ಮಣಿಪಾಲ ಆಸ್ಪತ್ರೆಯ ಸೇವೆ ಅದ್ವಿತೀಯ


Team Udayavani, Apr 24, 2019, 6:12 AM IST

manipal-hospital

ಮಂಗಳೂರು: ಆರೋಗ್ಯ ಕ್ಷೇತ್ರದಲ್ಲಿ ಅದ್ವಿತೀಯ ಸೇವೆ ನೀಡು ತ್ತಿರುವ ಮಣಿಪಾಲ ಆರೋಗ್ಯ ಸಮೂಹ ಸಂಸ್ಥೆಯು “ಮಣಿಪಾಲ ಆರೋಗ್ಯ ಕಾರ್ಡ್‌’ ನೀಡುವ ಮೂಲಕ ಸ್ವಸ್ಥ ಮತ್ತು ಆರೋಗ್ಯಪೂರ್ಣ ಸಮಾಜ ನಿರ್ಮಾಣ ನಡೆಸುತ್ತಿರುವುದು ಶ್ಲಾಘನೀಯ ಎಂದು ಮಣಿಪಾಲ ಆಸ್ಪತ್ರೆಯ ಬ್ರಾಂಡ್‌ ಅಂಬಾಸಿಡರ್‌, ಮಾಜಿ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಹೇಳಿದರು.

ಮಂಗಳೂರಿನ ಟಿಎಂಎ ಪೈ ಕನ್ವೆನ್ಶನ್‌ ಸೆಂಟರ್‌ನಲ್ಲಿ ಮಂಗಳವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪ್ರಯೋಜನಗಳ ಜತೆಗಿನ ಮಣಿಪಾಲ್‌ ಆರೋಗ್ಯ ಕಾರ್ಡ್‌ (ಎಂಎಸಿ) ಬಿಡುಗಡೆ ಮಾಡಿ ಅವರು ಮಾತನಾಡಿದರು.

ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಪಡೆಯುವುದು ಪ್ರತಿಯೊಬ್ಬನ ಹಕ್ಕು. ಈ ನಿಟ್ಟಿನಲ್ಲಿ ಮಣಿಪಾಲ ಆರೋಗ್ಯ ಸಂಸ್ಥೆಯು ಅದ್ವಿತೀಯ ಕಾರ್ಯ ನಡೆಸುತ್ತಿದೆ. ಬಡವರು ಹಾಗೂ ಮಧ್ಯಮವರ್ಗದವರಿಗೆ ನೆರವಾಗುವ
ನೆಲೆಯಲ್ಲಿ ಸಂಸ್ಥೆಯು ಹೊರತಂದಿ ರುವ ಮಣಿಪಾಲ್‌ ಆರೋಗ್ಯ ಕಾರ್ಡ್‌ ಅತ್ಯುತ್ತಮ ಯೋಜನೆ ಎಂದರು.

ಮಣಿಪಾಲ್‌ನ ಉಪಕ್ರಮಗಳು ಅಸಾಧಾರಣವಾಗಿದ್ದು, ಕೆಲವು ತಿಂಗ ಳಿಂದ ಇದರ ಭಾಗವಾಗಿರುವುದು ಅನನ್ಯ ಅನುಭವ. ಎಂಎಎಚ್‌ಇನ ಮಣಿಪಾಲ್‌ ಆರೋಗ್ಯ ಕಾರ್ಡ್‌ ಪ್ರತಿ ಯೊಬ್ಬರಿಗೂ ವರವಾಗಿದೆ ಎಂದರು.

ಮಣಿಪಾಲ ಆಸ್ಪತ್ರೆ ಸಮೂಹದ ಅಧ್ಯಕ್ಷ ಡಾ| ಸುದರ್ಶನ ಬಲ್ಲಾಳ್‌ ಮಾತನಾಡಿ, 19 ವರ್ಷಗಳಿಂದ ಮಣಿಪಾಲ್‌ ಆರೋಗ್ಯ ಕಾರ್ಡ್‌ ಮೂಲಕ ಲಕ್ಷಾಂತರ ರೋಗಿಗಳಿಗೆ ಅತ್ಯುತ್ತಮ ಆರೋಗ್ಯ ಸೇವೆಯನ್ನು ನೀಡಲಾಗಿದೆ.

ಈಗ ರಾಹುಲ್‌ ದ್ರಾವಿಡ್‌ ಮುಖೇನ ಆರೋಗ್ಯ ಕಾರ್ಡ್‌ ವಿತರಣೆ ಮಾಡುತ್ತಿರುವುದು ಸಂತಸದ ವಿಚಾರ ಎಂದರು.

ಮಾಹೆ ವಿವಿ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಮಾತ ನಾಡಿ, ಮಣಿಪಾಲ್‌ ಆರೋಗ್ಯ ಕಾರ್ಡ್‌ ಮೂಲಕ ಸರ್ವರಿಗೂ ಅತ್ಯುತ್ತಮ ಆರೋಗ್ಯ ಸೇವೆ ದೊರೆಯುವಂತಾ ಗಲಿ. ಕಾರ್ಡ್‌ನ ಆಧಾರವಾಗಿ ಜೀವನದಲ್ಲಿ ಆರೋಗ್ಯ ಭದ್ರತೆ ಮೂಡಿಬರಲಿ ಎಂದು ಹಾರೈಸಿದರು.

