ದುರ್ಗಕ್ಕೆ ಸ್ಟಾರ್ ಮೌಲ್ಯ ತಂದುಕೊಟ್ಟ ತರಾಸು
ಭೌತಿಕವಾಗಿ ದೂರವಾಗಿದ್ದರೂ ಜನಮನದಲ್ಲಿ ಚಿರಸ್ಥಾಯಿ •ಕಾದಂಬರಿಕಾರ ಡಾ| ಬಿ.ಎಲ್. ವೇಣು ಬಣ್ಣನೆ
Team Udayavani, Apr 22, 2019, 1:14 PM IST
ಚಿತ್ರದುರ್ಗ: ಕೃಷ್ಣರಾಜೇಂದ್ರ ಗ್ರಂಥಾಲಯದ ಆವರಣದಲ್ಲಿರುವ ತರಾಸು ಪ್ರತಿಮೆಗೆ ಡಾ| ಬಿ.ಎಲ್. ವೇಣು ಪುಷ್ಪನಮನ ಸಲ್ಲಿಸಿದರು
ಚಿತ್ರದುರ್ಗ: ಕಾದಂಬರಿಗಳನ್ನು ರಚನೆ ಮಾಡಲು ಚಿತ್ರದುರ್ಗಕ್ಕೆ ಭದ್ರ ಅಡಿಪಾಯ ಹಾಕಿ ಸ್ಟಾರ್ ಮೌಲ್ಯ ತಂದು ಕೊಟ್ಟ ಕೀರ್ತಿ ಖ್ಯಾತ ಕಾದಂಬರಿಕಾರ ತ.ರಾ. ಸುಬ್ಬರಾಯರಿಗೆ ಸಲ್ಲುತ್ತದೆ ಎಂದು ಸಾಹಿತಿ ಹಾಗೂ ಕಾದಂಬರಿಕಾರ ಡಾ| ಬಿ.ಎಲ್. ವೇಣು ಹೇಳಿದರು.
ನಗರದ ಕೃಷ್ಣರಾಜೇಂದ್ರ ಗ್ರಂಥಾಲಯದ ಆವರಣದಲ್ಲಿ ತರಾಸು ಅವರ ನೂರನೇ ಜನ್ಮದಿನದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ‘ತರಾಸು ಸ್ಮರಣೆ’ ಕಾರ್ಯಕ್ರಮದಲ್ಲಿ ತರಾಸು ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಸಾಹಿತ್ಯ ದಿಗ್ಗಜ ತರಾಸು, ಹುಲ್ಲೂರು ಶ್ರೀನಿವಾಸ್ ಜೋಯಿಸರು, ಎಂ.ಎಸ್. ಪುಟ್ಟಣ್ಣ, ಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್, ನಾಗರಹಾವು ಛಾಯಾಗ್ರಹಕ ಚಿಟ್ಟಿಬಾಬು, ಲಕ್ಷ್ಮಣ ತೆಲಗಾವಿ ಚಿತ್ರದುರ್ಗದ ಕೀರ್ತಿಯನ್ನು ಹೆಚ್ಚಿಸಿದರು ಎಂದು ಸ್ಮರಿಸಿದರು.
ತರಾಸು ಕೇವಲ ಕಾದಂಬರಿಗಳನ್ನಷ್ಟೇ ಬರೆಯಲಿಲ್ಲ, ‘ಚಂದ್ರವಳ್ಳಿ ತೋಟ’ ಸಿನಿಮಾಕ್ಕೆ ಒಂದು ಹಾಡು ಬರೆದಿದ್ದು, ಅದು ರಾಷ್ಟ್ರ ಪ್ರಶಸ್ತಿಯನ್ನು ತಂದುಕೊಟ್ಟಿತು. ಅಲ್ಲದೆ ತಮ್ಮ ಜೀವಿತಾವಧಿಯಲ್ಲಿ 64 ಕಾದಂಬರಿಗಳನ್ನು ಹಾಗೂ 12 ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ್ದಾರೆ ಎಂದರು.
