ಸಿಆರ್‌ಪಿಎಫ್ ಮಹಿಳಾ ವಿಂಗ್ ಸುಪರ್ದಿಗೆ ಸ್ಟ್ರಾಂಗ್ ರೂಂ
150ಕ್ಕೂ ಅಧಿಕ ಪೊಲೀಸ್ ಸಿಬಂದಿ, 6 ಅಧಿಕಾರಿಗಳ ಕಣ್ಗಾವಲು
Team Udayavani, Apr 20, 2019, 6:00 AM IST
ಉಡುಪಿ: ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಮತಯಂತ್ರ ಗಳನ್ನು ಉಡುಪಿ ಅಜ್ಜರಕಾಡಿನ ಸೈಂಟ್ ಸಿಸಿಲಿ ಶಾಲೆಯ ಸ್ಟ್ರಾಂಗ್ ರೂಂನಲ್ಲಿ ಪೇರಿಸಿಡಲಾಗಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಭದ್ರತೆಯ ಪೂರ್ಣ ಜವಾಬ್ದಾರಿ ಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆಯ 35 ಮಂದಿ ಮಹಿಳಾ ಸಶಸ್ತ್ರ ಧಾರಿಗಳಿಗೆ ವಹಿಸಲಾಗಿದೆ. ಇವರ ಜತೆ ಸಿಆರ್‌ಪಿಎಫ್ನ ನಾಲ್ವರು ಪುರುಷ ಭದ್ರತಾ ಸಿಬಂದಿಯೂ ಇದ್ದಾರೆ.
ಹೊರಗಿನ ಭದ್ರತೆಗೆ ತಲಾ 10 ಮಂದಿಯ 2 ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ತಂಡಗಳಿವೆ. ಎರಡು ವಿಧ್ವಂಸಕ ಕೃತ್ಯ ನಿರೋಧಕ ವಾಹನಗಳು ಸನ್ನದ್ಧವಾಗಿವೆ. ಎಲ್ಲ ಕೊಠಡಿಗಳ ಎಲ್ಲ ಬಾಗಿಲುಗಳಿಗೂ ಲೋಹ ಶೋಧಕ ಅಳವಡಿಸಲಾಗಿದ್ದು, 105ರಷ್ಟು ಸಿಸಿ ಕೆಮರಾಗಳ ಕಣ್ಗಾವಲಿದೆ. 69 ಮಂದಿ ಹೆಡ್ ಪೊಲೀಸ್ ಕಾನ್‌ಸ್ಟೆಬಲ್‌ಗಳು ಮತ್ತು ಕಾನ್‌ಸ್ಟೆಬಲ್‌ಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಹೊರಗಿನ ಭದ್ರತೆಯ ಮೇಲೆ ಓರ್ವ ಡಿವೈಎಸ್‌ಪಿ,ಓರ್ವ ಸರ್ಕಲ್ ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಪಿಎಸ್‌ಐಗಳು ನಿಗಾ ವಹಿಸಲಿದ್ದಾರೆ. ಅಧಿಕಾರಿ, ಸಿಬಂದಿ ಸೇರಿ ಸುಮಾರು 150ಕ್ಕೂ ಅಧಿಕ ಮಂದಿ ಭದ್ರತಾ ಕರ್ತವ್ಯದಲ್ಲಿದ್ದಾರೆ.
