ಬಿಎಸ್‌ವೈಗೆ ತಾಲೂಕಿನ ಅಭಿವೃದ್ಧಿಗೇ ಸಮಯವಿಲ್ಲ: ಎಚ್‌ಡಿಕೆ
Team Udayavani, Apr 18, 2019, 4:31 PM IST
ಶಿಕಾರಿಪುರ: ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಪರ ಚುನಾವಣಾ ಪ್ರಚಾರದ ಸಭೆಯನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಿದರು.
ಶಿಕಾರಿಪುರ: ತಾಲೂಕು ಸೇರಿದಂತೆ ಜಿಲ್ಲೆ ಬರಗಾಲದಿಂದ ತತ್ತರಿಸಿ ರೈತರ ಕಷ್ಟ ಪರಿಹಾರ ಮಾಡವ ಬದಲು ಮೈತ್ರಿ ಸರ್ಕಾರ ಕೆಡವಿ ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿಯಾಗುವ ಕನಸು ಹೊಂದಿ ಮುಂಬಯಿಯಲ್ಲಿ ಖಾಸಗಿ ಹೊಟೇಲ್‌ಗಳಲ್ಲಿ ರಾಜ್ಯದ ಶಾಸಕರನ್ನು ಮೂವತ್ತರಿಂದ ನಲವತ್ತು ಕೋಟಿ ರೂ. ಕೊಟ್ಟು ಖರೀದಿಸುವುದಕ್ಕೆ ಕೊಟ್ಟ ಸಮಯ ಯಡಿಯೂರಪ್ಪನವರಿಗೆ ಈಗ
ಶಿಕಾರಿಪುರ ತಾಲೂಕಿನ ಶಾಶ್ವತ ನೀರಾವರಿ ಅಭಿವೃದ್ಧಿ ವಿಚಾರದಲ್ಲಿ ಸಮಯ ಕೊಡುವುದಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದರು.
ತಾಲೂಕು ಜೆಡಿಎಸ್ ಹಾಗೂ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಪರ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಸುಭದ್ರತೆಯಿಂದ ಕೂಡಿದೆ. ಯಡಿಯೂರಪ್ಪನವರು ನಮ್ಮ ಮೈತ್ರಿ ಸರ್ಕಾರ ರಚನೆಯಾದಾಗಿನಿಂದ ಸರ್ಕಾರಕ್ಕೆ ಕಿರುಕುಳ ನೀಡುತ್ತಿದ್ದಾರೆ. ರಾಜ್ಯದ ರೈತರ ಪರ ಕೆಲಸ ಮಾಡಲು ಅಡ್ಡಗಾಲು ಹಾಕುತ್ತಿದ್ದಾರೆ. ನಮ್ಮ ಮೈತ್ರಿ ಸರ್ಕಾರ ರಚನೆಯಾದ 24 ಗಂಟೆಯೊಳಗೆ ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ದೇವೆ.
ನಮ್ಮ ಸರ್ಕಾರ ರೈತರ ಪರವಾಗಿದೆ. ನಾನು ಈ ಬಾರಿ ಸಾಲಮನ್ನಾ ಮಾಡಿದ್ದರಲ್ಲಿ ಶಿಕಾರಿಪುರ ತಾಲೂಕಿನ ಸಹಕಾರಿ ಹಾಗೂ ನ್ಯಾಶನಲ್ ಬ್ಯಾಂಕ್ ಗಳ ರೈತರ ಸಾಲದ ಮೊತ್ತ 85 ಕೋಟಿ ರೂ.ಗಳು. ಆದರೆ ಯಡಿಯೂರಪ್ಪನವರು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗೊಬ್ಬರ ಕೇಳಲು ಬಂದ ರೈತರ ಮೇಲೆ ಗೋಲೀಬಾರ್ ನಡೆಸಿದ ಕುಖ್ಯಾತಿ ಹೊಂದಿದ್ದು ಈಗ ನಮ್ಮ ವಿರುದ್ಧ ಆರೋಪಿಸುತ್ತಿದ್ದಾರೆ ಎಂದರು.
