ಎಲೆಕ್ಷನ್‌ ರಿಟರ್ನ್ಸ್


Team Udayavani, Apr 22, 2019, 6:00 AM IST

Isiri-Election-Returns

ದೇಶದಲ್ಲಿ ಒಂದು ಹಂತದ ಚುನಾವಣೆ ಮುಗಿದಿದೆ. ಹೂಡಿಕೆದಾರರು ಷೇರಿನ ಮೇಲೆ ಹಣ ಹಾಕಬೇಕೋ ಬೇಡವೋ ಅಂತ ಯೋಚಿಸುತ್ತಿದ್ದಾರೆ. ಇವರಿಗೆ ಒಂದೇ ಸರ್ಕಾರ ಬಂದರೆ ಖುಷಿ. ಕಿಚಡಿಯಾದರೆ ಮಾರ್ಕೆಟ್‌ ಎದ್ದೇಳಲು ತಿಂಗಳುಗಳ ಕಾಲಬೇಕು ಅನ್ನೋ ಲೆಕ್ಕಾಚಾರ. ಹೀಗೆ, ಜನತಂತ್ರ ಹಬ್ಬದ ನೆಪದಲ್ಲಿ ಹಣದ ಹೊಳೆ ಹರಿಯುತ್ತದೆ. ಇದು ಪ್ರತ್ಯಕ್ಷ$ವಾಗಿ ದೇಶದ ಆರ್ಥಿಕತೆ ಮೇಲೆ ಪ್ರಭಾವ ಬೀರಿದರೆ, ಪ್ರಣಾಳಿಕೆ, ಪಕ್ಷಗಳು ಇದಕ್ಕೆ ಹೊಂದಿಕೊಂಡಂತಿರುವ ಕಂಪನಿಗಳ ವ್ಯಾಪಾರ-ವ್ಯವಹಾರದ ಮೇಲೂ ಪರೋಕ್ಷವಾಗಿ ಪರಿಣಾಮ ಬೀರುತ್ತವೆ. ಅದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ…

ಚುನಾವಣೆ ಎಂದರೆ ಪ್ರಜಾಪ್ರಭುತ್ವ ಹಬ್ಬವಷ್ಟೇ ಅಲ್ಲ, ಅದು ಸಾರ್ವಜನಿಕರ ಹಕ್ಕು ಪ್ರದರ್ಶನವೂ ಹೌದು. ತಮ್ಮ ಅಧಿಕಾರವನ್ನು ಚುನಾಯಿತ ಪ್ರತಿನಿಧಿಗಳಿಗೆ ನೀಡುವ ಸಂದರ್ಭವದು. ಈ ಅಧಿಕಾರವನ್ನು ಮಾರಿಕೊಳ್ಳುವ ಅಧಿಕಾರ ಮತದಾರನಿಗಿಲ್ಲ. ಆದರೂ, ಪ್ರಾಮಾಣಿಕ, ನ್ಯಾಯಸಮ್ಮತ ಮತದಾನ ನಡೆಯುವ ಕಾಲ ಇದಲ್ಲ ಎಂಬುದು ಜನಜನಿತವಾದ ವಿಷಯ. ದೇಶದಲ್ಲಿ ಈಗಾಗಲೇ ಒಂದು ಹಂತದ ಚುನಾವಣೆ ಮುಗಿದಿದೆ. ಈ ಸಂದರ್ಭದಲ್ಲಿ ಹೊರಬರುವ ಕಪ್ಪು ಹಣ ಬಿಳಿಯಾಗುತ್ತದೆ ಹಾಗೂ ಹಣದ ಹರಿವು ಹೇರಳವಾಗಿ ದೇಶದ ಆರ್ಥಿಕತೆಯಲ್ಲಿ ಸ್ವಲ್ಪವಾದರೂ ತಲ್ಲಣವನ್ನು ಸೃಷ್ಟಿಸುತ್ತದೆ ಎನ್ನುವ ಲೆಕ್ಕಚಾರ ನಡೆಯುತ್ತಿದೆ. ಚುನಾವಣೆಯ ಇತಿಹಾಸ ಕೆದಕಿ ನೋಡಿದರೆ ಇದು ಸತ್ಯ ಎನಿಸುತ್ತದೆ.