ನಾಲ್ಕು ಕೇಂದ್ರಗಳು,
18 ಸ್ಟಾಂಗ್ ರೂಮ್‌ಗಳು
ಸೈಂಟ್ ಸಿಸಿಲಿ ಶಾಲೆಯಲ್ಲಿ ಅಗತ್ಯವಿರುವಷ್ಟು ಕೊಠಡಿಗಳು ಲಭ್ಯ ಇರುವುದರಿಂದ ಈ ಬಾರಿಯ ಸ್ಟ್ರಾಂಗ್ ರೂಮ್ ಆಗಿ ಈ ಶಾಲೆಯನ್ನು ಆಯ್ಕೆ ಮಾಡಲಾಗಿದೆ. ಇಲ್ಲಿನ ಕನ್ನಡ ಮಾಧ್ಯಮ ಶಾಲೆಯ ನೂತನ ಕಟ್ಟಡವೂ ಸೇರಿದಂತೆ ಚತುಷೊRàನ ಆಕಾರದಂತಿರುವ ಇಡೀ ಕಟ್ಟಡವನ್ನು ನಾಲ್ಕು ಕೇಂದ್ರಗಳಾಗಿ ವಿಭಜಿಸಲಾಗಿದ್ದು ಒಟ್ಟು 18 ಸ್ಟ್ರಾಂಗ್ ರೂಮ್‌ಗಳನ್ನು ಸಿದ್ಧಪಡಿಸಲಾಗಿದೆ. ಚಿಕ್ಕಮಗಳೂರು ಮತ್ತು ಶೃಂಗೇರಿ ವಿ.ಸಭಾ ಕ್ಷೇತ್ರಗಳಿಗೆ ತಲಾ 3 ಹಾಗೂ ಉಳಿದ ಎಲ್ಲ ವಿ.ಸಭಾ ಕ್ಷೇತ್ರಗಳಿಗೆ ತಲಾ 2 ಸ್ಟ್ರಾಂಗ್ ರೂಮ್‌ಗಳಿವೆ.
ಕೇಂದ್ರ 1ರ ನೆಲ ಅಂತಸ್ತಿನಲ್ಲಿ (ಕೊಠಡಿ ಸಂಖ್ಯೆ1, 2) ಕಾಪು, ಮೊದಲ ಅಂತಸ್ತಿನಲ್ಲಿ (ಕೊ. ಸಂಖ್ಯೆ 3, 4) ಕಾರ್ಕಳ, ಇದೇ ಅಂತಸ್ತಿನ ಕೊ. ಸಂಖ್ಯೆ 5 ಮತ್ತು 6ರಲ್ಲಿ ಕುಂದಾಪುರ ಕ್ಷೇತ್ರಗಳ ಸ್ಟ್ರಾಂಗ್ ರೂಂ ಇದೆ.
ಕೇಂದ್ರ ಸಂಖ್ಯೆ 2ರ ನೆಲ ಅಂತಸ್ತಿನಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ (ಕೊಠಡಿ ಸಂಖ್ಯೆ 10, 11, 12) ಸ್ಟ್ರಾಂಗ್ ರೂಂ ಇದೆ. ಇದೇ ಕೇಂದ್ರದ ಮೊದಲ ಅಂತಸ್ತಿನಲ್ಲಿ (ಕೊಠಡಿ ಸಂಖ್ಯೆ 13,14, 15) ಶೃಂಗೇರಿ ಕ್ಷೇತ್ರದ ಮತಯಂತ್ರಗಳಿರುವ ಸ್ಟ್ರಾಂಗ್ ರೂಂಗೆ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಸಂಖ್ಯೆ 3ರ ನೆಲ ಅಂತಸ್ತಿನಲ್ಲಿ (ಕೊಠಡಿ ಸಂಖ್ಯೆ 16, 17) ತರಿಕೆರೆ ಕ್ಷೇತ್ರದ ಮತಯಂತ್ರಗಳಿಗೆ ಸ್ಟ್ರಾಂಗ್ ರೂಂ, ಮೊದಲ ಅಂತಸ್ತಿನಲ್ಲಿ (ಕೊಠಡಿ ಸಂಖ್ಯೆ 19, 20) ಮೂಡಿಗೆರೆ ಕ್ಷೇತ್ರದ ಸ್ಟ್ರಾಂಗ್ ರೂಂ ಇದೆ. 4ನೇ ಕೇಂದ್ರದ ಮೊದಲ ಅಂತಸ್ತಿನಲ್ಲಿ(ಕೊಠಡಿ ಸಂಖ್ಯೆ 21, 22) ಉಡುಪಿ ಕ್ಷೇತ್ರದ ಮತಯಂತ್ರಗಳ ಸ್ಟ್ರಾಂಗ್ ರೂಮ್ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ
Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
Mann Ki Baat: ಮೈಸೂರಿನ ‘ಅರ್ಲಿ ಬರ್ಡ್’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.