ಧೋನಿ ಪಡೆಗೆ ಸನ್ರೈಸರ್ ಸವಾಲು
Team Udayavani, Apr 23, 2019, 11:45 AM IST
ಚೆನ್ನೈ: ಮೊದಲ ಸುತ್ತಿನ ಐಪಿಎಲ್ ಮುಖಾಮುಖೀಯಲ್ಲಿ ಚೆನ್ನೈಗೆ 6 ವಿಕೆಟ್ ಸೋಲುಣಿಸಿದ ಸನ್ರೈಸರ್ ಮರು ಪಂದ್ಯಕ್ಕೆ ಸಜ್ಜಾಗಿದೆ. ಮಂಗಳವಾರ ಚೆನ್ನೈಯಲ್ಲಿ ಇತ್ತಂಡಗಳು ಸೆಣಸಲಿವೆ.
ರವಿವಾರವಷ್ಟೇ ಆರ್ಸಿಬಿ ವಿರುದ್ಧ ಒಂದು ರನ್ ಅಂತರದ ಸೋಲುಂಡ ಚೆನ್ನೈಗೆ ಇದು ತವರಿನ ಪಂದ್ಯವಾದ್ದರಿಂದ ಹೆಚ್ಚಿನ ಅವಕಾಶವಿದೆ ಎನ್ನಲಡ್ಡಿಯಿಲ್ಲ. ಆದರೆ ಹೈದರಾಬಾದ್ ಸವಾಲು ಸುಲಭದ್ದಲ್ಲ.
ಚೆನ್ನೈಗೆ ಓಪನಿಂಗ್ ಸಮಸ್ಯೆ
ಚೆನ್ನೈ ತಂಡದಲ್ಲಿ ಓಪನಿಂಗ್ ಬ್ಯಾಟ್ಸ್ಮನ್ಗಳದೇ ಪ್ರಮುಖ ಸಮಸ್ಯೆ. ಈ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿದವರ್ಯಾರೂ ಟಿ20 ಜೋಶ್ ತೋರದೆ ಬೇಗನೆ ಪೆವಿಲಿಯನ್ ಸೇರುತ್ತಿದ್ದಾರೆ. ಹೀಗಾಗಿ ಮಧ್ಯಮ ಕ್ರಮಾಂಕದ ಆಟಗಾರರ ಮೇಲಿನ ಒತ್ತಡ ತೀವ್ರಗೊಳ್ಳುತ್ತದೆ. ಆರ್ಸಿಬಿ ಎದುರಿನ ಸಾಮಾನ್ಯ ಮೊತ್ತದ ಚೇಸಿಂಗ್ ವೇಳೆ ಅಗ್ರ ಕ್ರಮಾಂಕದ ತೀವ್ರ ಕುಸಿತ ಚೆನ್ನೈಗೆ ಕಂಟಕವಾಗಿ ಕಾಡಿತ್ತು. ಧೋನಿ ತಂಡವನ್ನು ಗೆಲುವಿನ ಬಾಗಿಲಿನತ್ತ ಕೊಂಡೊಯ್ದರೂ ಅದೃಷ್ಟ ಕೈಕೊಟ್ಟಿತ್ತು.
ಶೇನ್ ವಾಟ್ಸನ್, ಸುರೇಶ್ ರೈನಾ, ಕೇದಾರ್ಜಾಧವ್ ಫಾರ್ಮ್ ಕಳೆದುಕೊಂಡಿರುವುದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ. ಆಲ್ರೌಂಡರ್ ಬ್ರಾವೊ ವಾಪಸಾಗಿರುವುದು ಚೆನ್ನೈಗೆ ಲಾಭವಾಗಿ ಪರಿಣಮಿಸಬೇಕಿದೆ. ಬ್ಯಾಟಿಂಗಿಗೆ ಹೋಲಿಸಿದರೆ ಚೆನ್ನೈ ಬೌಲಿಂಗ್ ಹೆಚ್ಚು ಬಲಿಷ್ಠ. ಇಮ್ರಾನ್ ತಾಹಿರ್, ರವೀಂದ್ರ ಜಡೇಜ, ಶಾದೂಲ್ ಠಾಕೂರ್, ದೀಪಕ್ಚಹರ್, ಡ್ವೆ„ನ್ ಬ್ರಾವೊ, ಹರ್ಭಜನ್ ಎದುರಾಳಿಗಳನ್ನು ಕಟ್ಟಿಹಾಕಬಲ್ಲರು.
ಕಾಡಲಿದೆ ಬೇರ್ಸ್ಟೊ ಗೈರು
ವಾರ್ನರ್-ಬೇರ್ಸ್ಟೊ ಅವರ ಪ್ರಚಂಡ ಓಪನಿಂಗ್ ಹೈದರಾಬಾದ್ನ ಈ ವರೆಗಿನ ಓಟದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ವಾರ್ನರ್ 517, ಬೇರ್ಸ್ಟೊ 445 ರನ್ ಪೇರಿಸಿದ್ದಾರೆ. ಆದರೀಗ ಬೇರ್ಸ್ಟೊ ವಿಶ್ವಕಪ್ ತಯಾರಿಗಾಗಿ ಇಂಗ್ಲೆಂಡಿಗೆ ತೆರಳಲಿದ್ದು, ಈ ಪಂದ್ಯದಲ್ಲಿ ಆಡುವುದಿನ್ನೂ ಖಚಿತಪಟ್ಟಿಲ್ಲ. ಅಕಸ್ಮಾತ್ ಆಡಿದರೂ ಇದು ಅವರ ಕೊನೆಯ ಐಪಿಎಲ್ ಪಂದ್ಯವಾಗಲಿದೆ.
ಇನ್ನೊಂದೆಡೆ ತವರಿಗೆ ವಾಪಸಾಗಬೇಕಿದ್ದ ಬಾಂಗ್ಲಾ ಆಟಗಾರ ಶಕಿಬ್ ಅಲ್ ಹಸನ್ ಹೈದರಾಬಾದ್ ತಂಡದಲ್ಲೇ ಮುಂದುವರಿಯಲಿದ್ದಾರೆ. ಇವರಿಗೆ ಆಡುವ ಅವಕಾಶ ಸಿಕ್ಕೀತೇ ಎಂಬುದೊಂದು ಪ್ರಶ್ನೆ. ರಶೀದ್ ಖಾನ್, ಮೊಹಮ್ಮದ್ ನಬಿ, ಸಂದೀಪ್ ಶರ್ಮ, ಭುವನೇಶ್ವರ್ ಅವರನ್ನೊಳಗೊಂಡ ಹೈದರಾಬಾದ್ ಬೌಲಿಂಗ್ ಘಾತಕವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.