ಒಡೆದ ಕುಂಡಾಮೇಸ್ತ್ರಿ ಕಟ್ಟೆ : ಕೂಟುಹೊಳೆ ಹೂಳು ಮಯ
Team Udayavani, Apr 21, 2019, 6:30 AM IST
ಮಡಿಕೇರಿ:ಬೇಸಿಗೆ ಕಾಲದಲ್ಲಿ ಮಡಿಕೇರಿ ನಗರಕ್ಕೆ ಕುಡಿಯುವ ನೀರನ್ನು ಒದಗಿಸಲು ಪರ್ಯಾಯವಾಗಿ ಬಳಸಿಕೊ ಳ್ಳಲಾಗುತ್ತಿದ್ದ ಕುಂಡಾಮೇಸ್ತ್ರಿ ಜಲಮೂಲಕ್ಕೆ ಅಡ್ಡಲಾಗಿ ಕಟ್ಟಲಾಗಿದ್ದ ಮರಳು ಚೀಲದ ತಡೆಗೋಡೆ ಕೊಚ್ಚಿ ಹೋಗಿದ್ದು, ನಗರದ ನಿವಾಸಿಗಳು ಇನ್ನೆರಡು ತಿಂಗಳು ನೀರಿನ ಬವಣೆಯನ್ನು ಅನುಭಸಬೇಕಾದ ದುಸ್ಥಿತಿ ಬಂದೊದಗಿದೆ.
ಗಾಳಿಬೀಡು ವ್ಯಾಪ್ತಿಯಲ್ಲಿ ಬುಧವಾರ ಮತ್ತು ಗುರುವಾರ ಉತ್ತಮ ಮಳೆಯಾಗಿದ್ದು, ನೀರಿನ ರಭಸಕ್ಕೆ ಕುಂಡಾ ಮೇಸ್ತ್ರಿ ಜಲಮೂಲದ ತಡೆಗೋಡೆ ಕೊಚ್ಚಿಹೋ ಗಿದ್ದು, ನೀರಿನ ಶೇಖರಣೆ ಅಸಾಧ್ಯವಾಗಿದೆ. ಇಲ್ಲಿಯವರೆಗೆ ಕುಂಡಾಮೇಸ್ತ್ರಿಯಿಂದ ಕೂಟುಹೊಳೆಗೆ ನೀರನ್ನು ಪಂಪ್ ಮಾಡಿ ಮಡಿಕೇರಿ ನಗರಕ್ಕೆ ಪೂರೈಸಲಾಗುತ್ತಿತ್ತು. ಇದೀಗ ಕುಂಡಾಮೇಸ್ತ್ರಿಯಿಂದ ಕೂಟು ಹೊಳೆಗೆ ಪಂಪ್ ಮಾಡಲಾಗುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿದೆ.
ಮಾತ್ರವಲ್ಲದೇ, ಕುಂಡಾಮೇಸ್ತ್ರಿಯ ಬಳಿ ವಿದ್ಯುತ್ ಪರಿವರ್ತಕದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಚೆಸ್ಕಾಂ ಸಿಬಂದಿಗಳು ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.
ಕುಂಡಾಮೇಸ್ತ್ರಿ ಜಲಮೂಲಕ್ಕೆ ಮತ್ತೆ ಮರಳಿನ ತಡೆಗೋಡೆ ನಿರ್ಮಿಸಲು ಎರಡರಿಂದ ಮೂರು ವಾರಗಳೇ ಬೇಕಾ ಗಬಹುದು. ಕಾಮಗಾರಿ ವಿಳಂಬವಾದರೆ ಮತ್ತಷ್ಟು ದಿನಗಳೇ ಆಗಬಹುದು. ಇದರಿಂದ ಮಡಿಕೇರಿ ನಗರಕ್ಕೆ ಕುಡಿಯುವ ನೀರಿನ ಪೂರೈಕೆಯಲ್ಲಿ ಕೊರತೆ ಉಂಟಾಗಲಿದೆ.
