ಲಿಂಗಾಯತರು ಈ ಬಾರಿ ನನ್ನ ಕೈಹಿಡಿದರೆ ಗೆಲುವು ತಡೆ ಅಸಾಧ್ಯ


Team Udayavani, Apr 19, 2019, 11:32 AM IST

hub-2

ಹುಬ್ಬಳ್ಳಿ: ಮುಸಲ್ಮಾನರು, ಕ್ರಿಶ್ಚಿಯನ್ನರು ಹಾಗೂ ಎಸ್‌ಸಿ, ಎಸ್‌ಟಿ ಬಾಂಧವರು ನನಗೆ ಬೆಂಬಲ ನೀಡಲು
ಮುಂದಾಗಿದ್ದು,ಲಿಂಗಾಯತರೆಲ್ಲರೂ ಒಗ್ಗಟ್ಟಾಗಿ ನನ್ನ ಕೈ ಹಿಡಿದರೆ ನನ್ನ ಗೆಲುವು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಹೇಳಿದರು.

ನಗರದ ಬಮ್ಮಾಪುರ ಓಣಿಯ ಗುರುಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಲಿಂಗಾಯತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ 6ಲಕ್ಷಕ್ಕಿಂತ ಹೆಚ್ಚು ಲಿಂಗಾಯತ
ಮತದಾರರಿದ್ದು, ಲಿಂಗಾಯತರು ಬೆಂಬಲಿಸಿದರೆ ಕನಿಷ್ಟ 2ಲಕ್ಷ ಮತಗಳ ಅಂತರದಿಂದ ಗೆಲ್ಲುವೆ ಎಂದರು.

ರಾಜ್ಯದಲ್ಲಿ 9ಜನ ಲಿಂಗಾಯತರು ಸಂಸದರಿದ್ದರು. ದಾವಣಗೆರೆಯ ಸಿದ್ದೇಶ ಅವರನ್ನು ಕೇವಲ ಮೂರು ತಿಂಗಳಿಗೆ ಕೇಂದ್ರ ಸಚಿವರನ್ನಾಗಿಸಿ ನಂತರ ತೆಗೆಯಲಾಯಿತು. ರಾಜ್ಯದಲ್ಲಿ ಮೂವರು ಬ್ರಾಹ್ಮಣ ಸಮುದಾಯದ ಸಂಸದರಿದ್ದು, ಅವರಲ್ಲಿ ಇಬ್ಬರು ಕೇಂದ್ರ ಸಚಿವರಾಗಿದ್ದರು. ಜೋಶಿ ಅವರಿಗೆ ಕ್ಯಾಬಿನೆಟ್‌
ರ್‍ಯಾಂಕ್‌ನ ಒಎನ್‌ಜಿಸಿ ಚೇರ¾ನ್‌ ಹುದ್ದೆ ನೀಡಲಾಗಿತ್ತು. ಒಬ್ಬ ಲಿಂಗಾಯತರನ್ನು ಕೇಂದ್ರ ನಿಗಮ-ಮಂಡಳಿಗಳಿಗೆ ನೇಮಕ ಮಾಡಲಿಲ್ಲ ಎಂದರು.

