ಮೊದಲ ಮಳೆಗೇ ತುಂಬಿದ ಡ್ಯಾಂ


Team Udayavani, Apr 20, 2019, 11:20 AM IST

5

ಕೋಲಾರ: ಲೋಕಸಭಾ ಚುನಾವಣೆ ನಡೆದ ದಿನ ರಾತ್ರಿ ಭಾರೀ ಗುಡುಗು ಮಿಂಚು ಸಮೇತ ಜಿಲ್ಲೆಯಲ್ಲಿ ಸುರಿದ ಮಳೆ ನೂತವಾಗಿ ನಿರ್ಮಾಣಗೊಂಡಿರುವ ಚೆಕ್‌ ಡ್ಯಾಂಗಳಿಗೆ ನೀರು ನಿಲ್ಲುವಂತೆ ಮಾಡಿದೆ.

ಕೋಲಾರ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜಗದೀಶ್‌, ಈ ವರ್ಷದ ಮೊದಲ ಮಳೆಗೆ ಚೆಕ್‌ ಡ್ಯಾಂಗಳು ತುಂಬಿರುವುದು ಮತ್ತು ಕೆಲವೆಡೆ ಅಲ್ಪಸ್ವಲ್ಪ ಮಳೆ ನೀರು ನಿಂತಿರುವ ಫೋಟೋಗಳನ್ನು ತಮ್ಮ ಫೇಸ್‌ಬುಕ್‌ ಖಾತೆಯ ಮೂಲಕ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಸತತ ಬರಪೀಡಿತ ಜಿಲ್ಲೆಯಲ್ಲಿ ಕಳೆದ ವರ್ಷ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯಲಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಭೂಮಟ್ಟದ ನೀರಿನ ಮೂಲಗಳು ಬತ್ತಿ ಬರಿದಾಗಿದ್ದವು. ಕೆರೆ ಕುಂಟೆಗಳು ಬಟಾಬಯಲಾಗಿದ್ದವು. ಕೋಲಾರ ಜಿಪಂಗೆ ಸಿಇಒ ಆಗಿ ಅಧಿಕಾರ ಸ್ಪೀಕರಿಸಿದ ಜಿ.ಜಗದೀಶ್‌, ಜಿಲ್ಲೆಯಲ್ಲಿ ನೀರಿನ ಸಂಪನ್ಮೂಲ ಹೆಚ್ಚಿಸಲು ಉದ್ಯೋಗ ಖಾತ್ರಿಯನ್ನು ಸದ್ಬಳಕೆ ಮಾಡಿಕೊಳ್ಳಲು ಮುಂದಾಗಿದ್ದರು.

ಆರಂಭದಲ್ಲಿ ಕೋಲಾರ ಜಿಲ್ಲೆಯ ಸಹಸ್ರಾರು ರೈತರು ಅವಲಂಬಿಸಿರುವ ರೇಷ್ಮೆ ಅಭಿವೃದ್ಧಿಗೆ ಉದ್ಯೋಗ ಖಾತ್ರಿಯನ್ನು ಬಳಸಿಕೊಳ್ಳಲು ಸೂಚಿಸಿದ್ದರು. ಕೆಲವೇ ತಿಂಗಳುಗಳಲ್ಲಿ ರಾಜ್ಯದಲ್ಲಿಯೇ ಕೋಲಾರ ನರೇಗಾ ಬಳಸಿಕೊಂಡು ರೇಷ್ಮೆ ತೋಟಗಳನ್ನು ಅಭಿವೃದ್ಧಿಪಡಿಸುವ ವಿಚಾರದಲ್ಲಿ ನಂಬರ್‌ ಒನ್‌ ಸ್ಥಾನಕ್ಕೇರಿತ್ತು.