ರಾಷ್ಟ್ರೀಯ ಚುನಾವಣೆಗಳು ಆರ್ಥಿಕ ಕ್ಷೇತ್ರದ ಮೇಲೆ ನೇರ ಪರಿಣಾಮ ಬೀರುತ್ತವೆ. ಇದರಿಂದ ಶೇರು ಮಾರುಕಟ್ಟೆಯಲ್ಲಿ ಚಂಚಲತೆ ಸೃಷ್ಟಿಯಾಗುತ್ತದೆ. ವಿವಿಧ ಕಂಪನಿಗಳ ಷೇರುಗಳ ಏರಿಳಿತ, ಐಟಿ, ಅಬಕಾರಿ, ವಿದೇಶಿ ಬಂಡವಾಳ, ಆಮದು-ರಫ್ತು, ವಿದೇಶಿ ವ್ಯಾಪಾರ, ಸೆನ್ಸೆಕ್ಸ್‌ಗಳ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ, ಕೇಂದ್ರದಲ್ಲಿ ಯಾವ ಸರ್ಕಾರ ಬರುತ್ತದೆ, ಫ‌ಲಿತಾಂಶದ ದಿನ ಏನೆಲ್ಲ ಆಗಬಹುದು ಅನ್ನೋ ಲೆಕ್ಕಾಚಾರದ ಮೇಲೆಯೇ ಷೇರುಪೇಟೆಯಲ್ಲಿ ಕರಡಿ ಕುಣಿತ ಶುರುವಾಗುವುದು. ಸಮ್ಮಿಶ್ರ ಸರ್ಕಾರಗಳು ಬಂದರೆ ಹೂಡಿಕೆ ದಾರರಿಗೆ ಅಪಥ್ಯ.

ಶೇರು ಸೂಚ್ಯಂಕದಲ್ಲಿ ಚಂಚಲತೆ
1977ರ ನಂತರ ಲೋಕಸಭಾ ಚುನಾವಣೆಗಳಲ್ಲಿ ಹಲವು ಪಕ್ಷ ಸ್ಪರ್ಧೆಯಲ್ಲಿವೆ. 2004 ನಿಂದ 2014 ವರೆಗೆ ನಿರಂತರ ಅಧಿಕಾರ ನಡೆಸಿದ ಕಾಂಗ್ರೆಸ್‌ 2014ರಲ್ಲಿ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಿತು. ಈ ವೇಳೆಯಲ್ಲಿ ಮಾರುಕಟ್ಟೆಯಲ್ಲಿ ಚಂಚಲತೆ ತೀವ್ರವಾಗಿತ್ತು. ಶೇ. 4ರಿಂದ 8 ರಷ್ಟು ಬಿದ್ದ ಉದಾಹರಣೆ ಇದೆ. 2019ರಲ್ಲಿಯೂ ಇದರ ತೀವ್ರತೆ ಕಾಣಬಹುದು. ಮತದಾನದ ದಿನ ಶುರುವಾಗುವ ಒಂದು ತಿಂಗಳು ಮೊದಲೇ ನಿಪ್ಟಿಯಲ್ಲಿ(ನ್ಯಾಷನಲ್ ಸ್ಟಾಕ್‌ ಎಕ್ಸ್ ಚೆಂಜ್ ಫಿಪ್ಟಿ) ಸೂಚ್ಯಂಕವು ವೇಗ ಪಡೆಯುತ್ತದೆ. ಹೊಸ ಲೋಕಸಭೆ ಪ್ರಾರಂಭದ ನೂರು ದಿನಗಳು ಅಥವಾ ಸುಮಾರು 5.5 ತಿಂಗಳು ಮಾರುಕಟ್ಟೆಯ ವ್ಯಾಪಾರ ವಹಿವಾಟುಗಳು ಕಡಿಮೆ ಭಾವನಾತ್ಮಕ ನಡುವಳಿಕೆ ಹೊಂದಿರುತ್ತವೆ.