ಸಂಸದ ಪ್ರಹ್ಲಾದ ಜೋಶಿ ಲಿಂಗಾಯತ ಸಮಾಜಕ್ಕೆ ಕಂಟಕರಾಗಿದ್ದಾರೆ. ಸಂಸದ ಜೋಶಿ ನನ್ನ ವಿರುದ್ಧ ನಿರಂತರ ಷಡ್ಯಂತ್ರ ಮಾಡುತ್ತಿದ್ದಾರೆ. ಇದಕ್ಕಾಗಿ ಧಾರವಾಡದಲ್ಲಿ ಬ್ರಾಹ್ಮಣ ವಕೀಲರ ತಂಡವನ್ನೇ ನೇಮಿಸಿದ್ದಾರೆ. ಜಿಲ್ಲೆಯಲ್ಲಿನ ಲಿಂಗಾಯತ ಅಧಿಕಾರಿಗಳು ವಿನಯ ಪರ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿ ಅವರನ್ನು ಬೇರೆ ಜಿಲ್ಲೆಗೆ ವರ್ಗಾಯಿಸಿದ್ದಾರೆ. ಜೋಶಿ ಅವರ ಹಿಂದೆ ಒಂದು ಅಪಾಯಕಾರಿ ತಂಡವಿದೆ. ಜೋಶಿಯವರ ಕಟ್ಟಾ ಬೆಂಬಲಿಗ ವೀರೇಶ ಅಂಚಟಗೇರಿ ಪ್ರತಿದಿನ ನೋಂದಣಿ ಕಚೇರಿಗೆ ಓಡಾಡಿ ಲಿಂಗಾಯತರು ಯಾವ ಆಸ್ತಿ ಖರೀದಿಸಿದರು ಎಂಬ ಬಗ್ಗೆ ಸಂಸದರಿಗೆ ಮಾಹಿತಿ ನೀಡುತ್ತಾನೆ. ಲಿಂಗಾಯತರ ಏಳ್ಗೆಯನ್ನು ಜೋಶಿ ಸಹಿಸಲ್ಲ ಎಂದು ಅಭಿಪ್ರಾಯಪಟ್ಟರು.

ಜೋಶಿ ಕುತಂತ್ರದಿಂದ ನಾನು ಬೇಸತ್ತಿದ್ದು, ಮುಂದೆ ರಾಜಕಾರಣ ಮಾಡಬೇಕೋ ಬೇಡವೋ ಎಂಬುದು
ತಿಳಿಯದಂತಾಗಿದೆ. ಲಿಂಗಾಯತರು ಜೋಶಿಯನ್ನು ಸೋಲಿಸದಿದ್ದರೆ ನಮ್ಮ ಮುಂದಿನ ಪೀಳಿಗೆ ಜೋಶಿ
ಗುಲಾಮರಾಗಬೇಕಾಗುತ್ತದೆ. ನಾನಿಲ್ಲದಿದ್ದರೆ ನೀವೂ ಇಲ್ಲ ಎಂಬುದನ್ನು ನೆನಪಿಡಿ. ಕಳೆದ 15ವರ್ಷಗಳಿಂದ ಸಂಸದರಾಗಿರುವ ಸಂಸದ ಪ್ರಹ್ಲಾದ ಜೋಶಿ 700-800 ಎಕರೆ ಆಸ್ತಿ ಮಾಡಿದ್ದಾರೆ. ಹೇಗೆ ಮಾಡಿದ್ದಾರೆ ಎಂಬುದನ್ನು ಜನರಿಗೆ ಅವರೇ ತಿಳಿಸಬೇಕು ಎಂದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಲಿಂಗಾಯತರು ಒಗ್ಗಟ್ಟಾಗಿ ವಿನಯ ಬೆಂಬಲಕ್ಕೆ ನಿಂತರೆ
ದೊಡ್ಡ ಅಂತರದಿಂದ ಜಯಭೇರಿ ಬಾರಿಸುವರು ಎಂದರು. ಜೆಡಿಎಸ್‌ ಮುಖಂಡ ರಾಜಣ್ಣ ಕೊರವಿ
ಮಾತನಾಡಿ, ಅನ್ಯ ಸಮಾಜದವರು ವಿನಯ ಕುಲಕರ್ಣಿಗೆ ಬೆಂಬಲ ನೀಡಿದ್ದಾರೆ. ಲಿಂಗಾಯತರು
ಮನೆಯ ಮಗನನ್ನು ಗೆಲ್ಲಿಸಬೇಕು ಎಂದರು. ಪ್ರಕಾಶ ಬೆಂಡಿಗೇರಿ, ತಾರಾದೇವಿ ವಾಲಿ, ಶೇಕಣ್ಣ ಬೆಂಡಿಗೇರಿ, ನೀಲಕಂಠ ಅಸೂಟಿ ಮಾತನಾಡಿದರು. ಸದಾನಂದ ಡಂಗನವರ, ಅಜ್ಜಪ್ಪ ಬೆಂಡಿಗೇರಿ, ಮೋಹನ ಅಸುಂಡಿ, ಎಸ್‌.ಆರ್‌.ಚಿಕ್ಕಮಠ ವೇದಿಕೆ ಮೇಲಿದ್ದರು.