ಇದನ್ನೇ ಸ್ಫೂರ್ತಿಯಾಗಿಸಿಕೊಂಡ ಸಿಇಒ ಜಗದೀಶ್‌, ನರೇಗಾ ಸದ್ಬಳಕೆ ಮಾಡಿಕೊಂಡು ಜಿಲ್ಲೆಯಲ್ಲಿ ನೀರಿನ ಮೂಲಗಳನ್ನು ಸಂರಕ್ಷಿಸಲು ಯೋಜನೆ ರೂಪಿಸಿದರು. ಮಳೆಯೇ ಇಲ್ಲದ ಕಾಲದಲ್ಲಿ ಜಿಲ್ಲಾದ್ಯಂತ ನರೇಗಾ ಬಳಸಿಕೊಂಡು ಒಂದು ಸಾವಿರ ಆರ್ಚ್‌ ಮಾದರಿಯ ಚೆಕ್‌ ಡ್ಯಾಂಗಳನ್ನು ನಿರ್ಮಾಣ ಮಾಡುವಂತೆ ಗ್ರಾಪಂ ಪಿಡಿಒಗಳನ್ನು ಪ್ರೇರೇಪಿಸಿದರು. ಇದೀಗ ಜಿಲ್ಲಾದ್ಯಂತ ಒಂದು ಸಾವಿರ ಚೆಕ್‌ಡ್ಯಾಂಗಳ ನಿರ್ಮಾಣ ಕಾರ್ಯ ಮುಕ್ತಾಯವಾಗುವ ಹಂತಕ್ಕೆ ಬಂದಿದೆ.

ಕೋಲಾರ ಲೋಕಸಭಾ ಚುನಾವಣೆಯ ಒಂದು ತಿಂಗಳಿನ ಚುನಾವಣೆಯ ಕಾವು ತಂಪೆರೆಯುವಂತೆ ಗುರುವಾರ ರಾತ್ರಿ ಹತ್ತೂವರೆ ನಂತರ ಜಿಲ್ಲೆಯಲ್ಲಿ ವಿವಿಧ ತಾಲೂಕುಗಳಲ್ಲಿ ಭಾರೀ ಗುಡುಗು, ಮಿಂಚು ಸಮೇತ ಅಕಾಲಿಕ ಬೇಸಿಗೆ ಮಳೆ ಸುರಿಯಿತು. ಗಂಟೆ ಕಾಲ ಬಿರುಸಿನಿಂದಲೇ ಮಳೆ ಬಂದಿತ್ತು. ಮಧ್ಯರಾತ್ರಿಯವರೆಗೂ ಮಳೆ ಸುರಿಯುತ್ತಲೇ ಇತ್ತು.

ಚುನಾವಣಾ ಕೆಲಸ ಕಾರ್ಯಪೂರ್ಣಗೊಳಿಸಿ ಅಧಿಕಾರಿಗಳು ನಿರಾಳವಾಗುತ್ತಿರುವಾಗಲೇ ಸುರಿದ ಮಳೆ ನೀರಿಗೆ ಎಷ್ಟು ಚೆಕ್‌ಡ್ಯಾಂಗಳಲ್ಲಿ ನೀರು ತುಂಬಿರಬಹುದು ಎಂಬ ಕುತೂಹಲ ಜಿಪಂ ಸಿಇಒರಿಗೆ ಮೂಡಿತ್ತು. ತಮ್ಮ ಪಿಡಿಒಗಳಿಗೆ ಚೆಕ್‌ಡ್ಯಾಂಗಳು ತಂಬಿರುವ ಚಿತ್ರಗಳನ್ನು ವಾಟ್ಸ್‌ಆ್ಯಪ್‌ಗೆ ಅಪ್‌ಲೋಡ್‌ ಮಾಡುವಂತೆ ಸೂಚಿಸಿದ್ದರು.

ಬಂಗಾರಪೇಟೆ ತಾಲೂಕಿನಲ್ಲಿ ನರೇಗಾ ಯೋಜನೆಯಡಿ 150ಕ್ಕೂ ಹೆಚ್ಚು ಚೆಕ್‌ಡ್ಯಾಂಗಳನ್ನು ನಿರ್ಮಾಣ ಮಾಡಲಾಗಿದ್ದು, ಗುರುವಾರ ರಾತ್ರಿ ಸುರಿದ ಮಳೆ ನೀರಿಗೆ ಕೆಲವು ತುಂಬಿದ್ದರೆ, ಕೆಲವು ಚೆಕ್‌ಡ್ಯಾಂಗಳಲ್ಲಿ ಅರ್ಧ, ಕಾಲು ಭಾಗ ನೀರು ನಿಲ್ಲುವಂತಾಗಿದೆ.

