ಬರಯ ಕ್ಷೇತ್ರ: ವಾರ್ಷಿಕ ಜಾತ್ರೆ ಸಂಪನ್ನ
Team Udayavani, Apr 24, 2019, 5:00 AM IST
ವೇಣೂರು: ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೂಳಬೆಟ್ಟು ಇಲ್ಲಿನ ವಾರ್ಷಿಕ ಜಾತ್ರೆ ಕಾಜಿಮುಗೇರು ಸೀತಾರಾಮ ಹೆಬ್ಟಾರ್ ಮಾರ್ಗದರ್ಶನ ದಲ್ಲಿ ಜರಗಿ ಸಂಪನ್ನಗೊಂಡಿತು. ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ ಅಜಿಲರ ಉಪಸ್ಥಿತಿಯಲ್ಲಿ ಎ. 19ರಂದು ರಾತ್ರಿ ಮಹಾರಥೋತ್ಸವ ಜರಗಿತು.
16ರಂದು ಬೆಳಗ್ಗೆ ಧ್ವಜಾರೋಹಣ ನಡೆದು ಸಂಜೆ ವಸಂತ ಪೂಜೆ, ಕಾರ್ಕಳ ಶ್ರೀ ಭಾರ್ಗವ ಮಹಿಳಾ ಭಜನ ಮಂಡಳಿ ಯಿಂದ ಭಜನ ಸತ್ಸಂಗ, 17ರಂದು ಬೆಳಗ್ಗೆ ಉತ್ಸವ, ಸಂಜೆ ವಸಂತ ಪೂಜೆ, ರಾತ್ರಿ ಭಿಡೆತೋಟ ಮಕ್ಕಳಿಂದ ನೃತ್ಯ ವೈವಿಧ್ಯ, ಮಾಳದ ಚಿತ್ಪಾವನ ಬ್ರಾಹ್ಮಣ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ದೇವರ ದರ್ಶನ ಬಲಿ ಉತ್ಸವ, ಪಲ್ಲಕ್ಕಿ ಉತ್ಸವ ನೆರವೇರಿತು. 18ರಂದು ಬೆಳಿಗ್ಗೆ ಸ್ತಂಭ ಮಹಾಗಣಪತಿಗೆ ಅಥರ್ವ ಶೀರ್ಷ ಸಹಸ್ರಾವರ್ತನ ಅಭಿಷೇಕ, ಸಂಜೆ ವಸಂತ ಪೂಜೆ ಬಳಿಕ ದೇವರ ಉತ್ಸವ ನೆರವೇರಿತು. ಎ. 19ರಂದು ಬೆಳಗ್ಗೆ ರಥಾರೋಹಣ, ಮಧ್ಯಾಹ್ನ ಯಕ್ಷಭಾರತಿ ಕನ್ಯಾಡಿ ಸದಸ್ಯರಿಂದ ಶನೀಶ್ವರ ಮಹಾತ್ಮೆ ಯಕ್ಷಗಾನ, ಮನೋಹರ ಪಟವರ್ಧನ್ ಬೆಂಗಳೂರು ಇವರಿಂದ ಹಿಂದೂಸ್ಥಾನಿ ಗಾಯನ, ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಗೋಪಾಲಕೃಷ್ಣ ತುಳಪುಳೆ ಅವರಿಗೆ ಸಮ್ಮಾನ, ಮಡಂತ್ಯಾರು ನಿಯತಿ ನೃತ್ಯನಿಕೇತನ ಕಲಾ ಶಾಲೆಯವರಿಂದ ನೃತ್ಯಾರ್ಪಣ, ರಾತ್ರಿ ಅಳದಂಗಡಿ ಅರಮನೆ ಡಾ| ಪದ್ಮಪ್ರಸಾದ ಅಜಿಲರ ಉಪಸ್ಥಿತಿಯಲ್ಲಿ ದೇವರ ಉತ್ಸವ, ಕೊಡಮಣಿತ್ತಾಯ ದೈವದ ನೇಮ, ಮಹಾ ರಥೋತ್ಸವ, ದೈವ-ದೇವರ ಭೇಟಿಯ ಬಳಿಕ ಜಾತ್ರೆ ಸಂಪನ್ನಗೊಂಡಿತು.
ಆಡಳಿತ ಮೊಕ್ತೇಸರ ಸದಾನಂದ ಸಹಸ್ರಬುದ್ಧೆ, ಹಿರಿಯರಾದ ಮುರಳೀಧರ ಗೋಖಲೆ, ಶ್ರೀಕಂಠ ಮೆಹೆಂದಳೆ ನೇತೃತ್ವ ದಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಪುರೋಹಿತರಾದ ಪದ್ಮನಾಭ ಜೋಶಿ, ಅಮರೇಶ ಜೋಶಿ, ವೆಂಕಟೇಶ ಗೋಖಲೆ, ಸಹಮೊಕ್ತೇಸರರಾದ ಚಂದ್ರಕಾಂತ ಗೋರೆ, ಪ್ರಕಾಶ ಜೋಶಿ, ಪುರುಷೋತ್ತಮ ತಾಮ ನ್ಕಾರ್ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.