ನಾವು ರಾಜ್ಯಸರ್ಕಾರದ ಖಜಾನೆ ಖಾಲಿ ಮಾಡಿದ್ದೆವೆಂದು ಸುಳ್ಳು ಹೇಳುತ್ತಿದ್ದಾರೆ. ಆದರೆ ಇವರು ಶಿವಮೊಗ್ಗ ಜಿಲ್ಲೆ ಹಾಗೂ
ಶಿಕಾರಿಪುರ ತಾಲೂಕು ಅಭಿವೃದ್ಧಿಪಡಿಸಿದ್ದು ಇವರು ಅಭಿವೃದ್ಧಿಯಾಗಲು. ಈಗ ಮತ್ತೆ ಮುಖ್ಯಮಂತ್ರಿಯಾಗಲು ಹಂಬಲಿಸುತ್ತಿರುವುದು ಮತ್ತೆ ಅವರ ಕುಟುಂಬ ಅಭಿವೃದ್ಧಿಯಾಗಲು. ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ತಾಲೂಕಿನ ನೀರಾವರಿ ವಿಚಾರವಾಗಿ ಡಿ.ಕೆ. ಶಿವಕುಮಾರ್ ಬಳಿ
ಮನವಿ ಮಾಡಿದ್ದೇನೆಂದು ಸುಳ್ಳು ಹೇಳುತ್ತಾರೆ.
ಯಡಿಯೂರಪ್ಪನವರು ಡಿ.ಕೆ. ಶಿವಕುಮಾರ ಮನೆಗೆ ತೆರಳಿದಾಗ ಡೈರಿಯಲ್ಲಿನ ಮಾಹಿತಿಯನ್ನು ಪ್ರಸ್ತಾಪ ಮಾಡಬೇಡಿ ಎಂದು ತಿಳಿಸಿದ್ದರು ಎಂದು ಆರೋಪಿಸಿದರು. ತಾಲೂಕಿನ ಜನತೆಗೆ ಕೇಂದ್ರ ಸರ್ಕಾರದ ಹಣ ಮಂಜೂರು ಮಾಡಿಸಿ ನೀರಾವರಿ ಮಾಡಿಸುವುದಾಗಿ ಸುಳ್ಳು ಹೇಳುವ ನೀವು ತಾಲೂಕಿನ ಜನತೆಯಲ್ಲಿ
ಗೊಂದಲ ಮೂಡಿಸುತ್ತಿದ್ದೀರಿ. ಚುನಾವಣೆ ಮುಗಿದ ನಂತರ 6 ತಿಂಗಳ ಒಳಗೆ ಸಂಪೂರ್ಣ ನೀರಾವರಿ ಕಾಮಗಾರಿ ಮುಗಿಸಿ ಕೊಡುವುದಾಗಿ ಹೇಳಿದರು . ನಮ್ಮ ಸರ್ಕಾರದಿಂದ ಕೇವಲ ರೈತರಿಗಷ್ಟೇ ಅಲ್ಲದೆ ಬೀದಿಬದಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಬಡ್ಡಿ ರಹಿತ ಸಾಲ ನೀಡುತ್ತಿದ್ದೇವೆ. ಸಿದ್ದರಾಮಯ್ಯನವರ ಸರ್ಕಾರದ ಯೋಜನೆಗಳು ಹಾಗೂ ನಮ್ಮ ಮೈತ್ರಿ ಸರ್ಕಾರದ ಯೋಜನೆಗಳು ಉತ್ತಮವಾಗಿದ್ದು ಅದನ್ನು ರಾಜ್ಯದ ಜನತೆ ಸದುಪಯೋಗ ಪಡೆಯಬೇಕು ಎಂದರು.
