ಮೌನಂ ಸಮ್ಮತಿ ಲಕ್ಷಣಂ ಅಂದುಕೊಳ್ಳಬಹುದಾ?

Team Udayavani, Apr 6, 2019, 6:00 AM IST

7

ನಿನ್ನ ಹೆಸರು, ಕುಲ, ಗೋತ್ರ ತಿಳಿದುಕೊಳ್ಳೋಕೆ ನಾನು ಮಾಡಿದ ಕಸರತ್ತುಗಳು ಒಂದಾ, ಎರಡಾ? ನೀನು ಯಾರ ಜೊತೆಯೂ ಹೆಚ್ಚು ಮಾತಾಡಲ್ಲ ಅಂತ ಕೇಳಿದ್ದೆ. ಅದೊಂದು ದಿನ ನಾನು ಕಾಲೇಜಿನಿಂದ ಮನೆಗೆ ಬಂದಾಗ ನೀನು ನನ್ನ ತಂಗಿಯ ಜೊತೆ ಪಟ ಪಟ ಅಂತ ಮಾತಾಡ್ತಿದ್ದೆ…

ಬೆಳಗ್ಗೆಯ ಸಮಯ. ಅಮ್ಮ ಒಂದೇ ಸಮನೆ, “ಏಳ್ಳೋ ತಡವಾಯಿತು. ಕಾಲೇಜೆ ಹೋಗಲ್ವ ?’ ಅಂತ ನನ್ನನ್ನು ಕೂಗಿ ಎಚ್ಚರಿಸೋ ಪ್ರಯತ್ನದಲ್ಲಿದ್ದಳು. ಅಂತೂ ಅಮ್ಮನ ಒತ್ತಾಯಕ್ಕೆ ಎದ್ದು, ರೆಡಿಯಾಗಿ, ಗೇಟಿನ ಬಳಿ ಬಂದಾಗ ಪಕ್ಕದ ಮನೆಯಾಚೆ ಅಂಗಳಕ್ಕೆ ರಂಗೋಲಿ ಇಡುತ್ತಿದ್ದ ನೀನು ಕಂಡೆ.
ಮಾರುದ್ದ ಜಡೆ, ಹಣೆಯಲ್ಲಿ ಪುಟ್ಟ ಚುಕ್ಕೆ, ಹಾಲಿನಂಥ ಮೈ ಬಣ್ಣ, ಮೂಗಿನಂದಕ್ಕೆ ಮೂಗುತಿ,ಕೆಂಗುಲಾಬಿ ಬಣ್ಣದ ತುಟಿ, ತುಟಿಯಂನಚಿನಲ್ಲಿ ನಸು ನಗು… ನಿನ್ನನ್ನು ನೋಡಿದ ಆ ಕ್ಷಣವೇ ಹೃದಯದಲ್ಲೇನೋ ಹೊಸ ರಾಗ ಮೂಡಿತು. ಅಲ್ಲಾ, ಇಷ್ಟು ದಿನ ಮನೆ ಪಕ್ಕವೇ ಇದ್ದರೂ ನೀನು ನನ್ನ ಕಣ್ಣಿಗ್ಯಾಕೆ ಬಿದ್ದಿರಲಿಲ್ಲ? ನೀನು ರಂಗೋಲಿ ಹಾಕಲು, ಅಂಗಳಕ್ಕೆ ಬರುವ ಸಮಯದಲ್ಲಿ ನಾನು ಎದ್ದೇ ಇರುತ್ತಿರಲಿಲ್ಲ ಬಿಡು. ಆದರೆ, ಮೊಬೈಲ್‌ನಲ್ಲಿ ಅಲಾರಾಂ ಕೂಡಾ ಇಡಬಹುದು ಅಂತ ಅವತ್ತೇ ನಂಗೆ ಗೊತ್ತಾಗಿದ್ದು. ಈಗೀಗ ಅಮ್ಮನಿಗಿಂತ ಮುಂಚೆ ನಾನೇ ಏಳುತ್ತೇನೆ ಗೊತ್ತಾ? ಹಾಲು, ಪೇಪರ್‌, ಜಾಗಿಂಗ್‌ ಅಂತ ನೂರು ನೆಪ ಹೇಳಿ, ನಿಮ್ಮ ಮನೆ ಅಂಗಳದ ಕಡೆಗೆ ಒಂದು ಕಣ್ಣಿಡುತ್ತೇನೆ. ಆದರೂ, ಒಂದು ದಿನ ಕೂಡಾ ನೀನು ನನ್ನತ್ತ ತಿರುಗಿ ನೋಡಿಲ್ಲ.

