![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Apr 24, 2019, 3:33 AM IST
ಕಾರವಾರ: ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ನಡುರಸ್ತೆಯಲ್ಲೇ ನಿಂತು ಜೆಡಿಎಸ್ ಕಾರ್ಯಕರ್ತರಿಗೆ ಆವಾಜ್ ಹಾಕಿದ್ದಾರೆ. ನಗರಸಭೆ ಮಾಜಿ ಸದಸ್ಯೆಯೊಬ್ಬರ ಮಗ, ಜೆಡಿಎಸ್ ಕಾರ್ಯಕರ್ತ ರೂಪಾಲಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಎನ್ನಲಾಗಿದೆ.
ಇದರಿಂದ ಕ್ರುದ್ಧರಾದ ಶಾಸಕಿ ರೂಪಾಲಿ, ಮತಗಟ್ಟೆ 81ರ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೆಡಿಎಸ್ ಕಾರ್ಯಕರ್ತನಿಗೆ ಹುಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. “ಏನೋ ದಾದಾಗಿರಿ ಮಾಡುತ್ತೀಯಾ? ನಿನ್ನ ತಾಯಿಯನ್ನು ಕೇಳು. ಹತ್ತತ್ತು ಲಕ್ಷ ತಗೊಂಡದ್ದು ಖಾಲಿ ಆಗಿಲ್ಲವಾ?
ಪಕ್ಷದ ನಿಯತ್ತು ಇದೆಯಾ? ನಿನ್ನ ಅವ್ವನನ್ನು ಕೇಳು. ನನಗೆ ಬೈತಿಯಾ? ಆನಂದ ಅಸ್ನೋಟಿಕರ್ ಕೊಯ್ತಿ, ಕತ್ತಿ ಕೊಟ್ಟು ದಾದಾಗಿರಿ ಮಾಡು ಅಂದ್ರೆ ಮಾಡ್ತಿಯಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಬೈತಖೋಲ್‌ದಲ್ಲಿ ಸಹ ಎರಡು ಪಕ್ಷಗಳ ಕಾರ್ಯಕರ್ತರ ನಡುನೆ ಮಾತಿನ ಚಕಮಕಿ ನಡೆದಿದೆ.
You seem to have an Ad Blocker on.
To continue reading, please turn it off or whitelist Udayavani.