ಪುತ್ತೂರು ಮಹಾಲಿಂಗೇಶ್ವರನ ಜಾತ್ರೆ ಸಮಾಪನ
Team Udayavani, Apr 20, 2019, 6:00 AM IST
ಪುತ್ತೂರು: ಸೀಮೆಯ ಒಡೆಯ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆ ಶುಕ್ರವಾರ ಬೆಳಗ್ಗೆ ಧ್ವಜಾವರೋಹಣದೊಂದಿಗೆ ಸಮಾಪನಗೊಂಡಿತು. ಗುರುವಾರ ಸಂಜೆ 5 ಗಂಟೆಗೆ ದೇವಾಲಯದಿಂದ ತೆರಳಿದ ಶ್ರೀ ದೇವರ ಅವಭೃಥ ಸವಾರಿ ದಾರಿಯುದ್ದಕ್ಕೂ 50ಕ್ಕೂ ಹೆಚ್ಚು ಕಟ್ಟೆಪೂಜೆಗಳು, 5,000ಕ್ಕೂ ಹೆಚ್ಚು ಹಣ್ಣುಕಾಯಿ ಸೇವೆಯನ್ನು ಸ್ವೀಕರಿಸಿ ವೀರಮಂಗಲಕ್ಕೆ ತೆರಳಿತ್ತು. ಶುಕ್ರವಾರ ಬೆಳಗ್ಗೆ 13 ಕಿ.ಮೀ. ದೂರದ ವೀರಮಂಗಲ ಕುಮಾರಧಾರಾ ನದಿಗೆ ತಲುಪಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅವಭೃಥ ಮುಗಿಸಿ ಬೆಳಗ್ಗೆ 10 ಗಂಟೆಗೆ ದೇವರ ಮೂಲ ಉತ್ಸವ ಮೂರ್ತಿಯೊಂದಿಗೆ ಸವಾರಿಯು ದೇವಾಲಯದ ಒಳಾಂಗಣ ಪ್ರವೇಶಿಸಿತು.
ಧ್ವಜಾವರೋಹಣ
ಒಂದು ಸುತ್ತು ಉತ್ಸವ ನಡೆದು ಬಳಿಕ ಧ್ವಜಾವರೋಹಣ ನಡೆಯಿತು. ಬಳಿಕ ಭಕ್ತರು ದೇವರ ಧರ್ಮನಡೆಯಲ್ಲಿ ನಿಂತು ಪ್ರಾರ್ಥಿಸಿ, ಕಾಣಿಕೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಧ್ವಜಾವರೋಹಣ ಮುಗಿದ ಬೆನ್ನಲ್ಲೇ ದೇವಾಲ ಯದಲ್ಲಿ ಅನ್ನಸಂತರ್ಪಣೆ ಆರಂಭವಾಯಿತು.
ಭಕ್ತರ ಭಕ್ತಿ
ಶ್ರೀ ದೇವರ ಸವಾರಿ ಮರಳಿ ಬರುವ ವೇಳೆ ಶ್ರೀ ಮಹಾಲಿಂಗೇಶ್ವರ ದೇವರ ಭಕ್ತಿಗೀತೆ, ಭಕ್ತರಿಂದ ಶಿವ ನಾಮಸ್ಮರಣೆ ನಡೆಯಿತು. ಗುರುವಾರ ಸಂಜೆ ದೇವರೊಂದಿಗೆ ಅವಭೃಥ ಸ್ನಾನಕ್ಕೆ ಬರಿಗಾಲಿನಲ್ಲಿ ಭಕ್ತಿ, ಶ್ರದ್ಧೆಯೊಂದಿಗೆ ತೆರಳಿದ ನೂರಾರು ಭಕ್ತರು ವೀರಮಂಗಲ ಕುಮಾರಧಾರಾ ನದಿಯಲ್ಲಿ ಶ್ರೀ ದೇವರೊಂದಿಗೆ ಸ್ನಾನ ಮುಗಿಸಿ ಮರಳಿ ದೇವರೊಂದಿಗೆ ದೇವಾಲಯಕ್ಕೆ ಬಂದು ಪುನೀತರಾದರು. ಈ ಬಾರಿ ಅವಭೃಥಕ್ಕೆ ತೆರಳಿದ ಭಕ್ತರ ಸಂಖ್ಯೆ ಅಧಿಕವಾಗಿತ್ತು.
