ಕಾಪು ಮತಗಟ್ಟೆ ಬಳಿ ಪೊಲೀಸರು- ಮುಖಂಡರ ಮಾತಿನ ಚಕಮಕಿ
Team Udayavani, Apr 19, 2019, 4:09 PM IST
ಕಾಪು: ಮತಗಟ್ಟೆ ಸಮೀಪದ ಬೂತ್ ಬಳಿ ಪಾನಮತ್ತ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಮತ್ತು ಬೂತ್‌ನಲ್ಲಿ ಬ್ಯಾಲೆಟ್ ಪೇಪರ್ ಹೊಂದಿದ್ದ ಆರೋಪದಲ್ಲಿ ಮಹಿಳಾ ಕಾರ್ಯಕರ್ತರನ್ನು ಚುನಾವಣಾಧಿ ಕಾರಿಗಳ ನಿರ್ದೇಶನದಂತೆ ಠಾಣೆಗೆ ಕರೆ ತಂದ ಪೊಲೀಸರ ವಿರುದ್ಧ ರಾಜ ಕೀಯ ಪಕ್ಷಗಳು ತಿರುಗಿ ಬಿದ್ದ ಘಟನೆ ಗುರುವಾರ ಕಾಪುವಿನಲ್ಲಿ ನಡೆದಿದೆ.
ಕಾಪು ಸರಕಾರಿ ಮಾ.ಹಿ.ಪ್ರಾ. ಶಾಲಾ ಮತಗಟ್ಟೆಯ 100 ಮೀ. ಹೊರಗೆ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯರ್ಥಿ ಮತ್ತು ಬಿಜೆಪಿ ಅಭ್ಯರ್ಥಿ ಗಳ ಮಾಹಿತಿಯುಳ್ಳ ಬ್ಯಾಲೆಟ್ ಪೇಪರ್ ಕಂಡು ಬಂದಿದ್ದು, ಅದನ್ನು ಫ್ಲೆ$çಯಿಂಗ್ ಸ್ಕಾ Ìಡ್ ತಂಡ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿತ್ತು.
ಸ್ಥಳಕ್ಕೆ ಧಾವಿಸಿದ ಎಎಸ್‌ಪಿ ಕೃಷ್ಣಕಾಂತ್ ಅವರು ಕಾಪು ಸಿಐ ಶಾಂತಾರಾಮ್, ಎಸ್‌ಐ ನವೀನ್ ನಾಯಕ್ ಅವರನ್ನು ಸ್ಥಳಕ್ಕೆ ಕರೆಯಿಸಿ ಬೂತ್‌ಗಳಲ್ಲಿ ಪಾಲಿಸಬೇಕಾದ ನಿಯಮ ಪಾಲನೆಯಾಗುತ್ತಿಲ್ಲ ಎಂದು ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನು ತೆರಳುವಂತೆ ಸೂಚಿಸಿದರು.
ಈ ಸಂದರ್ಭ ಮಾತಿನ ಚಕಮಕಿ ನಡೆದಿದ್ದು, ಬೂತ್‌ನಲ್ಲಿ ಬ್ಯಾಲೆಟ್ ಪೇಪರ್ ಹೊಂದಿದ್ದ ಕಾಂಗ್ರೆಸ್‌ನ ಪುರಸಭಾ ಸದಸ್ಯೆ ಮತ್ತು ಬಿಜೆಪಿ ಕಾರ್ಯಕರ್ತೆಯನ್ನು ಠಾಣೆಗೆ ಕರೆದೊಯ್ದಿದ್ದರು.ಇದೇ ವೇಳೆ ವ್ಯಕ್ತಿಯೋರ್ವ ಮದ್ಯ ಸೇವಿಸಿ ಮತಗಟ್ಟೆಯ ಬಳಿ ಬಂದಿದ್ದು, ಆತನನ್ನು ಪೊಲೀಸರು ಪ್ರಶ್ನಿಸಿ ವಶಕ್ಕೆ ತೆಗೆದುಕೊಂಡು, ಠಾಣೆಗೆ ಕರೆತಂದು ವೈದ್ಯಕೀಯ ಪರೀಕ್ಷೆಗಾಗಿ ಕರೆದೊಯ್ದಿದ್ದರು.
ಎರಡೂ ಘಟನೆಗಳಿಂದ ಕೆರಳಿದ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆಗೆ ಆಗಮಿಸಿ, ಪೊಲೀಸರ ಜತೆಗೆ ಮಾತಿನ ಚಕಮಕಿ ನಡೆಸಿದರು. ಆಗ ಪರಿಸ್ಥಿತಿ ಉದ್ವೇಗಗೊಂಡಿತು. ಕುಡಿತದ ಆರೋಪದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡ ವ್ಯಕ್ತಿಯನ್ನು ಮತ್ತು ಪುರುಷ ಅಧಿಕಾರಿಗಳು ಠಾಣೆಗೆ ಕರೆ ತಂದ ಮಹಿಳಾ ಕಾರ್ಯಕರ್ತೆಯರನ್ನು ಬಿಡುಗಡೆಗೊಳಿಸುವಂತೆ ಒತ್ತಡ ಹೇರಿದರು. ಈ ವಿಚಾರದಲ್ಲಿ ಪೊಲೀಸರೊಂದಿಗೆ ವಿವಿಧ ರಾಕೀಯ ಪಕ್ಷಗಳ ನಾಯಕರು ಮಾತುಕತೆ ನಡೆಸಿದರು.
ಸಂಧಾನ ಸಫಲ
ಪರಿಸ್ಥಿತಿ ಹದಗೆಡುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಎಎಸ್‌ಪಿ ಕೃಷ್ಣಕಾಂತ್, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮುಖಂಡರ ಜತೆ ಮಾತುಕತೆ ನಡೆಸಿ ಕುಡಿದು ಮತಗಟ್ಟೆಯ ಬಳಿಗೆ ಬಂದು ವಾಹನ ಚಲಾಯಿಸಲು ಮುಂದಾದ ಯುವಕನ ವಿರುದ್ಧ ಪ್ರಕರಣ ದಾಖಲಿಸಿ, ಬಿಡುಗಡೆಗೊಳಿಸಿದರು. ಬ್ಯಾಲೆಟ್ ಪೇಪರ್ ವಿಚಾರದಲ್ಲಿ ಠಾಣೆಗೆ ಕರೆತಂದಿದ್ದ ಕಾರ್ಯಕರ್ತೆ ಯರನ್ನು ಕೂಡ ಕಳುಹಿಸಿಕೊಟ್ಟರು. ಇದೇ ವೇಳೆ ಬ್ಯಾಲೆಟ್ ಪೇಪರ್ ಹೊಂದಿದ್ದ ವಿಚಾರದಲ್ಲಿ ಫ್ಲೆ$çಯಿಂಗ್ ಸ್ಕಾ Ìಡ್ ಅಧಿಕಾರಿ ಸುರೇಶ್ ನಾಯಕ್ ಅವರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಮತ್ತು ಸ್ಥಳೀಯ ನಾಯಕರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ
Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ
Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್ ಶೆಟ್ಟಿ
Ajekar Case: ನ್ಯಾಯಾಂಗ ಬಂಧನ ವಿಸ್ತರಣೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.