ಇದರ ಬಳಿಕ ಸಹಜ ಸ್ಥಿತಿಗೆ ತಲುಪುತ್ತದೆ. ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿ ಷೇರು ವ್ಯವಹಾರ ಸೂಕ್ತವಲ್ಲ ಎನ್ನುತ್ತಾರೆ ತಜ್ಞರು. 2014ರಲ್ಲಿ ಎನ್‌ಡಿಎ ಶಕ್ತಿಯುತ ಪ್ರದರ್ಶನದಿಂದ ಅಭಿಪ್ರಾಯ ಸಂಗ್ರಹದಲ್ಲಿಯೂ ಉತ್ತಮ ಪ್ರದರ್ಶನ ಕಂಡಿತು. ಕೇಂದ್ರ ಒಕ್ಕೂಟದಲ್ಲಿ ಭಾಗವಹಿಸುವಿಕೆ, ಜತೆಗೆ 7ಪಿಪಿಟಿ (ಪ್ಲಂಜ್‌ ಪ್ರೊಟೆಕ್ಷನ್‌ ಟೀಮ್‌)ಉತ್ತಮ ಆಯ್ಕೆಯಿತ್ತು. ಚುನಾವಣೆ ಫ‌ಲಿತಾಂಶ ಬಂದು 6 ತಿಂಗಳ ಕಾಲ ಆರ್ಥಿಕವಾಗಿ ಬದಲಾವಣೆ ಪ್ರಕ್ರಿಯೆನ್ನು ತಂದ ಎನ್‌ಡಿಎ ಏಕೀಕರಣ, ಹಣದುಬ್ಬರ, ಗುರಿಗಳನ್ನು ಸಾಧಿಸಲು 7ರಿಂದ 9 ಪಿಪಿಟಿಯನ್ನು ಬೆಳೆಸಿಕೊಂಡು ಉತ್ತಮ ನಿರ್ವಹಣೆ ಸಾಧಿಸಿತು.

ಅಲ್ಲದೇ, ಚುನಾವಣೆಯಿಂದ ಚುನಾವಣೆಗೆ ಸೆನ್ಸೆಕ್ಸ್‌ನ ಏರಿಕೆ-ಇಳಿಕೆ ಅಂಕಗಳ ಆಧಾರದ ಮೇಲೆ ಆರ್ಥಿಕ ಬೆಳವಣಿಗೆಯನ್ನು ಗುರುತು ಮಾಡುತ್ತಾರೆ. ಯಾವ ಪಕ್ಷ ಅಧಿಕಾರಕ್ಕೆ ಬಂದರೆ, ಆರ್ಥಿಕ ಪ್ರಗತಿ ಸಾಧ್ಯ ಎಂಬುದನ್ನೂ ಮೊದಲೇ ತಜ್ಞರು ಊಹಿಸುವುದುಂಟು. ಇನ್ನು ಷೇರು ಮಾರುಕಟ್ಟೆಯಲ್ಲಿ ಚಂಚಲತೆ ತೀವ್ರವಾದಾಗ ಹೂಡಿಕೆ ಮಾಡಬಾರದು ಎಂಬುದು ಷೇರು ಹೂಡಿಕೆಯ ಪ್ರಾಥಮಿಕ ಜ್ಞಾನ. ಹೀಗಾಗಿಯೇ, ಈ ಸಲದ ಲೋಕಸಭೆ ಚುನಾವಣೆ ಫ‌ಲಿತಾಂಶದ ದಿನ ಷೇರು ಪೇಟೆಯಲ್ಲಿ ಉಂಟಾಗುವ ಕರಡಿ ಕುಣಿತದ ಬಗ್ಗೆ ಎಲ್ಲರಿಗೂ ಕುತೂಹಲವಿದೆ.

ವಿದೇಶಿ ಹೂಡಿಕೆ
ಜಾಗತೀಕರಣದಿಂದಾಗಿ ವಿದೇಶಿ ಬಂಡವಾಳ ದೇಶಕ್ಕೆ ಹರಿದು ಬರುತ್ತಿದೆ. ಆದರೆ, ಹೂಡಿಕೆ ಮಾಡಲು ಆಯಾ ದೇಶದ ಆರ್ಥಿಕ ನಿಯಮಗಳನ್ನು ಅನುಸರಿಸುವುದು ಮುಖ್ಯವಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಸರ್ಕಾರ ಯಾವುದೇ ವ್ಯವಹಾರದಲ್ಲಿ ಭಾಗವಹಿಸುವುದಿಲ್ಲ. ಹೀಗಾಗಿ ಹೂಡಿಕೆ ಅಸಾಧ್ಯ.

