ಜಿಮ್ಗೆ ಚಕ್ಕರ್ ಹೊಡೆದ್ರಾ?
Team Udayavani, Apr 24, 2019, 6:25 AM IST
ಜಿಮ್ ಅಥವಾ ಫಿಟ್ನೆಸ್ ಕ್ಲಾಸ್ಗೆ ಹೊಸದಾಗಿ ಸೇರಿದವರ ಉತ್ಸಾಹ ನೋಡಬೇಕು. ಇನ್ಮೇಲಿಂದ ದಿನಾ ಜಿಮ್ಗೆ ಹೋಗ್ತೀನಿ, ಮೂರು ತಿಂಗಳಲ್ಲಿ ಬೊಜ್ಜು ಕರಗಿಸ್ತೀನಿ ಅಂತೆಲ್ಲಾ ಪ್ರತಿಜ್ಞೆ ಮಾಡಿಕೊಳ್ತಾರೆ. ಆದ್ರೆ, ಒಂದೇ ವಾರಕ್ಕೆ ಸೋಮಾರಿತನ ಮತ್ತೆ ಹೆಗಲ ಮೇಲೆ ಬಂದು ಕೂತಿರುತ್ತೆ. ಇವತ್ಯಾಕೋ ಸುಸ್ತಾಗಿದೆ ಅಂತಲೋ, ಭಾನುವಾರ ವರ್ಕ್ಔಟ್ಗೂ ರಜ ಅಂತಲೋ ಜಿಮ್ಗೆ ಚಕ್ಕರ್ ಹೊಡೆಯುತ್ತಾರೆ.
ಒಂದು ದಿನ ಜಿಮ್ ಮಿಸ್ ಮಾಡಿದರೆ ಓಕೆ. ಆದ್ರೆ, ಸತತವಾಗಿ ಎರಡು ಅಥವಾ ಹೆಚ್ಚು ದಿನ ವರ್ಕ್ಔಟ್ ಮಾಡದೇ ಇರೋದು ಒಳ್ಳೆಯದಲ್ಲ ಅಂತಾರೆ ಫಿಟ್ನೆಸ್ ಟ್ರೇನರ್ಗಳು. ಹಾಗೆ ಮಾಡಿದರೆ, ಅಷ್ಟೂ ದಿನ ಜಿಮ್ನಲ್ಲಿ ನೀವು ಬೆವರಿಳಿಸಿದ್ದು ಕೂಡಾ ವ್ಯರ್ಥವಾಗುತ್ತಂತೆ. ವಾರಗಟ್ಟಲೆ ಜಿಮ್ ತಪ್ಪಿಸಿದರೆ ದೇಹ ಮತ್ತೆ ತನ್ನ ತೂಕವನ್ನು ಹೆಚ್ಚಿಸಿಕೊಳ್ಳಲೂಬಹುದು!
ಜಿಮ್ ಬದಲಿಗೆ ಏನು?
ಅನಿವಾರ್ಯ ಸಂದರ್ಭಗಳಲ್ಲಿ ಜಿಮ್ಗೆ ಹೋಗಲು ಸಾಧ್ಯವಾಗದೇ ಇರಬಹುದು. ಆಗೇನು ಮಾಡಬೇಕು ಗೊತ್ತಾ?
– ಮನೆಯಲ್ಲಿಯೇ 15-20 ನಿಮಿಷ ವರ್ಕ್ಔಟ್ ಮಾಡಿ
– ವಾಕ್ ಅಥವಾ ಜಾಗಿಂಗ್ಗೆ ಹೋಗಿ
– ಜಿಮ್ಗೆ ಹೋಗದ ದಿನ ಆಫೀಸ್ನಲ್ಲಿ ಲಿಫ್ಟ್ ಬಳಸಬೇಡಿ. ಮೆಟ್ಟಿಲು ಹತ್ತಿ- ಇಳಿಯುವುದು ಕೂಡಾ ಒಳ್ಳೆಯ ವ್ಯಾಯಾಮವೇ
– ಹಸಿರು ತರಕಾರಿ, ಸಲಾಡ್, ಹಣ್ಣು, ಹಣ್ಣಿನ ರಸ… ಹೀಗೆ ಆರೋಗ್ಯಕರ ಡಯಟ್ ಪರಿಪಾಲಿಸಿ.
– ಸಕ್ಕರೆ, ಸಿಹಿ ತಿನಿಸುಗಳನ್ನು ಜಾಸ್ತಿ ತಿನ್ನಬೇಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್ಡಿಎ ಮೇಲುಗೈ
Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.