ಕುಡ್ಲ ಟಾಕೀಸ್


Team Udayavani, Apr 25, 2019, 5:50 AM IST

8

ಕುಡ್ಲದಲ್ಲಿ “ಆಯೆ ಏರ್‌?’

ಆಕರ್ಷಕ ಟೈಟಲ್‌ ಮೂಲಕ ಸುದ್ದಿಯಾಗಿರುವ ಸಿನೆಮಾ “ಆಯೆ ಏರ್‌?’ ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಕುತೂಹಲ ಮೂಡಿಸಿದೆ. ಅಂದಹಾಗೆ, ಸಿನೆಮಾದ ಟೀಸರ್‌ ಈಗಾಗಲೇ ಬಿಡುಗಡೆಯಾಗಿದ್ದು, ಅದಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಕೆ. ಮಂಜುನಾಥ್‌ ಅವರದ್ದು ವಿಶೇಷವಾಗಿ ಗಮನ ಸೆಳೆಯುವಂತಹ ಕೆಲಸವನ್ನು ಈ ಸಿನೆಮಾದಲ್ಲಿ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಎಲ್ಲವೂ ಮಂಜುನಾಥ್‌ ಅವರದ್ದು. ಸಿನೆಮಾದ ನಿರ್ದೇಶನದ ಜವಾಬ್ದಾರಿಯೂ ಇವರದ್ದೇ ಅಗಿದೆ. ಶ್ರೀಕಾಂತ್‌ ರೈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನುಸುತ್ತಿದ್ದಾರೆ. ಅರವಿಂದ ಬೋಳಾರ್‌ ಅವರು ವಿಶೇಷ ಪಾತ್ರದಲ್ಲಿ ಮಿಂಚಲಿದ್ದು, ಭರ್ಜರಿ ನಗುವಿಗೆ ಇಲ್ಲಿ ಯಥೇತ್ಛ ಅವಕಾಶವಿದೆ.

ಮುಂದಿದೆ “ರಾಹುಕಾಲ ಗುಳಿಗ ಕಾಲ’
ಮನೋಜ್‌ ಕುಮಾರ್‌ ಪ್ರಸ್ತುತಿಯ ಸೂರಜ್‌ ಬೋಳಾರ್‌, ಪ್ರೀತಂ ನಿರ್ಮಾಣದ “ರಾಹು ಕಾಲ ಗುಳಿಗ ಕಾಲ’ ಶೂಟಿಂಗ್‌ ಮುಗಿ ಸಿ ಈಗ ಡಬ್ಬಿಂಗ್‌ ಪೂರ್ಣಗೊಳಿಸಿದೆ. ಫೈನಲ್‌ ಟ್ರೈಂಡಿಂಗ್‌ ನಡೆಯುತ್ತಿದೆ. ಮಣಿಕಾಂತ್‌ ಕದ್ರಿ ಸಂಗೀತದ ಜವಾಬ್ದಾರಿ ನಿರ್ವಹಿಸಿದ್ದಾರೆ. ಅರ್ಜುನ್‌ ಕಾಪಿಕಾಡ್‌, ನವ್ಯತಾ ರೈ, ಅರವಿಂದ ಬೋಳಾರ್‌, ವಿಸ್ಮಯ ವಿನಾಯಕ್‌, ಚಂದ್ರಹಾಸ್‌ ಉಳ್ಳಾಲ್‌ ಮುಂತಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಮಾಸ್‌ ಮಾದ ಸಾಹಸದಲ್ಲಿ ಕೈ ಜೋಡಿಸಿದ್ದಾರೆ. ಸಿದ್ದು ಜಿ.ಎಸ್‌. ಛಾಯಾಗ್ರಹಣ ಹಾಗೂ ಸುರೇಶ್‌ ಸಂಕಲನದಲ್ಲಿ ತೊಡಗಿಸಿದ್ದಾರೆ. ಈಗಾಗಲೇ “ಪತ್ತೀಸ್‌ ಗ್ಯಾಂಗ್‌’ ಎಂಬ ಸಿನೆಮಾ ಮಾಡಿದ ಚಿತ್ರತಂಡ ಎರಡನೇ ಸಿನೆಮಾವಾಗಿ ರಾಹು ಕಾಲವನ್ನು ಸಿದ್ಧಪಡಿಸುತ್ತಿದೆ. ಪತ್ತೀಸ್‌ ಗ್ಯಾಂಗ್‌ ಶೂಟಿಂಗ್‌ ಆದ ಕಾಲದಲ್ಲಿಯೇ ರಾಹುಕಾಲದ ಶೂಟಿಂಗ್‌ ಕೂಡ ಮಾಡಲಾಗಿದೆ. ಹಲವು ವಿಶೇಷತೆಗಳನ್ನು ಒಳಗೊಂಡಿರುವ ಈ ಸಿನೆಮಾದಲ್ಲಿ, ಶೂಟಿಂಗ್‌ ವೇಳೆಯಲ್ಲಿ ಒರಿಜಿನಲ್‌ ಗನ್‌ ಹಿಡಿದುಕೊಳ್ಳಲಾಗಿದೆ. ಕೋಸ್ಟಲ್‌ವುಡ್‌ನ‌ಲ್ಲಿ ಇದೊಂದು ಮೊದಲ ಪ್ರಯತ್ನ. ಡಮ್ಮಿ ಬುಲೆಟ್‌ ಅಳವಡಿಸಿಕೊಂಡು ಶೂಟಿಂಗ್‌ ನಡೆಸಲಾಗಿದೆ. ಸಿನೆಮಾದಲ್ಲಿ ಒಂದು ಹಾಡಿದೆ. ಒಬ್ಬ ವ್ಯಕ್ತಿಗೆ ಒಂದು ಟೈಮ್‌ ಎದುರಾದರೆ ಆತನ ಕಥೆಯೇ ಬೇರೆ ಆಗುತ್ತದೆ.

