ಅಗೌರವದಿಂದ ಕಂಡವರ ವಿರುದ್ಧ ಆಕ್ರೋಶ

ಸಮಾನ ಮನಸ್ಕರ ವೇದಿಕೆ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದ ವಿವಿಧ ಸಮಾಜದ ಮುಖಂಡರು| ಶೀಘ್ರ ಕ್ರಮದ ನಿರ್ಧಾರ

Team Udayavani, Apr 19, 2019, 1:03 PM IST

19-April-13

ದಾವಣಗೆರೆ: ಸಮಾನ ಮನಸ್ಕರ ವೇದಿಕೆ ಸಭೆಯಲ್ಲಿ ಎಸ್‌.ಎಚ್‌. ನಾಗರಾಜ್‌ ಮಾತನಾಡಿದರು.

ದಾವಣಗೆರೆ: ಪಕ್ಷಗಳು ಕೆಲವು ಸಮಾಜದ ಮುಖಂಡರನ್ನು ಅಗೌರವದಿಂದ ಕಾಣುತ್ತಿವೆ ಎಂಬ ಚರ್ಚೆಗೆ ಗುರುವಾರ ನಗರದಲ್ಲಿ ನಡೆದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಹಾಗೂ ಇತರೆ ಸಮಾಜದ ಸಮಾನ ಮನಸ್ಕರ ವೇದಿಕೆಯ ಸಭೆ ಸಾಕ್ಷಿಯಾಯಿತು.

ಎವಿಕೆ ಕಾಲೇಜು ರಸ್ತೆಯ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ನಡೆದ ಸಮಾನ ಮನಸ್ಕರ ವೇದಿಕೆ ಸಭೆಯಲ್ಲಿ ವಿವಿಧ ಸಮಾಜದ ಮುಖಂಡರು ವೇದಿಕೆಯ ಮುಂದಿರುವ ಉದ್ದೇಶ, ಸವಾಲುಗಳೇನು ಎಂಬ ರೂಪುರೇಷೆ ಬಗ್ಗೆ ತಿಳಿಸಿದರಲ್ಲದೇ ತಮ್ಮ ಆಕ್ರೋಶ ಹೊರಹಾಕಿದರು.

ಈ ವೇಳೆ ಮಾತನಾಡಿದ ವೇದಿಕೆ ರೂವಾರಿ ಎಚ್‌.ಎಸ್‌.ನಾಗರಾಜ್‌,
ಗೌರವ ಇಲ್ಲದ ಕಡೆ ಎಂದಿಗೂ ಹೆಜ್ಜೆ ಇಡುವುದಿಲ್ಲ. ಜನಸೇವೆ ಮಾಡುವ ಉದ್ದೇಶದಿಂದ ಜನರ ಮಧ್ಯೆ ಇದ್ದುಕೊಂಡು ರಾಜಕಾರಣದಲ್ಲಿ ತೊಡಗಿಕೊಂಡಿದ್ದೇನೆ. ಅದೇ ರೀತಿ ಜೆ.ಎಚ್‌.ಪಟೇಲ್‌ ಹಾಗೂ ನಮ್ಮ ಕುಟುಂಬ ಕೂಡ ನಡೆದುಕೊಂಡು ಬಂದಿವೆ. ಅಧಿಕಾರಕ್ಕಾಗಿ ನಾನು ಎಂದೂ
ರಾಜಕಾರಣ ಮಾಡಿದವನಲ್ಲ. ಬದಲಾಗಿ ಸಂಬಂಧದ ರಾಜಕಾರಣ ಮಾಡಿದವನು. ಸಂಬಂಧದ ರಾಜಕಾರಣ ಮಾಡಿದವರೂ ಕೂಡ ನಮ್ಮಲ್ಲಿನ ನ್ಯೂನ್ಯತೆ ತಿಳಿದುಕೊಂಡು ನಮ್ಮನ್ನ ಬಳಸಿಕೊಂಡು ನೋವು ಕೊಡುವ ಕೆಲಸ ಮಾಡಿದ್ದಾರೆ ಎಂದು ಅಸಮಾಧಾನ
ವ್ಯಕ್ತಪಡಿಸಿದರು.