ಮಾಜಿ ಶಾಸಕರೊಬ್ಬರ ಹೇಳಿಕೆಗೆ ಪತ್ರಿಕ್ರಿಯಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಹೌದು ನಾವು ಮೋದಿಯವರ ತರಹ ಮುಖಕ್ಕೆ ವ್ಯಾಕ್ಸಿನ್, ಸೇಂಟ್, ಪೌಡರ್ ಮುಂತಾದವುಗಳನ್ನು
ಬಳಸುವುದಿಲ್ಲ. ನಾವು ಮುಟ್ಟಿ ಮಾತನಾಡುವ ಸಾರ್ವಜನಿಕರ ಕೈಗಳ ಬೇವರು ನಮಗೆ ಆಶೀರ್ವಾದವಿದ್ದಂತೆ. ಬೇರೆಯವರು
ಮುಟ್ಟಿದರೆ ಡೆಟಾಲ್‌ನಿಂದ ಕೈ ತೊಳೆಯುತ್ತಾರೆ ಎಂದು ಎದುರೇಟು ನೀಡಿದರು. ರಾಜ್ಯದಲ್ಲಿ ಮೇ 23ಕ್ಕೆ ಫಲಿತಾಂಶ 24 ಕ್ಕೆ ಯಡಿಯೂರಪ್ಪ ಸರ್ಕಾರ ರಚನೆಯೆಂದು ಯಾವ ಜೋತಿಷ್ಯಗಳ
ಬಳಿ ಸಮಯ ನಿಗದಿಪಡಿಸಿದ್ದಾರೆಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಉಚಿತ ಕರೆಂಟ್ ನೀಡಿದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವ ಪುತ್ರರಾದ ಮಧು ಬಂಗಾಪ್ಪನವರಿಗೆ ಈ ಬಾರಿ
ಆಶೀರ್ವದಿಸಿ ಎಂದು ಮನವಿ ಮಾಡಿದರು.
ನಂತರ ಮಾತನಾಡಿದ ಅಭ್ಯರ್ಥಿ ಮಧು ಬಂಗಾರಪ್ಪ, ತಾಲೂಕಿನಲ್ಲಿ ಬಂಗಾರಪ್ಪ ಅಭಿಮಾನಿಗಳು ಇದ್ದು ಈ ಬಾರಿ ನನಗೆ ಆಶೀವಾದ ಮಾಡಲಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿಯವರ
ಸಹಿ ಸುಳ್ಳು ನಡೆಯುವುದಿಲ್ಲ. ಕಳೆದ ಬಾರಿ 3.50.000 ಅಂತರದಿಂದ ಕೇವಲ 52 ಸಾವಿರಕ್ಕೆ ತಂದ ಜಿಲ್ಲೆಯ ಜನ ಈ ಬಾರಿ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವ ವಿಶ್ವಾಸವಿದೆ ಎಂದರು. ನನ್ನನ್ನು ಇಂಪೋರ್ಟೆಡ್ ಎಂದು ಹೇಳುವ ರಾಘವೇಂದ್ರ ಅವರನ್ನು ತಾಲೂಕಿನ ಜನ ಎಕ್ಸ್‌ಪೋರ್ಟ್ ಮಾಡಿ ಎಂದು ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಆರ್. ಎಂ. ಮಂಜುನಾಥ ಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ. ಸುಂದರೇಶ್, ಕಾಡಾ ಮಾಜಿ ಅಧ್ಯಕ್ಷ ಮಹಾದೇವಪ್ಪ, ಮಾಜಿ ಶಾಸಕರಾದ ಶಾಂತವೀರಪ್ಪ ಗೌಡ, ಮಹಾಲಿಂಗಪ್ಪ, ಮುಖಂಡರಾದ ಗೋಣಿ ಮಾಲತೇಶ್,
ಎಚ್. ಟಿ. ಬಳಿಗಾರ್, ಮಾರವಳ್ಳಿ ಉಮೇಶ್, ಉಳ್ಳಿ ದರ್ಶನ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.