ಲಿಂಗಾಯತ ಸಮಾಜಕ್ಕೆ ಜೋಶಿ ಕೊಡುಗೆಯೇನು?
ಹುಬ್ಬಳ್ಳಿ: ಲಿಂಗಾಯತರು ಸಾಂಪ್ರದಾಯಿಕವಾಗಿ ಬಿಜೆಪಿ ಮತದಾರರು ಎಂಬುದನ್ನು ನಾನು ಒಪ್ಪಲ್ಲ. ಈ ಬಾರಿ ನನಗೆ ಲಿಂಗಾಯತರು ಮತ ನೀಡುವುದು ಖಚಿತ ಎಂದು ಧಾರವಾಡ ಲೋಕಸಭಾ ಕ್ಷೇತ್ರದ
ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಹೇಳಿದರು.

ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಲಿಂಗಾಯತರು ವ್ಯಕ್ತಿಯನ್ನು ನೋಡಿ ಮತ
ಹಾಕುತ್ತಾರೆಯೇ ಹೊರತು ಪಕ್ಷವನ್ನಲ್ಲ. ಕ್ಷೇತ್ರದಲ್ಲಿ ಯಾರು ಎಷ್ಟು ಕೆಲಸ ಮಾಡಿದ್ದಾರೆಂಬುದು ಜನರಿಗೆ
ಗೊತ್ತಿದೆ. ಸಂಸದ ಪ್ರಹ್ಲಾದ ಜೋಶಿ ಲಿಂಗಾಯತ ಸಮಾಜಕ್ಕೆ ಏನು ಕೊಡುಗೆ ನೀಡಿದ್ದಾರೆಂಬುದನ್ನು
ತಿಳಿಸಲಿ ಎಂದರು. ಜನರಿಗೆ ಸ್ಥಿತಿಗತಿ ಅರಿವಾಗಿದೆ. ಜೋಶಿಯಿಂದ ಲಿಂಗಾಯತರಿಗೆ ಯಾವುದೇ ಪ್ರಯೋಜನವಿಲ್ಲ ಎಂಬುದು ಮನವರಿಕೆಯಾಗಿದೆ. ಲಿಂಗಾಯತರು ಒಂದಾಗಿ ನನಗೆ ಮತ ನೀಡಿದರೆ ಲಿಂಗಾಯತರೇ ಕ್ಷೇತ್ರದಲ್ಲಿ ಸತತವಾಗಿ ಸಂಸದರಾಗಬಹುದು ಎಂದರು.

ಆಪರೇಶನ್‌ ಕಮಲ ಬಿಜೆಪಿಯವರಿಗೆ ಕರಗತವಾಗಿದೆ. ಕ್ಷೇತ್ರದಲ್ಲೂ ಸಂಸದ ಪ್ರಹ್ಲಾದ ಜೋಶಿ
ಮುಖಂಡರನ್ನು ಬುಕ್‌ ಮಾಡುತ್ತಿದ್ದಾರೆ. ಆದ್ದರಿಂದ ಮತದಾರರು ಜಾಗೃತಿಯಿಂದ ಮತ ನೀಡಬೇಕು
ಎಂದರು. ರಾಜಕಾರಣದಲ್ಲಿ ನಾನು ಜೋಶಿಗಿಂತ ಹಿರಿಯ. ನಾನು ಏಕಾಏಕಿ ರಾಜಕೀಯ ಮುಖಂಡನಾಗಿ
ಬೆಳೆದಿಲ್ಲ. ಜಿಲ್ಲಾ ಪಂಚಾಯತ ಮಟ್ಟದಿಂದ ಬೆಳೆದಿದ್ದೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತ ಬಂದಿದ್ದೇನೆ. ಸಂಸದ ಜೋಶಿ ಅವರಿಗೆ ರೈತರ ಕಷ್ಟ ಏನೆಂಬುದು ಗೊತ್ತಿಲ್ಲ ಎಂದು ಅಭಿಪ್ರಾಯಪಟ್ಟರು.