ಯಾವುದೇ ಒಂದು ವಿದೇಶಿ ಕಂಪನಿ ಭಾರತದಲ್ಲಿ ಹೂಡಿಕೆ ಮಾಡಬೇಕು ಅಂದುಕೊಂಡಿದ್ದರೂ ಸ್ವಲ್ಪಕಾಲದ ನಂತರ ಮಾಡೋಣವೆಂದು ಹಿಂಜರಿಯುತ್ತವೆ. ಕಾರಣ ಇಷ್ಟೇ, ಚುನಾವಣೆ ಬಳಿಕ ಯಾವ ರಾಷ್ಟ್ರೀಯ ಪಕ್ಷ ಅಧಿಕಾರ ಪಡೆಯುತ್ತದೆ. ಅದರಿಂದ ನಮ್ಮ ಬಂಡವಾಳ ಹೂಡಿಕೆಗೆ ಅನುಕೂಲವೇ, ಪ್ರತಿಕೂಲವೇ ಎಂಬುದನ್ನು ಊಹಿಸುತ್ತವೆ. ಇನ್ನೂ ಕೆಲವು ವೇಳೆ ಚುನಾವಣೆ ಬಳಿಕ ಅಧಿಕಾರ ಪಡೆದ ಪಕ್ಷಗಳು ವಿದೇಶಿ ಬಂಡವಾಳ ಹೂಡಲು ಆಹ್ವಾನ ನೀಡುವುದುಂಟು. ಪ್ರಧಾನಿ ಮೋದಿ 2014 ರಲ್ಲಿ ಅಧಿಕಾರ ಸ್ವೀಕಾರದ ಬಳಿಕ ಅನೇಕ ವಿದೇಶಿ ವ್ಯವಹಾರಗಳಿಗೆ ಸಹಿ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

ಸಹಾಯ ಹಸ್ತ
ಸಾರ್ವತ್ರಿಕ ಚುನಾವಣೆಗಳಿಗೆ ಠೇವಣಿ ಇಡುವುದು, ಪ್ರಚಾರದ ಖರ್ಚು ವೆಚ್ಚಗಳಿಗೆ ಸಂಬಂಧಿಸಿದಂತೆ ಪಕ್ಷಗಳಲ್ಲಿ ಫ‌ಂಡ್‌ ಅಂತಲೇ ಇರುತ್ತದೆ. ಕೆಲವೇಳೆ ಪ್ರಭಾವಿ ಅಭ್ಯರ್ಥಿಯೇ ವೆಚ್ಚಗಳನ್ನು ಸರಿದೂಗಿಸುವ ಪರಿಪಾಠವೂ ಇದೆ. ಈ ಫ‌ಂಡ್‌ ಹೇಗೆ ಪಕ್ಷದ ಖಜಾನೆ ತಂಬುತ್ತದೆ ಎಂದರೆ, ಪಕ್ಷಗಳನ್ನು ಬೆಂಬಲಿತ ಕಂಪನಿಗಳು, ಪಕ್ಷಗಳಿಗೆ ಆರ್ಥಿಕ ಸಹಾಯಹಸ್ತ ನೀಡುವುದುಂಟು. ಇದನ್ನು ದೇಣಿಗೆ ರೂಪದಲ್ಲೂ ಕೊಡಬಹುದು. ಬಹುತೇಕ ಪಕ್ಷಗಳು ಹೆಚ್ಚಿರುವ ಹಣಕ್ಕೆ ದೇಣಿಗೆ ಮುಖವಾಡ ಹಾಕುತ್ತದೆ.

ರಾಷ್ಟ್ರೀಯ ಪಕ್ಷವೊಂದು ತನ್ನ ಅಧಿಕಾರ ಬಳಕೆಯಿಂದ ಒಂದು ಕಂಪನಿ ವ್ಯವಹಾರಗಳಿಗೆ ಅನುಕೂಲಕರ ವಾಗುವಂಥ ವಾತಾವರಣವನ್ನು ಸೃಷ್ಟಿಸುತ್ತದೆ ಎನ್ನುವುದಾದರೆ, ಅಂತಹ ಕಂಪನಿ ತಾನಾಗಿಯೇ ಚುನಾವಣೆಯ ವೇಳೆ ಪಕ್ಷದ ಬೆಂಬಲಕ್ಕೆ ನಿಲ್ಲುತ್ತದೆ. ಅಧಿಕಾರ ಪಡೆದ ಪಕ್ಷ ದೇಶದ ಅಭಿವೃದ್ಧಿಯ ಜೊತೆಗೆ ಅಂತಹ ಕಾರ್ಪೊರೇಟ… ವಲಯಕ್ಕೆ ಅನುಕೂಲವಾಗುತ್ತದೆ ಎಂಬುದು ಕಂಪನಿಯ ನಂಬಿಕೆ. ಜೊತೆಗೆ, ಬೇರೆ ಪಕ್ಷ ಅಧಿಕಾರಕ್ಕೆ ಬಂದರೆ ತೊಂದರೆಯಾಗಬಹುದೆಂಬ ಎಚ್ಚರಿಕೆಯೂ ಇದರ ಹಿಂದಿದೆ.

