ಕ್ಷೇತ್ರಾದ್ಯಂತ ಸೋಲು-ಗೆಲುವಿನ ಲೆಕ್ಕಾಚಾರ ಶುರು
ಈ ಬಾರಿ ಮತದಾನದಲ್ಲಿ ಪುರುಷರೇ ಮುಂದೆ ಶೃಂಗೇರಿ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನ
Team Udayavani, Apr 20, 2019, 11:28 AM IST
ಚಿಕ್ಕಮಗಳೂರು: ಲೋಕಸಭಾ ಚುನಾವಣೆಯ ಮತದಾನ ಪೂರ್ಣಗೊಂಡ ನಂತರ ಈಗ ಗೆಲುವಿನ ಲೆಕ್ಕಾಚಾರದ ಕುರಿತು ಎಲ್ಲೆಡೆ ಚರ್ಚೆಗಳು ಆರಂಭಗೊಂಡಿವೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನ ಗುರುವಾರ ಶಾಂತಿಯುತವಾಗಿ ಪೂರ್ಣಗೊಂಡಿದೆ. ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಗೆಲುವಿನ ಕುರಿತು ಲೆಕ್ಕಾಚಾರ ಆರಂಭಿಸಿದ್ದಾರೆ. ಕಳೆದ ಚುನಾವಣೆಗಿಂತಲೂ ಈ ಬಾರಿ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿನ ಮತದಾನವಾಗಿದೆ. ಯಾವ ಭಾಗದಲ್ಲಿ ಎಷ್ಟು ಮತದಾನವಾಗಿದೆ. ಅಲ್ಲಿ ನಮಗೆ ಎಷ್ಟು ಮತಗಳು ಬರುತ್ತವೆ. ಯಾವ ಭಾಗದಲ್ಲಿ ಕಡಿಮೆ ಮತ ದೊರೆಯಬಹುದು. ಎಷ್ಟು ಮತಗಳ ಅಂತರದಿಂದ ಯಾರು ಗೆಲ್ಲಬಹುದು ಎಂಬ ಕುರಿತು ಚರ್ಚೆಗಳು ಎಲ್ಲೆಡೆ ನಡೆಯುತ್ತಿದೆ.
ಜಿಲ್ಲಾದ್ಯಂತ ಉತ್ತಮ ಮತದಾನವಾಗಿದೆ. 2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿನ ಮತದಾನವಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇ.74.56ರಷ್ಟು ಮತದಾನವಾಗಿತ್ತು. ಈ ಬಾರಿ ಮತದಾನದಲ್ಲಿ
ಏರಿಕೆಯಾಗಿದ್ದು ಶೇ.75.26 ರಷ್ಟು ಮತದಾನವಾಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ 13,86,516 ಮತದಾರರಲ್ಲಿ 10,32,871 ಜನ ತಮ್ಮ ಹಕ್ಕು ಚಲಾಯಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಒಟ್ಟಾರೆ 15,13,116 ಮತದಾರರ ಪೈಕಿ
11,48,277 ಜನ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
7,38,583 ಪುರುಷ ಮತದಾರರಲ್ಲಿ 5,63,164 ಜನ ಹಾಗೂ 7,74,674 ಮಹಿಳೆಯರಲ್ಲಿ 5,63,164 ಜನ ಮತ ಹಾಕಿದ್ದಾರೆ.
ವಿಧಾನಸಭಾ ಕ್ಷೇತ್ರವಾರು ಮತದಾನದ ಪ್ರಮಾಣವನ್ನು ಗಮನಿಸಿದರೆ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಶೇ.78.86ರಷ್ಟು ಮತದಾನವಾಗಿದ್ದರೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ ಶೇ.69.42 ರಷ್ಟು
ಮತದಾನವಾಗಿದೆ.
ಕ್ಷೇತ್ರವಾರು ಮತದಾನದ ವಿವರ: ಕುಂದಾಪುರ ಒಟ್ಟು ಮತದಾರರು 2,03,279, ಪುರುಷರು 97,692, ಮಹಿಳೆಯರು 1,05,585, ಚಲಾವಣೆಯಾದ ಮತ : 1,57,761, ಪುರುಷರು 74,304, ಮಹಿಳೆಯರು 83,456, ಶೇ.77.61.
