ಬದುಕು ಒಂದು ಪಾಠಶಾಲೆ
Team Udayavani, Apr 22, 2019, 6:00 AM IST
ಹನಿ ಮಳೆಯ ತುಂತುರಿನಲ್ಲಿ ಮೈಮರೆವ ಮಕ್ಕಳ ಮುಗ್ಧ ಹೃದಯವಿದ್ದಲ್ಲಿ ಬದುಕಿನ ಪ್ರತಿ ಕ್ಷಣದ ಆನಂದವೂ ಅವರ್ಣನೀಯ.
ಬದುಕಿನ ನಿರಂತರ ಪಥದಲ್ಲಿ ನಾವೆ ಲ್ಲರೂ ಬೊಂಬೆಗಳು. ಬೊಂಬೆಗಳಿಗೆ ಜೀವ ತುಂಬಿದರೆ ಹೇಗಾಗುತ್ತದೆ ಎಂಬುದಕ್ಕೆ ಶ್ರೀಮಂತ ಉದಾಹರಣೆ ಮಾನವ ಜನ್ಮ. ಮನುಷ್ಯನಲ್ಲಿ ಅಷ್ಟೆ„ಶ್ವರ್ಯ, ಆಸ್ತಿಪಾಸ್ತಿ, ಘನತೆ, ಗೌರವ ಎಲ್ಲವಿದ್ದರೂ ಕೊನೆಗೊಂದು ದಿನ ಯಾವುದೋ ಒಂದು ರೀತಿಯಲ್ಲಿ ಅವನಿಗೆ ನಿರಾಸೆ ಮೂಡುವುದೂ ಇದೆ.
ಅತಿರೇಕಕ್ಕೆ ಹೋಗದಿರಲಿ
“ಜೀವನ’ ಎಂಬುದು ಮೂರಕ್ಷರದ ಪದವಾದರೂ ಅದುವೇ ನಮ್ಮನ್ನು ಪುಳಕಗೊಳ್ಳುವಂತೆ ಮಾಡುತ್ತದೆ. ನಮ್ಮ ಬದುಕಿನುದ್ದಕ್ಕೂ ಅಸಾಧ್ಯ ವಾದುದನ್ನು ತಲುಪಬೇಕು ಎಂಬ ಹಂಬಲವಿರಬೇಕು ನಿಜ, ಆದರೆ ಅದು ಅತಿರೇಕಕ್ಕೆ ಹೋಗಿ ಜೀವನ ಹಾಳು ಮಾಡಿಕೊಂಡಿರುವಂತಾಗಬಾರದು.
ಒಳಿತು ಕೆಡುಕಿನ ಬಗ್ಗೆ ತಿಳಿಯಿರಿ
ಬದುಕು ಹಲವು ಮುಖಗಳನ್ನು ಹೊಂದಿದ ಕ್ರಿಯೆ. ಜೈವಿಕ ಜಗತ್ತಿನ ವ್ಯಾಪಾರ, ಹುಟ್ಟು, ಸಾವು ಇವುಗಳ ನಡುವೆ ಜೀವಿಗಳ ಅಭಿವೃದ್ಧಿ ಮತ್ತು ಹೋರಾಟ ಪ್ರಕ್ರಿಯೆ ಸಾಗುತ್ತದೆ. ಕೆಲವೊಂದು ಬಾರಿ ತೀರಾ ಕಲ್ಪನೆಗೆ ಒಳಪಟ್ಟು ಪ್ರಪಂಚ ಸುಂದರವಾಗಿ ಕಾಣುವುದು ಸಹಜ. ಆದರೆ ಅದೇ ಪ್ರಪಂಚ ಜೀವನದುದ್ದಕ್ಕೂ ನಾವು ಯಾವ ರೀತಿ ಸಮಾಜದಲ್ಲಿ ಬದುಕು ಸಾಗಿಸಬೇಕು ಎಂಬು ದನ್ನೂ ತಿಳಿಸುತ್ತದೆ. ಇವೆಲ್ಲ ನಮಗೆ ಗೋಚರವಾ ಗುವುದು ಪ್ರಪಂಚದ ಒಳಿತು, ಕೆಡುಕುಗಳ ಬಗ್ಗೆ ತಿಳಿದುಕೊಂಡಾಗ ಮಾತ್ರ.