ಚುನಾವಣಾ ನೀತಿ ಸಂಹಿತೆ ಜಾರಿ ಆರ್ಥಿಕತೆಯ ಮೇಲೆ ಪರೋಕ್ಷ ಪರಿಣಾಮ ಬೀರುತ್ತದೆ. ಯಾವುದೇ ಯೋಜನೆಗಳು ಜಾರಿಯಾಗುವುದಿಲ್ಲ. ದೊಡ್ಡಮಟ್ಟದ ಹಣಕಾಸು ವ್ಯವಹಾರ ನಡೆಯುವುದಿಲ್ಲ. ಆದರೆ, ಈ ಸಮಯದಲ್ಲಿ ಅಕ್ರಮವಾಗಿ ಹರಿದಾಡುವ ಹಣದ ಮೇಲೆ ಹಿಡಿತ ಸಾಧನೆಯಾಗುತ್ತದೆ. ಇದು ಮುಂದೆ ಸರ್ಕಾರ ನಡೆಸುವ ಪಕ್ಷಕ್ಕೆ ಅನುಕೂಲವಾಗುತ್ತದೆ.

ನೀತಿ ಸಂಹಿತೆ ಜಾರಿಯಾದ ಬಳಿಕ ಚುನಾವಣಾ ಆಯೋಗದ ಮೂಲಕ ಚೆಕೆಪೋಸ್ಟ್ ಗಳನ್ನು ರಚನೆ ಮಾಡಿ, ತಪಾಸಣೆ ನಡೆಸಿ ದಾಖಲೆಯಿಲ್ಲದ ಹಣ, ಮದ್ಯ, ಚಿನ್ನಾಭರಣ ಸೇರಿದಂತೆ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯುತ್ತಾರೆ. ಹೀಗೆ ಸಂಗ್ರಹವಾದ ಹಣ ಸರ್ಕಾರದ ಖಜಾನೆ ಸೇರುತ್ತದೆ. 2014ರ ಲೋಕಸಭಾ ಚುನಾವಣೆಯಲ್ಲಿ 300 ಕೋಟಿ ರೂ. ನಗದು ಹಾಗೂ 1.61 ಕೋಟಿ ಲೀಟರ್‌ ನಷ್ಟು ಮದ್ಯ, 17 ಸಾವಿರ ಕೆ.ಜಿ ಯಷ್ಟು ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿತ್ತು. ಇನ್ನು 2019ರಲ್ಲಿ ವಶಪಡಿಸಿಕೊಂಡಿರುವ ಹಣ, ಮದ್ಯ, ಮಾದಕ ವಸ್ತುಗಳ ಮೊತ್ತ 2,500 ಕೋಟಿ ರೂ. ಮೀರುತ್ತಿದೆ.

ಕಪ್ಪು ಹಣದ ಹರಿವು
ಚುನಾವಣೆಯಲ್ಲಿ ಕಪ್ಪುಹಣದ ಹರಿವು ಏರುಗತಿಯಲ್ಲಿರುತ್ತದೆ ಎಂಬುದು ಆರ್ಥಿಕ ತಜ್ಞರ ಅಭಿಮತ. ಇದಕ್ಕೊಂದು ಚಿಕ್ಕ ಲೆಕ್ಕಾಚಾರವನ್ನೂ ಅವರು ಸೂಚಿಸುತ್ತಾರೆ. ಭಾರತದಲ್ಲಿ ಒಟ್ಟು 29 ಗಣರಾಜ್ಯಗಳಿವೆ. ಇದು 709 ಜಿಲ್ಲೆಗಳಾಗಿ ವಿಂಗಡನೆಗೊಂಡಿದೆ. ಅದರಲ್ಲಿ ಸುಮಾರು 5400 ತಹಶೀಲ್/ತಾಲೂಕು/ ಬ್ಲಾಕ್‌ಗಳಾಗಿ ವಿಂಗಡನೆಯಾಗಿವೆ. ಮತ್ತೆ ಈ ತಾಲೂಕುಗಳು ಆರು ಲಕ್ಷ$ ಗ್ರಾಮ ಅಥವಾ ಹಳ್ಳಿಗಳಾಗಿ ವಿಭಜನೆಗೊಂಡಿವೆ. ಅಲ್ಲದೆ ಕೇಂದ್ರಾಡಳಿತ ಪ್ರದೇಶಗಳೂ ಇವೆ.

