ಅಡಿಕೆ ಬೆಳೆಗಾರರ ನಿದ್ದೆ ಕೆಡಿಸಿದ ಕಳ್ಳರು


Team Udayavani, Apr 24, 2019, 5:25 AM IST

24

ಬಜಪೆ: ಪಡುಪೆರಾರ ಗ್ರಾ. ಪಂ. ವ್ಯಾಪ್ತಿಯ ಕತ್ತಲ್‌ ಸಾರ್‌ ಪ್ರದೇಶದಲ್ಲಿ ಕಳೆದ ತಿಂಗಳು ಮೂರು ಕಡೆಗಳಲ್ಲಿ ಅಡಿಕೆ ಕಳ್ಳತನವಾಗಿದ್ದು, ಬೆಳೆಗಾರರ ನಿದ್ದೆಗೆಡಿಸುವಂತಾಗಿದೆ. ಈ ಭಾಗದಲ್ಲಿ ಸುಮಾರು 50 ಮಂದಿ ಅಡಿಕೆ, ತೆಂಗು ಬೆಳೆಗಾರರಿದ್ದು, ಆದಾಯಕ್ಕಾಗಿ ಇದನ್ನೇ ಅವಲಂಭಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶವಾದ್ದರಿಂದ ಬೆಳೆಗಾರರು ಮನೆ ಹಿತ್ತಲಿನಲ್ಲಿ ಅಡಿಕೆಯನ್ನು ಬೆಳೆದು, ಅಂಗಳದಲ್ಲಿ ಒಣಗಿಸಲು ಹಾಕುತ್ತಾರೆ. ಆದರೆ ಮೂರು ಕಳವು ಪ್ರಕರಣಗಳಲ್ಲೂ ದಾಸ್ತುನು ಕೋಣೆಯಿಂದಲೇ ಸುಮಾರು ಮೂರು ಲಕ್ಷ ರೂ. ಮೌಲ್ಯದ ಅಡಿಕೆ ಕಳವಾಗಿರುವು ದಾಗಿ ಇಬ್ಬರು ಬಜಪೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ 10 ಗೋಣಿ ಸಿಪ್ಪೆಯಿದ್ದ ಅಡಿಕೆಯನ್ನು ತಿಂಗಳ ಹಿಂದೆ ಕಳವು ಮಾಡಲಾಗಿದ್ದು, ಅನಂತರ 9 ಗೋಣಿ ಸಿಪ್ಪೆ ಸುಲಿದ ಪ್ರಥಮ ದರ್ಜೆಯ ಅಡಿಕೆಯನ್ನು ಕಳವು ಮಾಡಲಾಗಿದೆ. ಇತ್ತೀಚೆಗಷ್ಟೇ 26 ಗೋಣಿ ಸಿಪ್ಪೆಯಿದ್ದ ಅಡಿಕೆಯನ್ನು ದಾಸ್ತಾನು ಕೋಣೆ, ಅಂಗಳದಲ್ಲಿ ಕೂಡಿಟ್ಟ ಅಡಿಕೆಯನ್ನು ಕಳವು ಮಾಡಲಾಗಿತ್ತು. ಇತ್ತೀಚೆಗೆ ಸುರಿದ ಮಳೆಯ ಕಾರಣಕ್ಕೆ ಅಂಗಳದ ಮೂಲೆಯಲ್ಲಿ ಗೋಣಿಯಲ್ಲಿ ಹಾಕಿ ಅಡಿಕೆಯನ್ನು ಸಂಗ್ರಹಿಸಡಲಾಗಿತ್ತು. ಈ ಭಾಗದಲ್ಲಿ ಇದುವರೆಗೆ ಸಣ್ಣ ಪುಟ್ಟ ಕಳ್ಳತನವಾಗಿದ್ದು, ಇದೇ ಮೊದಲ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಕಳವಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.

