ಖನ್ನತೆಗೆ ಬಲಿಯಾಗದಿರಲಿ
Team Udayavani, Apr 23, 2019, 7:45 AM IST
ವೃದ್ಧಾಪ್ಯದಲ್ಲಿ ಹಿರಿ ಜೀವಗಳು ಮತ್ತೆ ಮಕ್ಕಳಂತಾಗುತ್ತಾರೆ. ಅವರ ಪರಿಪಕ್ವವಾದ ಮನಸ್ಸು ಮತ್ತೆ ಹೂವಿನಂತೆ ಮೃದುತ್ವವನ್ನು ಪಡೆಯುತ್ತದೆ. ಜತೆಗೆ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳೂ ಅವರನ್ನು ಹೈರಾಣಾಗಿಸಿಬಿಡುತ್ತದೆ. ಹೀಗಾಗಿ ಹಿರಿಯ ದೈಹಿಕ ಆರೋಗ್ಯವನ್ನು ಕಾಪಾಡಲು ಮಾನಸಿಕ ಖನ್ನತೆಯಿಂದ ದೂರ ಮಾಡಲು ಇಲ್ಲಿದೆ ಮಾಹಿತಿ.
ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನದ ಪ್ರಕಾರ ಹಿರಿಯ ನಾಗರಿಕರಲ್ಲಿ ನೂರರಲ್ಲಿ ಸುಮಾರು 15 ಮಂದಿ ಮಾನಸಿಕ ಅಸ್ವಸ್ಥತೆ, ಖನ್ನತೆಗೆ ಗುರಿಯಾಗುತ್ತಿದ್ದಾರೆ. ಇಂತಹ ಗಂಭೀರ ಮಟ್ಟದ ಸಮಸ್ಯೆಗಳ ಸಂದರ್ಭದಲ್ಲಿ ಮನೆಯವರು ಹೇಗೆ ಅವರ ಮನಸ್ಸನು ಹತೋಟಿಯಲ್ಲಿಡಲು, ಅವರ ಮಾನಸಿಕ ಸಮತೋಲನ ಕಾಪಾ ಡಲು ಸಹಕಾರಿಯಾಗುವಂತೆ ಆರೈಕೆ ಮಾಡುತ್ತಾರೆ ಎನ್ನುವುದು ಮುಖ್ಯವಾಗು ತ್ತದೆ. ಅವರಲ್ಲಿ ಆತ್ಮವಿಶ್ವಾಸ ತುಂಬುವ, ಅವರನ್ನು ಸದಾ ಕಾಲ ಚೈತನ್ಯ ಪೂರ್ಣರಾಗಿ ಇರಿಸುವುದಕ್ಕೆ ಮೊದಲು ನಾವು ನಮ್ಮನ್ನು ಸಿದ್ಧಪಡಿಸಿ ಕೊಳ್ಳುವುದು ಮುಖ್ಯವಾಗುತ್ತದೆ.
ಹೆಚ್ಚಿನ ವೃದ್ಧರಲ್ಲಿ ಕಂಡು ಬರುವ ಸಮಸ್ಯೆ ಮಾನಸಿಕ ಅಸಮತೋಲನದ ತೊಂದರೆ. ನಮ್ಮನ್ನು ಯಾರೂ ಗಮನಿಸುವುದಿಲ್ಲ, ನಾವು ಏಕಾಂಗಿ, ನಮ್ಮ ಕಾಳಜಿ ಯಾರಿಗೂ ಇಲ್ಲ ಇಂಥ ಯೋಚನೆಗಳಿಂದ ಮುಗ್ಧ ಹಿರಿಯ ಮನಸ್ಸುಗಳು ಮಾನಸಿಕವಾಗಿ ಕುಗ್ಗಿ ಬಿಡುವುದು ಸಾಮಾನ್ಯ. ಹೀಗಾಗಿ ಅವರಿಗೆ ಏಕಾಂಗಿತನ ಕಾಡದಂತೆ ಅವರನ್ನು ಚಟುವಟಿಕೆಯಿಂದಿರುವಂತೆ ನೋಡಿಕೊಳ್ಳುವುದರ ಮೂಲಕ ಅವರನ್ನು ಈ ಸ್ಥಿತಿಯಿಂದ ಹೊರ ತರುವುದು ಸಾಧ್ಯ.