ಸಾಧನೆಗೆ ಪ್ರತಿಫಲದ ಸಮ್ಮಾನ
ಜನನ- ಮರಣಗಳ ನಡುವಿನ ಜೀವನದಲ್ಲಿ ನೋವು, ನಲಿವೆಂಬ ಮುಳ್ಳುಗಳ ದಾರಿಯಿದೆ. ಅದರಿಂದ ಸಾಗಲು ಸಾಧ್ಯವಿಲ್ಲ ಎಂದು ನಾವು ಕೈಕಟ್ಟಿ ಕುಳಿತರೆ ನಮ್ಮಿಂದ ಯಾವ ಕೆಲಸವೂ ನಡೆಯಲು ಸಾಧ್ಯವಿಲ್ಲ. ಹೂವಿನ ಹಾಸಿಗೆ ನಮ್ಮದಾಗುವ ತನಕ ಪ್ರಯತ್ನಪಟ್ಟು, ಶ್ರಮ ವಹಿಸಿ, ಅದೇ ದಾರಿಯಲ್ಲಿ ನಡೆದರೆ ಅದರಿಂದಾಗುವ ಖುಷಿ ಲೆಕ್ಕಾಚಾರಕ್ಕೆ ಸಿಗದು, ಜತೆಗೆ ಈ ಸಾಧನೆಗೆ ಪ್ರತಿಫಲದ ಸಮ್ಮಾನವೂ ಸಿಗುತ್ತದೆ.
ಕಷ್ಟ, ಸುಖಗಳಿಂದ ಬದುಕು ಹಸನು
ಕತ್ತಲು- ಬೆಳಕು ಎಂಬ ಜೋಡೆತ್ತುಗಳು ಜಗತ್ತಿನ ಬಂಡಿಯನ್ನು ಜೀಕಿದಂತೆ ಕಷ್ಟ ಮತ್ತು ಸುಖ ನಮ್ಮ ಬದುಕನ್ನು ಹಸನುಗೊಳಿಸುತ್ತದೆ. ಬಡವರಿರಲಿ, ಶ್ರೀಮಂತರಿರಲಿ ಸುಖ, ದುಃಖ ಎರಡನ್ನೂ ಅನುಭವಿಸಲೇಬೇಕು. ಕೆಲವು ಬಾರಿ ಶ್ರೀಮಂತರು ದುಃಖೀಗಳಾಗಬಹುದು, ಬಡವರು ಸುಖೀಗಳಾಗಬಹುದು. ಒಟ್ಟಿನಲ್ಲಿ ಸುಖ, ದುಃಖಗಳ ಅನುಭವ ಬಂಧ ಯಾರನ್ನೂ ಬಿಟ್ಟಿಲ್ಲ. ಇಲ್ಲಿ ನಾವು ಮಾಡಬೇಕಾದುದೇನೆಂದರೆ ದುಃಖದ ಅಂಶವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಸುಖದ ಅಂಶವನ್ನು ಹೆಚ್ಚಿಸಬೇಕು.
ಬದುಕೆಂಬುದು ಉದ್ಯಾನವನ
ಬದುಕು ಸುಂದರ ಉದ್ಯಾನವನದ ಹಾಗೆ. ಇಲ್ಲಿ ವಾತ್ಸಲ್ಯ, ಕರುಣೆ, ಪ್ರೀತಿ, ದಯೆ, ಸಮಾಧಾನ, ಶಾಂತಿ ಮುಂತಾದ ಗಿಡಗಳಿವೆ. ಅದನ್ನು ನಾವು ನೀರು, ಗೊಬ್ಬರ ಹಾಕಿ ಪೋಷಿಸಬೇಕು. ಮನೆ ಸುಂದರವಾಗಿದ್ದರೆ ಸಾಲದು, ಕಾಣದ ಮನಸ್ಸು, ಮಾಡುವ ಯೋಚನೆಗಳು ವಿಶಾಲವಾಗಿರಬೇಕು. ಹಣವಿದ್ದರೆ ಫಲವಿಲ್ಲ, ಗುಣವಿದ್ದರೆ ಮಾತ್ರ ಪಡೆದ ಜನ್ಮ ಸಾರ್ಥಕ. ಒಪ್ಪೊತ್ತಿಗೆ ಕಷ್ಟ ಪಡುವ ಕೂಲಿಯವನು ಪ್ರೀತಿ ಎಂಬ ಪ್ರಕಾಶದಿಂದ ಬೆಳಗುವ ಜ್ಞಾನ ಹೊಂದಿದ್ದರೆ ಸಾಕು. ಹಣದೊಂದಿಗೆ ಅಂಟಿಕೊಂಡಿರುವ ದುರಂಹಕಾರ ನಮ್ಮನ್ನು ತಾಕದಂತೆ ಓಡಿಸಬೇಕು.