ಮಾಹೆ ವಿವಿ ಮಂಗಳೂರು ಕ್ಯಾಂಪಸ್‌ನ ಸಹಕುಲಪತಿ ಡಾ| ಸುರೇಂದ್ರ ವಿ. ಶೆಟ್ಟಿ, ಪ್ರಮುಖರಾದ ಡಾ| ದಿಲೀಪ್‌ ನಾೖಕ್‌, ವೈದ್ಯಕೀಯ ವಿಜ್ಞಾನ ಪ್ರಮುಖರಾದ ಡಾ| ವಸುಧಾ ಶೆಟ್ಟಿ, ಕೆಎಂಸಿ ಮಂಗಳೂರು ಡೀನ್‌ ಡಾ| ಎಂ.ವಿ. ಪ್ರಭು, ವೈದ್ಯಕೀಯ ಅಧೀಕ್ಷಕ ಡಾ| ಆನಂದ ವೇಣುಗೋಪಾಲ್‌, ಪ್ರಾದೇಶಿಕ ಸಿಒಒ ಸಾಗಿರ್‌ ಸಿದ್ದಿಕಿ, ಡಾ|ಅವಿನಾಶ್‌ ಶೆಟ್ಟಿ, ಸಿ.ಜಿ. ಮುತ್ತಣ್ಣ ಉಪಸ್ಥಿತರಿದ್ದರು.

ಮಕ್ಕಳ ಜತೆಗೆ ಬ್ಯಾಟ್‌ ಹಿಡಿದ ರಾಹುಲ್‌!
ಆರೋಗ್ಯ ಕಾರ್ಡ್‌ ಬಿಡುಗಡೆಗೆ ಮುನ್ನ ದ್ರಾವಿಡ್‌ ನಗರದಲ್ಲಿ ಕ್ಯಾನ್ಸರ್‌ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಜತೆಗೆ ಸ್ವಲ್ಪ ಹೊತ್ತು ಆಟವಾಡಿದರು. ಟಿಎಂಎ ಪೈ ಸಭಾಂಗಣದ ಒಳಗೆ ಇದಕ್ಕಾಗಿ ಸಣ್ಣ ಪಿಚ್‌ ಸಿದ್ಧಗೊಳಿಸಲಾಗಿತ್ತು. ಪುಟಾಣಿಗಳು ಎಸೆದ ಚೆಂಡುಗಳಿಗೆ ಬ್ಯಾಟ್‌ ಬೀಸಿ ಹುರುಪು ತುಂಬಿದರು. ಬಾಲಕನೊಬ್ಬ ಬಾಲ್‌ ಎಸೆದಾಗ ರಾಹುಲ್‌ ಮೆಲ್ಲನೆ ಬ್ಯಾಟ್‌ ಬೀಸಿದರು. ಕ್ಯಾಚ್‌ ಹಿಡಿದು ತನ್ನನ್ನು ಔಟ್‌ ಮಾಡಿದ ಬಾಲಕನನ್ನು ರಾಹುಲ್‌ ಅಭಿನಂದಿಸಿದರು. ಬಳಿಕ ಮಕ್ಕಳ ಜತೆಗೆ ಸೆಲ್ಫಿ ತೆಗೆದರು.

ಸಂವಾದದಲ್ಲಿ ರಾಹುಲ್‌ ದ್ರಾವಿಡ್‌ ಉವಾಚ
ಟಿಎಂಎ ಪೈ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ರಾಹುಲ್‌ ದ್ರಾವಿಡ್‌ ಉತ್ತರಿಸಿದರು. ಅವರ ಮಾತುಗಳ ಕೆಲವು ಝಲಕ್‌ ಇಲ್ಲಿದೆ…

- ಮಕ್ಕಳು ಕ್ರಿಕೆಟ್‌ ಅಥವಾ ಯಾವುದೇ ಕ್ರೀಡೆಯ ಬಗ್ಗೆ ಸ್ವಂತ ನಿಲುವಿನಿಂದ ಒತ್ತು ನೀಡಿ ಮುಂದೆ ಬರಬೇಕು; ಪೋಷಕರ ಒತ್ತಡದಿಂದಾಗಿ ಅಲ್ಲ. ಎಲ್ಲರೂ ಕ್ರೀಡೆಯನ್ನು ವೃತ್ತಿಯಾಗಿ ಸ್ವೀಕರಿಸಲು ಸಾಧ್ಯವಿಲ್ಲ.

– ನನ್ನ ಬದುಕಿನ ಯಶಸ್ಸಿಗೆ ಕಾರಣ: ಕಠಿನ ಪರಿಶ್ರಮ, ತಾಳ್ಮೆ, ಗೌರವಿಸುವ ಗುಣ.

– ಹೆತ್ತವರೇ ನನಗೆ ಪ್ರೇರಣೆ. ಅವರು ನನ್ನ ರೋಲ್‌ ಮಾಡೆಲ್‌. ಜತೆಗೆ ನನ್ನ ಕೋಚ್‌ ಆಟದ ಜತೆ ಶಿಸ್ತು ಕಲಿಸಿದರು. ಕ್ರಿಕೆಟ್‌ನಲ್ಲಿ ಗಾವಸ್ಕರ್‌, ಜಿ.ಆರ್‌. ವಿಶ್ವನಾಥ್‌ ನನ್ನ ರೋಲ್‌ ಮಾಡೆಲ್‌.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.