ರೈತರೇ ಬಿಜೆಪಿಗೆ ಮತ ಹಾಕಬೇಡಿ: ಕುಲಕರ್ಣಿ
ಧಾರವಾಡ:
ಈ ಲೋಕಸಭೆ ಚುನಾವಣೆಯಲ್ಲಿ ರೈತ ಸಮುದಾಯ ಬರೀ ಹುಸಿ ಸುಳ್ಳು ಭರವಸೆ ನೀಡುವ
ಬಿಜೆಪಿಗೆ ಮತ ಹಾಕುವುದು ಬೇಡವೇ ಬೇಡ ಎಂದು ಜೆಡಿಎಸ್‌ ರಾಜ್ಯ ರೈತ ಘಟಕದ ಅಧ್ಯಕ್ಷ ಗಂಗಾಧರ
ಪಾಟೀಲ ಕುಲಕರ್ಣಿ ಹೇಳಿದರು. ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ವಿರೋಧಿ ಆಗಿರುವ ನೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಈಗಾಗಲೇ ಬಂಡವಾಳಶಾಹಿಗಳ ಪರ ಐದು ವರ್ಷ ಆಡಳಿತ ನಡೆಸಿದೆ. ಅದರಲ್ಲೂ ನರೇಂದ್ರ ಮೋದಿ ಅವರು ಸಮಾಜದಲ್ಲಿ ಭಾವನಾತ್ಮಕವಾಗಿ ಸುಳ್ಳು ಭಾಷಣ ಮಾಡುವ ಮೂಲಕ ಯುವಕರ ದಿಕ್ಕು ತಪ್ಪಿಸುತ್ತಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಜನತೆ ಬಿಜೆಪಿ ಮತ ನೀಡಬೇಡಿ ಎಂದು ಮನವಿ
ಮಾಡಿದರು.

ಬಿಜೆಪಿ 2014ರ ತನ್ನ ಪ್ರಣಾಳಿಕೆಯಲ್ಲಿ ಸ್ವಾಮಿನಾಥನ್‌ ವರದಿ ಜಾರಿಗೆ ತರುವುದಾಗಿ
ಭರವಸೆ ನೀಡಿತ್ತು. ಆದರೆ, ಐದು ವರ್ಷ ಅಧಿಕಾರ ಮುಗಿದರೂ ಬಿಜೆಪಿ ಮಾತ್ರ ರೈತರ ಪರವಾಗಿರುವ
ಸ್ವಾಮಿನಾಥನ್‌ ವರದಿ ಜಾರಿ ಮಾಡದೇ ರೈತರಿಗೆ ಅನ್ಯಾಯ ಮಾಡಿದೆ. ರಾಷ್ಟ್ರೀಯ ಜಲ ನೀತಿ
ಜಾರಿಗೆ ವಿಳಂಬ ಮಾಡಿ, ಈಗ 2022ರ ವೇಳೆ ರೈತರ ಆದಾಯ ದ್ವಿಗುಣ ಮಾಡುವುದಾಗಿ ಸುಳ್ಳು ಭರವಸೆ ನೀಡಿದೆ ಎಂದರು.

