ದಸರಾಕ್ಕಿಂತ ಅಕ್ಕ ಮಹಾದೇವಿ ಜಯಂತಿ ಶ್ರೇಷ್ಠ: ಸ್ವಾಮೀಜಿ
ಬಸವಕಲ್ಯಾಣ: ಅಕ್ಕಮಹಾದೇವಿ ಗವಿ ಬಾಂಧವರ ಓಣಿಯಲ್ಲಿ ನಡೆದ ವೈರಾಗ್ಯ ನಿಧಿ ಅಕ್ಕಮಹಾದೇವಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ|ವಿಲಾವತಿ ಖೂಬಾ ಅವರನ್ನು ಸನ್ಮಾನಿಸಲಾಯಿತು.
Team Udayavani, Apr 20, 2019, 4:50 PM IST
ಬಸವಕಲ್ಯಾಣ: ನಾಗರ ಪಂಚಮಿ-ದಸರಾ ಹಬ್ಬಗಳಿಗಿಂತಲೂ ಅಕ್ಕಮಹಾದೇವಿ ಜಯಂತಿ ಬಹಳ ದೊಡ್ಡ ಹಬ್ಬ ಎಂದು ಅನುಭವ ಮಂಟಪ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಹೇಳಿದರು.
ನಗರದ ಅಕ್ಕಮಹಾದೇವಿ ಗವಿ ಬಾಂಧವರ ಓಣಿಯಲ್ಲಿ ನಡೆದ ವೈರಾಗ್ಯ ನಿಧಿ ಅಕ್ಕಮಹಾದೇವಿ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನ ನೀಡಿದ್ದು ಕಲ್ಯಾಣ ಭೂಮಿ. ಇಂತಹ ಪುಣ್ಯಭೂಮಿಯಲ್ಲಿ ನಾವೆಲ್ಲರೂ ಸೇರಿ ಮಾಡುವ ಕೆಲಸ ಇನ್ನೂ ಬಹಳಷ್ಟಿದೆ ಎಂದರು.
ಗಂಡು ಹೆಣ್ಣು ಎಂಬ ತಾರತ್ಯಮದ ವಾತವರಣ ಇರುವ 12ನೇ ಶತಮಾನದಲ್ಲಿ ಮಹಿಳೆಯರು ಮನೆಯಿಂದ ಹೊರಗೆ ಬರುವಂತಹ ಪರಿಸ್ಥಿತಿ ಇರಲಿಲ್ಲ. ಅಂತಹ ಸಮಯದಲ್ಲಿ ಶರಣ-ಶರಣೆಯರು, ಸ್ತ್ರೀ-ಪುರುಷರು ಸಮಾನರು ಎಂಬ ಸಮಾನತೆ ಮಂತ್ರ ಹೇಳಿಕೊಟ್ಟಿದ್ದೇ ಶರಣರು ಎಂದರು.
ಅಕ್ಕಮಹಾದೇವಿ ವಚನಗಳು ಬಹಳ ಶ್ರೇಷ್ಠವಾದವು. ಕನ್ನಡದ ಮೊಟ್ಟ ಮೊದಲ ಕವಿಯಿತ್ರಿ ಎಂದು ಅನುಭವ ಮಂಟಪದಲ್ಲಿ ನಿರ್ಣಯವಾಗಿದ್ದನ್ನು ಕನ್ನಡ ಸಾಹಿತ್ಯ ಪರಿಷತ್ತು ಹೇಳಿಕೊಂಡಿದೆ ಎಂದರು.
