ಹೆಗ್ಗಡೆ ಸೇವಾ ಸಂಘ ಮುಂಬಯಿ: ವಾರ್ಷಿಕ ಶ್ರೀ ಹನುಮಾನ್ ಜಯಂತಿ ಉತ್ಸವ
Team Udayavani, Apr 21, 2019, 4:39 PM IST
ನವಿಮುಂಬಯಿ: ನಗರದ ಪ್ರತಿಷ್ಠಿತ ಜಾತೀಯ ಸಂಸ್ಥೆಯಲ್ಲೊಂದಾದ ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ಆಶ್ರಯದಲ್ಲಿ ಎ. 19 ಅಪರಾಹ್ನ 3ರಿಂದ ಐರೋಲಿಯ ಸೆಕ್ಟರ್ 15ರ ಗುರುದ್ವಾರದ ಸಮೀಪವಿರುವ ಹೆಗ್ಗಡೆ ಭವನದ ಸಭಾಂಗಣದಲ್ಲಿ ಸಮಾಜದ ಕುಲದೇವರಾದ ಶ್ರೀ ಹನುಮಾನ್ ಜಯಂತಿ ಮಹೋತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಅಪರಾಹ್ನ 3ರಿಂದ ದೇವತಾ ಪ್ರಾರ್ಥನೆ ಮತ್ತು ಕಲಶ ಪ್ರತಿಷ್ಠೆ, ಅಪರಾಹ್ನ 3.30ಕ್ಕೆ ಶ್ರೀ ಶನೀಶ್ವರ ಭಜನಾ ಮಂಡಳಿ ನೆರೂಲ್ ಇವರ ಬಳಗದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ 5ರಿಂದ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ನೆರವೇರಿತು. ಹೆಗ್ಗಡೆ ಸೇವಾ ಸಂಘದ ಸಂತೋಷ್ ಹೆಗ್ಡೆ ಮತ್ತು ಪ್ರಮೀಳಾ ಎಸ್. ಹೆಗ್ಡೆ ದಂಪತಿ ವಿವಿಧ ಪೂಜಾ ಕೈಂಕರ್ಯಗಳ ಯಜಮಾನತÌವನ್ನು ವಹಿಸಿ ಸಹಕರಿಸಿದರು.
ಪುರೋಹಿತ ರಮಾಕಾಂತ್ ಕುಂಜರಾಯ ಅವರ ಪೌರೋಹಿ ತ್ಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಗ್ಗಡೆ ಸೇವಾ ಸಂಘದ ವತಿಯಿಂದ ಅಧ್ಯಕ್ಷ ವಿಜಯ್ ಬಿ. ಹೆಗ್ಡೆ, ಗೌರವಾಧ್ಯಕ್ಷ ಸಂಜೀವ ಪಿ. ಹೆಗ್ಡೆ, ಉಪಾಧ್ಯಕ್ಷ ಸುರೇಶ್ ಎಸ್. ಹೆಗ್ಡೆ, ಗೌರವ ಪ್ರಧಾನ ಕಾರ್ಯದರ್ಶಿ ಶಂಕರ್ ಆರ್. ಹೆಗ್ಡೆ, ಕೋಶಾಧಿಕಾರಿ ರಮೇಶ್ ಎಂ. ಹೆಗ್ಡೆ, ಜೊತೆ ಕಾರ್ಯದರ್ಶಿ ರವಿ ಎಸ್. ಹೆಗ್ಡೆ, ಜೊತೆ ಕೋಶಾಧಿಕಾರಿ ಚಂದ್ರಶೇಖರ್ ಬಿ. ಹೆಗ್ಡೆ ಮತ್ತು ಆಡಳಿತ ಮಂಡಳಿ ಸದಸ್ಯರು ಮಹಿಳಾ ವಿಭಾಗದವರು, ಯುವ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿತು.
ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷ ಡಾ| ಸುರೇಂದ್ರ ಕುಮಾರ್ ಹೆಗ್ಡೆ, ಐರೋಲಿ ತುಳುಕೂಟದ ಅಧ್ಯಕ್ಷ ಕೆ. ಕೆ. ಹೆಬ್ಟಾರ್ ಅವರು ಉಪಸ್ಥಿತರಿದ್ದರು. ರಂಗಕರ್ಮಿ ಅನಿಲ್ ಕುಮಾರ್ ಹೆಗ್ಡೆ ಅವರಿಂದ ಶೃಂಗರಿಸಲ್ಪಟ್ಟ ದೇವರ ಮಂಟಪ ಭಕ್ತಾದಿಗಳನ್ನು ಆಕರ್ಷಿಸಿತು. ಹೆಗ್ಗಡೆ ಸೇವಾ ಸಂಘದ ಮಾಜಿ ಅಧ್ಯಕ್ಷರುಗಳಾದ ವಿ. ಎಸ್. ಹೆಗ್ಡೆ ಮತ್ತು ರತ್ನಾಕರ ಹೆಗ್ಡೆ ಅವರು ಉಪಸ್ಥಿತರಿದ್ದರು.
ಸಂಜೆ 5.30ರಿಂದ ರಾತ್ರಿ 8ರ ವರೆಗೆ ತವರೂರ ಬಹುಮುಖ ಪ್ರತಿಭಾನ್ವಿತ, ನಾಮಾಂಕಿತ ಕಲಾವಿದ, ಹರಿದಾಸ ಪುಷ್ಕಲ್ ಕುಮಾರ್ ತೋನ್ಸೆ ಇವರಿಂದ ಮತ್ತು ಬಳಗದ ಸದಸ್ಯರ ಕೂಡುವಿಕೆಯಲ್ಲಿ ಸೀತಾ-ಸ್ವಯಂವರ ಹರಿಕಥಾಮೃತ ಪ್ರಸ್ತುತಗೊಂಡಿತು. ಕಾರ್ಯಕ್ರಮದ ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಇದೇ ವೇಳೆ ಮಹಿಳಾ ವಿಭಾಗದವರ ಆಶ್ರಯದಲ್ಲಿ ಉಮಾ ಕೆ. ಶೆಟ್ಟಿ ಅವರ ನೇತೃತ್ವದ ವೈಶಾಲಿ ಸಿಲ್ಕ್ ಸಾರಿ ಇವರ ದಕ್ಷಿಣ ಭಾರತೀಯ ಸೀರೆಗಳ ಮಾರಾಟ ಮತ್ತು ಪ್ರದರ್ಶನ ಕಾರ್ಯಕ್ರಮ ಜರಗಿತು. ಬೆಳಗ್ಗೆ 11ರಿಂದ ರಾತ್ರಿ 9ರ ವರೆಗೆ ಈ ಸೀರೆಗಳ ಮಾರಾಟ ಮತ್ತು ಪ್ರದರ್ಶನವು ಜರಗಿದ್ದು, ದಕ್ಷಿಣ ಭಾರತೀಯ ಸಿಲ್ಕ… ಸೀರೆಗಳು, ಡ್ರೆಸ್‌ಪೀಸ್‌ಗಳು, ಕಾಂಜೀವರಂ ಸಿಲ್ಕ್, ಕಾಟನ್ ಇನ್ನಿತರ ಸೀರೆಗಳನ್ನು ಪ್ರದರ್ಶನ ಮತ್ತು ಮಾರಾಟದಲ್ಲಿ ಇಡಲಾಗಿತ್ತು.
ಸಂಘದ ಆಶ್ರಯದಲ್ಲಿ ಜರಗಿದ ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಮಹಿಳಾ ವಿಭಾಗದವರ ಸಂಪೂರ್ಣ ಮುಂದಾಳತ್ವದಲ್ಲಿ ನಡೆದ ಸೀರೆಗಳ ಮಾರಾಟ ಮತ್ತು ಪ್ರದರ್ಶನ ಕಾರ್ಯಕ್ರಮದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು, ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಸಮಾಜ ಬಾಂಧವರಲ್ಲದೆ, ಸ್ಥಳೀಯ ವಿವಿಧ ಜಾತೀಯ, ಕನ್ನಡಪರ ಹಾಗೂ ಧಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಪ್ರತಿನಿಧಿಗಳು, ಮಹಿಳಾ ವಿಭಾಗದವರು, ಸ್ಥಳೀಯ ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ದಾನಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Manada Kadalu: ಯುವ ಜೋಡಿಗಳ ʼಮನದ ಕಡಲುʼ; ಮತ್ತೆ ಒಂದಾದ ಮುಂಗಾರು ಮಳೆ ಟೀಂ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.