ಸ್ಥಳೀಯರ ಕೈವಾಡದ ಶಂಕೆ
ಅಡಿಕೆ ಕೊಡಿಟ್ಟ ದಾಸ್ತಾನು ಕೋಣೆಯ ಬಗ್ಗೆ ತಿಳಿದವರೇ ಈ ಕಳ್ಳತನದಲ್ಲಿ ಭಾಗಿಯಾಗಿದ್ದಾರೆ. ಕೆಲವೆಡೆ ಅಡಿಕೆ ದಾರಿಯಲ್ಲಿ ಬಿದ್ದಿರುವುದರಿಂದ ಗೋಣಿ ಚೀಲವನ್ನು ಕಳ್ಳರು ತಲೆ ಮೇಲೆ ಹೊತ್ತು ಕೊಂಡು ಹೋಗಿದ್ದಾರೆ. ಇದೊಂದು ತಂಡದ ಕೆಲಸವಾಗಿರಬಹುದು ಎಂದು ಶಂಕಿಸಲಾಗಿದೆ. ಹೆಚ್ಚಿನ ಕಳವು ಮಧ್ಯರಾತ್ರಿ ಅನಂತರ ನಡೆದಿದ್ದು, ಮನೆಯವರಿಗೆ ಬೆಳಗ್ಗೆ ಏಳುವಾಗಲೇ ಕಳವಿನ ಬಗ್ಗೆ ತಿಳಿದು ಬಂದಿದೆ. ಒಂದು ಮನೆಯವರು ರಾತ್ರಿ ಎದ್ದು ದೀಪ ಬೆಳಗಿದ ಕಾರಣ ಕಳ್ಳರು ಎರಡು ಗೋಣಿ ಚೀಲ ಬಿಟ್ಟು ಓಡಿದ್ದಾರೆ ಎನ್ನಲಾಗಿದೆ.

ರಾತ್ರಿ ಕಾಯುವ ಕಾರ್ಯ
ನಿರಂತರವಾಗಿ ಅಡಿಕೆ ಕಳವು ಪ್ರಕರಣ ನಡೆಯುತ್ತಿರುವುದರಿಂದ ಬೆಳೆಗಾರರಿಗೆ ರಾತ್ರಿ ಅಡಿಕೆ ಕಾಯುವ ಕಾರ್ಯ ಮಾಡುವಂತಾಗಿದೆ. ಈ ವರೆಗೆ ಬಜಪೆ ವ್ಯಾಪ್ತಿಯ ಪೊಲೀಸರು ಚುನಾವಣೆ ಕಾರ್ಯದಲ್ಲಿ ತೊಡಗಿದ್ದರಿಂದ ಕಳ್ಳರನ್ನು ಹಿಡಿಯುವ ಕಾರ್ಯ ನಡೆಯಲಿಲ್ಲ.

ಸಿಸಿ ಕೆಮರಾ ಅಳವಡಿಕೆಗೆ ಚಿಂತನೆ
ಈ ಪ್ರದೇಶದಲ್ಲಿ ಕೆಲವೆಡೆ ಸಿಸಿ ಕೆಮರಾ ಅಳವಡಿಸಲಾಗಿದೆ. ಇನ್ನೂ ಕೆಲವೆಡೆ ಅಳವಡಿಸಿದರೆ ಏನೇ ಘಟನೆ ಅದರೂ ತಿಳಿಯಬಹುದಾಗಿದೆ. ಇದರಿಂದ ಅಡಿಕೆ ಕಳ್ಳರನ್ನು ಹಿಡಿಯಬಹುದಾಗಿದೆ ಎನ್ನುತ್ತಾರೆ ಅಡಿಕೆ ಬೆಳೆಗಾರರು.

ಅಡಿಕೆ ಬೆಳೆಗಾರರು ಜಾಗೃತರಾಗಿ
ಕತ್ತಲ್‌ಸಾರ್‌ನಲ್ಲಿ ಆಡಿಕೆ ಕಳ್ಳತನದ ದೂರುಗಳು ಬಂದಿದ್ದು, ಚುನಾವಣೆ, ಕಟೀಲು ಜಾತ್ರೆಯ ಕರ್ತವ್ಯದಿಂದಾಗಿ ತನಿಖೆಗೆ ವಿಳಂಬವಾಗಿದೆ. ಇಂದಿನಿಂದ ಈ ಬಗ್ಗೆ ಹೆಚ್ಚು ಗಮನ ನೀಡಲಾಗುತ್ತದೆ. ಮೋಡ ಕವಿದ ವಾತಾವರಣ ಅಂಗಳದಲ್ಲಿ ಒಣಗಲು ಹಾಕಿದ ಅಡಿಕೆಯನ್ನು ಮೂಟೆ ಕಟ್ಟಿ ಡು ತ್ತಾರೆ. ಇದು ಕಳ್ಳರಿಗೆ ಸುಲಭದ ಹಾದಿಯಾಗಿದೆ.ರಾತ್ರಿ ಅಡಿಕೆ ಕಾಯಲು ಯಾರೂ ಇರುವುದಿಲ್ಲ. ಈ ಬಗ್ಗೆ ಅಡಿಕೆ ಬೆಳೆಗಾರರು ಕೂಡ ಜಾಗೃತರಾಗಬೇಕಾಗಿದೆ.
– ಪರಶಿವ ಮೂರ್ತಿ, ಇನ್‌ಸ್ಪೆಕ್ಟರ್‌, ಬಜಪೆ

