ರಣಬಿಸಿಲಿಗೆ ಸುಸ್ತಾದ ಕಾಂಗ್ರೆಸ್ ಕಾರ್ಯಕರ್ತರು
ಗಂಟೆಗಟ್ಟಲೇ ಕಾದು ಕುಳಿತ ಜನರಿಗೆ ಸಿಕ್ಕಿದ್ದು 12 ನಿಮಿಷದ ಭಾಷಣ
Team Udayavani, Apr 20, 2019, 11:17 AM IST
ರಾಯಚೂರು: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಕುಳಿತಿದ್ದ ಜನ.
ರಾಯಚೂರು: ಲೋಕಸಭೆ ಚುನಾವಣೆ ನಿಮಿತ್ತ ಪ್ರಚಾರ ಮಾಡಲು ನಗರಕ್ಕೆ ಆಗಮಿಸಿದ ಕಾಂಗ್ರೆಸ್ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವೀಕ್ಷಿಸಲು ದೂರದೂರುಗಳಿಂದ ಆಗಮಿಸಿದ್ದ ಜನ ರಣ ಬಿಸಿಲಿಗೆ ಬಸವಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮ ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿತ್ತು. ಆದರೆ, ಕಾರ್ಯಕ್ರಮ ಶುರುವಾಗುವ ಹೊತ್ತಿಗೆ 3.30 ಮೇಲಾಗಿತ್ತು, ಆದರೂ ರಾಹುಲ್ ಗಾಂಧಿ ಬಂದಿರಲಿಲ್ಲ. ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮಾತು ಆರಂಭಿಸುತ್ತಿದ್ದಂತೆ ಜನ ಜೋರಾಗಿ ಕೂಗಾಡಿದರು. ಬಳಿಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ
ಮಾತನಾಡಿದರು.
ಸಂಜೆ 4.15ರ ಸುಮಾರಿಗೆ ರಾಹುಲ್ ಗಾಂಧಿ ಹೆಲಿಕಾಪ್ಟರ್ ವೇದಿಕೆ ಮೇಲಿಂದ ಹಾಯ್ದು ಹೋಗುತ್ತಿದ್ದಂತೆ ಜನರ ಹರ್ಷೋದ್ಘಾರ ಮುಗಿಲು ಮುಟ್ಟುವಂತಿತ್ತು. ಬಳಿಕ ಬಂದು ಕೆಲ ಹೊತ್ತಿಗೆ ಮಾತು ಆರಂಭಿಸಿದ ರಾಹುಲ್ ಗಾಂಧಿ ಕೇವಲ 13 ನಿಮಷ ಮಾತನಾಡಿ ಮಾತಿಗೆ ವಿರಾಮ ನೀಡಿದರು. ಆರಂಭದಲ್ಲಿ ನೆರೆದ ಜನರ ಕ್ಷಮೆ ಕೋರಿದ ರಾಹುಲ್ ಗಾಂಧಿ ಗುಜರಾತ್‌ನಲ್ಲಿ ಕಾರ್ಯಕ್ರಮ ವಿಳಂಬವಾಯಿತು. ಇಲ್ಲಿಗೆ ಬರುವುದು ತಡವಾಯಿತು ಎಂದರು. 42 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪದಿಂದ ಬಳಲಿದ್ದ ಜನ ನೀರು ಸಿಗದೇ ಪರದಾಡಿದ ಪ್ರಸಂಗ ಜರುಗಿತು. ಕಾರ್ಯಕರ್ತರು ನೀರಿನ ಪ್ಯಾಕೇಟ್ ನೀಡಿದ್ದರಾದರೂ ಅವು ಒಬ್ಬರಿಗೆ ಸಿಕ್ಕರೆ ಮತ್ತೂಬ್ಬರಿಗೆ
ಸಿಗದಂತಾಗಿತ್ತು. ಇದರಿಂದ ಜನ ಎಳನೀರು, ತಂಪು ಪಾನೀಯ
ಅಂಗಡಿಗಳನ್ನು ಹುಡುಕಿಕೊಂಡು ಹೋಗುವಂತಾಗಿತ್ತು.
ರಾರಾಜಿಸಿದ ಟಿಡಿಪಿ ಧ್ವಜಗಳು: ನಡೆದಿದ್ದು ಕಾಂಗ್ರೆಸ್-ಜೆಡಿಎಸ್
ಮೈತ್ರಿ ಸಮಾವೇಶವಾದರೂ ಸಮಾವೇಶದಲ್ಲಿ ತೆಲುಗು
ದೇಶಂ ಪಕ್ಷದ ಧ್ವಜಗಳು ರಾರಾಜಿಸಿದವು. ರಾಯಚೂರು
ಹೇಳಿ ಕೇಳಿ ಆಂಧ್ರದ ಗಡಿಭಾಗವಾಗಿದ್ದು, ಇಲ್ಲಿ ಆಂಧ್ರದ ಜನ
ಸಾಕಷ್ಟು ಜನ ನೆಲೆಸಿದ್ದಾರೆ. ಚಂದ್ರಬಾಬು ನಾಯ್ಡು ಬರುವ
ಸಂಗತಿ ಕೇಳಿ ಸಾಕಷ್ಟು ಜನ ಆಗಮಿಸಿದ್ದರು. ಧ್ವಜ ಪ್ರದರ್ಶಿಸಿ
ಟಿಡಿಪಿಗೆ ಜಯಘೋಷ ಕೂಗಿದ್ದು ಕಂಡು ಬಂತು. ಇನ್ನೂ
ಆಂಧ್ರದಿಂದ ಆಗಮಿಸಿದ್ದ ಶಾಮು ತಾಡಪತ್ರಿ ಎನ್ನುವವರು
ಟಿಡಿಪಿ ಸಂಸ್ಥಾಪಕ ಎನ್.ಟಿ. ರಾಮಾರಾವ್ ವೇಷ ಧರಿಸಿ ನೆರೆದ
ಜನರ ರಂಜಿಸಿದರು. ಅವರ ಹಾವಭಾವಗಳು ಎನ್‌ಟಿಆರ್
ಹೋಲುವಂತೆ ಇದ್ದದ್ದು ಗಮನ ಸೆಳೆಯಿತು.
