ರಂಜಿಸಿದ ವಿದ್ಯಾರ್ಥಿಗಳ ಯಕ್ಷ ವೈಭವ
Team Udayavani, Apr 19, 2019, 6:00 AM IST
ಗುರುಪುರ ಕೈಕಂಬದಲ್ಲಿ ಇತ್ತೀಚೆಗೆ ಯಕ್ಷನಾಟ್ಯ ಕಲಾ ಕೇಂದ್ರ ತಕಧಿಮಿ ತಂಡ ಕೈಕಂಬ ಇದರ ವಿದ್ಯಾರ್ಥಿಗಳಿಂದ ಯಕ್ಷವೈಭವ ನಡೆಯಿತು. ಈ ಯಶಸ್ವಿ ಪ್ರದರ್ಶನದಲ್ಲಿ ಕಲಾವಿದರಾಗಿ ಯುವಕ-ಯುವತಿಯರು ಮಾತ್ರವಲ್ಲ, ಕಿರಿಯ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳೂ ಇದ್ದರು. ಒಂದುವರೆ ವರ್ಷದಿಂದ ಕಲಾವಿದ ರಕ್ಷಿತ್ ಶೆಟ್ಟಿ ಪಡ್ರೆಯವರಿಂದ ತರಬೇತಿಯ ಪಡೆಯುತ್ತಿರುವ ತಕಧಿಮಿ ತಂಡದ ವಿದ್ಯಾರ್ಥಿಗಳು ಅಂದು ಮೊದಲಿಗೆ “ಕೃಷ್ಣಂ ವಂದೇ ಜಗದ್ಗುರು’ ಎಂಬ ಯಕ್ಷ ನಾಟ್ಯ ರೂಪಕವನ್ನು ಪ್ರಸ್ತುತಪಡಿಸಿದರೆ, ಅನಂತರ “ಹನುಮೋದ್ಭವ’ ಪ್ರಸಂಗವನ್ನು ಬಯಲಾಟವಾಗಿ ಪ್ರದರ್ಶಿಸಿದರು.ಯಕ್ಷರೂಪಕದಲ್ಲಿ ತಮಗೊಪ್ಪುವ ವೇಷಭೂಷಣಗಳನ್ನು ಧರಿಸಿ ಪಾಲ್ಗೊಂಡ ಬಾಲಕ-ಬಾಲಕಿಯರು ವಿಷ್ಣುವಿನ ಅವತಾರಗಳನ್ನು ನಾಟ್ಯ, ಕುಣಿತದ ಮೂಲಕ ಮನಮೋಹಕವಾಗಿ ಪ್ರದರ್ಶಿಸಿದರು.ಭಾವಾಭಿನಯಕ್ಕೆ ಹೆಚ್ಚಿನ ಒತ್ತು ನೀಡಿದ್ದರೆ ಈ ನೃತ್ಯರೂಪಕವು ಪರಿಪೂರ್ಣವಾಗುತ್ತಿತ್ತು.
ಕಿರಿಯ ಮತ್ತು ಹಿರಿಯರ ಕೂಡುವಿಕೆಯಲ್ಲಿ ಪ್ರದರ್ಶನಗೊಂಡ “ಹನುಮೋದ್ಭವ’ ಬಯಲಾಟವು ಮನರಂಜಿಸುವಲ್ಲಿ ಯಶಸ್ವಿಯಾಯಿತು. ವೀರರಸಕ್ಕೆ ಹೆಚ್ಚು ಆದ್ಯತೆಯಿರುವ ಈ ಪ್ರಸಂಗದಲ್ಲಿ ಕಿರಿಯರೂ ಉತ್ಸಾಹದಿಂದ ಅಭಿನಯಿಸಿದರು. ಹನುಮನಾಗಿ ವೇಷ ಮಾಡಿದ ಬಾಲಕನ ದಿಟ್ಟ ಅಭಿನಯ ಎಲ್ಲರ ಮನಸೆಳೆಯಿತು. ಯಾವುದೇ ಅಳುಕಿಲ್ಲದೆ ತನ್ನ ದಿಗಿಣ, ಕುಣಿತ ಹಾಗೂ ಕರುಣಾರಸ, ವೀರರಸದ ಮಾತುಗಾರಿಕೆಯಿಂದ ಹನುಮಂತನ ಪಾತ್ರಕ್ಕೆ ಈತ ಜೀವ ತುಂಬಿದರು. ದೇವೇಂದ್ರನ ಬಲಗಳಾಗಿ ಪುಟ್ಟ ಮಕ್ಕಳು ಮಾಡಿದ ಪ್ರವೇಶ ಕುಣಿತ, ಹನುಮನೊಡನೆ ಮಾಡಿದ ಯುದ್ಧದ ದೃಶ್ಯಗಳು ಹಾಗೂ ಅವರ ವೀರರಸದ ಮಾತುಗಳು ಕಣ್ಣಿಗೆ ಹಬ್ಬವಾಯಿತು. ಅಂಜನಿ, ದೇವೇಂದ್ರ, ರಾಹು, ವಿಷ್ಣು ಮುಂತಾದ ಪಾತ್ರಗಳನ್ನು ಮಾಡಿದ ತಂಡದ ಯುವ ಕಲಾವಿದರ ನಿರ್ವಹಣೆ ತೃಪ್ತಿಕರವಾಗಿತ್ತು. ಆದರೆ ಮಾತುಗಾರಿಕೆಯಲ್ಲಿ ಹಾಗೂ ಮಾತಿನ ಶೈಲಿಯಲ್ಲಿ ಇವರು ಇನ್ನಷ್ಟು ಪಳಗಬೇಕು. ರಾಕ್ಷಸ ಹಾಗೂ ಸಹಚರರ ವಿಶಿಷ್ಟವಾದ ಪ್ರವೇಶ ಕುಣಿತ ಮುದ ನೀಡಿತು. ಮುನಿಯ ಹೋಮಹವನದಲ್ಲಿ ಬ್ರಾಹ್ಮಣರಾಗಿ ಕಾಣಿಸಿಕೊಂಡ ಪುಟ್ಟ ಮಕ್ಕಳ ಕಲರವ ಪ್ರದರ್ಶನದ ಸೊಗಸನ್ನು ಹೆಚ್ಚಿಸಿತು.ಭಾಗವತರಾಗಿ ಗಿರೀಶ್ ರೈ ಕಕ್ಯಪದವು ಹಾಗೂ ಪ್ರಖ್ಯಾತ್ ಶೆಟ್ಟಿ ಮಕ್ಕಳ ಭಾವವನ್ನು ಅರಿತು ಸುಶ್ರಾವ್ಯವಾಗಿ ಹಾಡಿದರು. ಮದ್ದಳೆಯಲ್ಲಿ ಗುರುಪ್ರಸಾದ್, ಚೆಂಡೆಯಲ್ಲಿ ಪದ್ಮನಾಭ ಉಪಾಧ್ಯಾಯ ಹಾಗೂ ಚಕ್ರತಾಳದಲ್ಲಿ ರಾಜೇಂದ್ರ ಕೃಷ್ಣ ಸಹಕರಿಸಿದರು.
ನರಹರಿ ರಾವ್ ಕೈಕಂಬ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.