ಇದರಲ್ಲಿ 10 ಹಳ್ಳಿಗೆ ಒಂದು ಎಂಬಂತೆ ನಿರ್ಧರಿಸಿದರೂ ಒಂದು ಪ್ರಭಾವಿ ಪಕ್ಷ ಸುಮಾರು ಒಂದು ಲಕ್ಷ ಪಕ್ಷದ ಕಚೇರಿಗಳನ್ನು ತೆರೆಯಬೇಕಾಗುತ್ತದೆ. ಅದರ ನಿರ್ವಹಣೆ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಅಭ್ಯರ್ಥಿಯ ಹೊಣೆ. ದೇಶದಲ್ಲಿ ಒಂದೇ ರಾಜಕೀಯ ಪಕ್ಷವಿಲ್ಲದ ಕಾರಣ, ರಾಷ್ಟ್ರೀಯ, ಸ್ಥಳೀಯ ಪಕ್ಷಗಳ ಕಚೇರಿಗಳೂ ಇರುತ್ತವೆ. ರಾಷ್ಟ್ರ, ರಾಜ್ಯದಲ್ಲಿ ಎಂಎಲ…ಎ, ಎಂಪಿ ಸೀಟ… ಆಕಾಂಕ್ಷಿಗಳಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಪಕ್ಷಕ್ಕೆ ನೀಡುವ ಮತ್ತು ಪಡೆಯುವ ಫ‌ಂಡ್‌, ಪ್ರಚಾರಕ್ಕೆ ಬಳಸುವ ವಾಹನ ವ್ಯವಸ್ಥೆ, ಬೆಂಬಲಿಗರ ಕ್ಷೇಮ, ನೀತಿ ಸಂಹಿತೆಗೆ ಸಿಲುಕದಂತೆ ಕಾರ್ಯ ಕರ್ತರ ಮೂಲಕ ಮತದಾರರಿಗೆ ತಲುಪಿಸುವ ಉಡುಗೊರೆ, ಆಹಾರ, ಮದ್ಯ, ಹಣ, ಇತರೆ ಸೌಕರ್ಯಗಳು ಸೇರಿದಂತೆ ಆಗುವ ಖರ್ಚು ಸಾವಿರಾರು ಕೋಟಿಯನ್ನು ಮುಟ್ಟುತ್ತದೆ.

ಖಾಸಗಿ ಕಂಪನಿಯೊಂದು ನಡೆಸಿದ ಸರ್ವೆ ಪ್ರಕಾರ 2014ರ ಲೋಕಸಭಾ ಚುನಾವಣೆಗೆ ಆದ ಒಟ್ಟು ಖರ್ಚು 30 ಸಾವಿರ ಕೋಟಿಯಂತೆ. 2019ರ ಚುನಾವಣೆಯಲ್ಲಿ ಇದು ಮತ್ತಷ್ಟು ಹೆಚ್ಚಾಗಿದೆ ಎಂಬುದು ನಿರ್ವಿವಾದ.

