ವಿಶ್ವಕಪ್ ವೇಳೆ 20 ದಿನ ಪತ್ನಿಯರಿಗೆ ನಿರ್ಬಂಧ
Team Udayavani, Apr 20, 2019, 6:00 AM IST
ಸಾಂದರ್ಭಿಕ ಚಿತ್ರ
ನವದೆಹಲಿ: ವಿಶ್ವಕಪ್ ಏಕದಿನ ಕ್ರಿಕೆಟ್ ಕೂಟ ಆರಂಭಕ್ಕೂ ಮೊದಲು ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ಕಹಿ ಸುದ್ದಿಯೊಂದು ಪ್ರಕಟವಾಗಿದೆ. ಹೌದು, ತಂಡದೊಂದಿಗೆ ಪತ್ನಿಯರು, ಗೆಳತಿಯರ ಪ್ರವಾಸವನ್ನು ಮೊದಲ ಇಪ್ಪತ್ತು ದಿನಗಳವರೆಗೆ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ನಿರ್ಬಂಧಿಸಿದೆ. ಈ ಮೂಲಕ ಆಟಗಾರರು ಪೂರ್ಣ ಕ್ರಿಕೆಟ್‌ನತ್ತ ಗಮನ ಹರಿಸುವ ಪರೋಕ್ಷ ಸಂದೇಶವನ್ನು ಬಿಸಿಸಿಐ ಸಾರಿದೆ.
ಸಾಮಾನ್ಯವಾಗಿ ವಿದೇಶದಲ್ಲಿ ಕ್ರಿಕೆಟ್ ಸರಣಿಗಳಾದಾಗ ಆಟಗಾರರ ಪತ್ನಿಯರು, ಗೆಳತಿಯರೂ ತಂಡದ ಜತೆ ಹೋಗುವುದನ್ನು ಕಾಣಬಹುದು. ಈ ಬಾರಿ ಒಟ್ಟಾರೆ ಒಂದೂವರೆ ತಿಂಗಳು ಕ್ರಿಕೆಟ್ ಕೂಟ ನಡೆಯಲಿದ್ದು ಕುಟುಂಬದ ಸದಸ್ಯರು ಕೂಡ ಭಾಗಿಯಾಗಲಿದ್ದಾರೆ. ಆದರೆ ಮೊದಲ 20 ದಿನ ಪತ್ನಿಯರಾಗಲಿ ಅಥವಾ ಗೆಳತಿಯ ರಾಗಲಿ ತಂಡದ ಜತೆ ಇರುವಂತಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಬಿಸಿಸಿಐ ತಿಳಿಸಿದೆ.
ಕೊಹ್ಲಿ ಮನವಿ ಪುರಸ್ಕರಿಸದ ಬಿಸಿಸಿಐ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ವಿರಾಟ್ ಕೊಹ್ಲಿ ಇತ್ತೀಚೆಗೆ ಪತ್ರ ಬರೆದಿದ್ದರು. ಯಾವುದೇ ಕ್ಷಣದಲ್ಲೂ ತಂಡದ ಆಟಗಾರರಿಗೆ ಪತ್ನಿಯರು, ಗೆಳತಿಯರು ಹಾಗೂ ಕುಟುಂಬ ಸದಸ್ಯರು ಸುಲಭವಾಗಿ ಸಿಗುವ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದರು. ಈ ಮನವಿಯನ್ನು ಬಿಸಿಸಿಐ ತಳ್ಳಿ ಹಾಕಿದೆ. ಭಾರತ ಮೇ22ರಂದು ಇಂಗ್ಲೆಂಡ್‌ಗೆ ತೆರಳಲಿದೆ. ಅಲ್ಲಿ ಅಭ್ಯಾಸ ನಡೆಸಲಿದೆ. ಬಳಿಕ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಆ ಬಳಿಕವಷ್ಟೇ ಆಟಗಾರರನ್ನು ಪತ್ನಿಯರು, ಗೆಳತಿಯರು ಕೂಡಿಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.