“ಕುದ್ಕನ ಮದ್ಮ್’ ಶೂಟಿಂಗ್‌, ಡಬ್ಬಿಂಗ್‌ ಪೂರ್ಣ
ಖ್ಯಾತ ನಿರ್ದೇಶಕ ಎ.ವಿ. ಜಯರಾಜ್‌ ನಿರ್ದೇಶನದ ಕೋಸ್ಟಲ್‌ವುಡ್‌ನ‌ಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ “ಕುದ್ಕನ ಮದ್ಮ್’ ಸಿನೆಮಾ ಶೂಟಿಂಗ್‌ ಆಗಿ, ಡಬ್ಬಿಂಗ್‌ ಪೂರ್ಣಗೊಳಿಸಿದೆ. ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ದೀಪಕ್‌ ರೈ ಪಾಣಾಜೆ, ಕಾರ್ತಿಕ್‌ ರಾವ್‌, ಜೀವನ್‌ ಉಳ್ಳಾಲ್‌ ಸೇರಿದಂತೆ ಹಲವು ಸ್ಟಾರ್‌ ನಟರು ಸಿನೆಮಾದಲ್ಲಿದ್ದಾರೆ.

ಟಾಪ್ ನ್ಯೂಸ್

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

vidhana-soudha

2025ರ ಸಾರ್ವತ್ರಿಕ ರಜೆ ಪಟ್ಟಿಗೆ ಸಂಪುಟ ಅಸ್ತು;19 ಸಾರ್ವತ್ರಿಕ,20 ಪರಿಮಿತ ರಜೆಗೆ ಅನುಮೋದನೆ

Vijayendra (2)

50 crores ಆಮಿಷ ಸುಳ್ಳಿನ ಕಂತೆ; ಸೂಕ್ತ ಸಾಕ್ಷಿ ನೀಡಿ ಇಲ್ಲವೇ ED ತನಿಖೆಗೊಪ್ಪಿಸಿ: ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.