ಮಜ್ಜಿಗೆಗಾಗಿ ಮುಗಿಬಿದ್ದ ಜನ: ಬಿಸಿಲಿನ ಪ್ರತಾಪ
ಮಿತಿಮೀರಿದ್ದರಿಂದ ಆಯೋಜಕರು ಸಮಾವೇಶಕ್ಕೆ ಆಗಮಿಸಿದ್ದ
ಜನರಿಗೆ ಮಜ್ಜಿಗೆ ಪ್ಯಾಕೇಟ್ ವಿತರಿಸಿದರು. ಆದರೆ, ಲಾರಿಯಲ್ಲಿ
ತಂದರೂ ಕೆಲವೇ ಕ್ಷಣಗಳಲ್ಲಿ ಖಾಲಿ ಆಗಿದ್ದವು. ಜನ ಎಂದೂ
ಕಾಣದವರಂತೆ ಮುಗಿಬಿದ್ದು, ಒಬ್ಬೊಬ್ಬರು ಮೂರ್‍ನಾಲ್ಕು
ಪ್ಯಾಕೇಟ್ ಪಡೆದರು. ಈ ವೇಳೆ ನೂಕು ನುಗ್ಗಲು ಏರ್ಪಟ್ಟು
ಚದುರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.
ಟ್ರಾಫಿಕ್ ಜಾಮ್
ನಗರದ ಹೃದಯ ಭಾಗದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರಿಂದ ವಾಹನ ದಟ್ಟಣೆ ಏರ್ಪಟ್ಟು ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಯಿತು. ಸಂಜೆ ಸಮಾವೇಶ ಮುಗಿಯುತ್ತಿದ್ದಂತೆ ಜನ ಏಕಕಾಲಕ್ಕೆ ನಿರ್ಗಮಿಸಿದರು. ಇದರಿಂದ ಜಿಲ್ಲಾ ಕ್ರೀಡಾಂಗಣದ ಮುಂಭಾಗದ ರಸ್ತೆ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದಲ್ಲಿ ಟ್ರಾಫಿಕ್ ಸಮಸ್ಯೆ ಸೃಷ್ಟಿಯಾಯಿತು. ವಾತಾವರಣ ತಿಳಿಗೊಳಿಸಲು
ಪೊಲೀಸರು ಹೆೃರಾಣಾದರು. ಕೃಷಿ ವಿವಿವರೆಗೂ ವಾಹನ ದಟ್ಟಣೆ ಏರ್ಪಟ್ಟಿತ್ತು. ಎಂಟು ಕ್ಷೇತ್ರಗಳಿಂದ ಜನ ಆಗಮಿಸಿದ್ದರಿಂದ ಎಲ್ಲ ವಾಹನಗಳು ಒಂದೇ ದಾರಿಯಲ್ಲಿ ಏಕಕಾಲಕ್ಕೆ ಸಾಗಿದ್ದರಿಂದ ಸಮಸ್ಯೆ ಸೃಷ್ಟಿಯಾಯಿತು.
ಚೌಕಿದಾರ್ ಚೋರ್ ಹೈ
ಮೋದಿ ಸಮಾವೇಶದಲ್ಲಿ ಮೋದಿ ಮೋದಿ ಎಂಬ ಉದ್ಘೋಷ ಬರುವಂತೆ ಕಾಂಗ್ರೆಸ್ ಸಮಾವೇಶದಲ್ಲಿ ಚೌಕಿದಾರ್ ಚೋರ್ ಹೈ ಎಂಬ ಘೋಷಣೆ ಕೇಳಿ ಬಂತು. ರಾಹುಲ್ ಗಾಂಧಿ ಮಾತು ಆರಂಭಿಸುತ್ತಿದ್ದಂತೆ ಕೆಲ ಯುವಕರು ಚೌಕಿದಾರ್ ಚೋರ್ ಹೈ ಎಂದು ಕೂಗಿದರು. ಇದೇ ವೇಳೆ ರಾಹುಲ್ ಗಾಂಧಿ ಇಲ್ಲಿ
ಮಾತ್ರವಲ್ಲ ದೇಶದ ಯಾವ ಭಾಗಕ್ಕೂ ಹೋದರೂ ಇದೇ ಮಾತು ಕೇಳುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.