ವರ್ಷವಾದರೂ ವಿತರಿಸಿಲ್ಲ ಮಣ್ಣು ಪರೀಕ್ಷೆ ಪ್ರಮಾಣ ಪತ್ರ
Team Udayavani, Apr 22, 2019, 3:00 AM IST
ಚನ್ನರಾಯಪಟ್ಟಣ: ತಾಲೂಕಿನಲ್ಲಿ 1.15 ಲಕ್ಷ ಮಂದಿ ರೈತರ ಕೃಷಿ ಭೂಮಿಯ ಮಣ್ಣು ಪರೀಕ್ಷೆ ಮಾಡಿ ಎರಡು ವರ್ಷ ಕಳೆದಿದ್ದರು ಮಣ್ಣು ಪರೀಕ್ಷೆಯ ಪ್ರಮಾಣ ಪತ್ರ ರೈತರ ಕೈ ಸೇರದೆ ಕೃಷಿ ಇಲಾಖೆ ಮತ್ತು ರೈತ ಸಂಪರ್ಕ ಕೇಂದ್ರದಲ್ಲಿ ಮಣ್ಣು ಮಣ್ಣು ಪಾಲಾಗುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಕೇಂದ್ರದ ಯೋಜನೆ ರಾಜ್ಯದಲ್ಲಿ ಮಣ್ಣು ಪಾಲು.
ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ಮೇಲೆ ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ, ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯ ಈ ಎರಡೂ ಕೇಂದ್ರದ ಸರ್ಕಾರದ ಇಲಾಖೆಗಳು ಹೆಚ್ಚು ಕಾರ್ಯಪ್ರವೃತ್ತರಾಗಿ ಕಿಸಾನ್‌ದಾರರ ಪಾಲಿಗೆ ವರವಾಗಿ ಪರಿಣಮಿಸಿವೆ.ರೈತರು ಅನಗತ್ಯವಾಗಿ ರಸಗೊಬ್ಬರ ಹಾಕುವ ಮೂಲಕ ಕೃಷಿ ಭೂಮಿಯನ್ನು ವಿಷವನ್ನಾಗಿ ಮಾಡುತ್ತಿರುವುದ ಗಮನಿಸಿದ ಮೋದಿ ಸರ್ಕಾರ ಕೃಷಿ ಭೂಮಿ ಮಣ್ಣು ಪರೀಕ್ಷೆಗೆ ಮುಂದಾಗಿತ್ತು.
ಮಣ್ಣು ಪರೀಕ್ಷೆ ಉಚಿತ: ಕೇಂದ್ರವು ಸಾವಿರಾರು ಕೋಟಿ ರೂ. ವೆಚ್ಚ ಮಾಡಿ ಕೃಷಿಕರ ಬಾಳಿಗೆ ಬೆಳಕಾಗುವ ಉದ್ದೇಶದಿಂದ ಸಂಪೂರ್ಣ ಉಚಿತವಾಗಿ ಕೃಷಿ ಭೂಮಿಯ ಮಣ್ಣನ್ನು ಪರೀಕ್ಷೆ ಮಾಡಿ ಅಗತ್ಯವಾಗಿರುವ ಜೈವಿಕ ಗೊಬ್ಬರವನ್ನು ವ್ಯವಸಾಯಕ್ಕೆ ಬಳಸಲು ಮಾರ್ಗದರ್ಶನ ನೀಡುವ ಉದ್ದೇಶದಿಂದ ರೈತರ ಮನೆ ಬಾಗಿಲಿಗೆ ಮಣ್ಣು ಪರೀಕ್ಷೆ ಪ್ರಮಾಣ ಪತ್ರವನ್ನು ನೀಡಲು ಮುಂದಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ಅಧಿಕಾರಿಗಳ ಸೋಮಾರಿತನ ಹಾಗೂ ರಾಜ್ಯ ಸರ್ಕಾರದ ಬೇಜವಾಬ್ದಾರಿ ಯಿಂದ ಕೇಂದ್ರ ಸರ್ಕಾರ ರೈತರಿಗಾಗಿ ಜಾರಿ ಮಾಡುವ ಯೋಜನೆಗಳು ಸಮರ್ಪಕವಾಗಿ ಕೃಷಿಕರಿಗೆ ತಲುಪುತ್ತಿಲ್ಲ. ಚುನಾವಣೆ ವೇಳೆ ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆ ಜಾರಿಯಾಗಿ ರೈತರ ಖಾತೆಗೆ ಹಣ ಜಮವಾದರೆ ತಮಗೆ ನಷ್ಟ ಎಂಬುದ ಮನಗಂಡಿರುವ ಮೈತ್ರಿ ಸರ್ಕಾರ ಮಂದಗತಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ ಎನ್ನುವ ಮಾತುಗಳು ಬಿಜೆಪಿ ವಲಯದಿಂದ ಕೇಳಿ ಬರುತ್ತಿವಾಗಲೇ ಮಣ್ಣು ಪರೀಕ್ಷೆ ಪ್ರಮಾಣ ಪತ್ರವನ್ನು ಎರಡು ವರ್ಷದಿಂದ ರೈತರಿಗೆ ಯಾಕೆ ನೀಡಿಲ್ಲ ಎಂಬ ಪ್ರಶ್ನೆಗಳು ಉದ್ಬವಾಗುತ್ತಿವೆ.