ಡ್ಯಾಂ ತುಂಬಿರುವುದು ಸಂತಸ ತಂದಿದೆ: ಜಿಪಿ ಸಿಇಒ ಜಗದೀಶ್‌
ತಾವು ಮಾಡಿದ ಕಾರ್ಯ ಮೊದಲ ಮಳೆಗೆ ಸಾರ್ಥಕವಾಗಿರುವುದನ್ನು ಗಮನಿಸಿ ಸಂತಸ ವ್ಯಕ್ತಪಡಿಸಿದ ಜಿಪಿ ಸಿಇಒ ಜಗದೀಶ್‌, ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿ, ನರೇಗಾ ಯೋಜನೆಯಡಿ ನಿರ್ಮಾಣ ಮಾಡಿರುವ ಚೆಕ್‌ ಡ್ಯಾಂಗಳು ತುಂಬಿರುವುದು ತಮಗೆ ಅಪಾರ ಸಂತಸ ತಂದಿದೆ. ಸದ್ಯಕ್ಕೆ ಬಂಗಾರಪೇಟೆ ತಾಲೂಕಿನ ಚೆಕ್‌ಡ್ಯಾಂಗಳ ಚಿತ್ರಗಳು ತಮಗೆ ದೊರೆತಿದ್ದು, ಇನ್ನುಳಿದ ತಾಲೂಕುಗಳಲ್ಲಿಯೂ ತುಂಬಿರುವ ಸಾಧ್ಯತೆಗಳಿವೆ. ಚುನಾವಣಾ ಕಾರ್ಯದಲ್ಲಿರುವ ಪಿಡಿಒಗಳು ತಡವಾಗಿ ಮಾಹಿತಿ ನೀಡಬಹುದು ಎಂದರು.

ಬರಪೀಡಿತ ಜಿಲ್ಲೆಯಲ್ಲಿ ಸುರಿಯುವ ಒಂದೊಂದು ಮಳೆ ನೀರಿನ ಹನಿಗೂ ಮಹತ್ವವಿದ್ದು, ನೀರಿನ ತಜ್ಞರು ಹೇಳುವಂತೆ ಓಡುವ ನೀರನ್ನು ನಡೆಯುವಂತೆ ಮಾಡಿ, ನಡೆಯುವ ನೀರನ್ನು ತೆವಳುವಂತೆ ಮಾಡಿ, ತೆವಳುವ ನೀರನ್ನು ಭೂಮಿಗೆ ಇಂಗಿಸುವ ಕೆಲಸ ಮಾಡಲು ಚೆಕ್‌ಡ್ಯಾಂಗಳನ್ನು ನಿರ್ಮಾಣ ಮಾಡಿದ್ದು ಸಾರ್ಥಕವಾಗುವಂತಾಗಿದೆ.

ಬಿರು ಬೇಸಿಗೆಯಲ್ಲಿ ದನಕರು, ಪಶುಗಳಿಗೆ ವನ್ಯ ಜೀವಿಗಳಿಗೂ ಟ್ಯಾಂಕರ್‌ ಮೂಲಕ ತೊಟ್ಟಿಗಳಿಗೆ ನೀರು ತುಂಬಿಸಿ ನೀಡುತ್ತಿದ್ದ ಕೋಲಾರ ಜಿಲ್ಲೆಯಲ್ಲಿ ನರೇಗಾ ಚೆಕ್‌ ಡ್ಯಾಂಗಳಲ್ಲಿ ನೀರು ನಿಂತಿರುವುದು ಅಂತರ್ಜಲ ಹೆಚ್ಚಳದ ಜೊತೆಗೆ, ದನಕರು, ವನ್ಯ ಜೀವಿಗಳಿಗೆ ಕುಡಿಯಲು ಸಹಕಾರಿಯಾಗಲಿದೆ.

ಟಾಪ್ ನ್ಯೂಸ್

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

Kolar

Air Force Emergency: ಬಂಗಾರಪೇಟೆ ಬಳಿ ವಾಯುಪಡೆ ಹೆಲಿಕಾಪ್ಟರ್‌ ತುರ್ತು ಭೂ ಸ್ಪರ್ಶ

0447

World Tourism Day: ಜಿಲ್ಲೆ ಪ್ರವಾಸೋದ್ಯಮ ಹೆಚ್ಚಳಕ್ಕೆ ಪ್ರಚಾರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

POlice

Kasaragod: ರೈಲುಗಾಡಿಗೆ ಕಲ್ಲು ತೂರಾಟ; ಪ್ರಯಾಣಿಕನಿಗೆ ಗಾಯ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

de

Malpe ಸೀವಾಕ್‌ ಸಮುದ್ರತೀರದಲ್ಲಿ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.