ಪಾಲಿಕೆ ಸದಸ್ಯ ರಾಜು ಅಂಬೋರೆ, ಜೆಡಿಎಸ್‌ ಮುಖಂಡರಾದ ಮೋಹನ ಅರ್ಕಸಾಲಿ, ಮಲ್ಲಪ್ಪ ನಲೂರ, ದ್ಯಾಮಣ್ಣ ಹುಡೇದ, ಗೌಸಸಾಬ ನದಾಫ್‌, ಫರೀದಾ ರೋಣದ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಸಂಸದ ಪ್ರಹ್ಲಾದ ಜೋಶಿ ಅವರು ಕಡ್ಡಿಪೆಟ್ಟಿಗೆ ಇಲ್ಲದಿದ್ದರೂ ಬೆಂಕಿ ಹಚ್ಚುವುದರಲ್ಲಿ ನಿಸ್ಸೀಮರಾಗಿದ್ದಾರೆ.
ಜೋಶಿ ಕ್ಷೇತ್ರದಲ್ಲಿ ಬೆಂಕಿ ಹಚ್ಚುತ್ತಿದ್ದರೆ, ನರೇಂದ್ರ ಮೋದಿ ದೇಶಾದ್ಯಂತ ಜಾತಿ, ಧರ್ಮಗಳ ಮಧ್ಯೆ ಬೆಂಕಿ ಹಚ್ಚುತ್ತಿದ್ದಾರೆ.
 ಪಿ.ಸಿ. ಸಿದ್ದನಗೌಡರ, ಮಾಜಿ ಸಚಿವ

ಲಿಂಗಾಯತರ ಸಭೆ ನಂತರ ಪಕ್ಕದ ಓಣಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಭೋಜನ ಮಾಡಿದರು. ಕಾಂಗ್ರೆಸ್‌ ಮುಖಂಡರು ಭೋಜನದ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು. ಅಲ್ಲಿ ಬಸನಗೌಡ ಪಾಟೀಲರ 75ನೇ ವರ್ಷದ ಜನ್ಮದಿನ ಫಲಕ ಹಾಕಲಾಗಿತ್ತು.

ಮತಗಳಿಗಾಗಿ ಬಸವಣ್ಣನ ಪೂಜೆ ಮಾಡುವ, ಲಿಂಗಾಯತರ ಮತಗಳಿಂದಲೇ ಆಯ್ಕೆಯಾದ ಪ್ರಹ್ಲಾದ
ಜೋಶಿಗೆ ತಾಕತ್ತಿದ್ದರೆ ಆರ್‌ಎಸ್‌ಎಸ್‌ ಕಚೇರಿಯಲ್ಲಿ ಬಸವಣ್ಣನ ಫೋಟೋ ಹಾಕಿಸಲಿ. ಮತಯಾಚನೆ ಮಾಡಲಿ ಎಂದು ವಿನಯ ಕುಲಕರ್ಣಿ ಸವಾಲು ಹಾಕಿದರು.

ಟಾಪ್ ನ್ಯೂಸ್

Team India: ಕೆಎಲ್‌, ಪಾಂಡ್ಯ, ಗಿಲ್‌ ಅಲ್ಲ.., ಚಾಂಪಿಯನ್ಸ್‌ ಟ್ರೋಫಿಗೆ ಈತನೇ ಉಪ ನಾಯಕ

Team India: ಕೆಎಲ್‌, ಪಾಂಡ್ಯ, ಗಿಲ್‌ ಅಲ್ಲ.., ಚಾಂಪಿಯನ್ಸ್‌ ಟ್ರೋಫಿಗೆ ಈತನೇ ಉಪ ನಾಯಕ

Video: ಬೀದಿ ವ್ಯಾಪಾರಿ ಬಳಿ 6 ಟ್ರೇ ಮೊಟ್ಟೆ ಖರೀದಿಸಿ ಹಣ ಪಾವತಿಸದೇ ಪರಾರಿ…ಮುಂದೇನಾಯ್ತು!