ಈಗಾಗಲೇ ನಗರದ ಹಲವು ಬಡಾವಣೆಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದ್ದು, ಮೇ ತಿಂಗಳಿನಲ್ಲಿ ಪರಿಸ್ಥಿತಿ ಮತ್ತಷ್ಟು ತೀವ್ರತೆಯನ್ನು ಪಡೆದುಕೊಳ್ಳಬಹುದು. ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆಯಾಗಲಿದ್ದು, ಜನತೆ ಸಹಕರಿಸಬೇಕೆಂದು ನಗರಸಭಾ ಅಧಿಕಾರಿಗಳು ಮನವಿ ಮಾಡಿದ್ದಾರೆ.
ನಗರಕ್ಕೆ ನೀರು ಪೂರೈಸುವ ಪ್ರಮುಖ ನೀರು ಸಂಗ್ರಹಗಾರ ಕೂಟುಹೊಳೆ ಸಂಪೂರ್ಣ ಬತ್ತಿ ಹೋಗಿದೆ. ಈ ಬಾರಿಯ ಬಿರು ಬೇಸಿಗೆ ಮತ್ತು ಪ್ರಕೃತಿ ಕೋಪದ ಬಳಿಕ ಕುಸಿತವಾದ ಅಂತರ್ಜಲ ಮಟ್ಟದಿಂದ ಕೂಟು ಹೊಳೆಯ ನೀರಿನ ಮೂಲಗಳು ಕ್ಷೀಣಿಸಿವೆ. ಕಳೆದ ಮಳೆಗಾಲದಲ್ಲಿ ಭಾರೀ ಪ್ರಮಾಣದಲ್ಲಿ ಕೆಸರು ಮಿಶ್ರಿತ ನೀರು ಕೂಟುಹೊಳೆಯನ್ನು ಸೇರಿದ್ದು, ಹೂಳು ತುಂಬಿರುವುದರಿಂದ ಜಲಮೂಲ ಬತ್ತಿ ಹೋಗಿದೆ. ಪ್ರಸ್ತುತ 10ರಿಂದ 15 ಅಡಿಯಷ್ಟೇ ನೀರು ನಿಂತಿದ್ದು, ಡೆಡ್ ಸ್ಟೋರೇಜ್ ಪ್ರಮಾಣದಲ್ಲಿರುವ ಈ ನೀರನ್ನು ಕುಡಿಯುವ ಉದ್ದೇಶಕ್ಕೆ ಪಂಪ್ ಮಾಡಲು ಕೂಡ ಸಾಧ್ಯವಿಲ್ಲದಂತಾಗಿದೆ. ಮಳೆನೀರು ಮತ್ತು ಕುಂಡಾಮೇಸ್ತ್ರಿ ಜಲ ಮೂಲದ ನೀರನ್ನೇ ನಂಬಿದ್ದ ಕೂಟುಹೊಳೆ ಇಂದು ಬರಿದಾಗಿದೆ.
ಕುಡಿಯುವ ನೀರಿನ ಉದ್ದೇಶಕ್ಕಾಗಿಯೇ ನಗರಸಭೆಗೆ ಕೋಟಿ, ಕೋಟಿ ಹಣ ಬಂದರೂ ಸದುಪಯೋಗವಾಗುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.
ಶಾಶ್ವತ ಪರಿಹಾರ ಬೇಕು
ಪ್ರತಿವರ್ಷ ಇದೇ ರೀತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮಡಿಕೇರಿ ನಗರವನ್ನು ಕಾಡುತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಶಾಶ್ವತ ಪರಿಹಾರ ಇಲ್ಲಿಯವರೆಗೆ ದೊರೆತ್ತಿಲ್ಲ. ಕನಿಷ್ಟ ಪಕ್ಷ ಕೂಟುಹೊಳೆಯಲ್ಲಿ ತುಂಬಿರುವ ಹೂಳನ್ನು ತೆಗೆಯಲಾದರೂ ಕ್ರಮ ಕೈಗೊಳ್ಳಬಹುದಾಗಿತ್ತು, ಅದನ್ನೂ ಕೂಡ ಮಾಡದ ನಗರಸಭೆ ನಿಷ್ಕ್ರಿàಯವಾಗಿದೆ ಎಂದು ನಾಗರೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.