ತರಾಸು ರವರು ಬದುಕಿದ್ದರೆ 99 ವರ್ಷಗಳನ್ನು ಪೂರೈಸಿ ನೂರನೇ ವರ್ಷಕ್ಕೆ ಕಾಲಿಡುತ್ತಿದ್ದರು. ಕೆಲವರು ಬದುಕಿ ಸತ್ತಂತಿರುತ್ತಾರೆ, ಇನ್ನು ಕೆಲವರು ಸತ್ತು ಬದುಕಿದಂತಿರುತ್ತಾರೆ. ತರಾಸು ಭೌತಿಕವಾಗಿ ದೂರವಾಗಿದ್ದರೂ ಬದುಕಿದಂತಿದ್ದಾರೆ. ತರಾಸು ಬಗ್ಗೆ ಮಾತನಾಡಿದರೆ ಅಥವಾ ಬರೆದರೆ ದುರ್ಗದ ಬಗ್ಗೆ ಮಾತನಾಡಿದಂತೆ. ನನ್ನ ಬರವಣಿಗೆಗೆ ತರಾಸು ಹಾಗೂ ಹುಲ್ಲೂರು ಶ್ರೀನಿವಾಸ ಜೋಯಿಸರು ಪ್ರೇರಣೆ ನೀಡಿದ್ದಾರೆ ಕಾರಣ ಎಂದು ತಿಳಿಸಿದರು.
ತರಾಸು ದಳವಾಯಿಗಳ ಬಗ್ಗೆ ಬರೆದರೇ ವಿನಃ ಮದಕರಿ ನಾಯಕ, ಹಿರೇಮದಕರಿ ನಾಯಕರ ಬಗ್ಗೆ ಬರೆಯಲಿಲ್ಲ. ಈ ಬಗ್ಗೆ ಸಾಕಷ್ಟು ಸಲ ತರಾಸು ಅವರೊಂದಿಗೆ ಸಾಕಷ್ಟು ಬಾರಿ ವಾಗ್ವಾದಗಳೂ ಆಗಿದ್ದವು ಎಂದು ವೇಣು ನೆನಪಿಸಿಕೊಂಡರು.
ತರಾಸುರವರ ಸಾಧನೆ ಬಲು ದೊಡ್ಡದು. ಅವರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ಕೆಲವೊಂದು ಕಾದಂಬರಿಗಳನ್ನು ನಾನು ಕೂಡ ಕಲ್ಪಿಸಿಕೊಂಡು ಬರೆದಿದ್ದೇನೆ. ಹಾಗಾಗಿ ನನ್ನ ಬರವಣಿಗೆಯೇ ಸುಳ್ಳು ಎಂದು ಕೆಲವರು ಟೀಕಿಸಿದ್ದುಂಟು. ವೀರಪುರುಷರ ಬಗ್ಗೆ ವೈಭವೀಕರಿಸಿ ಬರೆದಾಗ ಮಾತ್ರ ಓದುಗರಲ್ಲಿ ಅಭಿಮಾನ ಮೂಡುತ್ತದೆ. ಸಿನಿಮಾದಲ್ಲಿ ಕೇಕೆ, ಸಿಳ್ಳೆ ಹಾಕುತ್ತಾರೆ. ಇದರಿಂದ ಕಲೆಕ್ಷನ್ ಕೂಡ ಚೆನ್ನಾಗಿ ಆಗುತ್ತದೆ. ಆದರೆ ಇತಿಹಾಸವಿದ್ದಂತೆ ಕಾದಂಬರಿ ಬರೆಯಲು ಆಗುವುದಿಲ್ಲ, ಕಾದಂಬರಿಯಿದ್ದಂತೆ ಸಿನಿಮಾ ಮಾಡಲು ಆಗಲ್ಲ. ಕಾದಂಬರಿಯೇ ಬೇರೆ, ಇತಿಹಾಸವೇ ಬೇರೆ ಎಂದರು. ಜಿಲ್ಲಾ ಕೇಂದ್ರ ಗ್ರಂಥಾಲಯ ಅಧಿಕಾರಿ ತಿಪ್ಪೇಸ್ವಾಮಿ, ಯೋಗೇಶ್ ಸಹ್ಯಾದ್ರಿ, ನಿಸರ್ಗ ಗೋವಿಂದರಾಜು, ಲಲಿತಾಕೃಷ್ಣಮೂರ್ತಿ, ಶಶಿಕಲ ರವಿಶಂಕರ್, ಅಶೋಕ್‌ಬೆಳಗಟ್ಟ, ಇತರರು ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
HDK ಕ್ಷೇತ್ರ ಬಿಟ್ಟು ಹೋಗಿದ್ದಕ್ಕೆ ಜನ ಕೊಟ್ಟ ತೀರ್ಪು: ಡಿಕೆಶಿ ಟಾಂಗ್
Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.