ಮಂಗಲಗಿ ಗ್ರಾಮಕ್ಕೆ ನೀರು ಕೊಡಿ
ಚರಂಡಿ ಇಲ್ಲದೇ ಸ್ವಚ್ಛತೆ ಕೊರತೆ ರಸ್ತೆಗೆ ಹರಿಯುವುದು ಮನೆಗಳ ಮಲೀನ ನೀರು
Team Udayavani, Apr 19, 2019, 3:07 PM IST
ಹುಮನಾಬಾದ: ಮಂಗಲಗಿ ಗ್ರಾಮದ ಓಣಿಯೊಂದರಲ್ಲಿ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಮಲಿನ ನೀರು ರಸ್ತೆ ಮಧ್ಯ ಸಂಗ್ರಹವಾಗಿರುವುದು.
ಹುಮನಾಬಾದ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ-65ರ ಬಳಿಯ ಮಂಗಲಗಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಕಾರಣ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ.
8,000 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಾತ್ರವಲ್ಲದೇ ಖಾಸಗಿ ಶಾಲೆಗಳೂ ಇವೆ. ಆದರೆ ಗ್ರಾಮಸ್ಥರ ಆರೋಗ್ಯಕ್ಕೆ ಅತ್ಯವಶ್ಯಕವಾದ ಚರಂಡಿ ಸೌಲಭ್ಯ ಇಲ್ಲದಿರುವುದು ಹಾಗೂ ಇರುವ ಕಡೆ ಸ್ವಚ್ಛತೆ ಕೊರತೆ ಜನರನ್ನು ಕಾಡುತ್ತಿದೆ. ಕೆಲವು ಓಣಿಗಳಲ್ಲಿ ಚರಂಡಿಗಳಿಲ್ಲದ್ದರಿಂದ ಮನೆಗಳಿಂದ ಹೊರಬರುವ ಮಲಿನ ನೀರು ಸಂಪೂರ್ಣ ರಸ್ತೆಯನ್ನು ಆವರಿಸಿಕೊಂಡಿದೆ.
ಓಣಿಯಲ್ಲಿನ ಎಲ್ಲ ಕೊಳವೆ ಬಾವಿ ನೀರು ತಪಾಸಣೆಗೆ ಒಳಪಡಿಸಿದ್ದು, ಕುಡಿಯುಲು ಯೋಗ್ಯವಲ್ಲ ಎಂಬುದನ್ನು ಆರೋಗ್ಯ ಇಲಾಖೆ ಈಚೆಗಷ್ಟೇ ಸ್ಪಷ್ಟಪಡಿಸಿದೆ. ಗ್ರಾಮದಲ್ಲಿ ಒಟ್ಟು 10ಕ್ಕೂ ಅಧಿಕ ಕೊಳವೆ ಬಾವಿಗಳಿವೆ. ಆ ನೀರು ಏನಿದ್ದರೂ ಪಾತ್ರೆ ತೊಳೆಯಲು, ಬಟ್ಟೆ ತೊಳೆಯಲು ಮಾತ್ರ ಬಳಕೆ ಮಾಡಬಹುದೆಂದು ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದೆ.
ಆದರೆ ಊರಲ್ಲಿರುವ 10 ಕೊಳವೆ ಬಾವಿಗಳ ಪೈಕಿ ಅರ್ಧಕ್ಕೂ ಹೆಚ್ಚು ಕೊಳವೆ ಬಾವಿಗಳ ಮೋಟರ್ ಸುಟ್ಟು ತಿಂಗಳು ಗತಿಸಿದರೂ ದುರುಸ್ತಿ ಮಾಡಲಾಗಿಲ್ಲ. ಕಾರಣ ಊರಿನ ಪ್ರಮುಖರೆಲ್ಲರೂ ಲೋಕಸಭೆ ಚುನಾವಣೆ ನಿಮಿತ್ತ ಊರೂರು ಅಲೆದು ಮತಯಾಚಿಸುತ್ತಿದ್ದಾರೆ. ಹೀಗಾಗಿ ಜನರ ಗೋಳು ಕೇಳುವವರಿಲ್ಲದಂತಾಗಿದೆ ಎಂದು ಗ್ರಾಮಸ್ಥ ಲಿಂಗಪ್ಪ ಚೀನಕೇರಿ ನೋವು ತೋಡಿಕೊಂಡರು.
ಸಿರಕಟನಳ್ಳಿಯೇ ಗತಿ: ಗ್ರಾಮಸ್ಥರಿಗೆ ಅತ್ಯಂತ ಅವಶ್ಯ ಇರುವ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕುಡಿಯಲು ಸಿಹಿ ನೀರು ಬೇಕಾದರೆ ಮೂರ್‍ನಾಲ್ಕು ಕಿ.ಮೀ. ದೂರ ತೋಟದ ಬಾವಿಗಳು ಅಥವಾ ಅಷ್ಟೇ ಅಂತರಲ್ಲಿರುವ ಸಿರಕಟನಳ್ಳಿ ಗ್ರಾಮಕ್ಕೆ ಸೈಕಲ್, ಬೈಕ್ ಮೇಲೆ ನಾಲ್ಕಾರು ಕೊಡ ತಂದು ಸಂಗ್ರಹಿಸಿ ಇಟ್ಟುಕೊಳ್ಳಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ಗ್ರಾಮದ ಶಾಂತಮ್ಮ ನಾಗನಕೇರಿ, ಸುಶೀಲಾಬಾಯಿ ಅಸಮಾಧಾನ ಆಡಳಿತ ವ್ಯವಸ್ಥೆ ವಿರುದ್ಧ ಹಿಡಿಶಾಪ ಹಾಕಿದರು.
ಗ್ರಾಮದಲ್ಲಿ ಚರಂಡಿ ಸ್ವತ್ಛಗೊಳಿಸಲು ನಾಲ್ಕಾರು ದಿನ ವಿಳಂಬವಾದರೆ ಸಹಿಸಿಕೊಳ್ಳಬಹುದು. ಆದರೆ ಮನುಷ್ಯನಿಗೆ ಅತ್ಯಂತ ಅವಶ್ಯವಿರುವ ಕುಡಿಯುವ ನೀರೇ ಇಲ್ಲದಿದ್ದರೇ ಹೇಗೆ ಸಹಿಸಿಕೊಳ್ಳಲು ಸಾಧ್ಯ? ಸರ್ಕಾರ, ವಿವಿಧ ಹಂತ ಚುನಾಯಿತ ಪ್ರತಿನಿಧಿಗಳು ಶೀಘ್ರದಲ್ಲೇ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ
ಘಟಕ ಆರಂಭಿಸಿ, ಗ್ರಾಮಸ್ಥರ ಪುಣ್ಯಕ್ಕೆ ಪಾತ್ರರಾಗಬೇಕು.
ಲಿಂಗಪ್ಪ ಚೀನಕೇರಿ,
ಮಂಗಲಗಿ ಗ್ರಾಮಸ್ಥರು
ಶಶಿಕಾಂತ ಕೆ.ಭಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.