ಭದ್ರತೆಯಲ್ಲಿ ಮತಯಂತ್ರ-ಸಿಬ್ಬಂದಿ ರವಾನೆ
Team Udayavani, Apr 23, 2019, 2:17 PM IST
ಕುಷ್ಟಗಿ: ಲೋಕಸಭಾ ಚುನಾವಣೆಗೆ ತಾಲೂಕು ವ್ಯಾಪ್ತಿಯ 272 ಮತಗಟ್ಟೆ ಕೇಂದ್ರಗಳಿಗೆ ಸೋಮವಾರ ಬಿಗಿ ಭದ್ರತೆಯಲ್ಲಿ ಸಿಬ್ಬಂದಿ ಇವಿಎಂ ಮತಯಂತ್ರಗಳೊಂದಿಗೆ ತೆರಳಿದರು.
ತಾಲೂಕಿನಲ್ಲಿ 1,14,820 ಪುರುಷರು, 1,08,674 ಮಹಿಳಾ ಮತದಾರರು, ಇತರೇ 16 ಸೇರಿದಂತೆ 2,28,269 ಮತದಾರರಿದ್ದಾರೆ. ತಾಲೂಕಿನಲ್ಲಿ 272 ಮತ ಕೇಂದ್ರಗಳನ್ನು ತೆರೆಯಲಾಗಿದೆ. 1,308 ಮತದಾನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮತದಾನದ ಮುನ್ನ ದಿನ ಸೋಮವಾರ, ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡ ಮತಗಟ್ಟೆ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಜೊತೆಗೂಡಿ, ಇವಿಎಂ, ವಿವಿ ಪ್ಯಾಟ್ ಮತ್ತಿತರ ಚುನಾವಣೆ ಸಾಮಾಗ್ರಿಗಳೊಂದಿಗೆ ನಿಯೋಜಿತ ಸಿಬ್ಬಂದಿ ತೆರಳಿದರು. ಈ ವೇಳೆ ಬಿಸಿಲಿನಂದ ರಕ್ಷಣೆ ಪಡೆಯಲು ಬೋರ್ಡ್‌ಗಳನ್ನು ತಲೆ ಮೇಲೆ ಹಿಡಿದುಕೊಂಡರು.
ಈ ಬಾರಿ ಚುನಾವಣಾ ಕರ್ತವ್ಯಕ್ಕೆ ಹೊರಟಿ ರುವ ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡ ಲಾಯಿತು. ರಕ್ತದ ಒತ್ತಡ, ಜ್ವರ ಇನ್ನಿತರ ಸಣ್ಣಪುಟ್ಟ ಸಮಸ್ಯೆಗಳಿಗೆ ವೈದ್ಯರು ಚಿಕಿತ್ಸೆ ನೀಡಿದರು.ಸಿಬ್ಬಂದಿಯನ್ನು ನಿಯೋಜಿಸಿ ಸರಿಹೊಂದಿಸಿ, ಮತಗಟ್ಟೆಗೆ ಕಳುಹಿಸಿಕೊಡುವ ಕಾರ್ಯದಲ್ಲಿ ಸಹಾಯಕ ಚುನಾವಣಾಧಿಕಾರಿ ಈರಣ್ಣ ಆಶಾಪುರ, ತಹಶೀಲ್ದಾರ್ ಕೆ.ಎಂ. ಗುರುಬಸವರಾಜ್ ಹೆಣಗಾಡಿದರು.
ಭದ್ರತೆ: ಚಿಕಮಗಳೂರು, ಕಡೂರು, ಮಂಡ್ಯ ಜಿಲ್ಲೆಗಳ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಬೆಂಗಳೂರಿನ ಎಸಿಆರ್‌ಬಿ ಡಿವೈಎಸ್‌ಪಿ ಪೂವಯ್ಯ ನೇತೃತ್ವದಲ್ಲಿ 4 ಸಿಪಿಐ, 3 ಪಿಎಸ್‌ಐ, 21 ಮುಖ್ಯಪೇದೆ, ಪೇದೆ, ಮಹಿಳಾ ಪದೇ ಸೇರಿದಂತೆ 118, ಗೃಹರಕ್ಷಕ ಸಿಬ್ಬಂದಿ 188, 3 ಫಾರೆಸ್ಟ್ ಗಾರ್ಡ್ 1 ಕೆಎಸ್‌ಆರ್‌ಪಿಯನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.