ಚಾರಿತ್ರಿಕ, ಐತಿಹಾಸಿಕ, ಜನಪರ ಬದುಕು ಸಾಗಿಸುವ ಈ ಭೂಮಿಯಲ್ಲಿ ಅಕ್ಕಮಹಾದೇವಿ ಜಯಂತಿ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಇಂತಹ ತಾಯಿಯ ಜಯಂತಿ ಕಾರ್ಯಕ್ರಮವನ್ನು ಡಾ|ನೀಲಾಂಬಿಕಾ ಅಕ್ಕ ಹಮ್ಮಿಕೊಂಡಿರುವುದು ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯ ಶ್ರೀ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ಇಲ್ಲಿನ ಶ್ರೀ ಬಸವೇಶ್ವರ ದೇವಸ್ಥಾನ ಪಂಚಕಮೀಟಿ ಬಸವ ಪರವಾಗಿ, ಶರಣರ ಪರವಾಗಿ ಆಯೋಜನೆ ಮಾಡುವ ಪ್ರತಿಯೊಂದು ಕಾರ್ಯಕ್ರಮಕ್ಕೆ ತನು, ಮನ, ಧನದಿಂದ ಸಹಾಯ ನೀಡುತ್ತಿರುವುದು ಇತರರಿಗೆ ಮಾದರಿ ಕೆಲಸವಾಗಿದೆ ಎಂದು ಬಣ್ಣಿಸಿದರು.
ಮಹಾರಾಷ್ಟ್ರದ ಲಾತೂರಿನ ಪ್ರೊ| ಭೀಮರಾವ್ ಪಾಟೀಲ ಮಾತನಾಡಿ, ಬಸವಕಲ್ಯಾಣದಲ್ಲಿ ವಚನ
ಜ್ಞಾನ, ಗವಿಗಳ ಇತಿಹಾಸ ಮತ್ತು ಶರಣ ಸಾಹಿತ್ಯದ
ಇತಿಹಾಸ ಅಡಗಿದೆ. ಜಗತ್ತಿನ ಸಂಸತ್ತು ಪರಿಚಯಿಸಿದ
ಭೂಮಿ ಕಲ್ಯಾಣ ನಾಡಾಗಿದ್ದು, ಇಲ್ಲಿ ಮನೆ-ಮನಗಳಲ್ಲಿ ಅಕ್ಕಮಹಾದೇವಿ ನೆಲೇಸುವಂತಾಗಬೇಕು ಎಂದರು.
ನೇತೃತ್ವ ವಹಿಸಿದ್ದ ಅಖೀಲ ಭಾರತ ಲಿಂಗವಂತ
ಹರಳಯ್ಯ ಪೀಠದ ಡಾ|ಗಂಗಾಂಬಿಕಾ ಅಕ್ಕ ಮತ್ತು
ಬಂದವರ ಓಣಿ ಅಕ್ಕಮಹಾದೇವಿ ಗವಿಯ ಶ್ರೀ ಸತ್ಯಕ್ಕ ತಾಯಿ ಆಶೀರ್ವಚನ ನೀಡಿದರು. ಅನುಭವ ಮಂಟಪ ಸಂಚಾಲಕ ಶ್ರೀ ಶಿವಾನಂದ ದೇವರು, ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ|ವಿಲಾವತಿ ಖೂಬಾ, ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಅನೀಲಕುಮಾರ ರಗಟೆ, ವೀರಣ್ಣಾ ಹಲಶೆಟ್ಟೆ, ರವಿ ಕೋಳಕರ್ ಇದ್ದರು.
ಭಾವಚಿತ್ರ ಮೆರವಣಿಗೆ: ವೈರಾಗ್ಯನಿಧಿ ಅಕ್ಕಮಹಾದೇವಿ ಜಯಂತ್ಯುತ್ಸವ ಅಂಗವಾಗಿ ಶುಕ್ರವಾರ ಬಂದವರ ಓಣಿ ಪ್ರವೇಶದ ಬಾಗಿಲಿನಿಂದ ಅಕ್ಕಮಹಾದೇವಿ ಗವಿಯ ವರೆಗೆ ಭಾವಚಿತ್ರ ಮೆರವಣಿಗೆ ನಡೆಯಿತು. ಅನುಭವ ಮಂಟಪ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಶ್ರೀ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ, ಡಾ|ಗಂಗಾಂಬಿಕಾ ಅಕ್ಕ, ಶ್ರೀ ಸತ್ಯಕ್ಕ ತಾಯಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Ullala: ತ್ರಿವಳಿ ತಲಾಖ್ ಪ್ರಕರಣ: ಆರೋಪಿಯ ಸೆರೆ
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.