ಉಡುಪಿ: ಒಟ್ಟು ಮತದಾರರು 2,09,504, ಪುರುಷರು 1,01,386, ಮಹಿಳೆಯರು 1,08,116, ಚಲಾವಣೆಯಾದ ಮತ: 1,65,033, ಪುರುಷರು 79,394, ಮಹಿಳೆಯರು 85,639, ಶೇ.78.77. ಕಾಪು: ಒಟ್ಟು ಮತದಾರರು 1,84,101, ಪುರುಷರು 87,704, ಮಹಿಳೆಯರು 96,384, ಚಲಾವಣೆಯಾದ ಮತ: 1,43,170, ಪುರುಷರು 67,257,
ಮಹಿಳೆಯರು 75,913, ಶೇ.77.77. ಕಾರ್ಕಳ: ಒಟ್ಟು ಮತದಾರರು 1,83,528, ಪುರುಷರು 87,915, ಮಹಿಳೆಯರು 95,616, ಚಲಾವಣೆಯಾದ ಮತ: 1,43,949,ಪುರುಷರು 68,437, ಮಹಿಳೆಯರು 75,512, ಶೇ.78.43. ಶೃಂಗೇರಿ: ಒಟ್ಟು ಮತದಾರರು 1,65,578, ಪುರುಷರು 81,685, ಮಹಿಳೆಯರು 83,889, ಚಲಾವಣೆಯಾದ ಮತ : 1,30,577, ಪುರುಷರು 65,576, ಮಹಿಳೆಯರು 65,001, ಶೇ.78.86. ಮೂಡಿಗೆರೆ: ಒಟ್ಟು ಮತದಾರರು 1,68,579, ಪುರುಷರು 83,054, ಮಹಿಳೆಯರು 85,711, ಚಲಾವಣೆಯಾದ ಮತ: 1,26,294, ಪುರುಷರು
63,678, ಮಹಿಳೆಯರು 62,615, ಶೇ.74.92. ಚಿಕ್ಕಮಗಳೂರು: ಒಟ್ಟು ಮತದಾರರು 2,14,958, ಪುರುಷರು 1,06,964, ಮಹಿಳೆಯರು 1,07,971, ಚಲಾವಣೆಯಾದ ಮತ: 1,49,230, ಪುರುಷರು 75,849, ಮಹಿಳೆಯರು 73,378, ಶೇ.69.42.
ತರೀಕೆರೆ: ಒಟ್ಟು ಮತದಾರರು 1,83,589, ಪುರುಷರು 92,183, ಮಹಿಳೆಯರು 91,406, ಚಲಾವಣೆಯಾದ ಮತ: 1,32,263, ಪುರುಷರು 68,669, ಮಹಿಳೆಯರು 63,594, ಶೇ.72.04.
ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾರರ ಸಂಖ್ಯೆಯೂ ಹೆಚ್ಚಳವಾಗಿದ್ದು, ಮತದಾನದ ಶೇಕಡಾವಾರು ಪ್ರಮಾಣವೂ ಸ್ವಲ್ಪ ಏರಿಕೆಯಾಗಿದೆ. ಪ್ರತಿ ಚುನಾವಣೆಯಂತೆ ಈ
ಚುನಾವಣೆಯಲ್ಲಿಯೂ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಚುನಾವಣಾ ಆಯೋಗವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೂ ಸಹ ಮತದಾನದ ಪ್ರಮಾಣದಲ್ಲಿ ಹೆಚ್ಚಳವಾಗಲು ಕಾರಣವಾಗಿದೆ.