ಪೊಲೀಸ್ ನಿಗಾ
ಜಾತ್ರೆ ಆರಂಭದಿಂದ ಧ್ವಜಾವರೋಹಣದ ವರೆಗೆ ಪೊಲೀಸ್ ಸಿಬಂದಿ ನಿತ್ಯ ಬಂದೋಬಸ್ತ್ ನಡೆಸಿದರು. ಅವಭೃಥ ಸವಾರಿ ಉದ್ದಕ್ಕೂ ಹಾಗೂ ಸ್ನಾನದ ಬಳಿ ಭಕ್ತರು ಅಪಾಯಕಾರಿ ಸ್ಥಳದಲ್ಲಿ ನೀರಿಗೆ ಇಳಿಯದಂತೆ ಪೊಲೀಸರು ನಿಗಾ ವಹಿಸಿದರು.
ನಿರಂತರ ಅನ್ನಸಂತರ್ಪಣೆ
ದೇವಾಲಯದಲ್ಲಿ ಎ. 10ರಿಂದ 19ರ ತನಕ ಪ್ರತಿದಿನ ಮಧ್ಯಾಹ್ನ ಭಕ್ತರಿಗೆ ವಿಶೇಷ ಅನ್ನಸಂತರ್ಪಣೆ ನಡೆಸಲಾಗಿತ್ತು. ಸೀಮೆಯ ಭಕ್ತರು ದೇವರಿಗೆ ಹೊರೆಕಾಣಿಕೆಯಾಗಿ ಸಮರ್ಪಿಸಿದ ವಿವಿಧ ಸುವಸ್ತುಗಳನ್ನು ಅನ್ನಸಂತರ್ಪಣೆಯ ಕಾರ್ಯಕ್ಕಾಗಿ ಬಳಸಲಾಯಿತು. ಲಕ್ಷಕ್ಕೂ ಮಿಕ್ಕಿ ಭಕ್ತರು 10 ದಿನಗಳಲ್ಲಿ ಶ್ರೀ ದೇವರ ಅನ್ನ ಪ್ರಸಾದ ಸ್ವೀಕರಿಸಿದರು. ದೈವಗಳ ನೇಮ ಎ. 10ರಿಂದ ಕೊಡಿ ಏರಿ ಜಾತ್ರೆ ನಡೆದು ಎ. 19ರಂದು ಕೊಡಿ ಇಳಿದ ಬಳಿಕ ಎರಡು ದಿನ ದೈವಗಳ ನೇಮ, ಚೂರ್ಣೋತ್ಸವ, ವಸಂತಕಟ್ಟೆ ಪೂಜೆ ನಡೆಯುತ್ತದೆ. ಶುಕ್ರವಾರ ರಾತ್ರಿ ಹುಲಿಭೂತ, ರಕ್ತೇಶ್ವರಿ ನೇಮ ನಡೆದು ಶನಿವಾರ ರಾತ್ರಿ ಮಂತ್ರಾಕ್ಷತೆ, ಅಂಙಣತ್ತಾಯ, ಪಂಜುರ್ಲಿ ವಗೈರೆ ದೈವಗಳ ನೇಮ ನಡೆದವು.
ದೇವರ ಸ್ನಾನ
ಶುಕ್ರವಾರ ಬೆಳಗ್ಗೆ ವೀರಮಂಗಲ ಕುಮಾರಧಾರ ನದಿಯಲ್ಲಿ ಶ್ರೀ ದೇವರ ಅವಭೃತ ಸ್ನಾನ ವಿವಿಧ ವಿಧಿ- ವಿಧಾನಗಳೊಂದಿಗೆ ನಡೆಯಿತು. ತುಪ್ಪ, ಜೇನು, ಸೀಯಾಳ ಸೇರಿದಂತೆ ಪಂಚ ದ್ರವ್ಯಗಳಿಂದ ಶ್ರೀ ದೇವರಿಗೆ ಅವಭೃಥ ಸ್ನಾನ ನೆರವೇರಿಸ ಲಾಯಿತು. ಶ್ರೀ ದೇವರ ಸ್ನಾನದ ಬಳಿಕ ಸಾವಿರಾರು ಸಂಖ್ಯೆಯ ಭಕ್ತರು ನದಿಯಲ್ಲಿ ಮಿಂದು ಪುನೀತರಾದರು. ಬಳಿಕ ಶ್ರೀ ದೇವರ ಪ್ರಭಾವಳಿಯೊಂದಿಗೆ ನದಿ ದಡದಲ್ಲಿ ರುವ ಕಟ್ಟೆಯಲ್ಲಿ ಪೂಜೆ ನಡೆದು ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ಶ್ರೀ ದೇವರ ಸವಾರಿ ಮರಳಿ ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಮರಳಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.