ಕೊಚ್ಚಿಯ ಬ್ಯೂಟಿ ಪಾರ್ಲರ್ ಶೂಟೌಟ್ ಪ್ರಕರಣ: ಪೈವಳಿಕೆಯ ಮನೆಗೆ ದಾಳಿ; ಮಾರಕಾಸ್ತ್ರ ವಶಕ್ಕೆ
Team Udayavani, Apr 20, 2019, 9:44 AM IST
ಮಂಜೇಶ್ವರ: ಕೊಚ್ಚಿ ಪನಂಬಳ್ಳಿ ನಗರದಲ್ಲಿರುವ ನಟಿ ಲೀನಾ ಮರಿಯಾ ಪೋಲ್ ಅವರ ಮಾಲಕತ್ವದ ನೈಲ್ ಬ್ಯೂಟಿ ಪಾರ್ಲರ್‌ಗೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಕ್ರೈಂ ಬ್ರಾಂಚ್ ಅಧಿಕಾರಿಗಳು ಮಂಜೇಶ್ವರ ಪೈವಳಿಕೆ ಸಮೀಪದ ಕಾಯರ್‌ಕಟ್ಟೆಯ ಮನೆ ಯೊಂದಕ್ಕೆ ದಾಳಿ ನಡೆಸಿ ಅಪಾರ ಪ್ರಮಾಣದ ಮಾರಕಾಯುಧಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಮನೆಯಿಂದ ಪಿಸ್ತೂಲು, ತಲವಾರುಗಳು, ಸ್ಪ್ರಿಂಗ್ ಚಾಕು ಮತ್ತಿತರ ಆಯುಧಗಳು, ಹಲವು ಮೊಬೈಲ್‌ಗಳು ಮತ್ತು ವಾಹನಗಳ ನಂಬರ್ ಪ್ಲೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕ್ರೈಂಬ್ರಾಂಚ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ವಿವರ
ಬ್ಯೂಟಿ ಪಾರ್ಲರ್‌ಗೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಸುಪಾರಿ ತಂಡಕ್ಕೆ ಸೇರಿದ ಪೆರುಂ ಬಾವೂರಿನ ಬಿಲಾಲ್ ಸಹಿತ ಇಬ್ಬರನ್ನು ಕ್ರೈಂಬ್ರಾಂಚ್ ಕೆಲವು ದಿನಗಳ ಹಿಂದೆ ಬಂಧಿಸಿತ್ತು. ಆ ಪೈಕಿ ಬಿಲಾಲ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸಿಕ್ಕಿದ ಮಾಹಿತಿಯಂತೆ ಪೈವಳಿಕೆಯ ಮನೆಗೆ ದಾಳಿ ನಡೆಸಲಾಗಿದೆ.
ಮೋನಾಯಿ ಎಂಬಾತ ಶೂಟೌಟ್ ಪ್ರಕರಣದ ಸೂತ್ರಧಾರನಾಗಿದ್ದು, ಈಗ ತಲೆ ಮರೆಸಿಕೊಂಡಿದ್ದಾನೆ. ಮೂಲತಃ ತೃಶೂರು ನಿವಾಸಿರುವ ಆತ ಮಲೇಶ್ಯಾಕ್ಕೆ ಪರಾರಿಯಾಗಿರಬೇಕು ಎಂದು ಶಂಕಿಸಲಾಗುತ್ತಿದೆ. ಕೆಲವು ವರ್ಷ ಕಾಸರಗೋಡಿನಲ್ಲೂ ನೆಲೆಸಿದ್ದ. ಬ್ಯೂಟಿ ಪಾರ್ಲರ್‌ಗೆ ಗುಂಡು ಹಾರಿಸಲು ಈತನೇ ಬಿಲಾಲ್ ಮತ್ತು ಇನ್ನೋರ್ವನಿಗೆ ಸುಪಾರಿ ನೀಡಿ ಬಂದೂಕು ಮತ್ತು ಬೈಕ್ ಒದಗಿಸಿದ್ದ ಎಂದು ಕ್ರೈಂಬ್ರಾಂಚ್ ತಿಳಿಸಿದೆ.
ಮೋನಾಯಿ ಕಾಸರಗೋಡಿನೊಂದಿಗೆ ಸಂಪರ್ಕ ಹೊಂದಿರುವ ಕಾರಣ ಆತನ ಪತ್ತೆಗಾಗಿ ತನಿಖೆಯನ್ನು ಕಾಸರಗೋಡಿಗೂ ವಿಸ್ತರಿಸಲಾಗಿದೆ. ಕೊಚ್ಚಿಯ ಕ್ರೈಂಬ್ರಾಂಚ್ ಡಿವೈಎಸ್‌ಪಿ ಜೋಸ್ ಚೆರಿಯನ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ.
ಕ್ರಿಮಿನಲ್‌ಗಳ ಅಡ್ಡೆ ?
ಮಾರಕಾಯುಧಗಳು ಪತ್ತೆಯಾದ ಪೈವಳಿಕೆಯ ಮನೆ ಕ್ರಿಮಿನಲ್ ಪ್ರಕರಣ ತಂಡಗಳು ಕಾರ್ಯ ವೆಸಗುವ ರಹಸ್ಯ ತಾಣವಾಗಿದ್ದು, ದಾಳಿ ಸಂದರ್ಭ ಇಲ್ಲಿ ಹಾಸಿಗೆ ಹಿಡಿದಿದ್ದ ಅಸ್ವಸ್ಥ ವೃದ್ಧ ಮಾತ್ರ ಇದ್ದರು. ಆ ಮನೆಯಲ್ಲಿ ಹಲವು ಬಟ್ಟೆಗಳು ಪತ್ತೆಯಾಗಿದ್ದು, ಆ ಬಗ್ಗೆ ವೃದ್ಧನ ಹೇಳಿಕೆಯನ್ನು ಕ್ರೈಂಬ್ರಾಂಚ್ ದಾಖಲಿಸಿಕೊಂಡಿದೆ. ಆದರೆ ಈ ಹೇಳಿಕೆಯನ್ನು ಸಂಪೂರ್ಣವಾಗಿ ನಂಬುವಂತಿಲ್ಲವೆಂದು ಕ್ರೈಂಬ್ರಾಂಚ್ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Appoint: ಲಾಕ್‌ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Hoax Call: ಈ ವರ್ಷದಲ್ಲಿ 994 ವಿಮಾನಕ್ಕೆ ಹುಸಿ ಬಾಂಬ್ ಕರೆ ಬಂದಿದೆ: ಸರಕಾರ
Chennai: ಐಶ್ವರ್ಯ ರಜನಿಕಾಂತ್, ಧನುಷ್‌ಗೆ ವಿಚ್ಛೇದನ ನೀಡಿದ ಕೋರ್ಟ್
information Technology Appointment: ಬೆಂಗಳೂರಲ್ಲೇ ಹೆಚ್ಚಿನ ಉದ್ಯೋಗ ನಿರೀಕ್ಷೆ
Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.