ಡಹಾಣೂವಿನ ಪ್ರಸಿದ್ಧ ಶ್ರೀ ಮಹಾಲಕ್ಷ್ಮೀ ಜಾತ್ರೆಗೆ ಚಾಲನೆ
Team Udayavani, Apr 21, 2019, 12:27 PM IST
ಮುಂಬಯಿ: ಡಹಾಣೂವಿನ ಪ್ರಸಿದ್ಧ ಶ್ರೀ ಮಹಾಲಕ್ಷ್ಮೀ ಮಂದಿರದಲ್ಲಿ ವಾರ್ಷಿಕ ಜಾತ್ರೋತ್ಸವವು ಎ. 19ರಂದು ಪ್ರಾರಂಭಗೊಂಡಿದೆ. ಮುಂಬಯಿ- ಅಹಮದಾಬಾದ್ ಹೈವೇ ಪಕ್ಕದ ಚಾರೋಟಿ ನಾಕಾದ ಸಮೀಪದಲ್ಲಿರುವ ಈ ಮಂದಿರದಲ್ಲಿ ಚೈತ್ರ ಪೂರ್ಣಿಮೆಯ ಹನುಮಾನ್ ಜಯಂತಿಯಂದು ಉತ್ಸವವು ಆರಂಭ ಗೊಂಡು ಹದಿನೈದು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ.
ಸ್ಥಳೀಯ ಆದಿವಾಸಿಗಳ ಕುಲದೇವರೆಂದೇ ಪ್ರಸಿದ್ಧಿಯಲ್ಲಿರುವ ಆಯಿ ಮಾತಾ ದೇವಿಯ ಈ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆದಿವಾಸಿಗಳು ಹಾಗೂ ಪಕ್ಕದ ಹಳ್ಳಿಗಳಿಂದ ಜನರು ಆಗಮಿಸಿ ಉತ್ಸವದಲ್ಲಿ ದೊರೆಯುವ ವಿಶೇಷ ಹುಳಿ, ಒಣಗಿದ ಹಣ್ಣು, ಪಾತ್ರೆಗಳು ಹಾಗೂ ಒಣಮೀನು ಇನ್ನಿತರ ಅಗತ್ಯ ವಸ್ತುಗಳನ್ನು ಖರೀದಿಸಲು ಮುಗಿಬೀಳುತ್ತಾರೆ.
ಸಾಮಾನ್ಯವಾಗಿ ಜಾತ್ರೆಯೊಂದರಲ್ಲಿರುವ ವೈವಿಧ್ಯಮಯ ಸ್ಟಾಲ್‌ಗಳು, ಮನೋರಂಜನಾ ಮಳಿಗೆಗಳು ಇಲ್ಲಿ ಕಾಣ ಸಿಗುತ್ತವೆ. ನಗರದ ದೂರದ ಪ್ರದೇಶಗಳಿಂದ ಭಕ್ತಾದಿಗಳು, ಮಕ್ಕಳು ಕಾಲ್ನಡಿಗೆಯಲ್ಲೇ ಮಂದಿರಕ್ಕೆ ಅಗಮಿಸುವ ಭಕ್ತಾದಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಮಂದಿರದ ಆವರಣದಲ್ಲಿ ಭಕ್ತಾದಿಗಳಿಗೆ ಅಗತ್ಯವಿರುವ ವಿದ್ಯುತ್, ನೀರು ಹಾಗೂ ಸುರಕ್ಷಾ ಕ್ರಮಗಳನ್ನು ಒದಗಿಸಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ಡಹಾಣೂ ತಾಲೂಕು ಪ್ರಾಂತಾಧಿಕಾರಿ ಸೌರಭ್ ಕಟಿಮಾರ್ ಹಾಗೂ ಡಹಾಣೂವಿನ ತಹಶೀಲ್ದಾರ್ ರಾಹುಲ್ ಸಾರಂಗ್ ಅವರು ತಿಳಿಸಿದ್ದಾರೆ.
ಗ್ರಾಮ ಪಂಚಾಯತ್ ಹಾಗೂ ಮಂದಿರದ ಟ್ರಸ್ಟ್ ವತಿಯಿಂದ ಯಾತ್ರಾರ್ಥಿಗಳಿಗೆ ಮೂರು ರೋಲಿಂಗ್ ಶೆಡ್, ದರ್ಶನಾ ಕಾಂಕ್ಷಿಗಳ ಸುವ್ಯವಸ್ಥೆಗೋಸ್ಕರ 60 ಸುರಕ್ಷಾ ರಕ್ಷಕರು, 20 ಸ್ವಯಂ ಸೇವಕರು ಹಾಗೂ 15 ಸ್ವತ್ಛತಾ ಕರ್ಮಚಾರಿಗಳನ್ನು ನಿಯೋಜಿಸಲಾಗಿದೆ. ಅಲ್ಲದೆ ಭದ್ರತೆಯ ದೃಷ್ಟಿಯಿಂದ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.