ಆರ್ಥಿಕತೆ ಬದಲಾವಣೆ
ಚುನಾವಣೆಯ ಬಳಿಕ ಅಧಿಕಾರಕ್ಕೆ ಬರುವ ಪಕ್ಷ, ಆರ್ಥಿಕ ನಿಯಮಾವಳಿಗಳ ಮೇಲೆ ಪ್ರಭಾವ ಬೀರುತ್ತದೆ. ಜೊತೆಗೆ ದೇಶದ ಜಿಡಿಪಿ ಅಥವಾ ಪರ್‌ ಕ್ಯಾಪಿಟಲ್ ಇನ್‌ಕಮ್ ಅನ್ನು ಸರಿದೂಗಿಸಲು ಯತ್ನಿಸುತ್ತದೆ. ದೇಶದ ಆದಾಯ 2 ಸಾವಿರ ಕೋಟಿ ಎಂದು ಅಂದಾಜಿಸಿದರೆ ಅದರಲ್ಲಿ 1,500 ಕೋಟಿ ಕೆಲವೇ ಜನರ ಬಳಿ ಇದ್ದರೆ ಅದು ದೇಶದ ಜನರ ತಲಾದಾಯವನ್ನು ವೃದ್ಧಿಸುವುದಿಲ್ಲ. ಹೀಗಾಗಿ, ಹೊಸ ಆರ್ಥಿಕ ನಿಯಮಗಳನ್ನು ಜಾರಿ ಮಾಡಿ ಆ ಹಣ ಹೊರಬರುವಂತೆ ಮಾಡಿ ದೇಶವನ್ನು ಆರ್ಥಿಕ ಸುಭದ್ರತೆಯನ್ನು ಸಾಧಿಸುವುದು ಸರ್ಕಾರದ ಕರ್ತವ್ಯ.

ಚುನಾವಣೆಗಳು ವಿದೇಶಿ ವ್ಯಾಪಾರ ಸಂಬಂಧವನ್ನು ಹೆಚ್ಚಿಸುತ್ತವೆ ಹಾಗೂ ಕಡಿಮೆ ಮಾಡುತ್ತವೆ. ಒಂದು ಪಕ್ಷ$ ಅಧಿಕಾರ ಹಿಡಿದ ಬಳಿಕ ಐದು ವರ್ಷದಲ್ಲಿ ಯಾವ ಯಾವ ದೇಶದೊಂದಿಗೆ ವ್ಯಾಪಾರ ಸಂಬಂಧ ಹೊಂದಿರುತ್ತದೆಯೋ ಅದು ಮರು ಚುನಾವಣೆ ಬಳಿಕ ಗಣನೀಯವಾಗಿ ಏರಬಹುದು ಅಥವಾ ಇಳಿಯಬಹುದು. ಮರುಚುನಾವಣೆ ಬಳಿಕ ಅಧಿಕಾರ ಹಿಡಿದ ಪಕ್ಷ$ ಯಾವ ರಾಷ್ಟ್ರದೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಿದೆ ಎಂಬುದನ್ನು ನಿರ್ಧರಿಸುತ್ತದೆ. ಪ್ರಸ್ತುತ ಆಡಳಿತದಲ್ಲಿರುವ ಬಿಜೆಪಿಗೆ ಯೂರೋಪಿಯನ್‌ ಒಕ್ಕೂಟ ರಾಷ್ಟ್ರಗಳ ಬಗ್ಗೆ ಒಲವು ಹೆಚ್ಚು. ಇಲ್ಲಿ ಹೆಚ್ಚು ವ್ಯಾಪಾರ ಸಂಬಂಧವನ್ನು ಹೊಂದಲು ಇಚ್ಚಿಸುತ್ತದೆ. ಹೀಗಾಗಿಯೇ, ಈ ಹಿಂದೆ ಕಾಂಗ್ರೆಸ್‌ ಚೀನಾದೊಂದಿಗೆ ಹೊಂದಿದ್ದ ಸಂಬಂಧವನ್ನು ಬಿಜೆಪಿ ಗಣನೀಯವಾಗಿ ಕಡಿಮೆ ಮಾಡಿಕೊಂಡು, ಅನೇಕ ದೇಶಗಳೊಂದಿಗೆ ವ್ಯಾಪಾರ ಸಂಬಂಧವನ್ನು ವೃದ್ಧಿಸಿಕೊಂಡಿದೆ.

