ಮೋದಿ ವೆಬ್ ಸರಣಿ ಪ್ರಸಾರಕ್ಕೆ ಚುನಾವಣಾ ಆಯೋಗ ತಡೆ
Team Udayavani, Apr 21, 2019, 6:00 AM IST
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಬಾಲಿವುಡ್ ನಟ ಸನ್ನಿ ಡಿಯೋಲ್, ದಿಲ್ಲಿಯಲ್ಲಿ ಶುಕ್ರವಾರ ಭೇಟಿಯಾಗಿ ಮಾತುಕತೆ ನಡೆಸಿದರು
ಪ್ರಧಾನಿ ನರೇಂದ್ರ ಮೋದಿಯವರ ಜೀವನಾಧಾರಿತ ವೆಬ್ ಸರಣಿಯಾದ “ಮೋದಿ- ಜರ್ನಿ ಆಫ್ ಎ ಕಾಮನ್ ಮ್ಯಾನ್’ನ ಪ್ರಸಾರ ನಿಲ್ಲಿಸುವಂತೆ ಕೇಂದ್ರ ಚುನಾವಣಾ ಆಯೋಗ, ಸರಣಿಯ ನಿರ್ಮಾಣ ಸಂಸ್ಥೆಯಾದ ಈರೋಸ್ ನೌಗೆ ಆದೇಶಿಸಿದೆ. ತನ್ನ ಮುಂದಿನ ಆದೇಶದವರೆಗೂ ಪ್ರಸಾರ ತಡೆ ಹಿಡಿಯಬೇಕೆಂದು ತಾಕೀತು ಮಾಡಿದೆ.
ಲೋಕಸಭಾ ಚುನಾವಣೆ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ. ಇತ್ತೀಚೆಗೆ, ಈ ಸರಣಿಯ ಟ್ರೈಲರ್ ವೀಕ್ಷಿಸಿದ ಅನಂತರ ಆಯೋಗ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ. ಟ್ರೈಲರ್‌ನಲ್ಲಿ ಮೋದಿಯವರ ಜೀವನದ ಎಲ್ಲಾ ಘಟ್ಟಗಳನ್ನೂ ಚಿತ್ರಿಸಲಾಗಿದ್ದು, ಸಾಮಾನ್ಯ ಬಾಲಕನೊಬ್ಬ ರಾಷ್ಟ್ರನಾಯಕನಾದ ಕಥಾಹಂದರವಿದೆ. ಈ ಹಿನ್ನೆಲೆಯಲ್ಲಿ ವೆಬ್ ಸರಣಿಯ ಪ್ರಸಾರಕ್ಕೆ ತಡೆ ವಿಧಿಸಲಾಗಿದೆ ಎಂದು ಹೇಳಲಾಗಿದೆ.
ಸನ್ನಿ ಡಿಯೋಲ್ ಬಿಜೆಪಿಗೆ?
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಬಾಲಿವುಡ್ ನಟ ಸನ್ನಿ ಡಿಯೋಲ್, ದಿಲ್ಲಿಯಲ್ಲಿ ಶುಕ್ರವಾರ ಭೇಟಿಯಾಗಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಪಿಸುಪಿಸು ಮಾತುಗಳಿಗೆ ನಾಂದಿ ಹಾಡಿದೆ. ಹಾಲಿ ಲೋಕಸಭಾ ಚುನಾವಣೆಗಾಗಿ ಪಂಜಾಬ್‌ನ ಮೂರು ಕ್ಷೇತ್ರಗಳಿಗೆ (ಅಮೃತಸರ, ಗುರುದಾಸ್‌ಪುರ ಮತ್ತು ಹೋಶಿಯಾಪುರ್) ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಿಸಿಲ್ಲ. ಸೂಕ್ತ ಅಭ್ಯರ್ಥಿಗಳಿಗಾಗಿ ಬಿಜೆಪಿ ಹುಡುಕಾಟ ನಡೆಸುತ್ತಿದೆ. ಹಾಗಾಗಿ, ಅಮಿತ್ ಶಾ ಅವರು, ಸನ್ನಿ ಡಿಯೋಲ್ ಅವರನ್ನು ಅಮೃತಸರದಿಂದ ಕಣಕ್ಕಿಳಿಸಲು ಪ್ರಯತ್ನಿಸಿರಬಹುದೇ ಎಂಬ ಕುತೂಹಲ ಎದ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.