ಮತದಾನದ ಪ್ರಮಾಣ ಆಧರಿಸಿ ರಾಜಕೀಯ ಪಕ್ಷಗಳು ಸೋಲು-ಗೆಲುವಿನ ಲೆಕ್ಕಾಚಾರ ಮಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದರು. ಆದರೆ ಈ ಚುನಾವಣೆಯಲ್ಲಿ ಮಹಿಳೆಯರಿಗಿಂತ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ಪುರುಷ ಮತದಾರರು ಶೇ.76.25 ರಷ್ಟು ಮತದಾನ ಮಾಡಿದ್ದರೆ, ಮಹಿಳೆಯರು ಶೇ.75.53 ರಷ್ಟು ಮತದಾನ ಮಾಡಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಮತದಾನದ ಪ್ರಮಾಣದಲ್ಲಿ ಸ್ವಲ್ಪ
ಮಟ್ಟಿನ ಹೆಚ್ಚಳವಾಗಿದ್ದು, ಮೈತ್ರಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪೂರಕವಾಗಿದೆ. ಮೈತ್ರಿ ಪಕ್ಷಗಳ ಎಲ್ಲ ಮುಖಂಡರು, ಕಾರ್ಯಕರ್ತರು ಸಂಘಟಿತರಾಗಿ ಕೆಲಸ ಮಾಡಿದ್ದೇವೆ. ಬಿಜೆಪಿ ಅಭ್ಯರ್ಥಿಯ ವಿರುದ್ಧವಾಗಿ ಆ ಪಕ್ಷದವರೇ ಗೋ ಬ್ಯಾಕ್ ಶೋಭಾ ಅಭಿಯಾನ ನಡೆಸಿದ್ದು, ನಮ್ಮ ಗೆಲುವಿಗೆ ಸಹಕಾರಿಯಾಗಿದೆ.
ಹಿಂದಿನ ಸಿದ್ದರಾಮಯ್ಯ ಸರ್ಕಾರದ ವಿವಿಧ ಭಾಗ್ಯಗಳ ಯೋಜನೆಗಳು, ಈಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
ಅವರು ರೈತರ ಸಾಲ ಮನ್ನಾ ಮಾಡಿದ್ದು, ಸೇರಿದಂತೆ ಹಲವು ಯೋಜನೆಗಳು, ಪ್ರಮೋದ್ ಮಧ್ವರಾಜ್ ಅವರು ಶಾಸಕರು, ಸಚಿವರಾಗಿ ಮಾಡಿರುವ ಉತ್ತಮ ಕೆಲಸಗಳು ನಮ್ಮ ಅಭ್ಯರ್ಥಿಯ ಗೆಲುವಿಗೆ ಸಹಕಾರಿಯಾಗಲಿದೆ.
ರಂಜನ್ ಅಜಿತ್ ಕುಮಾರ್,
ಜೆಡಿಎಸ್ ಜಿಲ್ಲಾಧ್ಯಕ್ಷರು.
ಕಳೆದ ಲೋಕಸಭಾ ಚುನಾವಣೆಗಿಂತಲೂ ಹೆಚ್ಚಿನ ಮತಗಳ ಅಂತರದಲ್ಲಿ ನಮ್ಮ ಅಭ್ಯರ್ಥಿ ಶೋಭಾ ಕರಂದ್ಲಾಜೆ
ಗೆಲ್ಲಲಿದ್ದಾರೆ. ಸಂಸದರು ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳು, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು.
ದೇಶ ಹಾಗೂ ದೇಶದ ಭದ್ರತೆಯ ದೃಷ್ಟಿಯಿಂದ ಮೋದಿ ಅವರೇ ಅವಶ್ಯಕ ಎಂಬುದನ್ನು ಜನತೆ ಮನಗಂಡಿದ್ದಾರೆ. ಅದರೊಟ್ಟಿಗೆ ವಿಪಕ್ಷಗಳಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂಬುದೇ ತಿಳಿದಿಲ್ಲ.
ನೆಗಟೀವ್ ವಿಚಾರಗಳಿಗಿಂತಲೂ ಪಾಸಿಟೀವ್ ವಿಚಾರಗಳ ಆಧಾರದಲ್ಲಿಯೇ ಜನತೆ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಈ ಬಾರಿಯ ಚುನಾವಣೆ ಏಕಪಕ್ಷೀಯವಾಗಿ ನಡೆದಿದೆ. ಕಳೆದ ಬಾರಿಗಿಂತ ಅತೀ ಹೆಚ್ಚು ಮತಗಳ ಅಂತರದಲ್ಲಿ ನಮ್ಮ ಅಭ್ಯರ್ಥಿಯ ಗೆಲುವು ನಿಶ್ಚಿತ.
ಡಿ.ಎನ್.ಜೀವರಾಜ್,
ಜಿಲ್ಲಾ ಬಿಜೆಪಿ ಅಧ್ಯಕ್ಷ
ಎಸ್.ಕೆ.ಲಕ್ಷ್ಮೀಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Siddapura: ಬುಲೆಟ್ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Amparu: ಬೈಕ್ ಸ್ಕಿಡ್; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು
KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್ ರಾಜ್ ಮೌರ್ಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Siddapura: ಬುಲೆಟ್ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.