ಭಜರಂಗ್ ಬಂಗಾರ ಬೇಟೆ, ಬೆಳ್ಳಿ ಗೆದ್ದ ಪ್ರವೀಣ್
Team Udayavani, Apr 24, 2019, 6:00 AM IST
ಚೀನ: ವಿಶ್ವದ ನಂ. ವನ್, ಭಾರತದ ಭರವಸೆಯ ಕುಸ್ತಿಪಟು ಭಜರಂಗ್ ಪೂನಿಯ “ಏಶ್ಯನ್ ಕುಸ್ತಿ ಚಾಂಪಿಯನ್‌ಶಿಪ್’ ಕೂಟದಲ್ಲಿ ಮತ್ತೂಮ್ಮೆ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಪ್ರವೀಣ್ ರಾಣಾ ಬೆಳ್ಳಿ ಪದಕ ಜಯಿಸಿದ್ದು, ಭಾರತದ ಮೊದಲ ದಿನವನ್ನು 3 ಪದಕಗಳೊಂದಿಗೆ ಮುಗಿಸಿದೆ. ಮಂಗಳವಾರ ನಡೆದ ಪುರುಷರ ಫ್ರೀಸ್ಟೈಲ್ ವಿಭಾಗದ ರೋಮಾಂಚಕ ಫೈನಲ್‌ನಲ್ಲಿ ಭಜರಂಗ್ ಕಜಕೀಸ್ಥಾನದ ಸಯಾಟ್‌ಬೆಕ್ ಒಕಾಸೊವಾ ವಿರುದ್ಧ 12-7 ಅಂಕಗಳಿಂದ ಜಯಿಸಿ ಸ್ವರ್ಣ ಪದಕ ಗೆದ್ದು ಸಂಭ್ರಮಿಸಿದರು.
ಪಂದ್ಯದ ಕೊನೆಯ 60 ಸೆಕೆಂಡ್‌ಗಳಲ್ಲಿ 2-7 ಹಿನ್ನಡೆಯಲ್ಲಿದ್ದ ಕಾಮನ್ವೆಲ್ತ್ ಮತ್ತು ಏಶ್ಯನ್ ಗೇಮ್ಸ್ ಚಾಂಪಿಯನ್ ಭಜರಂಗ್ ಅನಂತರ ಅತ್ಯದ್ಭುತ ಪ್ರದರ್ಶನ ನೀಡಿ 10 ಅಂಕ ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದರು. ಈ ಕೂಟದಲ್ಲಿ ಭಜರಂಗ್‌ಗೆ ಇದು 2ನೇ ಚಿನ್ನದ ಪದಕವಾಗಿದೆ. 2017ರ ಆವೃತ್ತಿಯಲ್ಲೂ ಭಜರಂಗ್ ಚಿನ್ನ ಜಯಿಸಿದ್ದರು. ಒಟ್ಟಾರೆಯಾಗಿ ಈ ಕೂಟದಲ್ಲಿ ಈ ಕುಸ್ತಿಪಟುವಿಗೆ ಇದು 5ನೇ ಪದಕ. ಈ ಪ್ರದರ್ಶನದ ಮೂಲಕ ಭಜರಂಗ್ ತನ್ನೆಲ್ಲ ಎದುರಾಳಿಗಳಿಗೆ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಬಲಿಷ್ಠ ಕ್ರೀಡಾಪಟು ಎಂಬ ಎಚ್ಚರಿಕೆ ರವಾನಿಸಿದ್ದಾರೆ.
ಈ ಸ್ಪರ್ಧೆಯ ಫೈನಲ್ ಹಾದಿಯಲ್ಲಿ ಭಜರಂಗ್ ಕೇವಲ ಒಂದು ಅಂಕವನ್ನು ಮಾತ್ರ ಬಿಟ್ಟುಕೊಟ್ಟಿದ್ದಾರೆ. ಶ್ರೀಲಂಕಾದ ಚಾರ್ಲೆಸ್ ಫೆರ್ನ್ ವಿರುದ್ಧ ತಾಂತ್ರಿಕ ಮೇಲುಗೈ ಸಾಧಿಸಿ ಸೆಮಿಫೈನಲ್ ಪ್ರವೇಶಿಸುವ ಮುನ್ನ ಭಜರಂಗ್ ಉಜ್ಜೆಕಿಸ್ಥಾನದ ಸಿರೊಜಿದ್ದಿನ್ ಖಸಾನೋವ್ ವಿರುದ್ಧ 12-1ಅಂತರದಿಂದ ಜಯಿಸಿದ್ದರು.
ತಪ್ಪಿದ ಕಂಚಿನ ಪದಕ
57 ಕೆ.ಜಿ. ವಿಭಾಗದಲ್ಲಿ ಚೈನೀಸ್ ತೈಪೆಯ ಚಿಯಾ ತ್ಸೋ ಲಿಯೂ 4-0 ಅಂತರದಿಂದ ಸೋಲಿಸಿ ಕಂಚಿನ ಪದಕದ ಫ್ಲೇ ಆಫ್ಗೆ ಪ್ರವೇಶಿಸಿದ್ದ ರವಿ ಕುಮಾರ್ ಕಂಚಿನ ಪದಕದ ಪಂದ್ಯದಲ್ಲಿ ಜಪಾನಿನ ಯೂಕಿ ತಕಹಾಶಿ ಅವರ ವಿರುದ್ಧ 3-5 ಅಂತರದಿಂದ ಸೋತು ಪದಕ ತಪ್ಪಿಸಿಕೊಂಡರು.
ಉಳಿದಂತೆ 70 ಕೆ.ಜಿ. ಸ್ಪರ್ಧೆಯಲ್ಲಿ ರಜನೀಶ್ ಸೋಲನುಭವಿಸಿ ಕೂಟದಿಂದ ಹೊರನಡೆದಿದ್ದಾರೆ.
ಪ್ರವೀಣ್‌ಗೆ ಬೆಳ್ಳಿ
ಫೈನಲ್ ಪ್ರವೇಶಿಸಿದ್ದ ಭಾರತದ ಮತ್ತೋರ್ವ ಕುಸ್ತಿಪಟು ಪ್ರವೀಣ್ ರಾಣ್ 79 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರು. ಅವರು ಇರಾನಿನ ಬಹ್ಮನ್ ಮೊಹಮ್ಮದ್ ತೈಮೌರಿ ವಿರುದ್ಧ 0-3 ಅಂತರದಿಂದ ಸೋತು ಬೆಳ್ಳಿ ಗೆದ್ದರು. ಸತ್ಯವರ್ಥ್ ಕದಿಯಾನ್ ಕೂಡ 97 ಕೆ.ಜಿ. ಸ್ಪರ್ಧೆಯ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಚೀನದ ಹೊಬಿನ್ ಗಾವೊ ವಿರುದ್ಧ 8-1 ಅಂತರದಿಂದ ಗೆದ್ದ ಕಂಚಿಗೆ ತೃಪ್ತಿಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.