ಈ ಸಂದರ್ಭದಲ್ಲಿ ಗಮನ ಹರಿಸಬೇಕಾದ ಇನ್ನೊಂದು ಮುಖ್ಯ ಅಂಶವೆಂದರೆ ಅವರನ್ನು ಕೂಡಿ ಹಾಕುವುದು, ಗೃಹ ಬಂಧನದಲ್ಲಿಡುವುದರ ಬದಲು ಸದಾ ಕಾಲ ಅವರೊಂದಿಗೆ ಯಾರಾದರೊಬ್ಬರು ಸಮಯ ಕಳೆಯುವುದು, ಅವರ ಬೇಕು ಬೇಡಗಳನ್ನು ಅರಿತು ಅದನ್ನು ನೆರೆವೇರಿಸಿಕೊಡುವುದರತ್ತ ಗಮನ ಹರಿಸಿದರೆ ಅವರ ಮಾನಸಿಕ ಅಸಮತೋಲನವನ್ನು ಕೊಂಚ ಮಟ್ಟಿಗೆ ನಿಯಂತ್ರಣದಲ್ಲಿಡುವುದು ಸಾಧ್ಯ.
ಜತೆಗೆ ಮಾನಸಿಕ ತಜ್ಞರ ಸಲಹೆಯನ್ನು ಪಡೆದುಕೊಂಡು ಔಷಧಗಳನ್ನು ನೀಡುವುದೂ ಮುಖ್ಯ. ಅವರ ಸೂಚನೆಗಳನ್ನು ಅನುಸರಿಸಿ ಕೊಂಡು ನಮ್ಮ ಮನೆಯ ಮುಗ್ಧ ಹಿರಿಜೀವಗಳ ಕಾಳಜಿ ವಹಿಸಿದಾಗ ಅವರಿಗೂ ಖುಷಿ. ಅವರ ಸಮಸ್ಯೆಗಳಿಗೂ ಮುಕ್ತಿ.
ಹಿಂಸೆಯಿಂದ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ
ನೆಮ್ಮದಿ, ಹಿಂಸೆಗೆ ಸ್ಪಂದಿಸುವ ಗುಣ ಮತ್ತು ಅದನ್ನು ಆಳವಾಗಿ ಹಚ್ಚಿಕೊಳ್ಳುವ ಗುಣ ಮಕ್ಕಳಲ್ಲಿ ಹೆಚ್ಚು ಜಾಗೃತವಾಗಿರುತ್ತದೆ. ಮಾನಸಿಕ ಆರೋಗ್ಯದ ಮೇಲೆ ಈ ವಿಚಾರಗಳು ಹೆಚ್ಚು ಪರಿಣಾಮ ಬಿರುತ್ತವೆ. ಮಕ್ಕಳ ಮನಸ್ಸು ಹಿಂಸೆಗೆ ಗುರಿಯಾದರೆ ಅವರು ಬೇಗನೆ ಮಾನಸಿಕ ಅಸ್ವಸ್ಥತೆಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಕುಗ್ಗಿದ ಮನಸ್ಸು ಶೀಘ್ರ ಗುಣಮುಖವಾಗುವುದೂ ಅಸಾಧ್ಯ. ಆದ್ದರಿಂದ ಮಗುವಿನ ಮನಸ್ಸನ್ನು ಅರಿತು ಅವರನ್ನು ಸಿದ್ಧಗೊಳಿಸುವಲ್ಲಿ ಪ್ರಯತ್ನಿಸಿದಲ್ಲಿ ಈ ಸಮಸ್ಯೆಯಿಂದ ಹೊರ ಬರುವುದು ಸಾಧ್ಯ.
••ಭುವನ ಬಾಬು, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.