ಪಯಸ್ವಿನಿ ಒಡಲಿಗೆ ರಬ್ಬರ್‌ ಫ್ಯಾಕ್ಟರಿ ವಸತಿಗೃಹದ ತ್ಯಾಜ್ಯ!

ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮದ ಆತಂಕ

Team Udayavani, Apr 22, 2019, 6:13 AM IST

2104SLKP1

ಸುಳ್ಯ: ಒಂದೆಡೆ ಬರದಿಂದ ಪಯಸ್ವಿನಿ ಹನಿ ನೀರಿನ ಹರಿವಿಗೂ ಪ್ರಯಾಸ ಪಡುತ್ತಿದ್ದರೆ, ಇತ್ತ ತ್ಯಾಜ್ಯ ನದಿಗೆ ಸೇರಿ ಇರುವ ನೀರನ್ನು ಕಶ್ಮಲಗೊಳಿಸುತ್ತಿದೆ!

ನಾಗಪಟ್ಟಣದ ಮೇದಿನಡ್ಕ ಅರಣ್ಯ ನಿಗಮ ವ್ಯಾಪ್ತಿಯ ಸೆಂಟ್ರಿಫ್ಯೂಜ್‌ ಲೇಟೆಕ್ಸ್‌ ಮತ್ತು ಕ್ರೀಪ್‌ ರಬ್ಬರ್‌ ಫ್ಯಾಕ್ಟರಿ ಕಾರ್ಮಿಕರ ವಸತಿಗೃಹದಿಂದ ಹರಿದು ಬರುತ್ತಿರುವ ತ್ಯಾಜ್ಯ ನೀರು ಪಯಸ್ವಿನಿ ಒಡಲು ಸೇರಿ ರೋಗ ಭೀತಿ ಮೂಡಿಸಿದೆ. ಇದರಿಂದ ನಗರ ಮತ್ತು ಗ್ರಾಮಾಂತರ ಪ್ರದೇಶದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುವ ಆತಂಕ ಕಾಡಿದೆ.

70ಕ್ಕೂ ಅಧಿಕ ಮನೆ
ಆಲೆಟ್ಟಿ ಗ್ರಾ.ಪಂ. ಮತ್ತು ಸುಳ್ಯ ನಗರ ಪಂಚಾಯತ್‌ ಸರಹದ್ದಿನಲ್ಲಿರುವ ನಾಗಪಟ್ಟಣ ಪ್ರದೇಶ ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟಿದೆ. ಇಲ್ಲಿ ಅರಣ್ಯ ನಿಗಮಕ್ಕೆ ಸೇರಿರುವ ಫ್ಯಾಕ್ಟರಿಯಿದೆ. ಇಲ್ಲಿ ಕೆಲಸ ನಿರ್ವಹಿಸುವ 70ಕ್ಕೂ ಅಧಿಕ ಕಾರ್ಮಿಕ ಕುಟುಂಬಗಳು ನಿಗಮದ ಸುಪರ್ದಿಗೆ ಒಳಪಟ್ಟಿರುವ ವಸತಿಗೃಹದಲ್ಲಿ ವಾಸಿಸುತ್ತಿವೆ. ಸುಳ್ಯ-ಆಲೆಟ್ಟಿ-ಬಂದ್ಯಡ್ಕ ಅಂತಾರಾಜ್ಯ ರಸ್ತೆಯ ನಾಗಪಟ್ಟಣ ಸದಾಶಿವ ದೇವಾಲಯದ ಇನ್ನೊಂದು ಪಾರ್ಶ್ವದಲ್ಲಿ ಈ ವಸತಿಗೃಹಗಳಿವೆ. ರಬ್ಬರ್‌ಫ್ಯಾಕ್ಟರಿಗೆ ತಾಗಿಕೊಂಡೇ ಈ ಮನೆಗಳಿವೆ.
ಕಾಲನಿ ತರಹದಲ್ಲಿ ಈ ಮನೆಗಳಿದ್ದು, ದಿನಂಪ್ರತಿ ವಸತಿಗೃಹಗಳಿಂದ ಹರಿದು ಬರುವ ತ್ಯಾಜ್ಯ ನೀರು ಮುಖ್ಯ ರಸ್ತೆಯ ಚರಂಡಿ ಸೇರುತ್ತಿದೆ.

