ಲೋಕಸಭಾ ಚುನಾವಣೆ: ಉಡುಪಿ ಚಿಕ್ಕಮಗಳೂರು ಶೇ.75ಕ್ಕೆ ಏರಿಕೆ
Team Udayavani, Apr 19, 2019, 10:40 AM IST
ಉಡುಪಿ: ಕಳೆದ ಎಲ್ಲ ಚುನಾವಣೆಗಳಿಗಿಂತ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶೇ.75.8 ಮತದಾನವಾಗಿರುವುದು ಸಾರ್ವಕಾಲಿಕ ದಾಖಲೆಯಾಗಿದೆ.
ಉಡುಪಿ, ಕಾರ್ಕಳ, ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು (ಶೇ.78) ಮತದಾನವಾದರೆ ಚಿಕ್ಕ ಮಗಳೂರು ಕ್ಷೇತ್ರದಲ್ಲಿ ಅತಿ ಕಡಿಮೆ (ಶೇ.69) ಮತದಾನ ನಡೆಯಿತು. ಕುಂದಾಪುರ, ಕಾಪುವಿನಲ್ಲಿ ಶೇ.77, ಮೂಡಿಗೆರೆಯಲ್ಲಿ ಶೇ.73, ತರಿಕೆರೆಯಲ್ಲಿ ಶೇ.72 ಮತದಾನವಾಗಿದೆ. ಉಡುಪಿ ಜಿಲ್ಲೆಯಲ್ಲಿ ಶೇ.78.2 ಮತದಾನ ವಾದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ.73 ಮತದಾನವಾಯಿತು.
ಡಿಮಸ್ಟರಿಂಗ್
ಉಡುಪಿ ಸೈಂಟ್ ಸಿಸಿಲೀಸ್ ಶಾಲೆಯಲ್ಲಿ ಡಿಮಸ್ಟರಿಂಗ್ ಆರಂಭ ಗೊಂಡಿದ್ದು ಇಲ್ಲಿಗೆ ಪ್ರಥಮವಾಗಿ ಬಂದ ಮತಯಂತ್ರ ಉಡುಪಿ ಪುತ್ತೂರು ಹನುಮಂತನಗರ ಮತಗಟ್ಟೆಯದು. 2014ರಲ್ಲಿಯೂ ಇದೇ ಮತಗಟ್ಟೆಯ ಮತಯಂತ್ರ ಮೊದಲಾಗಿ ಬಂದಿತ್ತು. ಚಿಕ್ಕ ಮಗಳೂರು ಜಿಲ್ಲೆಯ ಮತ ಯಂತ್ರಗಳು ತಡವಾಗಿ ಬರಲಿವೆೆ. ಬೆಳಗ್ಗಿನವರೆಗೆ ನಡೆ ಯುವ ಸಾಧ್ಯತೆಯೂ ಇದೆ.ಎಂಟೂ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಇಲ್ಲಿ ತಂದಿ ಡಲಾಗುವುದು.
ಯುವ, ಎನ್‌ಆರ್‌ಐ ಮತದಾರರ ಉತ್ಸಾಹ
ಮತದಾನ ಹೆಚ್ಚಿಗೆ ಆಗಲು ಮುಖ್ಯವಾಗಿ ಯುವ ಮತ ದಾರರು ಉತ್ಸಾಹದಿಂದ ಮತ ಚಲಾಯಿಸಿರುವುದು ಮತ್ತು ಪರಸ್ಥಳದ ಮತದಾರರು ಆಸಕ್ತಿಯಿಂದ ಬಂದು ಮತ ಚಲಾಯಿಸಿರುವುದು ಕಾರಣವಾಗಿದೆ.
ತಾಂತ್ರಿಕ ದೋಷ: ಗುರುವಾರ ಒಟ್ಟು ಎಂಟು ಇವಿಎಂ ಮತ್ತು 53 ವಿವಿ ಪ್ಯಾಟ್‌ಗಳಲ್ಲಿ ತಾಂತ್ರಿಕ ದೋಷ ಕಂಡುಬಂದು ಅವುಗಳನ್ನು ಬದ
ಲಾಯಿಸಲಾಯಿತು. ಯಾವುದೇ ಗೊಂದಲಗಳಿಲ್ಲದೆ ಶಾಂತಿಯುತ ವಾಗಿ ಮತದಾನ ನಡೆದಿದೆ ಮತ್ತು ಪರಿಸರಸ್ನೇಹಿ ಚುನಾವಣೆ ನಡೆಯಲು ಸಹಕರಿಸಿದ ಮತದಾರರಿಗೆ ಜಿಲ್ಲಾ ಚುನಾವಣಾಧಿ ಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಕೃತಜ್ಞತೆ ಸಲ್ಲಿಸಿದ್ದಾರೆ.
1957ರಲ್ಲಿ ಕನಿಷ್ಠ, 2019ರಲ್ಲಿ ಗರಿಷ್ಠ
2009ರ ಲೋಕಸಭಾ ಚುನಾವಣೆಯಲ್ಲಿ ಶೇ.68.17, 2012ರ ಲೋಕಸಭಾ ಚುನಾವಣೆಯಲ್ಲಿ ಶೇ.68.10 ಮತದಾನ, 2014ರಲ್ಲಿ 74.46 ಮತದಾನವಾಗಿತ್ತು. ಈ ಬಾರಿ ಆದಷ್ಟು ಮತದಾನ ಇದುವರೆಗಿನ ಚುನಾವಣೆಯಲ್ಲಿ ಆಗಿರಲಿಲ್ಲ. ಅಂತಿಮ ಲೆಕ್ಕಾಚಾರದಲ್ಲಿ ಶುಕ್ರವಾರ ಸ್ವಲ್ಪ ಹೆಚ್ಚು ಕಡಿಮೆಯಾಗಬಹುದು. ಈ ಬಾರಿ 15,13,231 ಮತದಾರರ ಪೈಕಿ 11,48,052 ಮಂದಿ ಮತದಾನ ಮಾಡಿದರು. ಅತಿ ಕಡಿಮೆ ಮತದಾನ ನಡೆದದ್ದು 1957ರಲ್ಲಿ ಶೇ.52.38.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.