ನಾವು ಅಣ್ಣ-ತಮ್ಮಂದಿರು ಸೇರಲು, ನೋವು-ನಲಿವು ಹಂಚಿಕೊಳ್ಳಲು ದೊಣ್ಣೆ ನಾಯಕನ ಅಪ್ಪಣೆ ಬೇಕಾ? ಹುಲಿ ಎಲ್ಲಿ
ಇದ್ರು ಹುಲಿನೇ. ಅದು ಯಾವತ್ತೂ ಶಕ್ತಿ ಹೊಂದಿರುತ್ತದೆ. ಅದು ಜೆ.ಎಚ್‌. ಪಟೇಲ್‌ ಹಾಗೂ ಶಿವಪ್ಪನವರ ಬೆಂಬಲಿಗರಲ್ಲಿದೆ ಎಂಬುದನ್ನು ಎಂದಿಗೂ ಮರೆಯಬಾರದು ಎಂದು ಎಚ್ಚರಿಸಿದರು.

ಮನೆಯಲ್ಲಿ ಎಲ್ಲರ ವಿರೋಧ ಮಾಡ್ಕೊಂಡು, ಮನೆಯನ್ನೆಲ್ಲಾ ಛಿದ್ರ ಮಾಡ್ಕೊಂಡು ಬಂದು ನಿಮ್ಮ ಜೊತೆ ಸೇರಿದೆ ಆದರೆ ನೀವು ಮಾಡಿದ್ದೇನು? ತಂದೆಯ ಮಾತಿಗೂ ಬೆಲೆ ಕೊಡಲಿಲ್ಲ ಎಂದು ಪಕ್ಷದ ಮುಖಂಡರ ಹೆಸರೇಳದೇ ಬೇಸರ ವ್ಯಕ್ತಪಡಿಸಿದರು.
2009ರಲ್ಲಿ ನಾನು ನಿಮ್ಮ ಪಕ್ಷ ಸೇರಿದೆ. 10 ವರ್ಷ ನಿಮ್ಮನ್ನ ಗೆಲ್ಲಿಸಿದ್ವಿ. ಆದರೆ, ನಾವು ಬರೀ ನಿಮ್ಮ ಬಳಕೆಯ ವಸ್ತುವಾದ್ವಿ. ನಾನು ಎಂದೂ ನಿಮ್ಮ ಮನೆಯ ಬಾಗಿಲಿಗೆ ಬರಲಿಲ್ಲ. ಆದ್ರೆ ನೀವು ನನ್ನ ಮನೆ ಬಾಗಿಲಿಗೆ ಬಂದ್ರಿ. ನನ್ನನ್ನ ಬಳಕೆ ಮಾಡಿಕೊಂಡ್ರಿ. ನಿಮ್ಮ ಹಾಗೆ ಆಡಿದ ಮಾತು ತಪ್ಪುವ ವ್ಯಕ್ತಿ, ಸಮಾಜ ನಮ್ಮದಲ್ಲ ಎಂದು ಹರಿಹಾಯ್ದರು.

ಪ್ರಸ್ತುತ ಸಂಘಟಿತರಾಗದಿದ್ದರೆ ಅಪಾಯ ತಪ್ಪಿದ್ದಲ್ಲ ಎಂಬುದನ್ನು ಮನಗಂಡು ಈ ಸಭೆ ಆಯೋಜಿಸಿದ್ದೇವೆ. ನಾವು ಪಟೇಲ್‌ ಹಾಗೂ ಶಿವಪ್ಪ ಅವರ ಗರಡಿಯಲ್ಲಿ ಇರುವ ಬಗ್ಗೆ ಜನರು ಮತ್ತೆ ನೆನಪಿಸಿದ್ದಾರೆ. ಈ ಸಭೆ ತಡೆಯಲು ಸಾಕಷ್ಟು ಪ್ರಯತ್ನ ಆಗಿದೆ.
ಆದರೆ, ಪಟೇಲ್‌ ಮತ್ತು ಶಿವಪ್ಪನವರ ಪ್ರವಾಹ ತಡೆಯಲು ಸಾಧ್ಯವಾಗಿಲ್ಲ.

