ಬೇಸಗೆ ಡಯೆಟ್ ಹೀಗಿರಲಿ…
Team Udayavani, Apr 29, 2019, 10:16 AM IST
ಹವಾಮಾನದ ಬದಲಾವಣೆಯು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಕಾಲಕ್ಕೆ ತಕ್ಕಂತ ಆಹಾರ ಪದ್ಧತಿ ಅನುಸರಿಸುವುದು ಬಹು ಮುಖ್ಯ. ಅದರಲ್ಲೂ ಬೇಸಗೆಯಲ್ಲಿ ನಾವು ಸೇವಿಸುವ ಆಹಾರ ಹೆಚ್ಚಿನ ಪೋಷಕಾಂಶಗಳಿಂದ ಕೂಡಿದ್ದರೇ ಉತ್ತಮ. ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ, ದೇಹದ ತೂಕವೂ ನಿಯಂತ್ರಣದಲ್ಲಿರುತ್ತದೆ. ಹೀಗಾಗಿ ಬೇಸಗೆಯಲ್ಲಿ ಆಹಾರ ಕ್ರಮದಲ್ಲಿ ಪಾಲಿಸಬೇಕಾದ ನಿಯಮಗಳು ಹೀಗಿವೆ.
ಅಧಿಕ ಪ್ರಮಾಣದಲ್ಲಿ ನೀರು ಕುಡಿಯಿರಿ
ಬೇಸಗೆಯ ಮೊದಲ ಕಾಡುವ ಸಮಸ್ಯೆ ಎಂದರೆ ದೇಹದಲ್ಲಿನ ನೀರಿನಂಶ ಕಡಿಮೆಯಾಗುವುದು. ಹೀಗಾಗಿ ಪ್ರತಿದಿನ ಕನಿಷ್ಠ 8- 10 ಗ್ಲಾಸ್ ನೀರು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಇದು ದೇಹದ ತೂಕ ಇಳಿಕೆಗೆ ಸಹಕಾರಿ.
ಹಣ್ಣುಗಳಿಗೆ ಪ್ರಾಮುಖ್ಯ ನೀಡಿ
ಸೇವಿ ಸುವ ಆಹಾರ ಅದಷ್ಟು ತಾಜಾ ಹಣ್ಣುಗಳಿಂದ ಕೂಡಿರಲಿ. ಇದು ವಾತಾವರಣದಲ್ಲಿ ಆಗುವ ಬದಲಾವಣೆಗಳನ್ನು ನಿಭಾಯಿಸಲು ದೇಹಕ್ಕೆ ಸಹಾಯ ಮಾಡುವ ರೋಗನಿರೋಧಕ ಅಂಶ ಗಳನ್ನು ಹೆಚ್ಚಿಸುತ್ತದೆ. ಅಲ್ಲದೇ ಹಣ್ಣುಗಳಲ್ಲಿ ಫೈಬರ್ ಅಂಶ ಹೇರಳವಾಗಿರುವುದರಿಂದ ದೇಹದ ತೂಕ ಇಳಿಸಲು ಇದು ಸಹಾಯ ಮಾಡು ತ್ತದೆ.
ತರಕಾರಿಗಳನ್ನು ಯಥೇಚ್ಚವಾಗಿ ಬಳಸಿ
ಬಾಯಿ ಚಪಲಕ್ಕಾಗಿ ಚಳಿಗಾಲದಲ್ಲಿ ನಾವು ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವಿಸುತ್ತೇವೆ. ಬೇಸಗೆಯಲ್ಲಿ ಫೈಬರ್‌ಯುಕ್ತ ಆಹಾರವನ್ನು ಸೇವಿಸುವದಿಂದ ಇದನ್ನು ಸರಿದೂಗಿಸಿಕೊಳ್ಳಬಹುದು. ಹಿ ಆಹಾರದಲ್ಲಿ ಬೀಟ್‌ರೋಟ್, ಕ್ಯಾರೆಟ್, ಅವಕಾಡೊ, ಬೊಕೊಲಿ, ಬ್ರಸ್ಸೆಲ್ ಮೊಗ್ಗುಗಳು, ಕಿಡ್ನಿ ಬೀನ್ಸ್, ಗಜ್ಜರಿ, ಓಟ್ಸ್ ಮುಂತಾದವುಗಳಿರಲಿ. ಇದು ದೇಹದಲ್ಲಿ ಕ್ಯಾಲೋರಿ ಉಳಿಸಲು ಮತ್ತು ತೂಕ ಇಳಿಸಿಕೊಳ್ಳಲು ಸಹಕರಿಸುತ್ತವೆ. ಜೀರ್ಣ ಕ್ರಿಯೆ ಉತ್ತಮಗೊಳಿಸಲೂ ಇದು ಸಹ ಕಾರಿ. ವಿಶೇಷವಾಗಿ ಧಗೆಯ ಉಷ್ಣಾಂಶದ ದಿನಗಳಲ್ಲಿ ದೇಹದಲ್ಲಿನ ವಿಷದ ಜೀವಾಣುಗಳನ್ನು ತೆಗೆದುಹಾಕುವಲ್ಲಿ ಇವು ಸಹಾಯ ಮಾಡುತ್ತವೆ.
ತಾಜಾ ಪಾನೀಯಗಳಿರಲಿ
ಬೇಸ ಗೆ ಎಂದರೆ ಶುದ್ಧೀಕರಸಿವ ಸಮಯ. ಹೈಡ್ರೇಟಿಂಗ್ ಪಾನೀಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯ ಅಭ್ಯಾಸ ಮಾಡಿಕೊಳ್ಳಬೇಕು. ಏಳನೀರು, ಕಬ್ಬಿನ ರಸ, ಮಜ್ಜಿಗೆ ಮೊದಲಾದ ತಾಜಾ ಪಾನೀಯಗಳು ಡಯೆಟ್‌ನಲ್ಲಿ ರಲಿ. ಚಳಿಗಾಲಿದಲ್ಲಿ ಅತಿಯಾದ ಆಹಾರ ಸೇವಿಸುವುದರಿಂದ ಡಿಟಾಕ್ಸ್‌ಗಾಗಿ ಸಲಾಡ್‌ಗಳನ್ನು ಸೇವಿಸುವ ಸಮಯ ಬೇಸಗೆ ಕಾಲ. ಅನಗತ್ಯ ತೂಕ ಹೆಚ್ಚಾಗುವುದನ್ನು ತಪ್ಪಿಸಲು ಆಹಾರದಲ್ಲಿ ಕಾಬೋಹೈಡ್ರೇಟ್ ಕಡಿಮೆ ಪ್ರಮಾಣದಲ್ಲಿರುವ ಆಹಾರಗಳನ್ನು ಬಳಸಿಕೊಳ್ಳಬೇಕು.
- ರಮ್ಯಾ ಕೆದಿಲಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ
Mother: ತಾಯಂದಿರ ಮಾನಸಿಕ ಆರೋಗ್ಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
Bantwal: ಕೆಎಸ್‌ಆರ್‌ಟಿಸಿ ಬಸ್-ಬೈಕ್ ಢಿಕ್ಕಿ; ದಂಪತಿಗೆ ಗಾಯ
Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!
Mangaluru: ಭಾರತ ಬಲಿಷ್ಠವಾಗಲು ಕೌಶಲಯುತ ಶಿಕ್ಷಣ ಅಗತ್ಯ: ಡಾ| ನಿರ್ಮಲಾನಂದನಾಥ ಸ್ವಾಮೀಜಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.