“ದೇಗುಲ ನಿರ್ಮಾಣದಿಂದ ಗ್ರಾಮಾಭ್ಯುದಯ’
Team Udayavani, Apr 21, 2019, 6:00 AM IST
ಚಂದ್ಕೋರು ದೇವಸ್ಥಾನಕ್ಕೆ ಡಾ| ಡಿ. ವೀರೇಂದ್ರ ಹೆಗ್ಗಡೆ ಕ್ಷೇತ್ರಕ್ಕೆ ಭೇಟಿ ನೀಡಿದರು.
ಬೆಳ್ತಂಗಡಿ: ಚಂದ್ಕೋರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮೇ 8ರಿಂದ 13ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಕಾರ್ಯದ ಪ್ರಯುಕ್ತ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಭೇಟಿ ನೀಡಿದರು.
ಕಾರ್ಯಕಾರಿ ಸಮಿತಿಯವರನ್ನು ಉದ್ದೇಶಿಸಿ ಮಾತನಾಡಿದ ಅವರು, ಚಂದ್ಕೋರಿನಲ್ಲಿ ಉತ್ತಮ ಪರಿಸರದ ಮಧ್ಯೆ ದೇವಿಯ ದೇವಸ್ಥಾನ ನಿರ್ಮಾಣವಾಗುತ್ತಿರುವುದು ಮತ್ತು ಅದಕ್ಕೆ ಊರವರೇ ನೇತೃತ್ವ ವಹಿಸಿರುವುದು ಇಲ್ಲಿನ ಕ್ಷೇತ್ರದ ಸಾನ್ನಿಧ್ಯವಾಗಿದೆ ಎಂದರು.
ಹಲವಾರು ವರ್ಷಗಳ ಹಿಂದೆ ಕಷ್ಟ ಕಾಲದಲ್ಲೂ ದೇವಸ್ಥಾನ ಪ್ರತಿಷ್ಠಾಪಿಸುತ್ತಿದ್ದರು. ಹಿಂದೆ ಪಾರಂಪರಿಕ ಕೃಷಿ ಸಂದರ್ಭದಲ್ಲಿ ನಂಬಿಕೆಯಿಂದಲೇ ದೇವರ ಹರಕೆಹೊತ್ತು ಕೃಷಿ ಚಟುವಟಿಕೆಯನ್ನು ಮಾಡುತ್ತಿದ್ದರು. ಗ್ರಾಮೀಣ ಪ್ರದೇಶದಲ್ಲಿ ಕೃಷಿಯನ್ನು ನಂಬಿಕೊಂಡು ದೇವರನ್ನು ನಂಬುವಂತಹ ಕಾಲವಿತ್ತು. ಸುರ್ಯ ಕ್ಷೇತ್ರದಲ್ಲಿ ಇಂದಿಗೂ ಅದೇ ಪರಂಪರೆಯಾಗಿ ಪ್ರಾಣಿ, ಮನೆ ಇನ್ನಿತರ ವಿಷಯವನ್ನು ನಂಬಿಕೆಯಾಗಿರಿಸಿ ಹರಕೆ ಹೊರುವಂತಹ ಪದ್ಧತಿ ಮತ್ತು ನಂಬಿಕೆ ಇದೆ. ಅದಕ್ಕಾಗಿ ಈ ಕ್ಷೇತ್ರದಲ್ಲಿ ಗ್ರಾಮಸ್ಥರು ಅಚಲವಾದ ನಂಬಿಕೆಯಿಂದ ದೇವಸ್ಥಾನ ನಿರ್ಮಿಸಿದ್ದಾರೆ. ಆದಷ್ಟು ಬೇಗ ಕ್ಷೇತ್ರದ ಕಾಮಗಾರಿ ಮುಗಿದು ಬ್ರಹ್ಮಕಲಶೋತ್ಸವ ಯಶಸ್ವಿಯಾಗಲಿ ಎಂದರು.
ಕ್ಷೇತ್ರದ ಜೀಣೊìàದ್ಧಾರ ಸಮಿತಿ ಅಧ್ಯಕ್ಷ ಧನಂಜಯ ಅಜ್ರಿ, ಪ್ರಧಾನ ಕಾರ್ಯದರ್ಶಿ ಧನಂಜಯ ರಾವ್, ಕಾರ್ಯದರ್ಶಿ ವಸಂತ ಸುವರ್ಣ, ಖಜಾಂಚಿ ಯೋಗೀಶ ಭಿಡೆ, ಸುಭಾಯ ಡೋಂಗ್ರೆ, ಗಿರೀಶ್ ಡೋಂಗ್ರೆ, ಗ್ರಾ. ಯೋಜನೆಯ ತಾ| ಯೋಜನಾಧಿಕಾರಿ ಜಯಕರ್ ಶೆಟ್ಟಿ, ವಿಟ್ಟಲ ಶೆಟ್ಟಿ, ರಾಜೇಶ್ ಶೆಟ್ಟಿ ಲಾೖಲ, ದಯಾನಂದ ಸಾಲ್ಯಾನ್, ಕೃಷ್ಣಪ್ಪ ಪೂಜಾರಿ, ಪ್ರಸಾದ್ ಶೆಟ್ಟಿ ಏಣಿಂಜೆ, ಹಾಗೂ ಊರವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.