Video: ಬೀದಿ ವ್ಯಾಪಾರಿ ಬಳಿ 6 ಟ್ರೇ ಮೊಟ್ಟೆ ಖರೀದಿಸಿ ಹಣ ಪಾವತಿಸದೇ ಪರಾರಿ…ಮುಂದೇನಾಯ್ತು!

Actress Ramya: ಕೋರ್ಟ್‌ಗೆ ಹಾಜರಾದ ಮೋಹಕ ತಾರೆ ರಮ್ಯಾ; ಕಾರಣವೇನು?

Actress Ramya: ಕೋರ್ಟ್‌ಗೆ ಹಾಜರಾದ ಮೋಹಕ ತಾರೆ ರಮ್ಯಾ; ಕಾರಣವೇನು?

‘ರಾಜಕೀಯ ನಿವೃತ್ತಿ’ ಸುದ್ದಿಗೆ ದ.ಕ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್ ಸ್ಪಷ್ಟನೆ

‘ರಾಜಕೀಯ ನಿವೃತ್ತಿ’ ಸುದ್ದಿಗೆ ದ.ಕ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್ ಸ್ಪಷ್ಟನೆ

BBK11: ಸತ್ಯಕ್ಕೆ ಸೋಲಿಲ್ಲ.. ರಜತ್‌ ನಿರ್ಧಾರಕ್ಕೆ ರೊಚ್ಚಿಗೆದ್ದ ಮಂಜು

BBK11: ಸತ್ಯಕ್ಕೆ ಸೋಲಿಲ್ಲ.. ರಜತ್‌ ನಿರ್ಧಾರಕ್ಕೆ ರೊಚ್ಚಿಗೆದ್ದ ಮಂಜು

Delhi Election 2025:  ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP

Delhi Election 2025: ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP

Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು

Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌

ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌

Laxmi Hebbalkar  ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Hubballi

Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sandalwood: ಫೆ.7ಕ್ಕೆ ಗಜರಾಮ ತೆರೆಗೆ

Sandalwood: ಫೆ.7ಕ್ಕೆ ಗಜರಾಮ ತೆರೆಗೆ

Team India: ಕೆಎಲ್‌, ಪಾಂಡ್ಯ, ಗಿಲ್‌ ಅಲ್ಲ.., ಚಾಂಪಿಯನ್ಸ್‌ ಟ್ರೋಫಿಗೆ ಈತನೇ ಉಪ ನಾಯಕ

Team India: ಕೆಎಲ್‌, ಪಾಂಡ್ಯ, ಗಿಲ್‌ ಅಲ್ಲ.., ಚಾಂಪಿಯನ್ಸ್‌ ಟ್ರೋಫಿಗೆ ಈತನೇ ಉಪ ನಾಯಕ

10(1

Santhekatte: ಉಡುಪಿಯಿಂದ ಕುಂದಾಪುರ ಕಡೆಗೆ ಸರ್ವಿಸ್‌ ರಸ್ತೆ ಓಪನ್‌

9

Manipal: ಮಣ್ಣಪಳ್ಳ ಕೆರೆ; ಆಕರ್ಷಕ ಜಲಸಿರಿಗೆ ಬೇಕು ಆಸರೆ!

Video: ಬೀದಿ ವ್ಯಾಪಾರಿ ಬಳಿ 6 ಟ್ರೇ ಮೊಟ್ಟೆ ಖರೀದಿಸಿ ಹಣ ಪಾವತಿಸದೇ ಪರಾರಿ…ಮುಂದೇನಾಯ್ತು!

Video: ಬೀದಿ ವ್ಯಾಪಾರಿ ಬಳಿ 6 ಟ್ರೇ ಮೊಟ್ಟೆ ಖರೀದಿಸಿ ಹಣ ಪಾವತಿಸದೇ ಪರಾರಿ…ಮುಂದೇನಾಯ್ತು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.