ಈ ಚರಂಡಿ ಪಯಸ್ವಿನಿ ನದಿಗೆ ಸಂಪರ್ಕ ಹೊಂದಿದ್ದು, ಕೆಲ ಮೀಟರ್‌ ದೂರದಲ್ಲಿರುವ ನಾಗಪಟ್ಟಣ ಸೇತುವೆ ಬಳಿ ಪಯಸ್ವಿನಿ ನದಿಗೆ ಈ ತ್ಯಾಜ್ಯ ಸೇರುತ್ತದೆ. ಅಂತಾರಾಜ್ಯ ಸಂಪರ್ಕ ರಸ್ತೆಯ ಇಕ್ಕೆಲೆಯ ತೆರೆದ ಚರಂಡಿಯಲ್ಲಿ ತ್ಯಾಜ್ಯ ನೀರು ಹರಿಯುತ್ತಿದೆ. ಹೀಗಾಗಿ ಮನೆ ಮಂದಿ, ದೇವಾಲಯಕ್ಕೆ ಬರುವ ಭಕ್ತರು ಮಾತ್ರವಲ್ಲದೆ, ವಾಹನ ಸವಾರರು, ಪಾದಚಾರಿಗಳು ಮೂಗು ಮುಚ್ಚಿಕೊಳ್ಳುವ ಸ್ಥಿತಿ ಇದೆ. ತ್ಯಾಜ್ಯ ನೀರು ಚರಂಡಿಯಲ್ಲಿ ಸಾಗಿ ನದಿ ಸೇರುತ್ತಿರುವುದು ಕಾಣುತ್ತಿದ್ದರೂ, ಇದರ ವಿರುದ್ಧ ಇನ್ನೂ ಕಠಿನ ಕ್ರಮ ಕೈಗೊಂಡಿಲ್ಲ.

ಸನಿಹದಲ್ಲಿ ಮರಳು ಕಟ್ಟ
ಈ ತ್ಯಾಜ್ಯ ಸೇರುವ ನದಿ ಪ್ರದೇಶದಿಂದ ಕೆಲ ದೂರದಲ್ಲಿ ನಗರಕ್ಕೆ ನೀರೊದಗಿಸುವ ಮರಳು ಕಟ್ಟವಿದೆ. ಅಲ್ಲಿಂದ ಹೆಚ್ಚುವರಿಯಾಗಿ ಕೆಳಭಾಗಕ್ಕೆ ಹರಿದು ಬರುವ ನೀರಿಗೆ ತ್ಯಾಜ್ಯ ನೀರು ಸೇರುತ್ತಿದೆ. ಡಿಸೆಂಬರ್‌ನಲ್ಲಿ ನದಿಯಲ್ಲಿ ನೀರಿನ ಹರಿವು ಸಾಕಷ್ಟು ಇರುತ್ತದೆ. ಹಾಗಾಗಿ ನೀರಿನೊಟ್ಟಿಗೆ ಮಿಶ್ರಣಗೊಳ್ಳುವ ತ್ಯಾಜ್ಯ ನದಿ ನೀರು ಹರಿದು ಹೋಗುವ ಎಲ್ಲ ಪ್ರದೇಶಗಳಿಗೆ ಸೇರುತ್ತದೆ. ಹೀಗಾಗಿ ಶುದ್ಧೀಕರಿಸದೆ ನದಿ ನೀರು ನೇರ ಬಳಕೆ ಮಾಡುತ್ತಿರುವ ಜನರ ಆರೋಗ್ಯದ ಮೇಲೆ ಸಾಕಷ್ಟು ತೊಂದರೆ ಉಂಟಾಗುವ ಸಾಧ್ಯತೆ ಇದೆ.

ಸೂಚನೆ ನೀಡಿದ್ದರೂ ಸ್ಪಂದನೆ ಇಲ್ಲ
ಹಲವು ಸಮಯಗಳಿಂದ ತ್ಯಾಜ್ಯ ನೀರು ನದಿಗೆ ಸೇರುತ್ತಿರುವುದು ಗ್ರಾ.ಪಂ. ಗಮನಕ್ಕೆ ಬಂದಿದೆ. ಈ ಬಗ್ಗೆ ರಬ್ಬರ್‌ ನಿಗಮಕ್ಕೆ ತಿಳಿವಳಿಕೆ ಪತ್ರ, ನೋಟಿಸ್‌ ನೀಡಿದ್ದೇವೆ. ಅಲ್ಲಿನ ಅಧಿಕಾರಿಗಳನ್ನು ಸಭೆಗೆ ಖುದ್ದಾಗಿ ಭಾಗವಹಿಸುವಂತೆ ಮನವಿ ಮಾಡಿದ್ದರೂ ಸಮಯಾವಕಾಶ ಕೊರತೆ ಕಾರಣದಿಂದ ಅವರು ಪಾಲ್ಗೊಂಡಿಲ್ಲ. ತಹಶೀಲ್ದಾರ್‌ ನೇತೃತ್ವದಲ್ಲಿ ರಬ್ಬರ್‌ ನಿಗಮದವರನ್ನು ಕರೆದು ಸಭೆ ನಡೆಸಿ ಸಮಸ್ಯೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ.
– ಎ.ಬಿ. ಅಜಿತ್‌ ಕುಮಾರ್‌ ಪಿಡಿಒ, ಆಲೆಟ್ಟಿ ಗ್ರಾ.ಪಂ.

– ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

1-rb

ATP Finals Doubles; ಬೋಪಣ್ಣ ಜೋಡಿಗೆ 6ನೇ ಶ್ರೇಯಾಂಕ

1-weewq

Ranji; ಬಂಗಾಲ ಬಿಗಿ ಹಿಡಿತ : ಇನ್ನಿಂಗ್ಸ್‌ ಜಯದತ್ತ ಮುಂಬಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.