ಒಡೆದಾಳುವ ನಾಯಕರಿಗೆ ಈ ಬಾರಿಯ ಲೋಕಸಭಾ ಚುನಾವಣೆಯ ಮೂಲಕ ಜನತೆ ತಕ್ಕ ಪಾಠ ಕಲಿಸಬೇಕು ಎಂದು
ಕೋರಿದರು.

ಜಿಲ್ಲಾ ಪಂಚಾಯತಿ ಸದಸ್ಯ ತೇಜಸ್ವಿ ಪಟೇಲ್‌ ಮಾತನಾಡಿ, ಯಾವುದೇ ಪಕ್ಷವಿರಲಿ ಯಾರೊಬ್ಬರನ್ನು ಅಲಕ್ಷéದಿಂದ
ಕಾಣಬಾರದು. ಜಿಲ್ಲೆಯಲ್ಲಿ ಯಾರು ಕೇಳುತ್ತಾರೋ ಅಂತಹವರಿಗೆ ಅವಕಾಶ ಸಿಗುವಂತಾಗಬೇಕು. ಅಂತಹ ವಾತಾವರಣವನ್ನು ಜಿಲ್ಲೆಯಲ್ಲಿ ನಿರ್ಮಿಸಬೇಕು ಎಂದರು.

ನಾನೆಂದು ಟಿಕೆಟ್‌ಗಾಗಿ ಕಾಂಗ್ರೆಸ್‌ ಗೆ ಅರ್ಜಿ ಹಾಕಿದವನಲ್ಲ. ಆದ್ರೆ ಟಿಕೆಟ್‌ ಕೊಡುವ ಭರವಸೆ ದೊರಕಿತ್ತು. ಆಗ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಡಿದ್ರೆ ಮಾತ್ರ ಚುನಾವಣೆಗೆ ನಿಲ್ಲುವುದಾಗಿ ತಿಳಿಸಿದ್ದೆ. ಟಿಕೆಟ್‌ ನೀಡಿದ್ದರೆ ಹೊಸ ಸಾಧನೆ ಮಾಡುವ ನಿಟ್ಟಿನಲ್ಲಿ
ಆಲೋಚಿಸಿದ್ದೆವು. ಆದರೆ, ಟಿಕೆಟ್‌ ತಪ್ಪಿದೆ. ಜಾತಿ ಆಧಾರಿತವಾಗಿ ಪ್ರೋತ್ಸಾಹ ಸಿಗುತ್ತದೆ. ಈ ಧೋರಣೆ ಸಂಪೂರ್ಣ ಬದಲಾಗಬೇಕು.
ಎರಡು ದಿನಗಳಲ್ಲಿ ವೇದಿಕೆಯ ನಿರ್ಧಾರದ ನಿಲುವು ಕೈಗೊಳ್ಳುವುದಾಗಿ ತಿಳಿಸಿದರು.

ಓಟಿಗಾಗಿ ಖರ್ಚು ಮಾಡುವವರ ಸೋಲಿಸಿ: ಸುವ್ಯವಸ್ಥೆಯ ದೃಷ್ಟಿಯಿಂದ ಚುನಾವಣಾ ವೆಚ್ಚಕ್ಕೆ ತೆಗೆದಿಟ್ಟಿರುವ ಹಣ ವಾಪಸ್‌ ಹೋಗಬೇಕು. ಗ್ರಾಮ ಪಂಚಾಯತಿಯಿಂದ ಲೋಕಸಭೆ ಚುನಾವಣೆವರೆಗೆ ಯಾರು ಹೆಚ್ಚು ಹಣ ಖರ್ಚು ಮಾಡುತ್ತಾರೋ ಅವರನ್ನ ಸೋಲಿಸಬೇಕು ಎಂದು ಜನರಿಗೆ ಮನವಿ ಮಾಡಿದರು.