ಪರೀಕ್ಷೆ ವಿವರ: ಮಣ್ಣು ಆರೋಗ್ಯ ಅಭಿಯಾನದಲ್ಲಿ ಕೃಷಿ ಭೂಮಿಯ ಫಲವತ್ತತೆಯನ್ನು ಪರೀಕ್ಷಿಸುವ ದೃಷ್ಟಿಯಿಂದ ತಾಲೂಕಿನ 25 ಎಕರೆ ಪ್ರದೇಶಕ್ಕೆ ಒಂದರಂತೆ 7,00 ಕಡೆ 1.98 ಲಕ್ಷ ಎಕರೆ ಕೃಷಿ ಭೂಮಿಯಲ್ಲಿ ಮಣ್ಣಿನ ಮಾದರಿ ಸಂಗ್ರಹಿಸಿ ಮಣ್ಣು ಪರೀಕ್ಷೆ ನಡೆಸಲಾಗಿದೆ. ಆದರೂ ಈ ವರರೆಗೂ ಮಣ್ಣು ಪರೀಕ್ಷೆ ಚೀಟಿ ರೈತರಿಗೆ ತಲುಪದೇ ಇರುವುದರಿಂದ ಅವೈಜ್ಞಾನಿಕವಾಗಿ ಕೃಷಿಗೆ ರಸಾಯನಿಕ ಗೊಬ್ಬರ ಬಳಕೆ ಮಾಡುತ್ತಿದ್ದಾರೆ.
ಆರು ಹೋಬಳಿಯಲ್ಲಿ ಅಭಿಯಾನ: ರೈತರು ಕೃಷಿಗೆ ಅನಗತ್ಯವಾಗಿ ರಾಸಾಯನಿಕ ಗೊಬ್ಬರ ಹಾಕುವುದನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಣ್ಣು ಪರೀಕ್ಷೆಗೆ ಮುಂದಾಗಿದ್ದು ಮಣ್ಣು ಆರೋಗ್ಯ ಅಭಿಯಾನದಿಂದ ತಾಲೂಕಿನ ಆರು ಹೋಬಳಿಯಲ್ಲಿ ಅಭಿಯಾನ ನಡೆಸಿ ಕೃಷಿಕರಿಗೆ ಜಾಗೃತಿ ಮೂಡಿಸಿದ್ದರು. ಪ್ರಮಾಣ ಪತ್ರ ಸಕಾಲಕ್ಕೆ ತಲುಪದೇ ಇರುವುದರಿಂದ ಯೋಜನೆ ಮಣ್ಣು ಪಾಲಾಗಿದೆ.
ಮುಂಗಾರು ಪ್ರಾರಂಭಕ್ಕೆ ಮುನ್ನ ನೀಡಿ: ಈಗಾಗಲೇ 2 ವರ್ಷದಿಂದ ಮಣ್ಣು ಪರೀಕ್ಷೆ ಚೀಟಿಯನ್ನು ರೈತರಿಗೆ ತಲುಪಿಲ್ಲ. ಈ ವರ್ಷ ಮುಂಗಾರು ಪ್ರಾರಂಭಕ್ಕೆ ಮುನ್ನವಾದರೂ ರೈತರ ಕೈ ತಲುಪಿದರೆ ಬೆಳೆಗಳಿಗೆ ಅಗತ್ಯವಿರುವವ ಗೊಬ್ಬರ ಹಾಕುಲು ರೈತರು ಮುಂದಾಗುತ್ತಾರೆ. ಇಲ್ಲವಾದಲ್ಲಿ ಕೃಷಿ ಔಷಧಿ ಅಂಗಡಿ ಹಾಗೂ ರಾಸಾಯನಿಕ ಗೊಬ್ಬರ ಮಾರಾಟಗಾರರ ಮಾತಿಗೆ ಮರುಳಾಗಿ ಅನವಶ್ಯಕವಾಗಿ ರಾಸಾಯನಿಕ ಗೊಬ್ಬರ ಹಾಗೂ ಔಷಧಿಯನ್ನು ಹೆಚ್ಚು ಸಿಂಪಡಿಸುತ್ತಾರೆ.
ಕೃಷಿ ಇಲಾಖೆಗೆ ಮಣ್ಣು ಪರೀಕ್ಷೆ ಚೀಟಿ ಕೇಂದ್ರದಿಂದ ಬಂದಿವೆ. ಅವುಗಳನ್ನು ಹೋಬಳಿವಾರು ಖಾತೆದಾರರ ಹೆಸರಿನಂತೆ ವಿಂಗಡಣೆ ಮಾಡಿ ರೈತ ಸಂಪರ್ಕ ಕೇಂದ್ರಕ್ಕೆ ನೀಡಲಾಗಿದೆ. ಅಲ್ಲಿಂದ ಹಳ್ಳಿಗಳಿಗೆ ತಲುಪಿಸಬೇಕು ತಲುಪದೆ ಇದ್ದರೆ ಕೂಡಲೇ ತಲುಪಿಸುವ ಕಾರ್ಯ ಮಾಡಲಾಗುತ್ತದೆ.
-ಗುರುಸಿದ್ದಪ್ಪ, ಸಹಾಯಕ ಕೃಷಿ ನಿರ್ದೇಶಕ.
* ಶಾಮಸುಂದರ್ ಕೆ. ಅಣ್ಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.