ಬಟ್ಟೆ ಮಳಿಗೆಯಲ್ಲಿ ಹಲ್ಲೆ,ದರೋಡೆ:ಐವರಿಗೆ ತಲಾ 7 ವರ್ಷ ಜೈಲು


Team Udayavani, Apr 21, 2019, 6:15 AM IST

Courts-a

ಮಂಗಳೂರು: ನಗರದ ಹಂಪನಕಟ್ಟೆಯ ರೆಡಿಮೇಡ್‌ ಬಟ್ಟೆ ಮಳಿಗೆ ಪೋಲೊ ಸೇಲ್ಸ್‌ನಲ್ಲಿ ನಾಲ್ಕು ವರ್ಷಗಳ ಹಿಂದೆ ಮಾಲಕ ಕನ್ನಯಲಾಲ್‌ ಗುಪ್ತ ಅವರ ನಡೆದ ಹಲ್ಲೆ ಮತ್ತು ದರೋಡೆ ಪ್ರಕರಣದಲ್ಲಿ ಐವ ರಿಗೆ ತಲಾ 7 ವರ್ಷಗಳ ಸಜೆ ಮತ್ತು ದಂಡ ವಿಧಿಸಿ ಮಂಗಳೂರಿನ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಫರಂಗಿಪೇಟೆಯ ಇರ್ಫಾನ್‌ (39) ಮತ್ತು ಮಹಮ್ಮದ್‌ ಮುಶಾ¤ಕ್‌ (30), ಬಿ.ಸಿ.ರೋಡ್‌ ಶಾಂತಿ ಅಂಗಡಿಯ ಸಮೀರ್‌ ಕೆ. ಎಂ. (27), ಬಂಟ್ವಾಳ ತಾಲೂಕು ಪುದು ಗ್ರಾಮದ ಮಹಮದ್‌ ಇರ್ಫಾನ್‌ (35) ಮತ್ತು ಮೇರೆಮಜಲಿನ ದಿಲನ್‌ ಅವಿನಾಶ್‌ ಕಾಡೋìಜಾ (29) ಶಿಕ್ಷೆಗೊಳಗಾದವರು.

ಪ್ರಕರಣದ ವಿವರ
2015 ಮಾ. 13ರಂದು ಸಂಜೆ ಕಾರಿನಲ್ಲಿ ಬಂದ ತಂಡ ಪೋಲೊ ಸೇಲ್ಸ್‌ ಮಳಿಗೆಗೆ ನುಗ್ಗಿ ಅಲ್ಲಿದ್ದ ಕನ್ನಯ ಲಾಲ್‌ ಗುಪ್ತ ಅವರ ಮೇಲೆ ಕಬ್ಬಿಣದ ಪೈಪ್‌ನಿಂದ ಮತ್ತು ಕೈಯಿಂದ ಹಲ್ಲೆ ನಡೆಸಿ, ಲ್ಯಾಪ್‌ಟಾಪನ್ನು ಎಳೆದು ಫುಟ್‌ ಪಾತ್‌ಗೆಸೆದು ಹಾನಿಗೊಳಿಸಿತ್ತು. ಬಳಿಕ ಕಿಸೆಯಲ್ಲಿದ್ದ 2,700 ರೂ. ಮತ್ತು ಡ್ರಾಯರ್‌ನಲ್ಲಿದ್ದ 25,800 ರೂ. ಗಳನ್ನು ದರೋಡೆ ಮಾಡಿತ್ತು ಎಂದು ಆರೋಪಿಸಲಾಗಿತ್ತು. ವ್ಯವಹಾರ ಸಂಬಂಧಿ ದ್ವೇಷ ಇದಕ್ಕೆ ಕಾರಣ ಎಂದು ಬಂದರು ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಐ ಶಾಂತಾರಾಂ ಆರೋಪಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ಕೈಗೆತ್ತಿಕೊಂಡ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲನ ಗೌಡ ಅವರು, ಆರೋ ಪಿ ಗಳ ಮೇಲಿ ನ ಆರೋಪ ಸಾಬೀತಾಗಿದೆ ಎಂಬ ತೀರ್ಮಾನಿಸಿ ಗುರುವಾರ ತೀರ್ಪು ನೀಡಿದರು. ದಂಡ ಮೊತ್ತದಲ್ಲಿ 1 ಲ. ರೂ. ಗಳನ್ನು ದೂರುದಾರ ಕನ್ನಯ ಲಾಲ್‌ಗೆ ನೀಡಬೇಕು. ಸರಕಾರದ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಹರಿಶ್ಚಂದ್ರ ಉದ್ಯಾವರ ವಾದಿಸಿದ್ದರು.

ಶಿಕ್ಷೆ ವಿವರ
ಐಪಿಸಿ ಸೆ.143 (ಅಕ್ರಮ ಪ್ರವೇಶ) ಅನ್ವಯ 7 ದಿನಗಳ ಶಿಕ್ಷೆ ಮತ್ತು ತಲಾ 1 ಸಾ. ರೂ. ದಂಡ. ಐಪಿಸಿ 147 ಮತ್ತು 148 (ದೊಂಬಿ) ಅನ್ವಯ ತಲಾ 1 ತಿಂಗಳ ಸಜೆ ಮತ್ತು 5 ಸಾ. ರೂ. ದಂಡ, ಐಪಿಸಿ 448 (ಅಕ್ರಮ ಕೂಟ) ಅನ್ವಯ 15 ದಿನಗಳ ಶಿಕ್ಷೆ ಮತ್ತು ತಲಾ 1 ಸಾ. ರೂ. ದಂಡ, ಐಪಿಸಿ 323 (ಕೈಯಿಂದ ಹಲ್ಲೆ) ಅನ್ವಯ 15 ದಿನಗಳ ಸಜೆ ಮತ್ತು ತಲಾ 1 ಸಾ. ರೂ. ದಂಡ, ಐಪಿಸಿ 324 (ಕಬ್ಬಿಣದ ಪೈಪ್‌ನಿಂದ ಹಲ್ಲೆ) ಅನ್ವಯ 1 ತಿಂಗಳ ಸಜೆ ಮತ್ತು 5 ಸಾ. ರೂ. ದಂಡ, ಐಪಿಸಿ 427 (ಸೊತ್ತು ನಾಶ) ಅನ್ವಯ 1 ತಿಂಗಳ ಸಜೆ ಮತ್ತು ತಲಾ 1 ಸಾ. ರೂ. ದಂಡ, ಐಪಿಸಿ 395 (ದರೋಡೆ) ಮತ್ತು ಐಪಿಸಿ 397 (ದರೋಡೆ ವೇಳೆ ಹಲ್ಲೆ) ಅನ್ವಯ 7 ವರ್ಷ ಸಜೆ ಮತ್ತು ತಲಾ 10 ಸಾ. ರೂ. ದಂಡ ವಿಧಿಸಲಾಗಿದೆ.

 

ಟಾಪ್ ನ್ಯೂಸ್

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ

1-ree

Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

Ullala-Balepuni

Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ

Kishor-Kodgi-Campco

Mangaluru: ಅಡಿಕೆ ಕ್ಯಾನ್ಸರ್‌ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

AUS vs IND, 1st Test: ಟಿ20 ಯುಗದಲ್ಲಿ ಭಾರತ ನೈಜ ಟೆಸ್ಟ್‌ ಆಟ!

AUS vs IND, 1st Test: ಟಿ20 ಯುಗದಲ್ಲಿ ಭಾರತ ನೈಜ ಟೆಸ್ಟ್‌ ಆಟ!

13

Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

11

Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.