ಎಂ.ಟಿ. ಸುಭಾಶ್ಚಂದ್ರ ಮಾತನಾಡಿ, ಜಿಲ್ಲೆಯ ಎ ಮತ್ತು ಬಿ ಟೀಮ್‌ನಿಂದ ಅನ್ಯಾಯ ಆಗಿದ್ದರೆ ಅದು ಮೊದಲು ಪಂಚಮಸಾಲಿ ಸಮಾಜಕ್ಕೆ. ಆ ನಂತರದಲ್ಲಿ ಮುಸ್ಲಿಂ ಸಮುದಾಯಕ್ಕೆ. 8 ವಿಧಾನ ಸಭಾ ಕ್ಷೇತ್ರಗಳಲ್ಲಿ ನಮ್ಮ ಸಮಾಜಕ್ಕೆ ಟಿಕೆಟ್‌ ನೀಡಲಿಲ್ಲ. ಅದಕ್ಕಾಗಿ ನಾವು ಒಗ್ಗಟ್ಟು ಪ್ರದರ್ಶಿಸಬೇಕು. ಅಧಿಕಾರ ಇರುತ್ತೆ,
ಹೋಗುತ್ತೆ ಎಲ್ಲರೂ ಒಂದಾಗಿರಬೇಕು ಎಂದರು.

ಅಧಿಕಾರ ಇದ್ದು ಜನಸೇವೆ ಮಾಡೋದು ಬೇರೆ. ಅಧಿಕಾರ ಇಲ್ಲದೇ ಜನಸೇವೆ ಮಾಡೋರು ನಾವು ಎಂದರಲ್ಲದೇ, ಸಾಮಾಜಿಕ ನ್ಯಾಯದಡಿ ಕೆಲಸ ಆಗಬೇಕಿದೆ. ಯಾರಿಗೆ ಮತ ಹಾಕಬೇಕು, ಎಂಥವರನ್ನು ಗೆಲ್ಲಿಸಬೇಕು ಎಂಬುದನ್ನು ಜನತೆಯೇ ನಿರ್ಧಾರ ಕೈಗೊಳ್ಳಬೇಕು. ಸಮಾಜಕ್ಕೆ ಅನ್ಯಾಯ ಮಾಡಿವವರಿಗೆ ತಕ್ಕ ಪಾಠ
ಕಲಿಸಬೇಕೆಂದು ಹೇಳಿದರು.

ಸಭೆಯನ್ನುದ್ದೇಶಿಸಿ ರೈತ ಮುಖಂಡ ಬಲ್ಲೂರು ರವಿಕುಮಾರ್‌, ಮುಸ್ಲಿಂ ಮುಖಂಡ ಸಾಧಿಕ್‌ ಫೈಲ್ವಾನ್‌, ಬಿ. ವೀರಣ್ಣ, ವೇದಿಕೆ ಅಧ್ಯಕ್ಷ ಟಿ.ಬಿ. ಗಂಗಾಧರ್‌, ಜಯಕುಮಾರ್‌, ಡಿ. ಹಾಲಸಿದ್ದಪ್ಪ, ಎಚ್‌. ವಿಶ್ವನಾಥ್‌, ಬಾನುವಳ್ಳಿ ಕೊಟ್ರಪ್ಪ, ಎಚ್‌.ಸಿ. ಸೋಮಶೇಖರ್‌, ಎನ್‌.ಎಂ. ಆಂಜನೇಯ ಗುರೂಜಿ, ಸಿರಿಗೆರೆ ಪರಮೇಶ್ವರಗೌಡ್ರು, ಆರ್‌. ಪ್ರತಾಪ್‌, ಶಂಕ್ರಳ್ಳಿ ಪ್ರತಾಪ್‌
ಮಾತನಾಡಿದರು. ಲತಾ ಕೊಟ್ರೇಶ್‌, ಪಿ. ರಾಜ್‌ಕುಮಾರ್‌,
ಕಾರಿಗನೂರು ವೀರಭದ್ರಪ್ಪ, ಪಂಪಣ್ಣ, ಟಿ.ಎಚ್‌. ಶಿವಕುಮಾರ್‌, ಸೇರಿದಂತೆ ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

Police

Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.