ಬ್ರೇಕಪ್‌ ಹೂಡಿಕೆಯಷ್ಟೇ ದುಬಾರಿ
ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಅಂತಾರೆ. ಇವರ ಮದುವೆ ನರಕದಲ್ಲಿ ನಿಶ್ಚಯವಾಯಿತೋ ಏನೋ? ಏಕೆಂದರೆ, ಜಗತ್ತಿನ ಅತಿ ಶ್ರೀಮಂತ ಹೂಡಿಕೆದಾರರ ಬ್ರೇಕಪ್‌ಗ್ಳು ಭಾರೀ ದುಬಾರಿ. ಅಮೇಜಾನ್‌ನ ಸಿ.ಇ.ಓ ಜೆಫ್ ಬೀಜೋನ್‌ ತನ್ನ ಹೆಂಡತಿಗೆ ಡೈವರ್ಸ್‌ ಕೊಟ್ಟಿದ್ದಕ್ಕೆ 35 ಬಿಲಿಯನ್‌ ಡಾಲರ್‌ ತೆತ್ತಿದ್ದಾರಂತೆ ಅಂತ ಒಂದು ಮೂಲ ಹೇಳಿದರೆ ಇನ್ನೊಂದು ಮೂಲ, ಬರೀ 35 ಬಿಲಿಯನ್‌ ಅಲ್ಲ ಅದರ ಪಕ್ಕ ಒಂದು ಸೇರಿಸಿಕೊಂಡು 135ಬಿಲಿಯಲ್‌ ಡಾಲರ್‌ ಅಂತ ಹೇಳಿಕೊಳ್ಳಿ ಎನ್ನುತ್ತಿದೆ.

ಇದೇ ರೀತಿ, ಪ್ರಪಂಚದ ದೊಡ್ಡ ಹೆಸರು ಮಾಡಿದ್ದ ಪೆಸಿಫಿಕ್‌ ಮ್ಯಾನೇಜ್‌ಮೆಂಟ್‌ ಕಂಪನಿ ಮಾಲೀಕ ಬಿಲ್‌ ಕೂಡ ಇದೇ ಹಾದಿಯಲ್ಲಿ ನಿಂತಿದ್ದವರೇ. ಬಿಲಿಯನ್‌ ಗಟ್ಟಲೆ ಹಣ ಸಂಪಾದಿಸಿ ಆರ್ಥಿಕ ಜಗತ್ತು ಹುಬ್ಬೇರಿಸುವಂತೆ ಮಾಡಿದರೂ, ಹೆಂಡತಿಯನ್ನು ಇಟ್ಟುಕೊಳ್ಳಲು ಆಗಲಿಲ್ಲ. 32 ವರ್ಷ ಬಾಳಿ ಬದುಕಿದವರು 2016ರಲ್ಲಿ ಇಬ್ಬರ ಸಾಂಸಾರಿಕ ಜೀವನದಿಂದ ಹೊರಬಂದಾಗ ಹೆಂಡತಿಗೆ 1.3 ಬಿಲಿಯನ್‌ ಮೊತ್ತ ಪಾವತಿಸಬೇಕಾಯಿತಂತೆ. ಒಂದು ಕಾಲದಲ್ಲಿ ಫಾರ್ಮುಲ ಒನ್‌ ಕಂಪನಿ ಬಾಸ್‌ ಆಗಿದ್ದ ಬರ್ನಿ ಎಕ್ಲಿಸ್ಟೋನ್‌ ಎಂಬ ಬ್ಯೂಸಿನೆಸ್‌ ಮ್ಯಾಗ್ನೆಟ್‌ ಹೆಂಡತಿಯಿಂದ ದೂರವಾದಾಗ 1.2 ಬಿಲಿಯನ್‌ ಡಾಲರ್‌ಗೆ ಸೆಟ್ಲಮೆಂಟ್‌ ಆಗಿತ್ತಂತೆ. ನಮ್ಮಲ್ಲಿ ಡಾಲರ್‌ ಕೊಟ್ಟು ಮದುವೆಯಾಗ್ತಾರೆ. ಇವರು ಡಾಲರ್‌ ಕೊಟ್ಟು ದೂರ ಆಗ್ತಾರೆ. ಮದುವೆ­ಗಿಂತ ಡೈವರ್ಶೇ ದುಬಾರಿ.

— ಎನ್‌. ಅನಂತನಾಗ್‌

ಟಾಪ್ ನ್ಯೂಸ್

Photo of female commando with Modi goes viral: Was it real?

Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್:‌ ಏನಿದರ ಅಸಲೀಯತ್ತು?

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Sandalwood: ತೆರೆಮೇಲೆ ʼಅನಾಥʼನ ಕನಸು

Sandalwood: ತೆರೆಮೇಲೆ ʼಅನಾಥʼನ ಕನಸು

Photo of female commando with Modi goes viral: Was it real?

Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್:‌ ಏನಿದರ ಅಸಲೀಯತ್ತು?

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

SPB: ತಿರುವಳ್ಳೂರ್ ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣ

SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.