ಪ್ರಯೋಗ ನಿರಂತರವಾಗಿರಲಿ
ನಮ್ಮಲ್ಲಿ ಆರಂಭವಾಗುವ ಭ್ರಮೆಗಳು ಅನುಭವ ಆದಂತೆಲ್ಲ ಕಡಿಮೆ ಆಗುತ್ತವೆ. ಬದುಕಿಗೆ ಪ್ರೇರಣೆ ಬಹಳ ಮುಖ್ಯ. ಪರಿವರ್ತನೆಯ ಪರ ಧ್ವನಿ ಎತ್ತಿದವರಿಗೆ ನಿಂದನೆ ಸಾಮಾನ್ಯ.
ಆದರೆ ಪ್ರಯೋಗಗಳು ಮಾತ್ರ ನಿರಂತರವಾಗಿರಬೇಕು.
ಮಾನವ ಏಕಾಂಗಿಯಲ್ಲ
ಅರಿಸ್ಟಾಟಲ್ ಹೇಳಿದಂತೆ ಮಾನವ ಸಂಘಜೀವಿ. ಅವನು ಏಕಾಂಗಿಯಾಗಿ ಸಮಾಜದಲ್ಲಿ ಬದುಕಲಾರ. ಇತರರೊಡನೆ ಉತ್ತಮ ಬಾಂಧವ್ಯ ಹೊಂದಿದ್ದರೆ ಮಾತ್ರ ಅವನ ಜೀವನ ಸಾಗುತ್ತದೆ. “ಬದುಕು ಜಟಕಾಬಂಡಿ, ವಿಧಿ ಅದರ ಸಾಹೇಬ’ ಎಂಬಂತೆ ಜೀವನ ನಮ್ಮನ್ನು ರೂಪಿಸಬಾರದು, ನಾವು ಜೀವನವನ್ನು ರೂಪಿಸಬೇಕು. ಇದನ್ನು ತಿಳಿದುಕೊಂಡಾಗ ಮಾತ್ರ ನಮ್ಮ ಅಭಿವೃದ್ಧಿ ಸಾಧ್ಯ.
ಪ್ರಯತ್ನದ ಫಲ
ಮನುಷ್ಯ ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡಿರಬೇಕು. ಅಂದರೆ ಮುಂದೆ ನಾನು ಹೀಗಾಗಬೇಕು ಅನ್ನುವ ಗಟ್ಟಿ ನಿಶ್ಚಯ ಮನಸ್ಸಿನಲ್ಲಿ ಇದ್ದರೆ ಏನನ್ನಾದರೂ ಸಾಧಿಸಬಹುದು. ಗುರಿ ಇಟ್ಟುಕೊಳ್ಳುವುದರ ಜತೆಗೆ ಪ್ರಯತ್ನವೂ ಇರಬೇಕು. ಪ್ರಯತ್ನವಿದ್ದರೆ ಫಲ ದೊರಕುತ್ತದೆ. ಹೀಗೆ ಪ್ರಯತ್ನಪಟ್ಟು ಸಾಧಿಸಿದವರಲ್ಲಿ ಕುರುಡ ಡೇವಿಡ್‌ಮನ್‌ನೂ ಒಬ್ಬ.
– ಜಯಾನಂದ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.