣ, ಅವರ ರ್ಯಾಲಿಗಳ ವೆಚ್ಚದ ಬಗ್ಗೆ ಬಿಜೆಪಿ ಪ್ರಶ್ನಿಸುತ್ತಿದೆ. ನಿಮಗೆ ನಿಜವಾಗಲೂ ತಾಕತ್ತಿದ್ದರೆ ಉದ್ಧವ್ ಠಾಕ್ರೆ ನಿವಾಸದ ಮೇಲೆ ಐಟಿ ದಾಳಿ ನಡೆಸಿ.
ನವಾಬ್ ಮಲಿಕ್, ಎನ್‌ಸಿಪಿ ವಕ್ತಾರ
ನಾವು ದೇಶದಲ್ಲಿ ನುಸುಳು ಕೋರರನ್ನು ತಡೆಯಲು ಪೌರತ್ವ ವಿಧೇಯಕ ಜಾರಿ ಮಾಡಿದ್ದರೆ, ವಿಪಕ್ಷಗಳು ಮಾತ್ರ ನುಸುಳುಕೋರರ ಮಾನವ ಹಕ್ಕುಗಳ ರಕ್ಷಣೆ ಬಗ್ಗೆಯೇ ಕಾಳಜಿ ಹೊಂದಿವೆ.
ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಈ ಲೋಕಸಭೆ ಚುನಾವಣೆ ಕೃಷ್ಣ ಮತ್ತು ಕಂಸ, ರಾಮ ಮತ್ತು ರಾವಣ, ಗೋಡ್ಸೆ ಮತ್ತು ಗಾಂಧಿ ನಡುವೆ ನಡೆಯುತ್ತಿರುವ ಯುದ್ಧ. ನೆರೆ ರಾಷ್ಟ್ರಗಳು ಮುಂದುವರೆಯುತ್ತಿವೆ. ನಮ್ಮ ದೇಶದಲ್ಲಿ ಕಳ್ಳ ಚೌಕೀದಾರರು ತಯಾರಾಗುತ್ತಿದ್ದಾರೆ.
ನವಜೋತ್ ಸಿಂಗ್ ಸಿಧು, ಕಾಂಗ್ರೆಸ್ ನಾಯಕ
ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್‌ರನ್ನು ನಾನು ಭೋಪಾಲ್‌ಗೆ ಸ್ವಾಗತಿಸುತ್ತೇನೆ. ಭೋಪಾಲ್‌ನ ಶಾಂತಿಯುತ, ಶಿಕ್ಷಿತ ಹಾಗೂ ಘನತೆ ತುಂಬಿದ ಪರಿಸರವು ನಿಮ್ಮನ್ನು ಖಂಡಿತಾ ಆಕರ್ಷಿಸಿರುತ್ತದೆ.
ದಿಗ್ವಿಜಯ್, ಕಾಂಗ್ರೆಸ್ ನಾಯಕ
ನಮ್ಮ ಸನಾತನ ಧರ್ಮ, ಕೇಸರಿಯ ಮಾನಹಾನಿಯ ಬೀಜವನ್ನು ಬಿತ್ತಿದವರೇ ದಿಗ್ವಿಜಯ್ ಸಿಂಗ್. ಅವರು ಕೇಸರಿ ಮತ್ತು ಹಿಂದುತ್ವವನ್ನು ಭಯೋತ್ಪಾದನೆ ಎಂದು ಕರೆದರು. ಅಧರ್ಮದ ವಿರುದ್ಧ ಧರ್ಮಕ್ಕೇ ಜಯ ಸಿಗುವಂತೆ ನಾನು ಮಾಡುತ್ತೇನೆ.
ಪ್ರಜ್ಞಾ ಸಿಂಗ್ ಠಾಕೂರ್, ಬಿಜೆಪಿ ನಾಯಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.