ದಾದಾ ಸಾಹೇಬ ಫಾಲ್ಕೆ
ಟಿನ್ ಟಿನ್ ಟಿನ್ : ಕೇಳ್ರಪ್ಪೋ ಕೇಳಿ... ಹತ್ತು ಪಾಯಿಂಟ್‌ಗಳಲ್ಲಿ ವ್ಯಕ್ತಿ ಪರಿಚಯ!
Team Udayavani, Apr 25, 2019, 6:20 AM IST
ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…
1 “ಭಾರತೀಯ ಸಿನಿಮಾದ ಪಿತಾಮಹ’ ದಾದಾ ಸಾಹೇಬ ಫಾಲ್ಕೆ 1870ರ ಏಪ್ರಿಲ್ 30ರಂದು ಮಹಾರಾಷ್ಟ್ರದಲ್ಲಿ ಜನಿಸಿದರು.
2 ಸಿನಿಮಾ ನಿರ್ಮಾಣ, ನಿರ್ದೇಶನ, ಬರವಣಿಗೆ, ಸಂಕಲನ, ವಸ್ತ್ರವಿನ್ಯಾಸ, ವಿತರಣೆ ಹೀಗೆ ಸಿನಿಮಾದ ಎಲ್ಲ ವಿಭಾಗಗಳಲ್ಲಿಯೂ ದಾದಾ ಸಾಹೇಬರು ಗಣನೀಯ ಸಾಧನೆ ಮಾಡಿದ್ದಾರೆ.
3 ಅವರ ಮೂಲ ಹೆಸರು ದುಂಡಿರಾಜ್ ಗೋವಿಂದ ಫಾಲ್ಕೆ
4 ಛಾಯಾಗ್ರಾಹಕನಾಗಿ ವೃತ್ತಿ ಪ್ರಾರಂಭಿಸಿದ ಅವರು, ಪ್ಲೇಗ್‌ನಿಂದಾಗಿ ಹೆಂಡತಿ-ಮಗುವನ್ನು ಕಳೆದುಕೊಂಡ ನಂತರ ಕೆಲಸ ಬಿಟ್ಟು ಜರ್ಮನಿಗೆ ಹೋದರು.
5 ಸಿನಿಮಾಕ್ಕೆ ಬರುವ ಮುನ್ನ ಕೆಲಕಾಲ ಜರ್ಮನಿಯಲ್ಲಿ ಕಾರ್ಲ್ ಹರ್ಟ್ಜ್ ಎಂಬ ಜಾದೂಗಾರನ ಜೊತೆ, ನಂತರ ಭಾರತೀಯ ಪುರಾತತ್ವ ಇಲಾಖೆ, ಮುದ್ರಣ ಉದ್ಯಮದಲ್ಲಿ ದಾದಾ ಸಾಹೇಬರು ಕೆಲಸ ಮಾಡಿದ್ದರು.
6 ಮುಂಬೈನ “ಅಮೆರಿಕ ಇಂಡಿಯಾ ಥಿಯೇಟರ್’ನಲ್ಲಿ ನೋಡಿದ “ದಿ ಲೈಫ್ ಆಫ್ ಕ್ರೈಸ್ಟ್’ ಮೂಕಿ ಚಿತ್ರ ದಾದಾ ಸಾಹೇಬರ ಬದುಕು ಬದಲಿಸಿತು. ಆಗಲೇ ಅವರು “ರಾಜಾ ಹರಿಶ್ಚಂದ್ರ’ ಸಿನಿಮಾ ಮಾಡಲು ನಿರ್ಧರಿಸಿದರು.
7 ದಾದಾ ಸಾಹೇಬರ “ರಾಜಾ ಹರಿಶ್ಚಂದ್ರ’ ಭಾರತದ ಮೊದಲ ಮೂಕಿ ಸಿನಿಮಾ.
8 ಆ ಚಿತ್ರಕ್ಕಾಗಿ ಅವರ ಇಡೀ ಕುಟುಂಬ ಕೆಲಸ ಮಾಡಿತು. ಸಿನಿಮಾದ ನಿರ್ಮಾಣ, ನಿರ್ದೇಶನ, ಬರವಣಿಗೆ, ಛಾಯಾಗ್ರಹಣ ಫಾಲ್ಕೆಯವರದ್ದಾದರೆ, ಅವರ ಪತ್ನಿ ವಸ್ತ್ರವಿನ್ಯಾಸ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ನೋಡಿಕೊಂಡರು. ಲೋಹಿತಾಶ್ವನಾಗಿ 7 ವರ್ಷದ ಮಗ ಬಾಲಚಂದ್ರ ಫಾಲ್ಕೆ ಬಣ್ಣ ಹಚ್ಚಿದ.
9 1913ರ ಮೇ 3ರಂದು ಬಿಡುಗಡೆಯಾದ ಈ ಸಿನಿಮಾದ ಒಟ್ಟು ಖರ್ಚು 15 ಸಾವಿರ ರೂಪಾಯಿ.
10 ಭಾರತೀಯ ಚಿತ್ರರಂಗದಲ್ಲಿ ಅತ್ಯುನ್ನತ ಸಾಧನೆ ಮಾಡಿದವರಿಗೆ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ನೀಡಲಾಗುತ್ತದೆ.
ಸಂಗಹ: ಪ್ರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.