ನಿನ್ನ ಹೆಸರು, ಕುಲ, ಗೋತ್ರ ತಿಳಿದುಕೊಳ್ಳೋಕೆ ನಾನು ಮಾಡಿದ ಕಸರತ್ತುಗಳು ಒಂದಾ, ಎರಡಾ? ನೀನು ಯಾರ ಜೊತೆಯೂ ಹೆಚ್ಚು ಮಾತಾಡಲ್ಲ ಅಂತ ಕೇಳಿದ್ದೆ. ಅದೊಂದು ದಿನ ನಾನು ಕಾಲೇಜಿನಿಂದ ಮನೆಗೆ ಬಂದಾಗ ನೀನು ನನ್ನ ತಂಗಿಯ ಜೊತೆ ಪಟ ಪಟ ಅಂತ ಮಾತಾಡ್ತಿದ್ದೆ… ನೀನು ನನ್ನ ತಂಗಿಯ ಕ್ಲಾಸ್‌ಮೇಟ್‌ ಅಂತ ಗೊತ್ತಾಗಿದ್ದೇ ಅವಾಗ! ಆಹಾ, ಹುಡುಕುತ್ತಿದ್ದ ಬಳ್ಳಿ, ಕಾಲಿಗೇ ಬಂದು ತೊಡರಿಕೊಂಡಷ್ಟು ಖುಷಿಯಾಯ್ತು. ನಿನ್ನ ಪರಿಚಯ ಮಾಡುತ್ತಾ ತಂಗಿ, “ಇವಳು ನನ್ನ ಫ್ರೆಂಡ್‌ ವೈಶಾಲಿ. ಪಕ್ಕದ ಮನೆಗೆ ಹೊಸದಾಗಿ ಬಂದಿದ್ದಾರೆ. ನಂದೇ ಕ್ಲಾಸ್‌ ಕೂಡಾ’ ಅಂದಾಗ ನೀನು, ತುಸು ನಕ್ಕು ಹಾಯ್‌! ಅಂದಿದ್ದೆ. ಅಷ್ಟಕ್ಕೇ ನನ್ನ ಪುಟ್ಟ ಹೃದಯ ಎಷ್ಟು ಖುಷಿಪಟ್ಟಿತು ಗೊತ್ತಾ?

ಒಂದೆರಡು ಬಾರಿ ತಂಗಿಯ ಜೊತೆಗೆ ನಿನಗೂ ಸೈನ್ಸ್‌, ಮ್ಯಾಥ್ಸ್ ಹೇಳಿಕೊಟ್ಟಿದ್ದೇನೆ ಅನ್ನೋದನ್ನು ಬಿಟ್ಟರೆ, ನೀನು ಮಾತಿಗೆ ಸಿಕ್ಕೇ ಇಲ್ಲ. ಮನಸಿನ ಭಾವನೆಗಳನ್ನು ನಿನ್ಮುಂದೆ ಹೇಳಿಕೊಳ್ಳಬೇಕು ಅಂತ ಅದೆಷ್ಟು ಬಾರಿ ರಿಹರ್ಸಲ್‌ ಮಾಡಿದ್ದೆನೋ, ಲೆಕ್ಕವಿಟ್ಟಿಲ್ಲ. ಕೊನೆಗೂ ಮೊನ್ನೆ, ಹೇಗೋ ಧೈರ್ಯ ಮಾಡಿ ಪ್ರೇಮ ನಿವೇದನೆ ಮಾಡಿಬಿಟ್ಟೆ. ಭಾವನೆಗಳ ಭಾರವನ್ನು ನಿನ್ನೆದುರು ಹರವಿ ಹಗುರಾಗಿ, ನಿನ್ನ ಮುಖ ನೋಡಿದರೆ ಮೌನದಲ್ಲೇ ನಕ್ಕು ಹೋಗಿಬಿಟ್ಟೆಯಲ್ಲ?! ಆ ನಗುವಿನ ಅರ್ಥವೇನು? “ಮೌನಂ ಸಮ್ಮತಿ ಲಕ್ಷಣಂ’ ಅಂತ ತಿಳಿಯಲಾ ಅಥವಾ ಇವನ್ಯಾರೋ ಲೂಸು ಅಂತ ಸುಮ್ಮನಾದೆ ಅಂದುಕೊಳ್ಳಲಾ?

ನಿನ್ನ ನಗುವಿನ ಒಗಟನ್ನು ಬಿಡಿಸು. ಆದಷ್ಟು ಬೇಗ ನಿನ್ನ ಉತ್ತರವನ್ನು ತಿಳಿಸು.

ಇಂತಿ ನಿನ್ನವನಾಗಲು ಕಾಯುತ್ತಿರುವ

ಸುಹಾನ್‌

ಟಾಪ್ ನ್ಯೂಸ್

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.