ಸಿಸಿ ಕೆಮರಾ ಅಳವಡಿಸಲು ಮನವಿ
ಈ ಭಾಗದಲ್ಲಿ ಹೆಚ್ಚಿನ ಮಂದಿ ಅಡಿಕೆ, ತೆಂಗು ಬೆಳೆಯುತ್ತಿದ್ದಾರೆ. ಇದುವೇ ಎಲ್ಲರ ಜೀವನಾಧಾರ. ಗ್ರಾಮೀಣ ಪ್ರದೇಶವಾದ ಕಾರಣ ಜನ ಸಂದಣಿ ಕಡಿಮೆ. ಇಷ್ಟು ಪ್ರಮಾಣದಲ್ಲಿ ಅಡಿಕೆ ಕಳವಾಗಿರುವುದು ಪ್ರಥಮ. ಸಿಸಿ ಕೆಮರಾ ಆಳವಡಿಕೆ ಕುರಿ ತು ಬೆಳೆಗಾರರು ಚಿಂತನೆ ನಡೆಸಬೇಕಿದೆ. ಬಗ್ಗೆ ಪಂಚಾಯತ್‌ನ ಗಮನಕ್ಕೂ ತರಲಾಗಿದೆ.
– ಮುರಳಿ ಭಟ್‌,ಕೃಷಿಕರು

ಟಾಪ್ ನ್ಯೂಸ್

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

Jaladurga-Puuturu

Putturu: ಭಾರೀ ಮಳೆಗೆ ಪೆರುವಾಜೆ ದೇವಾಲಯ ಜಲಾವೃತ

Shettar (3)

R. Ashoka ಪ್ರಕರಣವನ್ನು ಮುಡಾಕ್ಕೆ ಹೋಲಿಸಿದ್ದು ಸರಿಯಲ್ಲ:ಜಗದೀಶ ಶೆಟ್ಟರ್

1-rain-hebri

Heavy Rain: ಹೆಬ್ರಿಯಲ್ಲಿ ಮೇಘಸ್ಫೋಟ: ನೀರಲ್ಲಿ ಕೊಚ್ಚಿ ಹೋದ ಕಾರು!

1-deee

Bidar; ತೊಗರಿ ಹೊಲದಲ್ಲಿ 700ಕ್ಕೂ ಹೆಚ್ಚು ಗಾಂಜಾ ಗಿಡಗಳು!; ಪೊಲೀಸ್ ದಾಳಿ

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pejavara-Sri

Mangaluru: ಅಯೋಧ್ಯೆ ಮಾದರಿ ಎಲ್ಲ ದೇವಾಲಯಗಳಿಗೂ ವಿಶ್ವಸ್ಥ ಮಂಡಳಿ ರೂಪಿಸಿ: ಪೇಜಾವರ ಶ್ರೀ

7(1)

Mangalore: ಊದು ಪೂಜೆ: ಹುಲಿ ವೇಷಕ್ಕೆ ಮುಹೂರ್ತ!

9-mng-1

Mumtaz Ali ನಾಪತ್ತೆ ಪ್ರಕರಣ; ಶೋಧ ಕಾರ್ಯಾಚರಣೆಗೆ ಈಶ್ವರ ಮಲ್ಪೆ ತಂಡ ಆಗಮನ

2(1)

Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!

7-mng

Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Railway-min-Ashiwini

Railway: ಶೀಘ್ರವೇ ಬೆಂಗಳೂರು-ಮೈಸೂರು, ತುಮಕೂರು ನಮೋ ರ್‍ಯಾಪಿಡ್‌ ರೈಲು: ರೈಲ್ವೆ ಸಚಿವ

dw

Padubidri: ರಸ್ತೆ ಅಪಘಾತ; ಗಾಯಾಳು ಸಾವು

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

crimebb

Kasaragod ಅಪರಾಧ ಸುದ್ದಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.